ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕದಂಬೋತ್ಸವದಲ್ಲಿ ಪ್ರೊ.ಜಿ.ವಿ ಅವರಿಗೆ ಪಂಪ ಪ್ರಶಸ್ತಿ ಪ್ರದಾನ

By Mahesh
|
Google Oneindia Kannada News

ಬೆಂಗಳೂರು, ಫೆ.4: ಕನ್ನಡ ವಿದ್ವಾಂಸ, ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರನ್ನು 2014ನೇ ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಘೋಷಿಸಿದೆ.

ವಿಷ್ಣುನಾಯಕ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಹೆಸರನ್ನು ಆಯ್ಕೆ ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ. ಫೆ.7ರಂದು ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು. [ಮೂವರಿಗೆ ನಾಡೋಜ, ಶಂಕರ ಭಟ್ಟರಿಗೆ ಪಂಪ ಪ್ರಶಸ್ತಿ]

Pampa Award for Prof Venkatasubbaiah announced

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ಫೆ.7 ಮತ್ತು 8ರಂದು ಕದಂಬೋತ್ಸವ ನಡೆಯಲಿದ್ದು, ಉತ್ಸವದ ವೇದಿಕೆಯಲ್ಲೇ ಪಂಪ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜ.22ರಂದು ಪ್ರಶಸ್ತಿ ಆಯ್ಕೆ ಸಮಿತಿ ಸಭೆ ನಡೆಸಲಾಗಿತ್ತು. ಫೆ.4 ರಂದು ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿ ಘೋಷಣೆ ಮಾಡಲಾಗಿದೆ. [ಶಿರಸಿ: ಬನವಾಸಿ ಕದಂಬೋತ್ಸವಕ್ಕೆ ಭರದ ಸಿದ್ಧತೆ]

ಪಂಪ ಪ್ರಶಸ್ತಿ : ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು . ಇದನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು. ಕನ್ನಡದ ಪ್ರಥಮ ಕವಿಯಾದ ಆದಿಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.

1987ರಿಂದ 2008ರ ತನಕ ಸುಮಾರು 23 ಗಣ್ಯರಿಗೆ ಈ ಪ್ರಶಸ್ತಿ ಸಂದಿದೆ. ಕುವೆಂಪು ಅವರಿಗೆ ನೀಡಿದ ಪ್ರಶಸ್ತಿ ಮೊತ್ತ ಒಂದು ಲಕ್ಷ ರು ನಷ್ಟಿತ್ತು. ಈಗ ಮೂರು ಲಕ್ಷ ರು.ಗೆ ಏರಿಕೆಯಾಗಿದೆ. ಕಳೆದ ಸಾಲಿನಲ್ಲಿ ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಈ ಪ್ರಶಸ್ತಿ ಸಂದಿದೆ.

English summary
Prof Venkatasubbaiah chosen for Pampa Prashasti said Kannada and Culture Department minister Umashree today (Feb,.4). The prestigious award will be conferred to the centurion Venkatasubbaiah during the Kadambotsava to be held at Banasavi from Feb.7, 2015
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X