• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಜೋಡೋ ಯಾತ್ರೆ: ಕನ್ನಡ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ

|
Google Oneindia Kannada News

ಮೈಸೂರು, ಅ. 3: ಕಾಂಗ್ರೆಸ್ ಆಯೋಜಿಸಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಸಾಗುತ್ತಾ ಬಹಳಷ್ಟು ಸದ್ದು ಮಾಡಿದೆ. ರಾಹುಲ್ ಗಾಂಧಿ ಮಳೆಯಲ್ಲೂ ಭಾಷಣ ಮಾಡುತ್ತಿರುವ ಚಿತ್ರ ರಾಷ್ಟ್ರಮಟ್ಟದಲ್ಲಿ ಖ್ಯಾತವಾಗಿದೆ. ಇದೇ ಸಂದರ್ಭದಲ್ಲಿ ವಿವಾದಗಳೂ ಯಾತ್ರೆಗೆ ಅಡ್ಡಿಪಡಿಸುತ್ತಿವೆ. ಕನ್ನಡ ಸಂಘಟನೆಯೊಂದು ಇದೀಗ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಿದೆ.

ಭಾರತ್ ಜೋಡೋ ಯಾತ್ರೆ ವೇಳೆ ಕರ್ನಾಟಕ ಧ್ವಜಕ್ಕೆ ರಾಹುಲ್ ಗಾಂಧಿ ಚಿತ್ರವನ್ನು ಸೇರಿಸಿರುವುದಕ್ಕೆ ಕರ್ನಾಟಕ ನವ ನಿರ್ಮಾಣ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದೆ. ಕಾಂಗ್ರೆಸ್ ಪಕ್ಷ ಯಾಚಿಸಬೇಕೆಂದು ಈ ಕನ್ನಡ ಸಂಘಟನೆ ಆಗ್ರಹಿಸಿದೆ.

ಪಿಎಫ್‌ಐ-ಬಿಜೆಪಿ ಒಳ ಒಪ್ಪಂದ: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹಪಿಎಫ್‌ಐ-ಬಿಜೆಪಿ ಒಳ ಒಪ್ಪಂದ: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಮೈಸೂರಿನಲ್ಲಿ ಕಾಂಗ್ರೆಸ್ ಪಾದಯಾತ್ರೆ ಮಾಡುವ ವೇಳೆ ಕೆಲವರು ಹಿಡಿದಿದ್ದ ಕರ್ನಾಟಕ ಧ್ವಜಗಳಲ್ಲಿ ರಾಹುಲ್ ಗಾಂಧಿ ಚಿತ್ರವನ್ನು ಮುದ್ರಿಸಲಾಗಿದ್ದುದು ಕಂಡುಬಂದಿತ್ತು.

ಬಿಜೆಪಿ ಈ ವಿಚಾರವನ್ನು ಕಾಂಗ್ರೆಸ್ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡಿದೆ.

"ಕನ್ನಡ ಬಾವುಟದ ಮೇಲೆ ರಾಹುಲ್ ಗಾಂಧಿ ಚಿತ್ರ ಮುದ್ರಿಸಿರುವುದನ್ನು ನಾನು ಖಂಡಿಸುತ್ತೇನೆ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಕರ್ನಾಟಕ ಧ್ವಜವನ್ನೇ ಬದಲಾಯಿಸಿದರು. ಆಗ ನಾವೆಲ್ಲಾ ಕನ್ನಡಿಗರು ಪ್ರತಿಭಟಿಸಿದ ಬಳಿಕ ಕೈಬಿಟ್ಟರು. ಈಗ ರಾಹುಲ್ ಗಾಂಧಿ ಫೋಟೋ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆ ಆಗಬೇಕು" ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದ್ದಾರೆ.

ರಾಜ್ಯ ಬಿಜೆಪಿಯ ಟ್ವೀಟ್ ಖಾತೆಯಿಂದಲೂ ಟೀಕಾ ಪ್ರಹಾರ ನಡೆಯಿತು. "ಕಾಂಗ್ರೆಸ್‌ಗೆ ನಮ್ಮ ಕನ್ನಡ ಬಾವುಟದ ವಿಚಾರದಲ್ಲಿ ಸುಮ್ಮನೆ ಕೂರುವುದಕ್ಕೇ ಬರಲ್ಲ ಎಂಬುದಕ್ಕೆ ಇದು ಎರಡನೇ ಉದಾಹರಣೆ. ಮೊದಲು ಧ್ವಜವನ್ನೇ ಬದಲಿಸಹೊರಟಿದ್ದರು, ಆದರೆ ಈಗ ರಾಹುಲ್ ಗಾಂದಿಯ ಫೋಟೊ ಹಾಕಿದ್ದಾರೆ. ‌ಕನ್ನಡಿಗರನ್ನು ಕಂಡರೆ ಕಾಂಗ್ರೆಸ್ ಪಕ್ಷಕ್ಕೆ ಏಕೆ ಇಷ್ಟು ದ್ವೇಷ?‌

Pro Kannada Outfit Criticises Congress and Rahul Gandhi on Kannada Flag Controversy

"ಕಂಡ ಕಂಡ ಕಡೆಯಲ್ಲೆಲ್ಲ ಗಾಂಧಿ ಕುಟುಂಬದ ಹೆಸರೇ ತುಂಬಿದ್ದರೂ, ಸಮಾಧಾನಗೊಳ್ಳದ ಸಿದ್ದರಾಮಯ್ಯ, ಡಿಕೆ ಶಿವಕಮಾರ್ ಗುಲಾಮಗಿರಿಯ ಮನಸ್ಸು, ಈಗ ಕನ್ನಡ ಧ್ವಜದ್ಊ ರಾಹುಲ್ ಗಾಂಧಿಯ ಫೋಟೋ ಹಾಕಿರುವುದನ್ನು ನೋಡಿದರೆ ಮುಂದೊಂದು ದಿನ ಕರ್ನಾಟಕವನ್ನೇ ಅಡಬಿಟ್ಟರೂ ಆಶ್ಚರ್ಯ ಇಲ್ಲ. ಕನ್ನಡಿಗರೇ ಎಚ್ಚೆತ್ತುಕೊಳ್ಳಿ" ಎಂದು ಬಿಜೆಪಿ ನಿನ್ನೆ ಗಾಂಧಿ ಜಯಂತಿಯಂದು ಟ್ವೀಟ್ ಮಾಡಿತ್ತು.

ಹಾಗೆಯೇ, ಭಾರತ್ ಜೋಡೋ ಯಾತ್ರೆಗೆ ಸ್ವಾಗತಿಸಲು ಉರ್ದು ಬ್ಯಾನರ್ ಹಾಕಿದ್ದರ ಬಗ್ಗೆಯೂ ಬಿಜೆಪಿ ವ್ಯಂಗ್ಯ ಮಾಡಿದೆ. ಓಲೈಕೆಯ ರಾಜಕಾರಣಕ್ಕೆ ಕನ್ನಡವನ್ನೇ ಬಿಟ್ಟ ಕಾಂಗ್ರೆಸ್‌ಗೆ ಈ ದುರ್ಗತಿ ಬರಬಾರದಿತ್ತು ಎಂದು ರಾಜ್ಯ ಬಿಜೆಪಿಯ ಟ್ವಿಟ್ಟರ್ ಅಕೌಂಟ್‌ನಿಂದ ಸೋಮವಾರ ಆರೋಪವಾಗಿದೆ.

ಮೊನ್ನೆ ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್ ಅವರು ಭಾರತ್ ಜೋಡೋ ಯಾತ್ರೆ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಭಾರತ್ ಜೋಡೋ ಯಾತ್ರೆಯಲ್ಲಿ ಬಿಜೆಪಿ ವಿರುದ್ಧ ಮಾತನಾಡುವವರಿಗೆ ಮಾತ್ರ ಚರ್ಚೆಗೆ ಕರೆಯಲಾಗುತ್ತಿದೆ. ಬೇರೆ ವಿಚಾರಗಳನ್ನು ಚರ್ಚಿಸಲು ಅವಕಾಶ ಇಲ್ಲ ಎಂದು ಹೇಳಿದ್ದರು.

(ಒನ್ಇಂಡಿಯಾ ಸುದ್ದಿ)

ರಾಹುಲ ಗಾಂಧಿ
Know all about
ರಾಹುಲ ಗಾಂಧಿ

English summary
Rahul Gandhi's pic printed on Kannada flags drew flak from a pro-Kannada outfit during the Bharat Jodo Yatre. BJP to lashed out against Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X