ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಆರ್ ಎ ನಿಧನ:ಅತೃಪ್ತ ಆತ್ಮಗಳಿಂದ ಸಂಭ್ರಮಾಚರಣೆ!

|
Google Oneindia Kannada News

ಬೆಂಗಳೂರು, ಆ 23: ಶುಕ್ರವಾರ (ಆ 22) ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಅಸ್ತಂಗತರಾದ ಕನ್ನಡದ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು.ಆರ್ ಅನಂತಮೂರ್ತಿ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆಯೇ ಕೆಲ ಸಮಾಜಘಾತುಕ ಶಕ್ತಿಗಳು ಪಟಾಕಿ ಹೊಡೆದು ಸಂಭ್ರಮಿಸಿದ ಘಟನೆ ವರದಿಯಾಗಿದೆ.

ಮಂಗಳೂರಿನ ಕದ್ರಿ ಸರ್ಕಲ್, ಮೂಡಿಗೆರೆಯ ಲಯನ್ಸ್ ಸರ್ಕಲ್ ಮತ್ತು ಚಿಕ್ಕಮಗಳೂರಿನಲ್ಲಿ ಕೆಲವು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚಾರಣೆ ನಡೆಸಿದ ಘಟನೆಗೆ ರಾಜ್ಯಾದ್ಯಂತ ಭಾರೀ ಟೀಕೆಯ ಮಹಾಪೂರವೇ ಹರಿದುಬರುತ್ತಿದೆ.

ಸಾವಿನ ಸಮಯದಲ್ಲೂ ಸಂಭ್ರಮಾಚರಣೆ ನಡೆಸಿದ ಸುದ್ದಿ ಹೊರ ಬೀಳುತ್ತಿದ್ದಂತೆಯೇ, ಪಟಾಕಿ ಸಿಡಿಸಿದ ಅತೃಪ್ತ ಆತ್ಮಗಳಿಗೂ ನಮಗೂ ಸಂಬಂಧವಿಲ್ಲ. ಅವರು ನಮ್ಮ ಕಾರ್ಯಕರ್ತರಲ್ಲ. ಬಿಜೆಪಿ ಈ ಘಟನೆಯನ್ನೂ ತೀವ್ರವಾಗಿ ಖಂಡಿಸುತ್ತದೆ ಎಂದು ರಾಜ್ಯ ಬಿಜೆಪಿ ವಕ್ತಾರ ಪ್ರಕಾಶ್ ಹೇಳಿಕೆ ನೀಡಿದ್ದಾರೆ. (ಸಾಹಿತಿ ಯು.ಆರ್ ಅನಂತಮೂರ್ತಿ ಅಸ್ತಂಗತ)

ಹಿಂದೂಪರ ಸಂಘಟನೆಯ ಕಾರ್ಯಕರ್ತರು ಅನಂತಮೂರ್ತಿ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆಯೇ, ಪಟಾಕಿ ಸಿಡಿಸಿ ಅವರ ವಿರುದ್ದ ಘೋಷಣೆ ಕೂಗಿ ವಿಕೃತ ಆನಂದ ಅನುಭವಿಸಿದ್ದಾರೆ.

ನರೇಂದ್ರ ಮೋದಿ ಪ್ರಧಾನಿಯಾಗಿರುವ ಭಾರತದಲ್ಲಿ ನಾನು ಇರುವುದಿಲ್ಲ ಎಂದು ಅನಂತಮೂರ್ತಿ ಈ ಹಿಂದೆ ಹೇಳಿಕೆ ನೀಡಿದ್ದರು. ಅದಕ್ಕೆ ಕೆಲವು ಸಂಘಟನೆಗಳು ಅನಂತಮೂರ್ತಿಯವರಿಗೆ ಪಾಕಿಸ್ತಾನದ ವಿಮಾನ ಟಿಕೆಟನ್ನು ಕಳುಹಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.

ಪ್ರಲ್ಹಾದ್ ಜೋಷಿ

ಮಾಧ್ಯಮದ ಮೂಲಕ ಈ ಘಟನೆಯ ಬಗ್ಗೆ ತಿಳಿದುಕೊಂಡೆ. ಹುಬ್ಬಳ್ಳಿಯಲ್ಲಿ ಹಾಸ್ಯಸಂಜೆ ಕಾರ್ಯಕ್ರಮ ಆಯೋಜಿಸಿದ್ದೆವು. ಯುಆರ್ಎ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಕಾರ್ಯಕ್ರಮ ರದ್ದುಗೊಳಿಸಿದ್ದೇವೆ. ಸಂಭ್ರಮಾಚಾರಣೆಯ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಖ್ಯಾತ ಸಾಹಿತಿಯೊಬ್ಬರು ಅಸ್ತಂಗತರಾದಾಗ ಸಂಭ್ರಮಿಸುವುದು ಹಿಂದೂ, ಬಿಜೆಪಿಯ ಸಂಸ್ಕೃತಿಯಲ್ಲ. ಪಟಾಕಿ ಸಿಡಿಸಿದವರು ಪಕ್ಷದ ಕಾರ್ಯಕರ್ತರು ಎಂದಾದರೆ ಅವರಿಗೆ ಸೂಕ್ತ ತಿಳುವಳಿಕೆ ನೀಡುತ್ತೇನೆ.

ದೇವೇಗೌಡ ಖಂಡನೆ

ದೇವೇಗೌಡ ಖಂಡನೆ

ಅನಂತಮೂರ್ತಿ ನಿಧನಕ್ಕೆ ಸಂತಸ ವ್ಯಕ್ತಪಡಿಸಿ ಸಂಭ್ರಮಾಚಾರಣೆ ಮಾಡಿದ್ದಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುಆರ್ಎ ನಿಧನದ ನಂತರವೂ ಅವರ ಹೋರಾಟ ಮುಂದುವರಿಯಲಿದೆ, ಎಂದು ಗೌಡ್ರು ಹೇಳಿದ್ದಾರೆ.

ವೈಎಸ್ ವಿ ದತ್ತ

ವೈಎಸ್ ವಿ ದತ್ತ

ಸಾವಿನ ಮನಯಲ್ಲೂ ಕೆಲವು ಸಂಘಟನೆಗಳು ಪಟಾಕಿ ಹೊಡೆದು ಸಂಭ್ರಮಿಸಿದ ಘಟನೆ ಮನಸ್ಸಿಗೆ ನೋವು ತಂದಿದೆ. ಇದು ಆ ಸಂಘಟನೆಯ ಚಾರಿತ್ರ್ಯತೆಯನ್ನು ಪರೀಕ್ಷಿಸುವಂತಾಗಿದೆ. ಹುಟ್ಟು, ಸಾವು ದೈವೇಚ್ಚೆ ಎನ್ನುವುದನ್ನು ಈ ಸಮಾಜಘಾತುಕ ಸಂಘಟನೆಗಳು ಅರಿಯಲಿ - ಜೆಡಿಎಸ್ ಮುಖಂಡ ವೈಎಸ್ವಿ ದತ್ತ.

ನಾರಾಯಣಗೌಡ

ಯುಆರ್ಎ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಅಂತಿಮ ನಮನ ಸಲ್ಲಿಸಿದ ಕರವೇ ಅಧ್ಯಕ್ಷ ನಾರಾಯಣಗೌಡ, ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಸಂಭ್ರಮಾಚರಣೆ ನಡೆಸಿದವರ ಬಗ್ಗೆ ನನಗೆ ಹೇಸಿಗೆ ಎನಿಸುತ್ತಿದೆ.

ವಿ ಎಸ್ ಉಗ್ರಪ್ಪ

ವಿ ಎಸ್ ಉಗ್ರಪ್ಪ

ಸಾಹಿತ್ಯ ಲೋಕಕ್ಕೆ ಅನಂತಮೂರ್ತಿಯವರ ಸೇವೆ ಅಪಾರ. ರಾಜ್ಯವೇ ಶೋಕದಲ್ಲಿ ಇರುವಾಗ ಕೆಲವು ಸಮಾಜಘಾತುಕ ಶಕ್ತಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ ಬಗ್ಗೆ ಈ ರಾಜ್ಯದ ಪ್ರಜೆಯಾಗಿ ತುಂಬಾ ನೋವಾಗಿದೆ.

English summary
Pro Hindu Organization volunteers celebrated U R Anantha Murthy death. Incident reported in Mangalore, Mudigere and Chickamagalur on August 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X