• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಉದ್ಯೋಗ ನೀಡಲು ಸಮೃದ್ಧಿ ಯೋಜನೆ

|
   ಕರ್ನಾಟಕದಲ್ಲಿ ಜಾರಿಗೆ ಬಂತು ಸಮೃದ್ಧಿ ಯೋಜನೆ | Oneindia Kannada

   ಬೆಂಗಳೂರು, ಅಕ್ಟೋಬರ್ 31 : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗವಕಾಶ ಕಲ್ಪಿಸುವ 'ಸಮೃದ್ಧಿ ಯೋಜನೆ'ಗೆ ಚಾಲನೆ ಸಿಕ್ಕಿದೆ. ಸಮಾಜ ಕಲ್ಯಾಣ ಇಲಾಖೆ ಈ ಯೋಜನೆ ಜಾರಿಗೆ ತಂದಿದೆ.

   ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ 31ಕ್ಕೂ ಹೆಚ್ಚು ಕಂಪನಿಗಳ ಜೊತೆ 'ಸಮೃದ್ಧಿ ಯೋಜನೆ'ಯಡಿ ಒಪ್ಪಂದ ಮಾಡಿಕೊಂಡರು. ಸಾಮಾಜಿಕ ಉದ್ಯಮಶೀಲತಾ ಕಾರ್ಯಕ್ರಮದಡಿ ಉದ್ಯೋಗವಕಾಶ ನೀಡಲಾಗುತ್ತದೆ.

   16 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಪಿಜಿಸಿಐಎಲ್

   ಸುಮಾರು 800 ಕೋಟಿ ವೆಚ್ಚದಲ್ಲಿ 'ಸಮೃದ್ಧಿ ಯೋಜನೆ' ಜಾರಿಗೆ ತರಲಾಗಿದೆ. ಖಾಸಗಿ ಸಂಸ್ಥೆಗಳು ಮತ್ತು ಕಾರ್ಪೋರೇಟ್ ಉದ್ದಿಮೆಗಳ ಸಹಭಾಗಿತ್ವದಲ್ಲಿ ನಿರುದ್ಯೋಗಿ ಯುವಕ/ಯುವತಿಯರಿಗೆ ಉದ್ಯೋಗವಕಾಶ ನೀಡುವ ಯೋಜನೆ ಇದಾಗಿದೆ.

   ಸಮಾಜ ಕಲ್ಯಾಣ ಇಲಾಖೆಯಿಂದ 'ಐರಾವತ' ಟ್ಯಾಕ್ಸಿ ಯೋಜನೆ

   ಈ ವರ್ಷದಲ್ಲಿ ಸುಮಾರು 10 ಸಾವಿರ ಮಂದಿಗೆ ಈ ಯೋಜನೆಯಡಿ ಸ್ವಯಂ ಉದ್ಯೋಗ ಮಾಡಲು ಸಹಾಯ ಮಾಡುವ ಗುರಿಯನ್ನು ಯೋಜನೆ ಹೊಂದಿದೆ. ನವೆಂಬರ್ 7ರಿಂದ ಯೋಜನೆಯ ಲಾಭ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.....

   ವಿಜಯಾ ಬ್ಯಾಂಕ್‌ನಲ್ಲಿ ಅರ್ಜಿ ಆಹ್ವಾನ, ಬೆಂಗಳೂರಲ್ಲಿ ಕೆಲಸ

   ಪ್ರಿಯಾಂಕ್ ಖರ್ಗೆ ಮಾಹಿತಿ

   ಪ್ರಿಯಾಂಕ್ ಖರ್ಗೆ ಮಾಹಿತಿ

   ಸಮೃದ್ಧಿ ಯೋಜನೆ ಬಗ್ಗೆ ಮಾಹಿತಿ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, 'ಯೋಜನೆಯಡಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಬಯಸುವ ಫಲಾನುಭವಿಗಳಿಗೆ ಮಾರುಕಟ್ಟೆ ಹಾಗೂ ತಾಂತ್ರಿಕ ನೆರವು ಒದಗಿಸಲು ವಿವಿಧ ಸಂಸ್ಥೆಗಳ ಜೊತೆ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ. ವಿವಿಧ ಬ್ರಾಡೆಂಟ್ ಸಂಸ್ಥೆಗಳ ಸಹಯೋಗದಲ್ಲಿ ಸಮೃದ್ಧಿ ಯೋಜನೆ ಜಾರಿಗೆ ತರಲಾಗುತ್ತಿದೆ' ಎಂದರು.

   ಯಾವ-ಯಾವ ಕಂಪನಿಗಳು?

   ಯಾವ-ಯಾವ ಕಂಪನಿಗಳು?

   ಬಿಗ್ ಬಾಸ್ಕೆಟ್, ಜಿಇ ಹೆಲ್ತ್‌ ಕೇರ್, ಕಾಫಿ ಬೋರ್ಡ್, ಕೆಎಂಎಫ್, ಓಲಾ, ಹಟ್ಟಿಕಾಫಿ, ಚಾಯ್ ಪಾಯಿಂಟ್, ಜ್ಯೋತಿ ಲ್ಯಾಬೊರೇಟರಿ, ಮೇರು ಕ್ಯಾಬ್, ಐಸಿಐಸಿಐ ಫೌಂಡೇಷನ್, ಕ್ಲಾಸಿಕ್ ಪೋಲೋ, ಮಹಿಂದ್ರಾ ಎಲೆಕ್ಟ್ರಿಕ್, ಕುರ್ಲಾನ್, ಬಾಟಾ, ಪಾರಾಗಾನ್, ಖಾದಿಮ್ಸ್, ಟಿಟಿಕೆ ಪ್ರೆಸ್ಟೀಜ್ ಸೇರಿ 31 ಕಂಪನಿಗಳ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.

   ನೆರವು ಮತ್ತು ತರಬೇತಿ

   ನೆರವು ಮತ್ತು ತರಬೇತಿ

   ಮೊಬೈಲ್ ಮಾರಾಟ ಮತ್ತು ದುರಸ್ಥಿ, ಬ್ರಾಂಡೆಡ್ ಮೆಡಿಕಲ್ ಸ್ಟೋರ್, ಬ್ರಾಡೆಂಡ್ ಪಾದರಕ್ಷೆ ಮಳಿಗೆ ಮುಂತಾದ ವ್ಯಾಪಾರ ಆರಂಭಿಸಲು ಸಂಬಂಧಿಸಿದ ಸಂಸ್ಥೆಗಳು ತರಬೇತಿ, ಮಾರುಕಟ್ಟೆ ಹಾಗೂ ತಾಂತ್ರಿಕ ನೆರವು ನೀಡಲಿವೆ. ಚಿಲ್ಲರೆ ಮಾರಾಟಕ್ಕೆ ಅವಕಾಶ ಇರುವ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಆರಂಭಿಸಲು ಅಗತ್ಯ ಆರ್ಥಿಕ ನೆರವು ನೀಡಲಾಗುತ್ತದೆ.

   ನವೆಂಬರ್ 7ರಿಂದ ಅರ್ಜಿ

   ನವೆಂಬರ್ 7ರಿಂದ ಅರ್ಜಿ

   ಸಮೃದ್ಧಿ ಯೋಜನೆಯಡಿ ಆರ್ಥಿಕ ಸಹಾಯ ಧನ ಪಡೆಯಲು ನವೆಂಬರ್ 7 ರಿಂದ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.

   * ಎಸ್‌ಸಿ/ಎಸ್‌ಟಿ ನಿರುದ್ಯೋಗಿಗಳಿಗೆ ಸೀಮಿತ

   * ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು

   * ಕನಿಷ್ಠ ವಿದ್ಯಾರ್ಹತೆ ಎಸ್ಎಸ್ಎಲ್‌ಸಿ

   * ವಯೋಮಿತಿ 21 ರಿಂದ 50 ವರ್ಷ

   * ಕುಟುಂಬದ ವಾರ್ಷಿಕ ವರಮಾನ 5 ಲಕ್ಷ ಮೀರಿರಬಾರದು

   * ಮೆರಿಟ್, ವಯಸ್ಸು ಆಧರಿಸಿ ಆಯ್ಕೆ

   * ಸ್ವಂತ, ಬಾಡಿಗೆ ಮಳಿಗೆ ಹೊಂದಿರಬೇಕು

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Karnataka Social Welfare minister Priyank Kharge launched the Samruddhi yojane. It will be the first of it's kind entrepreneurship program that will enable socio-economic empowerment of the SC/ST communities in the state.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more