ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಕ್ಕೆ 5 ದಿನಗಳ ಕೆಲಸ: ಗೊಂದಲಕ್ಕೆ ತೆರೆ ಎಳೆದ ಸಚಿವ ಪ್ರಿಯಾಂಕ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 02: ವಾರಕ್ಕೆ 5 ದಿನಗಳು ಮಾತ್ರ ಕೆಲಸ, ಸಾರ್ವಜನಿಕ ರಜೆ ದಿನಗಳಲ್ಲಿ ಕಡಿತದ ಶಿಫಾರಸ್ಸಿನ ಬಗ್ಗೆ ಉಂಟಾಗಿರುವ ಗೊಂದಲಕ್ಕೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ತೆರೆ ಎಳೆದಿದ್ದಾರೆ. ಕಾರ್ಯಕ್ಷಮತೆ ಹೆಚ್ಚಳಕ್ಕಾಗಿ ಈ ರೀತಿ ಶಿಫಾರಸ್ಸು ಮಾಡಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಆರನೇ ವೇತನ ಆಯೋಗ ಐದು ದಿನಗಳ ವಾರದ ಪದ್ಧತಿಯನ್ನು ರಾಜ್ಯದಲ್ಲಿಯೂ ಜಾರಿಗೆ ತರಬೇಕೆಂದು ಶಿಫಾರಸು ಮಾಡಿದೆ. ಕರ್ನಾಟಕ ಸರ್ಕಾರದ ಉದ್ಯೋಗಿಗಳು ಸಹ ಐದು ದಿನಗಳ ವಾರವನ್ನು ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಬಹಳಷ್ಟು ವರ್ಷಗಳಿಂದ ಐದು ದಿನಗಳ ವಾರದ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿದೆ. ಕೆಲಸದ ವೇಳೆಯನ್ನು ಹೆಚ್ಚಿಸುವ ಮೂಲಕ ಸಮತೋಲನವನ್ನು ತರಲಾಗಿದೆ.

ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನಗಳ ಕೆಲಸ: ಎಚ್ಡಿಕೆಗೆ ಪ್ರಿಯಾಂಕ್ ಶಿಫಾರಸುಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನಗಳ ಕೆಲಸ: ಎಚ್ಡಿಕೆಗೆ ಪ್ರಿಯಾಂಕ್ ಶಿಫಾರಸು

ಹೀಗಾಗಿ, ಸರ್ಕಾರಿ ನೌಕರರ ಪರವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಪತ್ರ ಕಳಿಸಿದೆ ಎಂದು ಹೇಳಿದ್ದಾರೆ. ವಾರ್ಷಿಕ ಕೆಲಸದ ದಿನಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಬಂದಿದೆ.

ಸರ್ಕಾರ ಈಗ ನೀಡುತ್ತಿರುವ ಸಾರ್ವತ್ರಿಕ ರಜೆಗಳನ್ನು ಮಿತಿಗೊಳಿಸಿ, ಅವಶ್ಯವಿರುವವರು ಅವಶ್ಯವಿರುವ ದಿನಗಳಂದು ರಜೆ ತೆಗೆದುಕೊಳ್ಳುವಂತೆ ನಿರ್ಬಂಧಿತ ರಜೆಯನ್ನು ಹೆಚ್ಚಳ ಮಾಡುವ ಮೂಲಕ ಐದು ದಿನಗಳ ಕೆಲಸದ ವಾರವನ್ನು ರಾಜ್ಯದಲ್ಲಿ ಜಾರಿಗೆ ತರಬಹುದು ಎಂಬುದು ನನ್ನ ಅಭಿಪ್ರಾಯವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಐದು ದಿನಗಳ ವಾರದ ಪದ್ಧತಿ ಜಾರಿಗೆ

ಐದು ದಿನಗಳ ವಾರದ ಪದ್ಧತಿ ಜಾರಿಗೆ

ಐದು ದಿನಗಳ ವಾರದ ಪದ್ಧತಿ ಜಾರಿಗೆ ತರುವುದರಿಂದ ಸರ್ಕಾರ ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ಹಲವಾರು ಅನುಕೂಲಗಳಿವೆ. ನೌಕರರಿಂದ ಫಲಿತಾಂಶ ಆಧಾರಿತ ಕಾರ್ಯ ನಿರೀಕ್ಷಿಸಬಹುದಲ್ಲದೆ, ಕೆಲಸದಲ್ಲಿ ಗುಣಮಟ್ಟ ಮತ್ತು ಉತ್ಪಾದನೆ ಹೆಚ್ಚಳವಾಗುವುದು. ನೌಕರರಿಗೆ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಹೆಚ್ಚು ಅವಕಾಶಗಳು ದೊರೆಯುವುದರಿಂದ ಕಚೇರಿ ಗೈರು ಹಾಜರಾರಿ ನಿಯಂತ್ರಣಗೊಳ್ಳುವುದು.

ಈ ಯೋಜನೆ ಕಾರ್ಯಗತವಾದರೆ ಒಳ್ಳೆಯದು

ಈ ಯೋಜನೆ ಕಾರ್ಯಗತವಾದರೆ ಸರ್ಕಾರಿ ಕೆಲಸದ ಕಾರ್ಯಕ್ಷಮತೆ ಹೆಚ್ಚಳವಾಗಲಿದೆ. ಹೆಚ್ಚುವರಿ ರಜೆ ಕಡಿತ ಆಗಬೇಕಿದೆ ಎಂದು ಒನ್ಇಂಡಿಯಾದ ಎಂಡಿ ಬಿಜಿ ಮಹೇಶ್ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದಲ್ಲಿ ಲಂಚವೇ Productivity ತಿಳಿಯಿರಿ

ಗುಮಾಸ್ತನಿಂದ ಹಿಡಿದು ಮಂತ್ತಿವರೆಗು ಲಂಚ ಹರಿದಾಡುತ್ತೆ,ಇನ್ನು ಪ್ರೊತ್ಸಾಹಿಸಿದಂತೆ.ಈಗಲೆ ಕೆಲಸಗಳು ಸಮಯಕ್ಕೆ ಆಗುತ್ತಿಲ್ಲ,ಇನ್ನು ಐದು ದಿನ ಮಾಡಿದರೆ ಲಂಚ ತಾಂಡವವಾಡುತ್ತದೆ.ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1 ಸ್ಥಾನದಲ್ಲಿದೆ

ದಾವಣಗೆರೆ ಡಿಸಿ ಕಚೇರಿ

ದಾವಣಗೆರೆ ಡಿಸಿ ಕಚೇರಿಯಲ್ಲಿ ಮಧ್ಯಾಹ್ನ ಊಟಕ್ಕೆ ಹೋಗುವ ಅಧಿಕಾರಿಗಳು 2 ತಾಸಾದರೂ ತಮ್ಮ ಸೀಟಿಗೆ ಹಿಂತಿರುಗುವುದಿಲ್ಲ. ಹೀಗಾದರೆ, ಹೇಗೆ? ರಜೆ ಕಡಿತ, ಕೆಲಸದ ಸಮಯ ಕಡಿತ ಜೊತೆಗೆ ವಾರದ ಕೆಲಸದ ದಿನಗಳು ಕಡಿತಗೊಂಡರೆ ಮುಂದೆ ಗತಿಯೇನು?

ಪ್ರಾಯೋಗಿಕವಾಗಿ ಜಾರಿಗೆ ತನ್ನಿ

ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನಗಳ ಕೆಲಸ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತನ್ನಿ, ಕಡ್ಡಾಯ ಮಾಡಿದ್ರೆ, ಮಾಡೋ ಕೆಲ್ಸವನ್ನು ಸರಿಯಾಗಿ ಮಾಡುವುದಿಲ್ಲ. ವಾರಾಂತ್ಯದಲ್ಲಿ ಇಚ್ಛೆ ಇದ್ದವ್ರು ಕೆಲ್ಸ ಮಾಡಿ ನಂತರ ರಜೆ ಪಡೆಯಲಿ.

English summary
Karnataka Minister for Social Welfare Priyank Kharge tweets and gives clarification about his recommendation about five days work for Government employees. He said it'll boost the work capacity of the state govt employees.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X