ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಶಾಲೆಗಳ ಶುಲ್ಕದಲ್ಲಿ ಭಾರೀ ರಿಯಾಯಿತಿ : ಸರ್ಕಾರಕ್ಕೆ ನೀಡಿದ ಸಲಹೆಗಳೇನು ?

|
Google Oneindia Kannada News

ಬೆಂಗಳೂರು, ಜನವರಿ 15: ಶಾಲಾ ಶುಲ್ಕ ಕಡಿಮೆ ಮಾಡುವ ಕುರಿತು ಗೊಂದಲ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಶುಲ್ಕವನ್ನು ಮೂರು ಹಂತದಲ್ಲಿ ಶೇಕಡವಾರು ಕಡಿಮೆ ಮಾಡುವಂತೆ ಖಾಸಗಿ ಶಾಲೆಗಳ ಒಕ್ಕೂಟ ಸರ್ಕಾರಕ್ಕೆ ಸಲಹೆ ನೀಡಿದೆ.

ಖಾಸಗಿ ಶಾಲೆಗಳ ಒಕ್ಕೂಟ ಹಾಗೂ ಪೋಷಕರ ಸಂಘಟನೆ ಪ್ರತಿನಿಧಿಗಳ ಜತೆ ಚರ್ಚಿಸಿ ಮೂರು ಮಾದರಿಯಲ್ಲಿ ಶುಲ್ಕ ಕಡಿಮೆ ಮಾಡಬಹುದು. ಶಾಲೆಗಳಿಗೆ ಹಾಗೂ ಪೋಷಕರಿಗೆ ಹೊರೆಯಾಗದಂತೆ ಶಾಲೆಗಳ ಶುಲ್ಕ ಆಧರಿಸಿ ಶುಲ್ಕದಲ್ಲಿ ರಿಯಾಯಿತಿ ಘೋಷಣೆ ಮಾಡಲು ಸಲಹೆ ನೀಡಿರುವುದಾಗಿ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ತಿಳಿಸಿದೆ. ರುಪ್ಸಾ ಸಲಹೆ ಪ್ರಕಾರ ಶಾಲಾ ಶುಲ್ಕ ಕಡಿಮೆಯಾದರೆ ಈ ಕೆಳಗಿನಂತೆ ಖಾಸಗಿ ಶಾಲೆಗಳ ಶುಲ್ಕ ಆಧರಿಸಿ ಕಡಿಮೆಯಾಗಲಿದೆ.

ಶುಲ್ಕ ಕಡಿತ ಇಲ್ಲ

ಶುಲ್ಕ ಕಡಿತ ಇಲ್ಲ

ಗರಿಷ್ಠ 15 ಸಾವಿರ ರೂಪಾಯಿ ವಾರ್ಷಿಕ ಶುಲ್ಕ ವಿಧಿಸುವ ಖಾಸಗಿ ಶಾಲೆಗಳು ಯಾವುದೇ ಶುಲ್ಕ ಕಡಿತಕ್ಕೆ ಅವಕಾಶ ಕೊಡುವಂತಿಲ್ಲ. ಈಗಾಗಲೇ ಕೋವಿಡ್ ನಿಂದ ಶಾಲೆಗಳು ಸಂಕಷ್ಟಕ್ಕೆ ಒಳಗಾಗಿದ್ದು, ಕಡಿಮೆ ಶುಲ್ಕ ಪಡೆದು ನಡೆಸುತ್ತಿರುವ ಶಾಲೆಗಳು ಸಾವಿರಾರು ಇವೆ. ಹದಿನೈದು ಸಾವಿರ ಶಾಲಾ ಶುಲ್ಕ ಪಡೆಯುವ ಶಾಲೆಗಳು ಶುಲ್ಕ ಕಡಿಮೆ ಮಾಡುವ ಅಗತ್ಯವಿಲ್ಲ ಎಂದು ರುಪ್ಸಾ ಸಲಹೆ ನೀಡಿದೆ.

ನಿಮ್ಮ ಮಕ್ಕಳು ಶಾಲೆಗೆ ಹೋಗುತ್ತಿಲ್ಲವಾ? ಆತಂಕ ಬೇಡ!ನಿಮ್ಮ ಮಕ್ಕಳು ಶಾಲೆಗೆ ಹೋಗುತ್ತಿಲ್ಲವಾ? ಆತಂಕ ಬೇಡ!

ಶೇ. 10 ರಷ್ಟು ಶುಲ್ಕ

ಶೇ. 10 ರಷ್ಟು ಶುಲ್ಕ

ರಾಜ್ಯದಲ್ಲಿರುವ ಖಾಸಗಿ ಶಾಲೆಗಳು 15 ಸಾವಿರ ದಿಂದ ಗರಿಷ್ಠ 25 ಸಾವಿರ ರೂಪಾಯಿ ವಾರ್ಷಿಕ ಶುಲ್ಕ ಪಡೆಯುವ ಶಾಲೆಗಳು ಈ ವರ್ಷದ ಶುಲ್ಕದಲ್ಲಿ ಶೇ. 10 ರಷ್ಟು ಶುಲ್ಕ ವಿನಾಯಿತಿ ವಿದ್ಯಾರ್ಥಿಗಳಿಗೆ ನೀಡಲು ಸಲಹೆ ನೀಡಿದೆ. ಕೋವಿಡ್ ಸಂಕಷ್ಟದಲ್ಲಿರುವ ಪೋಷಕರಿಗೆ ಅನುಕೂಲವಾಗಲು ಈ ಪ್ರಮಾಣದಲ್ಲಿ ಶಾಲಾ ಶುಲ್ಕ ಕಡಿತ ಮಾಡಬಹುದು. ಇದಕ್ಕೆ ಪೋಷಕರ ಒಕ್ಕೂಟ ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಒಪ್ಪಿಗೆ ನೀಡಿವೆ ಎಂದು ರುಪ್ಸಾ ತಿಳಿಸಿದೆ.

ಶೇ. 15 ರಷ್ಟು ಶುಲ್ಕ ಇಳಿಕೆ

ಶೇ. 15 ರಷ್ಟು ಶುಲ್ಕ ಇಳಿಕೆ

ಯಾವ ಶಾಲೆಗಳು ವಾರ್ಷಿಕ ಶಾಲಾ ಶುಲ್ಕ 25 ಸಾವಿರ ದಿಂದ 30 ಸಾವಿರ ಶುಲ್ಕ ವಿಧಿಸುತ್ತಿವೆಯೋ ಅಂತಹ ಶಾಲೆಗಳು ಗರಿಷ್ಠ ಶೇ. 15 ರಷ್ಟು ಶಾಲಾ ಶುಲ್ಕ ದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಬಹುದು. ಇನ್ನು ವಾರ್ಷಿಕ 30 ರಿಂದ 50 ಸಾವಿರ ಶಾಲಾ ಶುಲ್ಕ ಪಡೆಯುವ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 20 ರಷ್ಟು ಶಾಲಾ ಶುಲ್ಕದಲ್ಲಿ ರಿಯಾಯಿತಿ ನೀಡಲು ರುಪ್ಸಾ ಸಲಹೆ ಮಾಡಿದೆ.

10 ಸಾವಿರ ಪ್ರಾಥಮಿಕ-ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ!10 ಸಾವಿರ ಪ್ರಾಥಮಿಕ-ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ!

ಶೇ. 50 ರಷ್ಟು ರಿಯಾಯಿತಿ

ಶೇ. 50 ರಷ್ಟು ರಿಯಾಯಿತಿ

ಇನ್ನು ಅತ್ಯುತ್ತಮ ಮೂಲ ಸೌಲಭ್ಯ ನೀಡಿ ದುಬಾರಿ ಶುಲ್ಕ ವಿಧಿಸುವ ಶಾಲೆಗಳು ಶೇ. 50 ರಷ್ಟು ಶುಲ್ಕ ರಿಯಾಯಿತಿ ವಿದ್ಯಾರ್ಥಿಗಳಿಗೆ ನೀಡಬಹುದು ಎಂದು ರುಪ್ಸಾ ಹೇಳಿದೆ. ವಾರ್ಷಿಕ 50 ರಿಂದ ಒಂದು ಲಕ್ಷ ರೂ.ವರೆಗೂ ಶುಲ್ಕ ವಿಧಿಸುವ ಶಾಲೆಗಳಿಗೆ ಈಸಲಹೆ ಅನ್ವಯಿಸುತ್ತದೆ. ಇದು ರುಪ್ಸಾ ಸಲಹೆ ಮಾತ್ರ. ಆದರೆ ಇದನ್ನು ಸರ್ಕಾರ ಅಂಗೀಕರಿಸುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

Recommended Video

BJP ಸರ್ಕಾರದ ಬಗ್ಗೆ Munirathna ಗೆ ನಂಬಿಕೆ ಇಲ್ವಾ ?? | Oneindia Kannada
ಶಿಕ್ಷಣ ಇಲಾಖೆ ಆಯುಕ್ತ

ಶಿಕ್ಷಣ ಇಲಾಖೆ ಆಯುಕ್ತ

ಖಾಸಗಿ ಶಾಲೆಗಳ ಶುಲ್ಕ ಕಡಿಮೆ ಮಾಡುವ ಸಂಬಂಧ ಶಿಕ್ಷಣ ಇಲಾಖೆ ವತಿಯಿಂದ ಪೋಷಕರ ಅಸೋಸಿಯೇಷನ್ ಹಾಗೂ ಖಾಸಗಿ ಶಾಲಾ ಒಕ್ಕೂಟಗಳ ಸಭೆ ನಡೆದಿದೆ. ಕುಸುಮಾ ಶೇ. 30 ರಷ್ಟು ಶುಲ್ಕ ಕಡಿಮೆ ಮಾಡುವ ಸಲಹೆ ನೀಡಿದೆ. ಪೋಷಕರು ತಮ್ಮ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳೂ ತಮ್ಮ ಕಷ್ಟ ತೋಡಿಕೊಂಡಿವೆ. ಹೀಗಾಗಿ ಪೋಷಕರ ಹಾಗೂ ಶಾಲೆಗಳ ಕಷ್ಟ ಅರ್ಥವಾಗಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ. ಸರ್ಕಾರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೋವಿಡ್ ನಿಂದ ಶಾಲೆಗಳು ಆರು ತಿಂಗಳು ಬಂದ್ ಆಗಿವೆ. ಈವರೆಗೂ ಆನ್‌ಲೈನ್ ತರಗತಿಗಳನ್ನು ಮಾಡಲಾಗಿದೆ. ಈಗಷ್ಟೇ ಶಾಲೆಗಳ ಆರಂಭಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವಕಾಶ ನೀಡಿದ್ದರು. ಖಾಸಗಿ ಶಾಲೆಗಳು ಶಾಲಾ ಶುಲ್ಕ ಕಡಿಮೆ ಮಾಡುವ ಬಗ್ಗೆ ಸರ್ಕಾರ ಈವರೆಗೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಶಾಲಾ ಆಡಳಿತ ಮಂಡಳಿಗಳು ಪೋಷಕರ ಜತೆ ಚರ್ಚಿಸಿ ಶಾಲಾ ಶುಲ್ಕದ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬರಬೇಕು. ಶಾಲೆಗಳು ಕಷ್ಟದಲ್ಲಿವೆ. ಪೋಷಕರು ಸಂಕಷ್ಟದಲ್ಲಿದ್ದಾರೆ. ಇದನ್ನು ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಅರ್ಥ ಮಾಡಿಕೊಂಡು ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡದೇ ಇತ್ಯರ್ಥ ಬಗೆಹರಿಸಿಕೊಳ್ಳಲು ಸಚಿವರು ಸಲಹೆ ಮಾಡಿದ್ದರು.

ಖಾಸಗಿ ಶಾಲಾ ಆಡಳಿತಕ್ಕೆ ಸಂಬಂಧಿಸಿದಂತೆ ಅನೇಕ ಸಂಘಟನೆಗಳು ಇದ್ದು, ಈ ವಿಚಾರದಲ್ಲಿ ಎಲ್ಲಾ ಸಂಘಟನೆಗಳು ಒಮ್ಮತದಿಂದ ಈ ಸಲಹೆ ನೀಡಿವೆಯಾ ? ಅಥವಾ ರುಪ್ಸಾ ಒಂದು ಮಾತ್ರ ಸಲಹೆ ನೀಡಿದೆಯಾ ? ಈ ಸಲಹೆಗೆ ಇತರೆ ಸಂಸ್ಥೆಗಳು ಸಹಮತ ವ್ಯಕ್ತಪಡಿಸುತ್ತವೆಯೇ ಎಂಬ ಪ್ರಶ್ನೆ ಎದ್ದಿದೆ.

English summary
The Rupsa Organization has made a significant suggestion to the government on private school fees Discount. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X