ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಜಿನಿಯರಿಂಗ್ ಕೋರ್ಸ್‌ ಶುಲ್ಕ ಶೇ 5 ರಿಂದ 10ರಷ್ಟು ಹೆಚ್ಚಳ

|
Google Oneindia Kannada News

ಬೆಂಗಳೂರು, ಆಗಸ್ಟ್ 30; ಇಂಜಿನಿಯರಿಂಗ್ ಕೋರ್ಸ್‌ಗೆ ಸೇರಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಕಹಿಸುದ್ದಿ. ಈ ಶೈಕ್ಷಣಿಕ ವರ್ಷದಲ್ಲಿ ಕೋರ್ಸ್‌ಗಳ ಶುಲ್ಕ ಶೇ 5 ರಿಂದ 10ರಷ್ಟು ಹೆಚ್ಚಾಗಲಿದೆ.

Recommended Video

ಈಗಿನ ಹೊಸ ಶಿಕ್ಷಣ ನೀತಿ ಸರಿಯಿಲ್ಲ ,ಸರ್ಕಾರಗಳು ಬದಲಾದಂತೆ ಶಿಕ್ಷಣ ನೀತಿ ಬದಲಾಗಬಾರದು | Basavaraj Horatti

ರಾಜ್ಯದ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಶುಲ್ಕ ಹೆಚ್ಚಳ ಮಾಡಬೇಕು ಎಂದು ಬೇಡಿಕೆ ಇಟ್ಟಿವೆ. ಉನ್ನತ ಶಿಕ್ಷಣ ಇಲಾಖೆ ಶೇ 5 ಅಥವ ಶೇ 10ರಷ್ಟು ಶುಲ್ಕವನ್ನು ಏರಿಕೆ ಮಾಡಲು ಚಿಂತನೆ ನಡೆಸುತ್ತಿದೆ.

 ಗಾಂಜಾ ಮಾರಾಟದಲ್ಲಿ ಸಿಕ್ಕಿಬಿದ್ದ ಇಂಜಿನಿಯರಿಂಗ್ ಪದವೀಧರೆ ಹಿಂದಿತ್ತು ಗಾಂಜಾ ಮಾರಾಟದಲ್ಲಿ ಸಿಕ್ಕಿಬಿದ್ದ ಇಂಜಿನಿಯರಿಂಗ್ ಪದವೀಧರೆ ಹಿಂದಿತ್ತು

ಮೂರು ವರ್ಷದಿಂದ ಇಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕವನ್ನು ಹೆಚ್ಚಳ ಮಾಡಿಲ್ಲ. ಈ ಅವಧಿಯಲ್ಲಿ ಸಿಬ್ಬಂದಿ ವೇತನ, ನಿರ್ವಹಣಾ ವೆಚ್ಚ ಅಧಿಕವಾಗಿದೆ. ಆದ್ದರಿಂದ ಈ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಬೇಕು ಎಂಬುದು ಖಾಸಗಿ ಕಾಲೇಜುಗಳ ವಾದ.

ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಂಜಿನಿಯರಿಂಗ್ ಪದವೀಧರೆ! ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಂಜಿನಿಯರಿಂಗ್ ಪದವೀಧರೆ!

Private Engineering Colleges Of Karnataka Seek Fee Hike

ಖಾಸಗಿ ಕಾಲೇಜುಗಳು ಶೇ 30ರಷ್ಟು ಶುಲ್ಕ ಏರಿಕೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿವೆ. ಆದರೆ ಉನ್ನತ ಶಿಕ್ಷಣ ಇಲಾಖೆ ಶೇ 5 ರಿಂದ 10ರಷ್ಟು ಶುಲ್ಕ ಹೆಚ್ಚಳ ಮಾಡಲು ಅವಕಾಶ ನೀಡುವ ಸಾಧ್ಯತೆ ಇದೆ. ಪ್ರಸ್ತುತ ಕೆಸಿಇಟಿ ಕೋಟಾದಲ್ಲಿ 65,360 ರೂ. ಮತ್ತು ಕಾಮೆಡ್-ಕೆ ಕೋಟಾದಲ್ಲಿ 1,43,748 ರೂ. ಇದೆ.

ದಕ್ಷಿಣ ಕನ್ನಡ; ಸೆ.15ರವರೆಗೂ ಕಾಲೇಜು ಆರಂಭ ಡೌಟ್! ದಕ್ಷಿಣ ಕನ್ನಡ; ಸೆ.15ರವರೆಗೂ ಕಾಲೇಜು ಆರಂಭ ಡೌಟ್!

ಸರ್ಕಾರಿ ಕಾಲೇಜುಗಳು ವೈದ್ಯಕೀಯ ಕೋರ್ಸ್‌ಗಳ ಶುಲ್ಕವನ್ನು ಪ್ರತಿ ವರ್ಷ ಏರಿಕೆ ಮಾಡುತ್ತವೆ. ಇಂಜಿನಿಯರಿಂಗ್ ಪ್ರವೇಶ ಶುಲ್ಕವನ್ನು ಸಹ ಪ್ರತಿ ವರ್ಷ ಏರಿಕೆ ಮಾಡಲು ಅವಕಾಶ ನೀಡಬೇಕು ಎಂದು ಸಹ ಕಾಲೇಜುಗಳು ಬೇಡಿಕೆ ಇಟ್ಟಿವೆ. ಹೆಚ್ಚಿನ ಶುಲ್ಕದ ಕೋಟಾದಡಿ ಈಗ ಕೆಸಿಇಟಿ ಕೋಟಾದಲ್ಲಿ 58,806 ರೂ. ಮತ್ತು ಕಾಮೆಡ್‌-ಕೆ ಕೋಟಾದಲ್ಲಿ 2,01,960 ರೂ. ಶುಲ್ಕ ಸಹ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಇದೆ.

ಇಂಜಿನಿಯರಿಂಗ್ ಕೋರ್ಸ್‌ಗಳ ಸೀಟು ಹಂಚಿಕೆ ಸೂತ್ರದ ಅನ್ವಯ ಕೆಸಿಇಟಿ ಅಡಿ ಶೇ 45, ಕಾಮೆಡ್‌-ಕೆ ಕೋಟಾದಡಿ ಶೇ 30, ಎನ್‌ಆರ್‌ಐ ಮತ್ತು ಮ್ಯಾನೇಜ್‌ಮೆಂಟ್ ಕೋಟಾದಡಿ ಶೇ 25ರಷ್ಟು ಸೀಟುಗಳು ಲಭ್ಯವಿದೆ.

ಖಾಸಗಿ ಕಾಲೇಜುಗಳ ಬೇಡಿಕೆ ಕುರಿತು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ, "ಸೆಪ್ಟೆಂಬರ್ ತಿಂಗಳಿನಲ್ಲಿ ಖಾಸಗಿ ಕಾಲೇಜುಗಳ ಪ್ರತಿನಿಧಿಗಳ ಸಭೆಯನ್ನು ಕರೆದು ಈ ಕುರಿತು ಚರ್ಚೆ ನಡೆಸಲಾಗುತ್ತದೆ" ಎಂದು ಹೇಳಿದ್ದಾರೆ.

"ಇಂಜಿನಿಯರಿಂಗ್ ಶುಲ್ಕ ಹೆಚ್ಚಳದ ಕುರಿತು ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಬಳಿಕ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಕರಾವಳಿ ಭಾಗದ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಮಾಲೀಕರು ಶುಲ್ಕ ಹೆಚ್ಚಳದ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಸಹ ಭೇಟಿಯಾಗಿದ್ದಾರೆ. ಕರಾವಳಿ ಭಾಗದ ಬಿಜೆಪಿ ನಾಯಕರೊಬ್ಬರು ನಿಯೋಗದ ನೇತೃತ್ವ ವಹಿಸಿದ್ದರು.

ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಇಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕ ಹೆಚ್ಚಳಕ್ಕೆ ಕಾಲೇಜುಗಳು ಬೇಡಿಕ ಇಡುತ್ತಿವೆ. ಶುಲ್ಕ ಹೆಚ್ಚಳದ ವಿಚಾರದಲ್ಲಿ ಕಾಲೇಜುಗಳು ಮತ್ತು ಸರ್ಕಾರದ ನಡುವೆ ಹಗ್ಗಜಗ್ಗಾಟವೂ ನಡೆಯುವ ನಿರೀಕ್ಷೆ ಇದೆ. ಅಂತಿಮವಾಗಿ ಸರ್ಕಾರ ಎಷ್ಟು ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಲಿದೆ? ಎಂದು ಕಾದು ನೋಡಬೇಕಿದೆ.

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಈ ವರ್ಷ ಅಕ್ಟೋಬರ್‌ನಲ್ಲಿ ಇಂಜನಿಯರಿಂಗ್ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಮೂರು ವರ್ಷದಿಂದ ಶುಲ್ಕ ಏರಿಕೆ ಮಾಡದ ಹಿನ್ನಲೆಯಲ್ಲಿ ಈ ವರ್ಷ ಏರಿಕೆ ಮಾಡಬೇಕು ಎಂಬುದು ಕಾಲೇಜುಗಳ ಬೇಡಿಕೆಯಾಗಿದೆ.

ಕರ್ನಾಟಕ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘದ ಕಾರ್ಯದರ್ಶಿ ಡಾ. ಎಂ. ಕೆ. ಪಾಂಡುರಂಗ ಶೆಟ್ಟಿ ಈ ಕುರಿತು ಮಾತನಾಡಿದ್ದಾರೆ, "ಈ ವರ್ಷ ನಾವು ಶುಲ್ಕ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದೇವೆ. ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಜೊತೆ ಚರ್ಚಿಸಲು ಸಂಘದಿಂದ ತಾಂತ್ರಿಕ ಸಮಿತಿಯನ್ನು ರಚನೆ ಮಾಡಿದ್ದೇವೆ" ಎಂದು ಹೇಳಿದ್ದಾರೆ.

English summary
Private engineering college managements of Karnataka requested the higher education department to increasing the fees by 5 per cent to 10 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X