ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಂದಾಗಿನಿಂದ ಮೋದಿ ಎಂದಾದರೂ ಹೊರಗಡೆ ಬಂದಿದ್ದಾರಾ?

|
Google Oneindia Kannada News

ಬೆಂಗಳೂರು, ಜುಲೈ 2: ಕೆಪಿಸಿಸಿ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.

Recommended Video

Corona Cases,Hassan ಹಾಸನದಲ್ಲಿ ಕೊರೊನಾಗೆ ಮತ್ತೊಂದು ಬಲಿ , ಆತಂಕದಲ್ಲಿ ಜನಗಳು | Oneindia Kannada

"ಸ್ವಾತಂತ್ರ್ಯಾನಂತರದ ಭಾರತದಲ್ಲಿ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿ ಇನ್ನೊಬ್ಬರಿಲ್ಲ. ಬಡವರು, ರೈತರು, ಶ್ರಮಿಕ ವರ್ಗಕ್ಕೆ ಅವರಷ್ಟು ದ್ರೋಹ ಹಿಂದಿನ ಯಾವ ಪ್ರಧಾನಿಗಳೂ ಮಾಡಿಲ್ಲ"ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಡಿಕೆಶಿ ಪದಗ್ರಹಣ: ಟಿವಿಯಲ್ಲಿ 10ಲಕ್ಷ ಜನರನ್ನು ಸೇರಿಸುವುದು ತಾಕತ್ ಅಲ್ಲಡಿಕೆಶಿ ಪದಗ್ರಹಣ: ಟಿವಿಯಲ್ಲಿ 10ಲಕ್ಷ ಜನರನ್ನು ಸೇರಿಸುವುದು ತಾಕತ್ ಅಲ್ಲ

'ದೇಶದ ಅಭಿವೃದ್ದಿಯನ್ನು ಮಾಡಿ ಎಂದರೆ, ಚಪ್ಪಾಳೆ ಹೊಡೆಯಿರಿ, ದೀಪ ಹಚ್ಚಿ ಅಂತಾರೆ. ಕೊರೊನಾ ಬಂದಾಗಿನಿಂದ ಎಂದಾದರೂ, ಮೋದಿ, ಹೊರಗಡೆ ಬಂದಿದ್ದಾರಾ"ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Prime Minister Narendra Modi Never Came Out After Covid-19 Effect

"ದುಡ್ಡು ಚೆಲ್ಲಿ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದಾರೆ. ಈಗ, ಅದನ್ನು ಬೇರೆ ಬೇರೆ ಇಲಾಖೆಯ ಮುಖಾಂತರ ಬಾಚಲು ಹೊರಟಿದ್ದಾರೆ. ಬಿಜೆಪಿಯನ್ನು ಓಡಿಸಲು ಇನ್ನೊಂದು ಸ್ವಾತಂತ್ರ್ಯ ಹೋರಾಟ ನಡೆಯಬೇಕಿದೆ, ಅದಕ್ಕೆ ನಾವೆಲ್ಲಾ ಒಂದಾಗಬೇಕು"ಎಂದು ಸಿದ್ದರಾಮಯ್ಯ ಕರೆನೀಡಿದರು.

"ಪ್ರಣಾಳಿಕೆಯಲ್ಲಿ ಏನು ಭರವಸೆಯನ್ನು ನೀಡಿದ್ದೆವೋ, ಅದನ್ನು ನೂರಕ್ಕೆ ನೂರು ಪೂರೈಸಿದ ಖ್ಯಾತಿ ಕಾಂಗ್ರೆಸ್ ಸರಕಾರದ್ದು. ಆದರೂ ನಮಗೆ ಹಿನ್ನಡೆಯಾಯಿತು"ಎಂದು ಸಭೆಯಲ್ಲಿ ಬೇಸರ ವ್ಯಕ್ತ ಪಡಿಸಿದರು.

ಬಾಯಿ ಬಿಟ್ಟರೆ ಬಣ್ಣಗೇಡು: ಮೋದಿ ಭಾಷಣದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯಬಾಯಿ ಬಿಟ್ಟರೆ ಬಣ್ಣಗೇಡು: ಮೋದಿ ಭಾಷಣದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

"ಪ್ರಧಾನಿ ಮೋದಿ ಆರ್ ಎಸ್ ಎಸ್ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದಾರೆಯೇ ಹೊರತು ದೇಶಕ್ಕಾಗಿ ಅಲ್ಲ. ದೇಶ ಇಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಜನರು ಸಹಿಸಿಕೊಂಡಿದ್ದರಲ್ಲಾ ಎನ್ನುವುದು ನನಗೆ ಆಶ್ಚರ್ಯ ತಂದಿದೆ"ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತ ಪಡಿಸಿದರು.

English summary
Prime Minister Narendra Modi Never Came Out After Covid-19 Effect,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X