ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹೊಸ ಬೆಳಕು' ಯೋಜನೆ LED ಬಲ್ಸ್ ಈಗ 65 ರುಗೆ ಲಭ್ಯ

ಕೇಂದ್ರ ಸರ್ಕಾರದ ಉನ್ನತ ಜ್ಯೋತಿ ಯೋಜನೆ(ಉಜಾಲ) ಅಡಿಯಲ್ಲಿ ವಿತರಿಸುವ ಕರ್ನಾಟಕದಲ್ಲಿ 'ಹೊಸ ಬೆಳಕು' ಎಂದು ಜನಪ್ರಿಯವಾಗಿರುವ ಯೋಜನೆಯಡಿಯ ಎಲ್‍ಇಡಿ ಬಲ್ಬ್ ಈಗ 65ರೂ.ಗೆ ಲಭ್ಯವಿದೆ.

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 22: ಕೇಂದ್ರ ಸರ್ಕಾರದ ಉನ್ನತ ಜ್ಯೋತಿ ಯೋಜನೆ(ಉಜಾಲ) ಅಡಿಯಲ್ಲಿ ವಿತರಿಸುವ ಕರ್ನಾಟಕದಲ್ಲಿ 'ಹೊಸ ಬೆಳಕು' ಎಂದು ಜನಪ್ರಿಯವಾಗಿರುವ ಯೋಜನೆಯಡಿಯ ಎಲ್‍ಇಡಿ ಬಲ್ಬ್ ಈಗ 65ರೂ.ಗೆ ಲಭ್ಯವಿದೆ.

9W ಎಲ್‍ಇಡಿ ಬಲ್ಬ್ ಗಳನ್ನು ಈಗ ಹೊಸ ದರದಡಿ ಕೆಳಗಿನ ಸ್ಥಳಗಳಲ್ಲಿ ಪಡೆಯಬಹುದು.ಉಜಾಲ ಯೋಜನೆಯಡಿ ವಿತರಿಸುವ ಎಲ್‍ಇಡಿ ಬಲ್ಬ್ ಗಳು ಉತ್ಕೃಷ್ಟ ಗುಣಮಟ್ಟದಾಗಿದ್ದು 3 ವರ್ಷ ಉಚಿತ ರಿಪ್ಲೇಸೆಮೆಂಟ್ ವಾರೆಂಟಿ ಹೊಂದಿದೆ. [ಹೊಸಬೆಳಕು ಯೋಜನೆ ಬಗ್ಗೆ ತಿಳಿಯಿರಿ]

ಇಲ್ಲಿ ತನಕ ಉಜಾಲ ಯೋಜನೆಯಡಿಯಲ್ಲಿ ಕರ್ನಾಟಕದ 30 ಜಿಲ್ಲೆಗಳಲ್ಲಿ 1.4 ಕೋಟಿಗೂ ಅಧಿಕ ಎಲ್ ಇಡಿ ಬಲ್ಬ್ ಗಳನ್ನು ವಿತರಿಸಲಾಗಿದೆ. ಇದರಿಂದ ಗ್ರಾಹಕರ 729 ಕೋಟಿ ರೂ. ವಾರ್ಷಿಕ ವಿದ್ಯುತ್ ಬಿಲ್ ಉಳಿತಾಯವಾಗಿದೆ. [ಎಲ್ ಇಡಿ, ಸಿಎಫ್ಎಲ್, ಸಾಮಾನ್ಯ ಬಲ್ಬ್ ನಡುವಿನ ವ್ಯತ್ಯಾಸ]

ಇ ಹರಾಜು ಪ್ರಕ್ರಿಯೆ ಮೂಲಕ ಸರ್ಕಾರ ಪಾರದರ್ಶಕತೆ ಖಚಿತಗೊಳಿಸಿದ್ದು ಸ್ಪರ್ಧೆಯನ್ನು ಉಳಿಸಿಕೊಂಡಿದೆ. ವಹಿವಾಟು ವೆಚ್ಚ ಮತ್ತು ಸಮಯ ಉಳಿತಾಯವಾಗಿದ್ದು ಮುಂದಿನ ಪ್ರಕ್ರಿಯೆಗಳು ದಕ್ಷವಾಗಿವೆ. ಇದರಿಂದ ಎಲ್‍ಇಡಿಗೆ ಹೆಚ್ಚಿನ ಬಿಡ್ಡರ್ ಗಳನ್ನು ಕರೆ ತಂದಿದ್ದು ಹರಾಜು ಪ್ರಕ್ರಿಯೆ ಸ್ಪರ್ಧೆಯಿಂದ ದರ ಕಡಿಮೆಯಾಗಿದೆ.

 'ಹೊಸ ಬೆಳಕು' ಯೋಜನೆ LED ಬಲ್ಬ್ ಎಲ್ಲೆಲ್ಲಿ ಲಭ್ಯ

'ಹೊಸ ಬೆಳಕು' ಯೋಜನೆ LED ಬಲ್ಬ್ ಎಲ್ಲೆಲ್ಲಿ ಲಭ್ಯ

ಬೆಸ್ಕಾಂ ಕಾರ್ಪೊರೇಟ್ ಕಚೇರಿ, ಕೆಆರ್ ಸರ್ಕಲ್, ಬೆಂಗಳೂರು ಒನ್ ಕೇಂದ್ರಗಳು, ಹುಬ್ಬಳ್ಳಿ, ಧಾರವಾಡ, ಗುಲ್ಬರ್ಗ, ಮೈಸೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ಗದಗ, ತುಮಕೂರು, ಶಿವಮೊಗ್ಗದ ಕರ್ನಾಟಕ ಒನ್ ಕೇಂದ್ರ, ಬೆಂಗಳೂರಿನ ಪ್ರಮುಖ ಅಂಚೆ ಕಚೇರಿಗಳು

65ರೂ.ಗಿಂತ ಹೆಚ್ಚು ಪಾವತಿಸಬೇಡಿ

65ರೂ.ಗಿಂತ ಹೆಚ್ಚು ಪಾವತಿಸಬೇಡಿ

ಎನರ್ಜಿ ಎಫಿಷಿಯನ್ಸಿ ಸರ್ವೀಸ್ ಲಿಮಿಟೆಡ್ ನ (ಇಇಎಸ್‍ಎಲ್), ಕೇಂದ್ರ ಇಂಧನ ಸಚಿವಾಲಯದ ಅಡಿಯಲ್ಲಿ ದೇಶದಾದ್ಯಂತ ಈ ಕಾರ್ಯಕ್ರಮ ಅಭಿವೃದ್ಧಿಗೊಳಿಸುತ್ತಿದೆ. ಹೊಸ ದರ 65ರೂ.ಗಿಂತ ಹೆಚ್ಚು ಪಾವತಿಸದಿರಲು ಇಇಎಸ್‍ಎಲ್ ಗ್ರಾಹಕರಿಗೆ ಸಲಹೆ ನೀಡುತ್ತಿದೆ. ಯಾರೇ ಇದಕ್ಕಿಂತ ಹೆಚ್ಚಿನ ದರ ಯಾರೇ ಕೇಳಿದರೂ ಅದನ್ನು www.ujala.gov.in,Twitter @EESL_India and for Facebook @EESLIndia ಮೂಲಕ ಉಜಾಲ ಗಮನಕ್ಕೆ ತರಬಹುದು.

 77 ಕೋಟಿ ಬಲ್ಬ್ ಎಲ್‍ಇಡಿಗೆ

77 ಕೋಟಿ ಬಲ್ಬ್ ಎಲ್‍ಇಡಿಗೆ

ರಾಷ್ಟ್ರೀಯ ಎಲ್‍ಇಡಿ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಅವರು 2015 ಜನವರಿಯಲ್ಲಿ ಎಲ್ಲ 77 ಕೋಟಿ ಬಲ್ಬ್ ಗಳನ್ನು ಎಲ್‍ಇಡಿಗೆ ಬದಲಿಸುವ ಗುರಿಯೊಂದಿಗೆ ಈ ಯೋಜನೆ ಆರಂಭಿಸಿದ್ದರು. ಇಇಎಸ್‍ಎಲ್ 22 ರಾಜ್ಯಗಳಲ್ಲಿ 18 ಕೋಟಿ ಬಲ್ಬ್ ಗಳನ್ನು ವಿತರಿಸಿದೆ. ಇದರಿಂದ ವಾರ್ಷಿಕ 23 ಶತಕೋಟಿ ಕೆಡಬ್ಲ್ಯುಎಚ್ ಇಂಧನ ಉಳಿತಾಯವಾಗುತ್ತದೆ ಮತ್ತು 4,698 ಮೆಗಾವ್ಯಾಟ್ ಪೀಕ್ ಡಿಮ್ಯಾಂಡ್ ಕಡಿಮೆಯಾಗಿದೆ. ಈ ಯೊಜನೆಯಡಿ ಗ್ರಾಹಕರ ವಿದ್ಯುತ್ ಬಿಲ್ ವಾರ್ಷಿಕವಾಗಿ 9,387 ಕೋಟಿ ರೂ.ನಷ್ಟು ಕಡಿಮೆಯಾಗಲಿದೆ.

ಇಇಎಸ್‍ಎಲ್ ಕುರಿತು

ಇಇಎಸ್‍ಎಲ್ ಕುರಿತು

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಪವರ್ ಫೈನಾನ್ಸ್ ಕಾರ್ಪೊರೇಷನ್, ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೋರೇಷನ್ ಮತ್ತು ಪವರ್ ಗ್ರಿಡ್ ಹಾಗೂ ಇಇಎಸ್‍ಎಲ್ ನ ಜಂಟಿ ಯೋಜನೆಯಾಗಿದೆ. ಕೇಂದ್ರ ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಅಭಿವೃದ್ಧಿಗೊಂಡಿದೆ. ಇಇಎಸ್‍ಎಲ್ ಸೂಪರ್ ಎನರ್ಜಿ ಸರ್ವೀಸ್ ಕಂಪನಿಯಾಗಿದ್ದು(ಇಎಎಸ್ ಒ) ಭಾರತದಲ್ಲಿ ದೃಷ್ಟಿ ಹಾಯಿಸಿರದ ಇಂಧನ ಕ್ಷಮತೆ ಮಾರುಕಟ್ಟೆಯನ್ನು ನೋಡುತ್ತಿದ್ದು, ಬಳಕೆಯಲ್ಲಿ ಶೇ.20ರಷ್ಟು ಉಳಿತಾಯದೊಂದಿಗೆ 12 ಶತಕೋಟಿ ಡಾಲರ್ ಉಳಿತಾಯ ಮಾಡಬಹುದು

ಬಲ್ಬ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು

ಬಲ್ಬ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು

ಈ ಹಿಂದೆ ರೂ.100ಕ್ಕೆ ಮಾರಾಟ ಮಾಡುತ್ತಿದ್ದ ಬಲ್ಬ್ ನ್ನು ರೂ.80ಕ್ಕೆ ಮಾರಲಾಗುತ್ತಿತ್ತು. ಬಲ್ಬ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಉತ್ಪದನಾ ವೆಚ್ಚವೂ ಕಡಿಮೆ ಆಗಿದೆ. ಆದ್ದರಿಂದ ರೂ.50ಕ್ಕೆ ಮಾರಾಟ ಮಾಡಲು ಫಿಲಿಪ್ಸ್ ಸೇರಿದಂತೆ ಹಲವು ಕಂಪೆನಿಗಳು ಒಲವು ತೋರಿಸಿವೆ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು

English summary
Energy Efficiency Services Ltd (EESL) has distributed over 1.4 crore LED bulbs across the 30 districts of Karnataka. The distribution has led to a saving of Rs. 729 crore annually in consumer bills. The price of LED bulbs under the UJALA programme has been lowered to Rs. 65 per 9W LED bulb.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X