ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋ ಹತ್ಯೆ ನಿಷೇಧ ಕಾಯ್ದೆ: ವಿಧಾನ ಪರಿಷತ್‌ನಲ್ಲಿ ಸರ್ಕಾರಕ್ಕೆ ಶಾಕ್!

|
Google Oneindia Kannada News

ಬೆಂಗಳೂರು, ಡಿ. 10: ವಿಧಾನಸೌಧದಲ್ಲಿ ಗೋಹತ್ಯೆ ನಿ‍ಷೇಧ ಕಾಯ್ದೆಗೆ ಅಂಗೀಕಾರ ಪಡೆದುಕೊಂಡು ಬೀಗಿದ್ದ ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷಗಳು ಶಾಕ್ ಕೊಟ್ಟಿವೆ. ನಿನ್ನೆ ವಿಧಾನಸಭೆಯಲ್ಲಿ ಗೋ ಹತ್ಯೆ ನಿ‍ಷೇಧ ವಿಧೇಯಕದ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಪಕ್ಷದ ನಾಯಕರು ಇವತ್ತು ಸೈಲೆಂಟ್ ಆಗಿದ್ದರು. ಹತ್ತಿರಲ್ಲಿಯೇ ಗ್ರಾಮ ಪಂಚಾಯತ್ ಚುನಾವಣೆ ಇರುವುದರಿಂದ ಅನಗತ್ಯವಾಗಿ ಡ್ಯಾಮೇಜ್ ಮಾಡಿಕೊಳ್ಳುವುದು ಬೇಡ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದರು.

Recommended Video

ಗೋ ಹತ್ಯೆ ನಿಷೇಧ: ಪ್ರಸ್ತಾವಿತ ಕಾಯ್ದೆಯಲ್ಲಿ ಏನೇನಿದೆ? | Oneindia Kannada

ಹೀಗಾಗಿ ಗೋ ಹತ್ಯೆ ನಿಷೇಧ ವಿಧೇಯಕದ ಬಗ್ಗೆ ಇವತ್ತು ಕಾಂಗ್ರೆಸ್ ನಾಯಕರು ಮಾತನಾಡಲೇ ಇಲ್ಲ. ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ರೈತ ವಿರೋಧ ಕಾನೂನುಗಳನ್ನು ವಿರೋಧಿಸಿ ವಿಧಾನಸೌಧದಿಂದ ಫ್ರೀಡಂಪಾರ್ಕ್‌ ವರೆಗೆ ಪಾದಯಾತ್ರೆ ಮಾಡಿದರು. ಜೊತೆಗೆ ಆಡಳಿತ ಪಕ್ಷ ಬಿಜೆಪಿ ನಿನ್ನೆ (ಡಿ.09) ವಿಧಾನಸಭೆಯಲ್ಲಿ ಮಾಡಿದ್ದನ್ನೇ ವಿರೋಧ ಪಕ್ಷ ಕಾಂಗ್ರೆಸ್ ಇಂದು ವಿಧಾನ ಪರಿಷತ್‌ನಲ್ಲಿ ಮಾಡಿತು.

Infographics: ಗೋ ಹತ್ಯೆ ನಿಷೇಧ ವಿಧೇಯಕದ ಪ್ರಮುಖ ಅಂಶಗಳೇನುInfographics: ಗೋ ಹತ್ಯೆ ನಿಷೇಧ ವಿಧೇಯಕದ ಪ್ರಮುಖ ಅಂಶಗಳೇನು

ಹೀಗಾಗಿ ಸರ್ಕಾರದ ಅತಿ ಮಹಾತ್ವಾಕಾಂಕ್ಷಿ ಕರ್ನಾಟಕ ಜಾನುವಾರು ಹತ್ಯೆೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 (ಗೋ ಹತ್ಯೆ ನಿಷೇಧ ಕಾಯ್ದೆ) ವಿಧಾನ ಪರಿಷತ್‌ನಲ್ಲಿ ಅಂಗೀಕಾರವಾಗಲೇ ಇಲ್ಲ!

ವಿಧಾನ ಪರಿಷತ್‌ನಲ್ಲಿ ಸರ್ಕಾರಕ್ಕೆ ಶಾಕ್!

ವಿಧಾನ ಪರಿಷತ್‌ನಲ್ಲಿ ಸರ್ಕಾರಕ್ಕೆ ಶಾಕ್!

ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕವನ್ನು ದಿಢೀರ್ ಎಂದು ಮಂಡಿಸಿ ಅಂಗೀಕಾರ ಪಡೆದುಕೊಂಡಿದ್ದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಪರಿಷತ್‌ ಸಭಾಪತಿಗಳು ಶಾಕ್ ಕೊಟ್ಟಿದ್ದಾರೆ. ಮೇಲ್ಮನೆಯಲ್ಲಿ ವಿಪಕ್ಷಗಳು ಹಾಗೂ ಸಭಾಪತಿಗಳ ನಡೆ, ಸರ್ಕಾರದ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು.

ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ವಿಧೇಯಕವನ್ನು ಗುರುವಾರ ವಿಧಾನ ಪರಿಷತ್‌ನಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಳ್ಳುವ ಲೆಕ್ಕಾಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರವಿತ್ತು. ಅದರಂತೆ ಪರಿಷತ್ ಅಜೆಂಡಾದಲ್ಲೂ ವಿಷಯ ಸೇರಿಸಲಾಗಿತ್ತು. ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಎಲ್ಲ ಸದಸ್ಯರು ಕೂಡ ಕೇಸರಿ ಶಲ್ಯ ಹಾಕಿಕೊಂಡು ಹಾಜರಾಗಿದ್ದರು. ಆದರೆ ಪ್ರತಿಪಕ್ಷಗಳಾದ ಕಾಂಗ್ರೆೆಸ್ ಮತ್ತು ಜೆಡಿಎಸ್, ಆ ವಿಧೇಯಕವೇ ಮಂಡನೆಯಾಗದಂತೆ ಮಾಡಿತು!

ಅನಿರ್ಧಿಷ್ಟಾವಧಿಗೆ ಕಲಾಪ ಮುಂದೂಡಿಕೆ

ಅನಿರ್ಧಿಷ್ಟಾವಧಿಗೆ ಕಲಾಪ ಮುಂದೂಡಿಕೆ

ವಿಧಾನ ಪರಿಷತ್‌ನಲ್ಲಿ ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆ ಮೂರು ವಿಧೇಯಕಗಳು ಸುದೀರ್ಘ ಚರ್ಚೆಯೊಂದಿಗೆ ಅಂಗೀಕಾರಗೊಂಡವು. ನಂತರ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು, ಗೋ ಹತ್ಯೆೆ ನಿಷೇಧ ಕಾಯ್ದೆಯನ್ನು ಶುಕ್ರವಾರ ಬೆಳಿಗ್ಗೆೆ ಮಂಡಿಸಲಾಗುವುದು ಎಂದು ಸದನದ ಗಮನಕ್ಕೆೆ ತಂದರು. ಅಲ್ಲಿಯವರೆಗೆ ಕಲಾಪ ಮೊಟಕುಗೊಳಿಸುವ ಯಾವುದೇ ಸುಳಿವು ನೀಡಿರದಿದ್ದ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅವರು ಕೊನೆ ಘಳಿಗೆಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆೆಲೆಯಲ್ಲಿ ಡಿ. 10ರಿಂದ (ಗುರುವಾರದಿಂದ) ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಲಾಗಿದೆ ಎಂದು ಸದನದಲ್ಲಿ ಪ್ರಕಟಿಸಿ ನಿರ್ಗಮಿಸಿದರು. ಸಭಾಪತಿಗಳ ನಡೆಯಿಂದ ಆಡಳಿತ ಪಕ್ಷ ಬಿಜೆಪಿ ಸದಸ್ಯರು ಗಲಿಬಿಲಿಗೊಳಗಾದರು.

ಗೋ ಹತ್ಯೆ ನಿಷೇಧ: ಸರ್ಕಾರ ಕೊನೆವರೆಗೂ ರಹಸ್ಯ ಕಾಯ್ದುಕೊಂಡಿದ್ದು ಹೇಗೆ?ಗೋ ಹತ್ಯೆ ನಿಷೇಧ: ಸರ್ಕಾರ ಕೊನೆವರೆಗೂ ರಹಸ್ಯ ಕಾಯ್ದುಕೊಂಡಿದ್ದು ಹೇಗೆ?

ಪರಿಷತ್ ಕಲಾಪ ಸಲಹಾ ಸಮಿತಿ ಸಭೆ

ಪರಿಷತ್ ಕಲಾಪ ಸಲಹಾ ಸಮಿತಿ ಸಭೆ

ಬುಧವಾರ (ಡಿ.09) ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಸಂಬಂಧಿಸಿದ ಗದ್ದಲದ ಬೆನ್ನಲ್ಲೇ ನಡೆದ ಸದನ ಸಲಹಾ ಸಮಿತಿ ಸಭೆಯಲ್ಲಿ ಪರಿಷತ್ ಕಲಾಪ ಮುಂದುವರಿಸುವ ಬಗ್ಗೆೆ ಚರ್ಚೆ ನಡೆದಿತ್ತು. ಅಲ್ಲಿ ಆಡಳಿತ ಪಕ್ಷವು ಮುಂದುವರಿಸುವಂತೆ ಸಲಹೆ ಮಾಡಿದರೆ, ಪ್ರತಿಪಕ್ಷಗಳು ಮೊಟಕುಗೊಳಿಸುವುದು ಸೂಕ್ತ ಎಂದು ಹೇಳಿದ್ದವು. ಆದರೆ, ಅಂತಿಮ ನಿರ್ಧಾರವನ್ನು ಮಾತ್ರ ಸಭಾಪತಿಗಳು ಗೌಪ್ಯವಾಗಿಟ್ಟಿದ್ದರು. ಗುರುವಾರ ಸಂಜೆ ಅದನ್ನು ಪ್ರಕಟಿಸುವ ಮೂಲಕ ಸರ್ಕಾರಕ್ಕೆೆ ಶಾಕ್ ನೀಡಿದರು.

ಕಾಂಗ್ರೆಸ್‌ ಪರ ನಿಲ್ಲಲು ಜೆಡಿಸ್ ನಿರ್ಧಾರ

ಕಾಂಗ್ರೆಸ್‌ ಪರ ನಿಲ್ಲಲು ಜೆಡಿಸ್ ನಿರ್ಧಾರ

ಈ ಮಧ್ಯೆೆ ಭೂ ಸುಧಾರಣಾ ಕಾಯ್ದೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದ ಜೆಡಿಎಸ್, ಗೋ ಹತ್ಯೆೆ ನಿಷೇಧ ಕಾಯ್ದೆ ವಿಚಾರದಲ್ಲಿ ಕಾಂಗ್ರೆೆಸ್ ಪಕ್ಷದ ಪರ ನಿಲ್ಲಲು ನಿರ್ಧರಿಸಿತ್ತು. ಒಂದು ವೇಳೆ ಪರಿಷತ್‌ನಲ್ಲಿ ಮಂಡನೆಯಾದರೆ, ಅದಕ್ಕೆೆ ವಿರೋಧ ವ್ಯಕ್ತಪಡಿಸಬೇಕು. ಮತಕ್ಕೆೆ ಹಾಕಿದರೂ ವಿರುದ್ಧವಾಗಿ ಮತ ಚಲಾಯಿಸಲು ಜೆಡಿಎಸ್ ನಾಯಕರು ತೀರ್ಮಾನಿಸಿದ್ದರು ಎನ್ನಲಾಗಿದೆ.

ಸಭಾಪತಿ ವಿರುದ್ಧ ಅವಿಶ್ವಾಸಕ್ಕೆ ಹಿನ್ನಡೆ

ಸಭಾಪತಿ ವಿರುದ್ಧ ಅವಿಶ್ವಾಸಕ್ಕೆ ಹಿನ್ನಡೆ

ವಿಧಾನ ಪರಿಷತ್ ಸಭಾಪತಿಗಳ ವಿರುದ್ಧ ಆಡಳಿತ ಪಕ್ಷದ ಸದಸ್ಯರು ಮಂಡಿಸಿದ ಅವಿಶ್ವಾಾಸ ನಿರ್ಣಯ ಪರೋಕ್ಷವಾಗಿ ವಿಧೇಯಕ ಮಂಡನೆಗೆ ಅಡ್ಡಿಯಾಯ್ತು. ಅವಿಶ್ವಾಸ ನಿರ್ಣಯ ಪ್ರಸ್ತಾಪ ಆಗುತ್ತಿದ್ದಂತೆಯೆ ನಿನ್ನೆ (ಡಿ.09) ಕಲಾಪದಲ್ಲಿ ಕೋಲಾಹಲ ಉಂಟಾಗಿತ್ತು. ನೋಟಿಸ್ ನೀಡಿದ ನಂತರದಿಂದ 14 ದಿನಗಳ ಲೆಕ್ಕಾಾಚಾರ ಹಾಕಲು ಶುರುವಾಯಿತು. ಒಂದು ವೇಳೆ ಕಲಾಪ ಮುಂದುವರಿಸಿದರೆ, ಸಭಾಪತಿಗಳನ್ನು ಕೆಳಗಿಳಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಹೀಗಾಗಿ, ಕಲಾಪವನ್ನೇ ಮೊಟಕುಗೊಳಿಸುವ ಲೆಕ್ಕಾಚಾರ ನಡೆಯಿತು.

ಗುರುವಾರ ಸಂಜೆ ಸದಸ್ಯ ಆಯನೂರು ಮಂಜುನಾಥ್ ಮತ್ತೆೆ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾದರು. ಆಗ ಪ್ರತಿಕ್ರಿಯಿಸಿದ ಸಭಾಪತಿಗಳು, ಅವಿಶ್ವಾಸ ನಿರ್ಣಯ ಸಂಬಂಧ ಕಾನೂನು ತಜ್ಞರ ಸಲಹೆ ಪಡೆದು ತೀರ್ಮಾನ ಕೈಗೊಂಡಿದ್ದೇನೆ. ಆ ನಿರ್ಣಯವನ್ನು ಅವಿಶ್ವಾಸ ನಿರ್ಣಯ ಮಂಡನೆ ನೋಟಿಸ್ ನೀಡಿದ ಸದಸ್ಯರಿಗೆ ತಲುಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

English summary
The Karnataka Prevention Of Slaughter And Preservation Of Cattle Bill 2020 Not passed in Karnataka Legislative Council, Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X