ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್‌ಜಿ, ಸಿಡಿ ಸಿಬ್ಬಂದಿಗೆ 'ಅಗ್ನಿ ಸೇವಾ ಪದಕ', 'ರಾಷ್ಟ್ರಪತಿ ಪದಕ' ಪ್ರದಾನ

|
Google Oneindia Kannada News

ಬೆಂಗಳೂರು ಆಗಸ್ಟ್ 15: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರಪತಿಗಳ ಕರ್ನಾಟಕದ 55 ಆಗ್ನಿ ಶಾಮಕ ಸಿಬ್ಬಂದಿಗೆ 'ಅಗ್ನಿ ಸೇವಾ ಪದಕ', ಗೃಹ ರಕ್ಷಕದಳ(ಎಚ್‌ಜಿ) ಮತ್ತು ನಾಗರಿಕ ರಕ್ಷಣಾ (ಸಿಡಿ) ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ ಮಾಡಲಾಯಿತು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಪ್ರತಿ ವರ್ಷದಂತೆ ಈ ವರ್ಷದ ಸ್ವಾತಂತ್ರ್ಯ ದಿನದಂದು ಅಗ್ನಿಶಾಮಕ ಸೇವೆಗಳು, ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗೆ ರಾಷ್ಟ್ರಪತಿಗಳ ಶೌರ್ಯ ಪದಕ ಮತ್ತು ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ ಶೌರ್ಯ ಪದಕ ಮತ್ತು ಅತ್ಯುತ್ತಮ ಸೇವಾ ಪದಕಗಳನ್ನು ನೀಡಲಾಗಿದೆ.

ಕರ್ನಾಟಕದ 18 ಪೊಲೀಸ್ ಅಧಿಕಾರಿಗಳಿಗೆ 'ರಾಷ್ಟ್ರಪತಿ ಪದಕ'ಕರ್ನಾಟಕದ 18 ಪೊಲೀಸ್ ಅಧಿಕಾರಿಗಳಿಗೆ 'ರಾಷ್ಟ್ರಪತಿ ಪದಕ'

ಅಗ್ನಿಶಾಮಕ 55 ಸಿಬ್ಬಂದಿ ಪೈಕಿ 'ಅಗ್ನಿಶಾಮಕ ಸೇವಾ ಪದಕ'ವನ್ನು ಶೌರ್ಯ ಮತ್ತು ಸಾಹಸ ಮೆರೆಗೆ 11 ಮಂದಿಗೆ ನೀಡಲಾಗುತ್ತಿದೆ. ವಿಶೇಷ ಸೇವೆ ಪರಿಗಣಿಸಿ 'ರಾಷ್ಟ್ರಪತಿ ಅಗ್ನಿಶಾಮಕ ಸೇವಾ ಪದಕ'ವನ್ನು ಆರ ಸಿಬ್ಬಂದಿಗೆ ನೀಡಿ ಗೌರವಿಸಲಾಗಿದೆ. ಹಾಗೇಯೇ 38 ಸಿಬ್ಬಂದಿಗೆ ಶ್ರೇಷ್ಠ ಸೇವೆಗಾಗಿ ಅಗ್ನಿಶಾಮಕ ಸೇವಾ ಪದಕವನ್ನು ಆಯಾ ವಿಶಿಷ್ಟ ಮತ್ತು ಅರ್ಹ ಸೇವಾ ದಾಖಲೆಗಳಿಗಾಗಿ ನೀಡಲಾಗಿದೆ ಎಂದು ಸಚಿವಾಲಯ ವಿವರಿಸಿದೆ.

President Medal, Agni Seva Medal Awarded to HG, CD staff

ಅಲ್ಲದೆ, ಹೆಚ್ಚುವರಿಯಾಗಿ, 2022 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 46 ಸಿಬ್ಬಂದಿಗೆ ಗೃಹರಕ್ಷಕ ಮತ್ತು ನಾಗರಿಕ ರಕ್ಷಣಾ ಪದಕಗಳನ್ನು ನೀಡಲಾಗುತ್ತದೆ. ಇವರಲ್ಲಿ ಗೃಹರಕ್ಷಕರು ಮತ್ತು ಶೌರ್ಯಕ್ಕಾಗಿ ನಾಗರಿಕ ರಕ್ಷಣಾ ಪದಕವನ್ನು ಇಬ್ಬರು ಸಿಬ್ಬಂದಿಗೆ ಅವರ ಶೌರ್ಯ ಮತ್ತು ಸಾಹಸಕ್ಕಾಗಿ ನೀಡಲಾಗುತ್ತದೆ.

President Medal, Agni Seva Medal Awarded to HG, CD staff

ಇದರೊಂದಿಗೆ ವಿಶಿಷ್ಟ ಸೇವೆಗಾಗಿ 7 ಗೃಹರಕ್ಷಕರಿಗೆ ನಾಗರಿಕ ರಕ್ಷಣೆಗಾಗಿ 'ರಾಷ್ಟ್ರಪತಿ ಪದಕ' ಹಾಗೂ 37 ಮಂದಿ ಗೃಹರಕ್ಷಕರ ಶ್ರೇಷ್ಠ ಸೇವೆ ಗುರುತಿಸಿ 'ನಾಗರಿಕ ರಕ್ಷಣಾ ಪದಕ'ಕ್ಕೆ ಅರ್ಹರಾಗಿದ್ದಾರೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

English summary
'Agni Seva Medal', 'President Medal' awarded to HG, CD staff, Union Ministry of Home Affairs said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X