ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲ ಜ್ಯೋತಿಷಿ ಅಭಿಗ್ಯಾ ಆನಂದ್ ನುಡಿದ ಭವಿಷ್ಯದ ಸತ್ಯಾಸತ್ಯತೆ. ಎಲ್ಲಾ ಪೊಳ್ಳು?

|
Google Oneindia Kannada News

ಹದಿನಾಲ್ಕು ವರ್ಷದ ಬಾಲ ಜ್ಯೋತಿಷಿ ಅಭಿಗ್ಯಾ ಆನಂದ್ ಕೊರೊನಾ ವಿಚಾರದಲ್ಲಿ ನುಡಿದ ಭವಿಷ್ಯ ಸಾಮಾಜಿಕ ತಾಣದಲ್ಲಿ ಭಾರೀ ಸದ್ದನ್ನು ಮಾಡಿತ್ತು. ಏಳೆಂಟು ತಿಂಗಳ ಹಿಂದೆಯೇ, ಜಗತ್ತು ಈ ಕೊರೊನಾ ಮಹಾಮಾರಿಯಿಂದ ತಲ್ಲಣಗೊಳ್ಳಲಿದೆ ಎಂದು ಅಭಿಗ್ಯಾ ಭವಿಷ್ಯ ನುಡಿದಿದ್ದ.

Recommended Video

ಈ ವರ್ಷದ ಶ್ರೀ ಕೇದಾರನಾಥ ಜ್ಯೋತಿರ್ಲಿಂಗದ ಮೊದಲ ದರ್ಶನ..ನೋಡಿ ಪುನೀತರಾಗಿ

"ಏಪ್ರಿಲ್ 2019ರಲ್ಲೇ ಇಂತಹ ಮಾರಣಾಂತಿಕ ಕಾಯಿಲೆಯಿಂದ, ಮುಂದೆ ಜಗತ್ತಿಗೆ ವಿಪತ್ತು ಕಾದಿದೆ" ಎಂದು ಈ ಹಿಂದೆ ತಾನು ನುಡಿದಿದ್ದ ವಿಡಿಯೋವನ್ನು ಈ ಬಾಲಕ ಯೂಟ್ಯೂಬ್ ನಲ್ಲಿ ಶೇರ್ ಮಾಡಿಕೊಂಡಿದ್ದ.

ಕೊರಾನಾ: ಮುಂದಿನ 5 ದಿನ ಎಚ್ಚರ, ಬಾಲ ಜ್ಯೋತಿಷಿಯ ಬೆಚ್ಚಿಬೀಳುವ ಭವಿಷ್ಯಕೊರಾನಾ: ಮುಂದಿನ 5 ದಿನ ಎಚ್ಚರ, ಬಾಲ ಜ್ಯೋತಿಷಿಯ ಬೆಚ್ಚಿಬೀಳುವ ಭವಿಷ್ಯ

ಹಲವು ರಾಶಿಗಳು ತಮ್ಮ ಪಥವನ್ನು ಬದಲಿಸಲಿದೆ. ಹಾಗಾಗಿ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾರ್ಚ್ 29ರಿಂದ ಐದು ದಿನ, ಜನರು ವಿಶೇಷ ಎಚ್ಚರಿಕೆಯಿಂದ ಇರುವುದು ಸೂಕ್ತ ಎಂದು ಬಾಲ ಜ್ಯೋತಿಷಿ ಅಭಿಗ್ಯಾ ಅಭಿಪ್ರಾಯ ಪಟ್ಟಿದ್ದ.

ಭವಿಷ್ಯ: ''ಚತುರ್ ಗ್ರಹಗಳ ಸಮ್ಮಿಲನ, ಏ. 15ಕ್ಕೆ ಕೊರೊನಾ ನಿರ್ನಾಮ''ಭವಿಷ್ಯ: ''ಚತುರ್ ಗ್ರಹಗಳ ಸಮ್ಮಿಲನ, ಏ. 15ಕ್ಕೆ ಕೊರೊನಾ ನಿರ್ನಾಮ''

ಅಭಿಗ್ಯಾ ನುಡಿದ ಭವಿಷ್ಯದ ಬಗ್ಗೆ ಸೌರಬ್ ದ್ವಿವೇದಿ (ಲಲ್ಲನ್ ಟಾಪ್) ಎನ್ನುವವರು ಸತ್ಯಾವಲೋಕನ ಮಾಡಿರುವ ವಿಡಿಯೋ ಒಂದನ್ನು ಸಾಮಾಜಿಕ ತಾಣದಲ್ಲಿ ಬಿಟ್ಟಿದ್ದಾರೆ. ಇದು ಸಾಕಷ್ಟು ವೈರಲ್ ಆಗಿದೆ. ಅಭಿಗ್ಯಾ ಭವಿಷ್ಯದ ಸತ್ಯಾಸತ್ಯತೆ ಹೀಗಿದೆ:

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದ ನಡೆಯುತ್ತದೆ

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದ ನಡೆಯುತ್ತದೆ

"ನವೆಂಬರ್ 2019 ರಿಂದ ಏಪ್ರಿಲ್ 2020ರ ನಡುವೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದ ನಡೆಯುತ್ತದೆ ಎಂದು ಬಾಲ ಜ್ಯೋತಿಷಿ ಅಭಿಗ್ಯಾ ಹೇಳಿದ್ದ. ಆದರೆ, ಎರಡು ದೇಶಗಳ ನಡುವೆ ಯುದ್ದ ನಡೆದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಗಡಿ ಉಲ್ಲಂಘನೆಯ ಹಲವು ಘಟನೆಗಳು ನಡೆದಿದ್ದರೂ, ಇದೇನು ಹೊಸದೇನೂ ಅಲ್ಲ" ಎಂದು ಸೌರಬ್ ದ್ವಿವೇದಿ ಹೇಳಿದ್ದಾರೆ.

ಪ್ರಪಂಚದಲ್ಲಿ ಆಸ್ತಿಕರ ಸಂಖ್ಯೆ ಹೆಚ್ಚು, ಅದಕ್ಕೇ ಕೆಟ್ಟ ದಿನಗಳು

ಪ್ರಪಂಚದಲ್ಲಿ ಆಸ್ತಿಕರ ಸಂಖ್ಯೆ ಹೆಚ್ಚು, ಅದಕ್ಕೇ ಕೆಟ್ಟ ದಿನಗಳು

"ಪ್ರಪಂಚದಲ್ಲಿ ಆಸ್ತಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಇಂತಹ ಕೆಟ್ಟ ದಿನಗಳು ಎದುರಾಗುತ್ತವೆ. ರಾಮಕೃಷ್ಣನ ಸ್ಮರಣೆಯಿಂದ ವೈರಾಣು ದೂರವಾಗುತ್ತದೆ ಎಂದು ಜ್ಯೋಷಿ ಹೇಳಿರುವುದನ್ನು ಉಲ್ಲೇಖಿಸಿರುವ ಸೌರಬ್, "ಆಸ್ತಿಕ, ನಾಸ್ತಿಕದ ವಿಚಾರ ಇದಲ್ಲ. ಈ ವೇಳೆ, ವೈರಾಣು ನಾಶ ಮಾಡುವುದಕ್ಕೆ ಲಸಿಕೆಯ ಅವಶ್ಯಕತೆಯಿದೆಯೇ ಹೊರತು ದೇವರ ಸ್ಮರಣೆ ಮುಖ್ಯವಾಗುವುದಿಲ್ಲ. ಇದು ಅವರವರ ವಿವೇಚನೆಗೆ ಬಿಟ್ಟ ವಿಚಾರ" ಎಂದು ಹೇಳಿದ್ದಾರೆ.

ಸೌರಬ್ ದ್ವಿವೇದಿ ಸತ್ಯಾವಲೋಕನ

ಸೌರಬ್ ದ್ವಿವೇದಿ ಸತ್ಯಾವಲೋಕನ

"ಮಾರ್ಚ್ 31 ಮತ್ತು ಏಪ್ರಿಲ್ ಒಂದರಂದು ಅತ್ಯಂತ ಜಾಗರೂಕತೆಯಿಂದ ಇರುವುದು ಸೂಕ್ತ ಎಂದು ಬಾಲ ಜ್ಯೋತಿಷಿ ಅಭಿಪ್ರಾಯ ಪಟ್ಟಿದ್ದಾನೆ. ಗಂಢಾಂತರ ಕಾದಿದೆ" ಎನ್ನುವ ಭವಿಷ್ಯವನ್ನೂ ಅಭಿಗ್ಯಾ ನುಡಿದಿದ್ದ. ಆದರೆ, ಈ ಅವಧಿಯಲ್ಲಿ ದೇಶದಲ್ಲಿ ಯಾವುದೂ ಹೇಳಿಕೊಳ್ಳುವಂತಹ ದುರ್ಘಟನೆ ನಡೆದಿಲ್ಲ ಎನ್ನುವುದು ಸಮಾಧಾನಕಾರ ವಿಷಯ" ಎಂದು ಸೌರಬ್ ದ್ವಿವೇದಿ ಹೇಳಿದ್ದಾರೆ.

ಮೇ 29ರ ನಂತರ ಈ ವೈರಾಣುವಿನ ತೀವ್ರತೆ ಕಮ್ಮಿಯಾಗುತ್ತಾ ಬರುತ್ತದೆ

ಮೇ 29ರ ನಂತರ ಈ ವೈರಾಣುವಿನ ತೀವ್ರತೆ ಕಮ್ಮಿಯಾಗುತ್ತಾ ಬರುತ್ತದೆ

ಮೇ 29ರ ನಂತರ ಈ ವೈರಾಣುವಿನ ತೀವ್ರತೆ ಕಮ್ಮಿಯಾಗುತ್ತಾ ಬರುತ್ತದೆ. ಈ ಅವಧಿಯಲ್ಲಿ ಕಾಳಸರ್ಪಯೋಗವೂ ಬರುವುದರಿಂದ, ಕೊರೊನಾ ಪ್ರಭಾವ ಕಮ್ಮಿಯಾಗುತ್ತಾ ಬರುತ್ತದೆ. ಭಾರತ ದೇಶದ ಆಂಧ್ರಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ, ಪೂರ್ವ ಮತ್ತು ವಾಯುವ್ಯ ಭಾರತದಲ್ಲಿ ತುಂಬಾ ಜಾಗರೂಕತೆಯಿಂದ ಇರುವುದು ಸೂಕ್ತ ಎಂದು ಈ ಬಾಲ ಜ್ಯೋತಿಷ್ಯ ಅಭಿಪ್ರಾಯ ಪಟ್ಟಿದ್ದ. ಈ ಬಗ್ಗೆ ಸೌರಬ್ ದ್ವಿವೇದಿ ಏನನ್ನೂ ಹೇಳಲಿಲ್ಲ.

English summary
Prediction Reality Of Child Astrologer Abhighya Anand By Saurabh Dwivedi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X