• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಲಜ್ಞಾನ ಬ್ರಹ್ಮ ಸದ್ಗುರು ಸ್ವಾಮೀಜಿ ನುಡಿದ ಪ್ರಧಾನಿ ಮೋದಿಯ ಭವಿಷ್ಯ

|
   Lok Sabha Elections 2019 : ಸದ್ಗುರು ಸ್ವಾಮೀಜಿ ನುಡಿದ ಪ್ರಧಾನಿ ಮೋದಿಯ ಭವಿಷ್ಯ..! | Oneindia Kannada

   ಮುಂಬರುವ ಲೋಕಸಭಾ ಚುನಾವಣೆಗೆ ಬಹುಷಃ ಮಾರ್ಚ್ ಮೊದಲಾರ್ದದಲ್ಲಿ ದಿನಾಂಕವನ್ನು ಆಯೋಗ ಪ್ರಕಟಿಸುವ ಸಾಧ್ಯತೆಯಿದೆ. ಪುಲ್ವಾಮಾ ಉಗ್ರರ ದಾಳಿಯ ನಂತರ, ಸ್ವಲ್ಪ ಮಟ್ಟಿಗೆ ಪ್ರಚಾರದ ಭರಾಟೆ ತಗ್ಗಿದ್ದರೂ, ಅದು ಮತ್ತೆ ವೇಗ ಪಡೆದುಕೊಂಡಿದೆ.

   ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗದಂತೆ ತಪ್ಪಿಸಲು ಮಹಾ ಘಂಟಬಂದನ್ ಹೆಸರಿನಲ್ಲಿ ಪ್ರಾದೇಶಿಕ ಪಕ್ಷಗಳು ಒಂದಾಗುತ್ತಿವೆ. ಇತ್ತ, ಬಿಜೆಪಿಯೂ ತಮಿಳುನಾಡಿನಲ್ಲಿ ಎಐಎಡಿಎಂಕೆ-ಪಿಎಂಕೆ ಜೊತೆ, ಮಹಾರಾಷ್ಟ್ರದಲ್ಲಿ ಶಿವಸೇನೆಯ ಜೊತೆ ಮೈತ್ರಿ ಮಾಡಿಕೊಂಡಿದೆ.

   ತೀವ್ರ ಕುತೂಹಲ ಕೆರಳಿಸುತ್ತಿರುವ ಲೋಕಸಭಾ ಚುನಾವಣೆಗೆ ಮುನ್ನ ಹಲವು ಸಮೀಕ್ಷೆಗಳು ಹೊರಬಿದ್ದಿವೆ, ಬಹುತೇಕ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸರಳ ಬಹುಮತ ಪಡೆಯಲಿದೆ ಎನ್ನುವ ಫಲಿತಾಂಶವನ್ನು ನೀಡಿದೆ.

   ಸುಕ್ಷೇತ್ರ ಮೈಲಾರ ಕಾರ್ಣಿಕ ಭವಿಷ್ಯ: ಕಬ್ಬಿಣದ ಸರಪಳಿ ಹರಿದೀತಲೇ ಪರಾಕ್!

   ಇನ್ನು, ಪ್ರಧಾನಿ ಹುದ್ದೆಗೆ ಯಾರು ಸೂಕ್ತ ಎನ್ನುವ ಸಮೀಕ್ಷೆಯಲ್ಲಿನ ಪ್ರಶ್ನೆಗೆ, ಮೋದಿ ಅದ್ವಿತೀಯರಾಗಿ ಮುಂದುವರಿದಿದ್ದಾರೆ. ಈ ನಡುವೆ, ಗಜೇಂದ್ರಗಡದ ಕಾಲಜ್ಞಾನ ಮಠದ ಸ್ವಾಮೀಜಿ, ಮೋದಿಯವರು ಮುಂದಿನ ಅವಧಿಗೆ ಪ್ರಧಾನಿಯಾಗಲಿದ್ದಾರಾ ಎನ್ನುವುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ.

   ಗಜೇಂದ್ರಗಡ ಕಾಲಜ್ಞಾನ ಮಠದ, ಕಾಲಜ್ಞಾನ ಬ್ರಹ್ಮ ಸದ್ಗುರು ಶರಣಬಸವ ಸ್ವಾಮೀಜಿ

   ಗಜೇಂದ್ರಗಡ ಕಾಲಜ್ಞಾನ ಮಠದ, ಕಾಲಜ್ಞಾನ ಬ್ರಹ್ಮ ಸದ್ಗುರು ಶರಣಬಸವ ಸ್ವಾಮೀಜಿ

   ಗದಗ ಜಿಲ್ಲೆ ಗಜೇಂದ್ರಗಡದಲ್ಲಿರುವ ಕಾಲಜ್ಞಾನ ಮಠದ, ಕಾಲಜ್ಞಾನ ಬ್ರಹ್ಮ ಸದ್ಗುರು ಶರಣಬಸವ ಸ್ವಾಮೀಜಿಯವರು ಮೋದಿಯವರ ಬಗ್ಗೆ ಮತ್ತು ದೇಶದ ಆಗುಹೋಗುಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸಿದ್ದಾರೂಢ ಮಠದ ಶಂಭುಲಿಂಗಾಶ್ರಮದಲ್ಲಿ ನಡೆದ ಶಂಭುಲಿಂಗಸ್ವಾಮಿಗಳ ಹನ್ನೊಂದನೇ ಪುಣ್ಯಾರಾಧನೆಯಲ್ಲಿ ಭಾಗವಹಿಸಿ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.

   2019ರ ಲೋಕಸಭೆ ಚುನಾವಣೆ ಸಮೀಕ್ಷೆಗಳೆಲ್ಲವನ್ನೂ ಉಲ್ಟಾ ಮಾಡಲಿದೆಯೇ ಮೋದಿ ಜಾತಕ ಫಲ?

   ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲಿದ್ದಾರೆ

   ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲಿದ್ದಾರೆ

   ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡುತ್ತಿದ್ದ ಶರಣಬಸವ ಸ್ವಾಮೀಜಿಯವರು, ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ. ಜೊತೆಗೆ, ಈಗಿರುವ ದ್ವಿರಾಷ್ಟಗಳ ನಡುವಣ ಬಿಗಿ ಪರಿಸ್ಥಿತಿ ಇನ್ನಷ್ಟು ಉಲ್ಬಣಿಸಲಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದ ನಡೆಯುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

   ಭಾರತ ಇನ್ನಷ್ಟು ಶಕ್ತಿಶಾಲಿಯಾಗಿ ಹೊರಹೊಮ್ಮಲಿದೆ

   ಭಾರತ ಇನ್ನಷ್ಟು ಶಕ್ತಿಶಾಲಿಯಾಗಿ ಹೊರಹೊಮ್ಮಲಿದೆ

   ಭಾರತ ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಶಕ್ತಿಶಾಲಿಯಾಗಿ ಹೊರಹೊಮ್ಮಲಿದೆ, ಮುಂಬರುವ ವಿಶ್ವಕಪ್ ಅನ್ನು ಭಾರತ ಗೆಲ್ಲಲಿದೆ. ಮೇ ತಿಂಗಳಲ್ಲಿ ಪ್ರಾಕೃತಿಕ ವಿಕೋಪ ಉಂಟಾಗಲಿದ್ದು, ಭಾರೀ ಕಷ್ಟನಷ್ಟ ಸಂಭವಿಸಲಿದೆ. ಆದರೆ, ಇದರ ಎಫೆಕ್ಟ್ ಕರ್ನಾಟಕದಲ್ಲಿ ಅಷ್ಟಾಗಿ ಇರುವುದಿಲ್ಲ ಎಂದು ಶರಣಬಸವ ಸ್ವಾಮೀಜಿಯವರು ಭವಿಷ್ಯ ನುಡಿದಿದ್ದಾರೆ.

   ಮೋದಿಯವರಿಗೆ ಪರ್ಯಾಯ ನಾಯಕತ್ವ ಇಲ್ಲ

   ಮೋದಿಯವರಿಗೆ ಪರ್ಯಾಯ ನಾಯಕತ್ವ ಇಲ್ಲ

   ಬಡವ ಬಲ್ಲಿದ ಶ್ರೀಮಂತನಾಗುತ್ತಾನೆ, ಸಿರಿವಂತ ಬಡವನಾಗುತ್ತಾನೆಂದು ಶ್ರೀಗಳು ತಮ್ಮ ಆಶೀರ್ವಚನದಲ್ಲಿ ದೇಶ ಮತ್ತು ಮೋದಿಯವರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ರೀತಿಯ ಜಾತಕವನ್ನು ಹೇಳಿ ಬರೆಸಿಕೊಳ್ಳಬೇಕು ಅಷ್ಟೇ. ಅಂಥ ಅದ್ಭುತ ಜಾತಕ ಮೋದಿ ಅವರದ್ದು. ಪ್ರಧಾನ ಮಂತ್ರಿ ಪೀಠದ ಮೇಲೆ ಕಣ್ಣಿಟ್ಟಿರುವ ಯಾರ ಜಾತಕದಲ್ಲೂ ಇಂತಹ ಯೋಗ ಇಲ್ಲ. ಆದ್ದರಿಂದ ಮೋದಿಯವರಿಗೆ ಪರ್ಯಾಯ ನಾಯಕತ್ವ ಇಲ್ಲ ಎಂದು ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಕೂಡಾ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

   ಕಬ್ಬಿಣದ ಸರಪಳಿ ಹರಿದೀತಲೇ ಪರಾಕ್ ಎನ್ನುವ ಕಾರ್ಣಿಕ

   ಕಬ್ಬಿಣದ ಸರಪಳಿ ಹರಿದೀತಲೇ ಪರಾಕ್ ಎನ್ನುವ ಕಾರ್ಣಿಕ

   ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ದೇಗುಲದ ವಾರ್ಷಿಕ ಕಾರ್ಣಿಕ ಉತ್ಸವದಲ್ಲಿ , "ಕಬ್ಬಿಣದ ಸರಪಳಿ ಹರಿದೀತಲೇ ಪರಾಕ್" ಎನ್ನುವ ಕಾರ್ಣಿಕ ನುಡಿಯಲಾಗಿತ್ತು. ಮೈತ್ರಿ ಸರ್ಕಾರಕ್ಕೆ ಉಳಿಗಾಲವಿಲ್ಲ, ಸರ್ಕಾರ ಉರುಳಿ ಬೀಳಲಿದೆ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು, ಇದು ಮಹಾಘಟಬಂದನ್ ಬಗ್ಗೆ ಹೇಳಿದ ಮಾತು ಎಂದಿದ್ದಾರೆ. ಬಹುಮತ ಯಾರಿಗೂ ಸಿಗಲ್ಲ, ಕೇಂದ್ರದಲ್ಲಿ ಮೈತ್ರಿ ಸರ್ಕಾರ ಅನಿವಾರ್ಯ. ಕಬ್ಬಿಣದ ಅಧಿಪತಿ ಶನಿ ಕೃಪೆ ಸಿಕ್ಕಿ ರೈತರಿಗೆ ಒಳಿತಾಗಲಿದೆ ಎನ್ನಲಾಗಿದೆ ಎಂದು ಕಾರ್ಣಿಕವನ್ನು ಅರ್ಥೈಸಿಕೊಳ್ಳಲಾಗಿತ್ತು.

   English summary
   Prediction by Kalajnana Brahma Sadguru Sharana Basava Swamiji, Gajendragarh (Gadag district). What Seer said about PM Modi future.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X