ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು...

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ನಾನು ಯಾರಿಗೂ ಹೆದರಲ್ಲ ಎಂದು ಡೈಲಾಗ್ ಹೊಡೆಯುವವರು ಕೂಡ ಸೊಳ್ಳೆಗೆ ಹೆದರಲೇ ಬೇಕಾದಂಥ ಸ್ಥಿತಿ ನಿರ್ಮಾಣವಾಗಿದೆ. ಡೆಂಗ್ಯೂ, ಚಿಕುನ್ ಗುನ್ಯಾ ಆ ಪರಿಯ ಭಯ ಹುಟ್ಟಿಸಿದೆ.

ಡೆಂಗ್ಯೂ ಬಗ್ಗೆ ಖಂಡಿತಾ ಭಯ ಬೇಡ, ಆದರೆ ಎಚ್ಚರ ಇರಲಿ. ಈ ಬರವಣಿಗೆಯಿಂದ ಹಲವು ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ಇಂಟರ್ ನೆಟ್ ನಲ್ಲಿ ಸಿಕ್ಕಂಥ ಈ ಬರವಣಿಗೆ ಮೇಲೆ ಒಮ್ಮೆ ಕಣ್ಣಾಡಿಸಿ.

ಸಾಮೂಹಿಕ ಜವಾಬ್ದಾರಿ ಮತ್ತು ಸಮುದಾಯದ ಆಸಕ್ತಿ , ಸ್ಥಳೀಯ ಮತ್ತು ನಗರಾಡಳಿತ ಹಾಗೂ ಆರೋಗ್ಯ ಇಲಾಖೆಯ ಜವಾಬ್ದಾರಿ ನಿರ್ವಹಣೆಯಿಂದ ಮಾತ್ರ ರೋಗ ತಡೆ ಸಾಧ್ಯ. ಅದಕ್ಕೆ ಎಲ್ಲರೂ ಒಟ್ಟಾಗಿ ಕೈ ಜೋಡಿಸಿದರೆ ಈ ಮಹಾಮಾರಿಯನ್ನು ತಡೆಯಬಹುದು. ಇಲ್ಲಿರುವ ಪ್ರಶ್ನೋತ್ತರ ಒಮ್ಮೆ ಓದಿಕೊಳ್ಳಿ

ಪ್ರಶ್ನೆ: ಡೆಂಗ್ಯೂ ಅಂದರೆ ಏನು?

ಪ್ರಶ್ನೆ: ಡೆಂಗ್ಯೂ ಅಂದರೆ ಏನು?

ಉತ್ತರ: ಡೆಂಗ್ಯೂ ವೈರಸ್ ನಿಂದ ಹರಡುವ ಸೋಂಕು ರೋಗ. ರಚನೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಿರುವ DENV1, DENV2,DENV2, DENV4 ಎಂಬ 4 ವಿಧದ ವೈರಸ್ ಗಳಿಂದ ಹರಡುತ್ತದೆ.

ಪ್ರಶ್ನೆ: ಡೆಂಗ್ಯೂ ಹೇಗೆ ಹರಡುತ್ತದೆ?

ಪ್ರಶ್ನೆ: ಡೆಂಗ್ಯೂ ಹೇಗೆ ಹರಡುತ್ತದೆ?

ಉತ್ತರ: ಈಡೀಸ್ ಎಂಬ ಡೆಂಗ್ಯೂ ಪೀಡಿತ ಹೆಣ್ಣು ಸೊಳ್ಳೆ ಮನುಷ್ಯನಿಗೆ ಕಡಿಯುವುದರಿಂದ ಹರಡುತ್ತದೆ.

ಪ್ರಶ್ನೆ: ಈಡೀಸ್ ಸೊಳ್ಳೆ ಹೇಗಿರುತ್ತದೆ?

ಪ್ರಶ್ನೆ: ಈಡೀಸ್ ಸೊಳ್ಳೆ ಹೇಗಿರುತ್ತದೆ?

ಉತ್ತರ: ಇದು ನೋಡಲು ಮಾಮೂಲಿ ಸೊಳ್ಳೆಗಳಿಗಿಂತ ಸ್ವಲ್ಪ ಮಟ್ಟಿಗೆ ಭಿನ್ನವಾಗಿರುತ್ತದೆ. ಅಂದ್ರೆ ಈ ಸೊಳ್ಳೆಯ ಮೈ ಮೇಲೆ ಕಪ್ಪು ಬಿಳಿ ಬಣ್ಣದ ಪಟ್ಟೆ/ಗೆರೆಗಳಿರುತ್ತವೆ. ಆದ ಕಾರಣ ಇವುಗಳನ್ನು ಟೈಗರ್ ಸೊಳ್ಳೆಗಳು ಅಂತ ಅಡ್ಡ ಹೆಸರಿಂದ ಸಹ ಕರೆಯುತ್ತೇವೆ. ಸಾಮಾನ್ಯವಾಗಿ ಇವು ಹಗಲು ವೇಳೆಯಲ್ಲಿ ಮಾತ್ರ ಕಡಿಯುತ್ತವೆ.

ಅವು ಏಕೆ ಕಡಿಯುತ್ತವೆ ಗೊತ್ತೆ?

ಅವು ಏಕೆ ಕಡಿಯುತ್ತವೆ ಗೊತ್ತೆ?

1. ಹೆಣ್ಣು ಸೊಳ್ಳೆ ಮಾತ್ರ ತನ್ನ ಮೊಟ್ಟೆಗಳನ್ನು ಇಡಲು ಬೇಕಾಗುವ ಪ್ರೊಟೀನ್ ಗಾಗಿ ಕಡಿಯುತ್ತವೆ.

2. ಸೋಂಕಿತ ವ್ಯಕ್ತಿಗೆ ಕಡಿದಾಗ ಆತನಿಂದ ರೋಗಾಣು ಇವುಗಳಿಗೆ ಹರಡುತ್ತವೆ, ಇದು ಬದುಕಿರುವವರೆಗೂ ರೋಗಾಣುಗಳನ್ನು ತನ್ನೊಂದಿಗೆ ಇಟ್ಟುಕೊಂಡಿದ್ದು, ಅದು ಕಡಿಯುವ ಎಲ್ಲರಿಗೂ ಸೋಂಕು ಹಬ್ಬಿಸುತ್ತವೆ.

3. ಒಮ್ಮೆ ಸೋಂಕಿಗೊಳಗಾದ ಸೊಳ್ಳೆ, ಸೋಂಕಿತ ಸೊಳ್ಳೆಯಾಗಿಯೇ ಉಳಿಯುತ್ತದೆ. ಜತೆಗೆ ತಾನು ಇಡುವ ಮೊಟ್ಟೆಗಳಿಗೂ ಇದರ ಸೋಂಕನ್ನು ತಲುಪಿಸಿ ಆ ಮೂಲಕ ಮೊಟ್ಟೆಯಿಂದ ಮರಿ ಹುಟ್ಟುವಾಗಲೇ ಸೋಂಕಿತ ಸೊಳ್ಳೆಯಾಗಿ ಹುಟ್ಟಿ, ಅವು ಕೂಡ ರೋಗ ಪಸರಿಸುತ್ತವೆ.

4. ಸಾಮಾನ್ಯವಾಗಿ ಈ ಸೊಳ್ಳೆ ಸೂರ್ಯ ಹುಟ್ಟುವ ಮತ್ತು ಮುಳುಗುವ 2 ಗಂಟೆ ಮುಂಚೆ ಮನುಷ್ಯನಿಗೆ ಕಡಿಯುತ್ತವೆ

5. ಈ ಸೊಳ್ಳೆಯ ಜೀವಿತಾವಧಿ 2 ವಾರಗಳು ಮಾತ್ರ.

6. ಆದರೆ, ಈ ಸೊಳ್ಳೆಗಳು ತಮ್ಮ ಜೀವಿತಾವಧಿಯಲ್ಲಿ 3 ಬಾರಿ ಮೊಟ್ಟೆ ಇಡುತ್ತವೆ. ಹಾಗೂ ಒಮ್ಮೆಲೇ ಸುಮಾರು 100 ಮೊಟ್ಟೆ ಇಡುತ್ತವೆ.

7. ಈ ಸೊಳ್ಳೆಗಳು ಇಡುವ ಮೊಟ್ಟೆ, ಇದರಿಂದ ಹುಟ್ಟುವ ಮರಿಸೊಳ್ಳೆಗಳು ಸಹ ಸೋಂಕಿತ ಸೊಳ್ಳೆಗಳಾಗುತ್ತವೆ (ಮೊಟ್ಟೆ ಒಡೆದು ಮರಿಗಳಾಗಲು ಗಾಳಿ, ನೀರು, ಆಹಾರ ಮತ್ತು ಸೂಕ್ತ ಉಷ್ಣತೆ ಬೇಕು). ಆದರೆ ಈ ಮೊಟ್ಟೆಗಳು ಅತ್ಯಂತ ಉಷ್ಣತೆಯನ್ನು ಸಹ ಸಹಿಸಿ, ನೀರು ಇಲ್ಲದೆ ಇದ್ದರೂ ಹಲವಾರು ತಿಂಗಳು ಕಾಲ ಇರುತ್ತವೆ.

ನೀರು ಸಿಕ್ಕಾಗ ಅಂದರೆ ಸಾಮಾನ್ಯವಾಗಿ ಮುಂಗಾರು ಮಳೆ ಅಥವಾ ಪ್ರವಾಹದ ಸಂದರ್ಭದಲ್ಲಿ ಮೊಟ್ಟೆಯೊಡೆದು ಬಂದು ಡೆಂಗ್ಯೂ ಸೋಂಕಿತ ಸೊಳ್ಳೆಗಳಾಗಿ ಭಾದಿಸುತ್ತವೆ.

8. ಇವು ಸಾಮಾನ್ಯವಾಗಿ ಕತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತವೆ. ಅಂದ್ರೆ ನಮ್ಮ ಮನೆಯ ಕ್ಲಾಸೆಟ್ಸ್, ಕರ್ಟನ್, ಮಂಚದ ಕೆಳಗೆ, ವಾರ್ಡ್ ರೋಬ್ಸ್ ಹೀಗೆ ಕತ್ತಲ ಜಾಗಗಳಲ್ಲಿರುತ್ತವೆ.

9.ಆದರೆ ಇವುಗಳು ಹಾರಾಡುವ ಮತ್ತು ಪಸರಿಸುವ ದೂರ ಬಹಳ ಕಡಿಮೆ. ಅಂದರೆ ಕೇವಲ 400 ಮೀಟರ್ ಮಾತ್ರ. ಸೊಳ್ಳೆಗಳಿಗಿಂತ ವೇಗವಾಗಿ ಹಾಗೂ ಬಹಳವಾಗಿ ಪ್ರದೇಶ ಮತ್ತು ಸಮುದಾಯಗಳ ಮದ್ಯೆ ಸೋಂಕು ಹರಡಿಸುವುದು ಮನುಷ್ಯನೇ ಹೊರತು ಸೊಳ್ಳೆಗಳಲ್ಲ.(ಮನುಷ್ಯ ಯಾವಾಗಲೂ ಅಲೆದಾಡುವುದರಿಂದ ಆ ಪ್ರದೇಶದ ಒಂದು ಸೊಳ್ಳೆ ಸೋಂಕಿತವಾದರೆ ಅಲ್ಲಿಗೆ ಎಲ್ಲ ಮುಗಿಯಿತು)

10.ನಮ್ಮ ಮನೆಯಲ್ಲೇ ಇವು ಹೆಚ್ಚಾಗಿ ಬೆಳೆಯುತ್ತವೆ. ಅದು ಬಿಟ್ಟು ಕೊಚ್ಚೆ ನೀರು ಚರಂಡಿ ಮತ್ತು ನದಿ ತೊರೆಗಳಲ್ಲಿ ಇವು ಮೊಟ್ಟೆ ಇಡುವುದಿಲ್ಲ. ಇವಕ್ಕೆ ಶುದ್ಧ ನೀರು, ಒಳ್ಳೆ ಜಾಗಗಳೇ ಬೇಕು.

ಸೋಂಕನ್ನು ನಾವು ಹೇಗೆ ತಡೆಗಟ್ಟಬಹುದಾ?

ಸೋಂಕನ್ನು ನಾವು ಹೇಗೆ ತಡೆಗಟ್ಟಬಹುದಾ?

1. ಹಗಲು ಹೊತ್ತು ಮಾತ್ರ ಸೊಳ್ಳೆ ಕಚ್ಚುವುದರಿಂದ ಅದರಲ್ಲೂ ಸೂರ್ಯೋದಯ, ಸೂರ್ಯಾಸ್ತಮಾನದ ಸಮಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕು.

2. ಪೂರ್ತಿ ತೋಳಿರುವ ಉಡುಪು ಧರಿಸುವುದು ಸೂಕ್ತ

2. ಸೊಳ್ಳೆ ಪರದೆ, ಕಿಟಕಿಗಳಿಗೆ ಪರದೆ, ಸೊಳ್ಳೆ ಬತ್ತಿ ಇವುಗಳನ್ನು ಬಳಸುವುದು ಉತ್ತಮ

ಡೆಂಗ್ಯೂನ ಲಕ್ಷಣಗಳು

ಡೆಂಗ್ಯೂನ ಲಕ್ಷಣಗಳು

ಜ್ವರ ಕಾಣಿಸಿಕೊಂಡ 2 ರಿಂದ 7 ದಿನಗಳಲ್ಲಿ ಈ ಕೆಳಕಂಡ ಯಾವುದಾದರೂ 2 ಲಕ್ಷಣಗಳು ಕಂಡು ಬಂದರೆ ಹೆಚ್ಚು ಜಾಗರೂಕತೆಯಿಂದ ಇರಬೇಕು.

1. ತೀವ್ರ ತಲೆನೋವು

2. ಕಣ್ಣಿನ ಹಿಂಭಾಗ ನೋವು ಅಂದ್ರೆ ಕಣ್ಣು ಗುಡ್ಡೆಯಲ್ಲಿ

3. ಸ್ನಾಯು ಸೆಳೆತ(ಮೈ ಕೈ ನೋವು)

4. ಕೀಲು ನೋವು

5. ಚರ್ಮ ಕೆಂಪಾಗುವುದು

6. ಮೂಗು ಅಥವಾ ಒಸಡುಗಳಲ್ಲಿ ರಕ್ತಸ್ರಾವ

ಈ ಲಕ್ಷಣಗಳು ತಮ್ಮಲ್ಲಿ ಕಂಡುಬಂದರೆ ಏನು ಮಾಡುವುದು?

ಈ ಲಕ್ಷಣಗಳು ತಮ್ಮಲ್ಲಿ ಕಂಡುಬಂದರೆ ಏನು ಮಾಡುವುದು?

1. ವಿಶ್ರಾಂತಿ ಬಹಳ ಮುಖ್ಯ

2. ಅತಿ ಮುಖ್ಯವಾಗಿ ಆಸ್ಪಿರಿನ್ ಮತ್ತು ಬ್ರುಫೆನ್ ನಂತಹ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಅವಶ್ಯಕತೆ ಇದ್ದರೆ ವೈದ್ಯರ ಸಲಹೆ ಪಡೆಯಬೇಕು (ಇವುಗಳು ಗ್ಯಾಸ್ಟ್ರಿಕ್, ವಾಂತಿ, ಮತ್ತು ರಕ್ತ ಸ್ರಾವಕ್ಕೆ ಕಾರಣವಾಗುತ್ತವೆ).

3. paracetamol ಮಾತ್ರೆಗಳು ಉಪಯೋಗಿಸಬಹುದು.(ಅವಶ್ಯಕತೆ ಇದ್ರೆ ವೈದ್ಯರ ಸಲಹೆಯಂತೆ)

4. ಯಥೇಚ್ಛ ನೀರು, ಎಳನೀರು ಮತ್ತು ಓ ಆರ್ ಎಸ್ ದ್ರಾವಣ ಕುಡಿಯಬೇಕು. ರೋಗಕ್ಕಿಂತ ಜಾಸ್ತಿ ಸಾವು ನಿರ್ಜಲೀಕರಣದಿಂದ ಉಂಟಾಗುತ್ತದೆ. ಕಾರಣ ಅತಿ ಹೆಚ್ಚು ಜ್ವರ, ಬೆವರು, ಆದುದರಿಂದ ತಮ್ಮ ರಕ್ತದೊತ್ತಡ ಕಡಿಮೆಯಾಗಿ ಸಾವು ಸಂಭವಿಸುತ್ತದೆ. ದಯವಿಟ್ಟು ಹೆಚ್ಚು ದ್ರವಾಹಾರ ಸೇವಿಸಿರಿ.

5. ಸೊಳ್ಳೆಗಳಿಂದ ದೂರವಿರಿ

6. ವೈದ್ಯರ ಭೇಟಿ ಮಾಡಿ

ಸಾಮಾನ್ಯವಾಗಿ ಡೆಂಗ್ಯೂ ಇಂದ ಬಳಲುವ ರೋಗಿಗಳು 1 ರಿಂದ 2 ವಾರಗಳಲ್ಲಿ ಪುನಃ ಆರೋಗ್ಯವಂತರಾಗುತ್ತಾರೆ.

ಡೆಂಗ್ಯೂವಿನಿಂದ ನಾವು ಸಾಯುತ್ತೇವೆಯೇ?

ಡೆಂಗ್ಯೂವಿನಿಂದ ನಾವು ಸಾಯುತ್ತೇವೆಯೇ?

1.ಸಾಮಾನ್ಯವಾಗಿ ಈ ರೋಗದಿಂದ ಸಾವು ಸಂಭವಿಸುವುದು ಅತಿ ವಿರಳ ಆದರೆ ಕೆಲವೊಬ್ಬರಿಗೆ DHF(dengue hemorrhagic fever) ಅಥವಾ DSS (dengue shocking syndrome) ಆಗಿ ಸಾವನ್ನಪ್ಪಬಹುದು.

2. ಇಂತಹ ರೋಗಿಗಳಿಗೆ ಮಾತ್ರ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುವ ಅವಶ್ಯಕತೆ ಇದೆ.

3. ಸರಿಯಾದ ಮತ್ತು ಸಮಯೋಚಿತ ಚಿಕಿತ್ಸೆಯಿಂದ ರೋಗಿಗಳನ್ನು ಗುಣಪಡಿಸಬಹುದು.

ಯಾವಾಗ ತುರ್ತು ಗಮನ ನೀಡಬೇಕು

ಯಾವಾಗ ತುರ್ತು ಗಮನ ನೀಡಬೇಕು

1. ತುಂಬಾ ಹೊಟ್ಟೆನೋವು

2.ಚರ್ಮದ ಮೇಲಿನ ಕೆಂಪು ಗುಳ್ಳೆ ಅಥವಾ ಮಚ್ಚೆ

3.ಬಾಯಿ ಮತ್ತು ಮೂಗಿನಿಂದ ರಕ್ತಸ್ರಾವ

4.ರಕ್ತ ಮಿಶ್ರಿತ ವಾಂತಿ

5.ಕಪ್ಪು ಬಣ್ಣದ ಮಲ ವಿಸರ್ಜನೆ

6.ತುಂಬಾ ಸಪ್ಪೆಯಾಗಿ ವರ್ತಿಸುವುದು

7. ತಣ್ಣಗಾದ ಅಥವಾ ಒಣ ಚರ್ಮ

8.ಉಸಿರಾಟಕ್ಕೆ ತೊಂದರೆ

ಇಂತಹ ಸಂದರ್ಭದಲ್ಲಿ ಏನು ಮಾಡಬೇಕು?

ಇಂತಹ ಸಂದರ್ಭದಲ್ಲಿ ಏನು ಮಾಡಬೇಕು?

1.ಪ್ರತಿ ಗಂಟೆಗೊಮ್ಮೆ ರೋಗಿಯ ತಪಾಸಣೆ.

2. ಪ್ಲೇಟ್ಲೇಟ್ ಚೆಕ್ ಮಾಡುವುದು.

3. ವೈದ್ಯರು ಅವಶ್ಯಕತೆ ಇದ್ರೆ ಇ. ವಿ. ಫ್ಲುಯಡ್ಸ್ ಅಥವಾ ಪ್ಲೇಟ್ಲೆಟ್ ಮರು ಪೂರಣ ಮಾಡಬೇಕಾಗಬಹುದು

(ಎಲ್ಲ ರೋಗಿಗಳಿಗೂ ಪ್ಲೇಟ್ಲೆಟ್ ಮರುಪೂರಣದ ಅವಶ್ಯಕತೆ ಇಲ್ಲ)

ಇಂತಹ ರೋಗಿಗಳಿಗೆ ಮನೆಯಲ್ಲೆ ಚಿಕಿತ್ಸೆ ನೀಡಬಹುದೇ?

ಇಂತಹ ರೋಗಿಗಳಿಗೆ ಮನೆಯಲ್ಲೆ ಚಿಕಿತ್ಸೆ ನೀಡಬಹುದೇ?

ಹೌದು, ಅವರಿಗೆ ಗೃಹಾಧಾರಿತ ಚಿಕಿತ್ಸೆ ಸಾಕು, ಆದರೆ ದ್ರವಾಹಾರ ಹೆಚ್ಚಾಗಿ ನೀಡಬೇಕು ಮತ್ತು ಮೇಲ್ಕಂಡ ತೀವ್ರ ಥರದ ಲಕ್ಷಣಗಳು ಕಂಡು ಬಂದಾಗ ಮಾತ್ರ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.

English summary
Here is the detail of Dengue fever, reason- medication and precaution for Dengue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X