ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಯೂಟ್ಯೂಬ್ ಮೂಲಕ ಪಾಠ

|
Google Oneindia Kannada News

ಬೆಂಗಳೂರು, ಜುಲೈ 22 : ಕೊರೊನಾ ವೈರಸ್ ಭೀತಿಯ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಕಾಲೇಜುಗಳು ಆರಂಭವಾಗಿಲ್ಲ. ಸರ್ಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಯೂಟ್ಯೂಬ್ ಮೂಲಕ ತರಗತಿಗಳನ್ನು ನಡೆಸಲಾಗುತ್ತದೆ.

Recommended Video

America ನಂತರ Indiaದಲ್ಲಿ ಅತಿ ಹೆಚ್ಚು Covid test | Oneindia Kannada

ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಪ್ರಸಾರವಾಗಲಿರುವ ವಿಡಿಯೋ ಪಾಠಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆಯಾ ಕಾಲೇಜಿನ, ಆ ವಿಷಯಗಳ ಉಪನ್ಯಾಸಕರು ಈ ಬಗ್ಗೆ ನಿಗಾವಹಿಸಬೇಕು ಎಂದು ಸೂಚನೆ ನೀಡಲಾಗಿದೆ.

ಚಂದನ ವಾಹಿನಿಯಲ್ಲಿ ಶಾಲಾ ಮಕ್ಕಳಿಗೆ ಪಾಠ; ವೇಳಾಪಟ್ಟಿ ಚಂದನ ವಾಹಿನಿಯಲ್ಲಿ ಶಾಲಾ ಮಕ್ಕಳಿಗೆ ಪಾಠ; ವೇಳಾಪಟ್ಟಿ

ಪ್ರತಿದಿನ 45 ನಿಮಿಷಗಳ 4 ಅವಧಿಯ ಪ್ರೀ-ರೆಕಾರ್ಡೆಡ್ ತರಗತಿಗಳನ್ನು ನಡೆಸಲಾಗುತ್ತದೆ. ಪ್ರತಿ ವಿಷಯಕ್ಕೆ ಎರಡು ಅವಧಿ. ಒಂದು ಅವಧಿಯಲ್ಲಿ ವಿಡಿಯೋ ತರಗತಿ, 2ನೇ ಅವಧಿಯಲ್ಲಿ ತರಗತಿಗೆ ಸಂಬಂಧಿಸಿದ ಸಂದೇ ನಿವಾರಣೆ, ನೋಟ್ಸ್ ಬರವಣಿಗೆ ಇರಲಿದೆ.

 ಪುಟ್ಟ ಮಕ್ಕಳಿಗೆ ಆನ್ ಲೈನ್ ಕ್ಲಾಸ್; ಸುತಾರಾಂ ಒಪ್ಪಲ್ಲ ಎಂದ ಶಿಕ್ಷಣ ಸಚಿವ ಪುಟ್ಟ ಮಕ್ಕಳಿಗೆ ಆನ್ ಲೈನ್ ಕ್ಲಾಸ್; ಸುತಾರಾಂ ಒಪ್ಪಲ್ಲ ಎಂದ ಶಿಕ್ಷಣ ಸಚಿವ

Pre Recorded Youtube Classes For 2nd Puc Students

ಜಿಲ್ಲಾ ಉಪ ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕರು ಕಾಲೇಜಿನ ಪ್ರತಿ ವಿದ್ಯಾರ್ಥಿಗೆ ತರಗತಿಗಳನ್ನು ತಲುಪಿಸುವ ಪ್ರಯತ್ನ ಮಾಡಬೇಕು. ಪ್ರತಿದಿನ ತರಗತಿಗಳನ್ನು ವೀಕ್ಷಣೆ ಮಾಡಲು ಪ್ರೇರೆಪಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿಯಲ್ಲಿ ಪಾಠ8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿಯಲ್ಲಿ ಪಾಠ

ವಿದ್ಯಾರ್ಥಿಗಳಿಗೆ ಯೂಟ್ಯೂಬ್ ಲಿಂಕ್ : youtube.com/c/dpuedkpucpa

ಅಂದು ಪ್ರಸಾರವಾದ ಪಾಠಗಳಿಗೆ ಸಂಬಂಧಿಸಿದ ನೋಟ್ಸ್‌ಗಳು ಅಂದೇ ಲಭ್ಯವಿರಲಿದೆ. ನಿಗದಿತ ವೇಳಾಪಟ್ಟಿಯಲ್ಲಿ ತರಗತಿಗಳನ್ನು ವೀಕ್ಷಿಸಲು ಸಾಧ್ಯವಾಗದಿದ್ದರೆ ಲಿಂಕ್ ಬಳಸಿ ಬೇರೆ ದಿನ ಅಥವ ಪುನರಾವರ್ತಿತವಾಗಿ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ.

ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ವಿಷಯವಾರು ಉಪನ್ಯಾಸಕರಿಗೆ ವಿಂಗಡನೆ ಮಾಡಿ ಅಪ್ ಲೋಡ್ ಆಗಿರುವ ಪ್ರೀ ರೆಕಾರ್ಡ್ ವಿಡಿಯೋ ವೀಕ್ಷಣೆ ಮಾಡಲು ಸೂಚಿಸಬೇಕು. ಒಂದು ವೇಳೆ ವಿದ್ಯಾರ್ಥಿಗಳಿಗೆ ಸಂದೇಹಗಳು ಬಂದರೆ ದೂರವಾಣಿ ಕರೆ, ವಾಟ್ಸಪ್ ಮೂಲಕ ಅವುಗಳನ್ನು ಪರಿಹಾರ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

English summary
Pre recorded youtube classes for the government college 2nd PUC students in July and August 2020. Video class time table announced by PUC board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X