ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಪೂರ್ವ ಮಳೆ: ರಾಜ್ಯದಲ್ಲಿ ಸಾವಿರ ಡೆಂಗ್ಯೂ ಪ್ರಕರಣ ದಾಖಲು

By Nayana
|
Google Oneindia Kannada News

Recommended Video

ಮುಂಗಾರು ಪೂರ್ವ ಮಳೆಯಿಂದ ಡೆಂಗ್ಯೂ ಭೀತಿ | Oneindia Kannada

ಬೆಂಗಳೂರು, ಜೂನ್ 2: ಇನ್ನು ಮಳೆಗಾಲ ಆರಂಭವಾಗುತ್ತಿದೆಯಷ್ಟೇ ಈಗಲೇ ಡೆಂಗ್ಯೂ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿದೆ. ಬೇಸಿಗೆಯಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಸೊಳ್ಳೆಯ ಸಂತತಿ ಕೂಡ ಹೆಚ್ಚಾಗಿದೆ ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ನಿರ್ಮಾಣ ಹಂತದ ಕಟ್ಟಡ, ತಾರಸಿ, ತೆರೆದ ನೀರಿನ ತೊಟ್ಟಿಗಳು, ಟಾಯರ್, ಟ್ಯೂಬ್, ತೆಂಗಿನ ಚಿಪ್ಪು ಸೇರಿದಂತೆ ನೀರು ನಿಂತ ಕಡೆಯಲ್ಲೆಲ್ಲ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದು, ಕಳೆದ ಹತ್ತು ದಿನಗಳಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಮಂಡ್ಯ : ವಿದ್ಯಾರ್ಥಿನಿ ಸಾವು, ಡೆಂಗ್ಯೂ ಶಂಕೆಮಂಡ್ಯ : ವಿದ್ಯಾರ್ಥಿನಿ ಸಾವು, ಡೆಂಗ್ಯೂ ಶಂಕೆ

ರಾಜ್ಯದಲ್ಲಿ ಮುಂಗಾರು ಕಾಲಿಡುವ ಮುನ್ನವೇ 1006 ಮಂದಿಯಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಮುಂಗಾರು ಪೂರ್ವ ಮಳೆಯಿಂದಾಗಿ ಡೆಂಗ್ಯೂ ಹಾವಳಿ ಹೆಚ್ಚಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಚಿಕಿತಸೆ ಡೆಯುವವರ ಸಂಖ್ಯೆಯೂ ಹೆಚ್ಚಾಗಿದೆ.

ಡೆಂಗ್ಯೂ ಕುರಿತು ಶೇ.80ರಷ್ಟು ಜನರು ಇನ್ನೂ ಜಾಗೃತರಾಗಿಲ್ಲ, ಹೀಗಾಗಿ ಮುಂಗಾರಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಡೆಂಗ್ಯೂ ಈಗ ವರ್ಷ ಪೂರ್ತಿ ಕಾಡುವಂತಾಗಿದೆ. ಸೊಳ್ಳೆಗಳಿಂದ ಕಾಡುವ ರೋಗಗಳ ನಿಯಂತ್ರಣಕ್ಕೆ ಜನರು ಸಹಕರಿಸಬೇಕಾಗಿದೆ.

ಡೆಂಗ್ಯೂ, ಚಿಕೂನ್ ಗುನ್ಯಾ ಮತ್ತು ಅಜ್ಜಿ ಕೊಟ್ಟ ಅಮೃತಬಳ್ಳಿ ಕಷಾಯ!ಡೆಂಗ್ಯೂ, ಚಿಕೂನ್ ಗುನ್ಯಾ ಮತ್ತು ಅಜ್ಜಿ ಕೊಟ್ಟ ಅಮೃತಬಳ್ಳಿ ಕಷಾಯ!

 ಸೂಕ್ಷ್ಮ ಪ್ರದೇಶಗಳ ಗುರುತು

ಸೂಕ್ಷ್ಮ ಪ್ರದೇಶಗಳ ಗುರುತು

ಡೆಂಗ್ಯೂ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಬೆಂಗಳೂರು, ಶಿವಮೊಗ್ಗ, ಚಿತ್ರದುರ್ಗ, ಗದಗ, ವಿಜಯಪುರ, ಬೆಳಗಾವಿ, ಚಾಮರಾಜನಗರ, ದಾವಣೆಗೆರೆ, ಮೈಸೂರು, ಕೊಪ್ಪಳ, ಮಂಡ್ಯ, ಮೂಸೂರು, ದಕ್ಷಿಣ ಕನ್ನಡ, ಹಾವೇರಿ ಸೇರಿದಂತೆ 19 ಜಿಲ್ಲೆಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಲ್ಲ ಇಲಾಖೆಗಳ ಜತೆ ಸಭೆ ನಡೆಸಿ ಜಾಗೃತಿ ಮೂಡಿಸುವ ಹಾಗೂ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

 ಮುಂಗಾರು ಕಾಲಿಡುವ ಮುನ್ನವೇ 1006 ಮಂದಿಗೆ ಡೆಂಗ್ಯೂ

ಮುಂಗಾರು ಕಾಲಿಡುವ ಮುನ್ನವೇ 1006 ಮಂದಿಗೆ ಡೆಂಗ್ಯೂ

ಕಳೆದ ಹತ್ತು ದಿನಗಳ್ಲಲಿ ನೂರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಮುಂಗಾರು ಕಾಲಿಡುವ ಮುನ್ವೇ 1006 ಮಂದಿಯಲ್ಲಿ ಡೆಂಗ್ಯೂ ಜ್ವರ ಕಂಡು ಬಂದಿದೆ.

 ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಮಾಸಾಚರಣೆ

ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಮಾಸಾಚರಣೆ

ಡೆಂಗ್ಯೂ ನಿಯಂತ್ರಣಕ್ಕೆ ಅನೇಕ ಪ್ರಯತ್ನಗಳನ್ನು ಆರೋಗ್ಯ ಇಲಾಖೆಯು ಮಾಡುತ್ತಿದೆ. ಈಗಾಘಲೇ ಮೇ 18ರಿಂದ 26ರವರೆಗೆ ಡಿಂಗ್ಯೂ ದಿನ ಆಚರಿಸಿ ಜಾಗೃತಿ ಮೂಡಿಸಿದೆ. ಇದೀಗ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಡೆಂಗ್ಯೂ ಮಾಸಾಚಾರಣೆ ಆಚರಿಸಲು ಸಿದ್ಧತೆ ನಡೆಸಿದೆ. ಕರಪತ್ರಗಳು, ಬೀದಿ ನಾಟಕಿಗಳು, ಮನೆ ಮನೆ ಭೇಟಿ, ಶಾಲಾ ಕಾಲೇಜುಗಳಲ್ಲಿ ಅರಿವು ಮುಂತಾದ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಇದಲ್ಲದೇ ವಾರದಲ್ಲಿ ಒಂದು ದಿನ ಡ್ರೈಡೇ ಆರಚರಿಸುವಂತೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.

 ಆರೋಗ್ಯ ಇಲಾಖೆಯಿಂದ ಪ್ರಶಂಸಾ ಪತ್ರ ವಿತರಣೆ

ಆರೋಗ್ಯ ಇಲಾಖೆಯಿಂದ ಪ್ರಶಂಸಾ ಪತ್ರ ವಿತರಣೆ

ಡೆಂಗ್ಯೂ ನಿಯಂತ್ರಣಕ್ಕೆ ಕಳೆದ ವರ್ಷ ಆರಂಭಿಸಿದ್ದ ಸಾರ್ವಜನಿಕರಿಗೊಂದು ಸವಾಲು ಕಾರ್ಯಕ್ರಮದ ಭಾಗವಾಗಿ ಡೆಂಗ್ಯೂ ನಿಯಂತ್ರಣಕ್ಕೆ ಪೂರಕ ವಾತಾವರಣ ನಿರ್ಮಿಸಿರುವ ಸಾರ್ವಜನಿಕರ ಪಟ್ಟಿ ಸಿದ್ಧಪಡಿಸಲಾಗಿದ್ದು, ಕೆಲವೇ ಕೆಲವು ದಿನಗಳಲ್ಲಿ ಅವರಿಗೆಲ್ಲ ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಶಂಸಾ ಪತ್ರ ವಿತರಿಸಲಾಗುತ್ತದೆ.

English summary
Around one thousand dengue cases reported across the state due to continuous rain fall in last fifteen d days. Health department has appealed general public to maintain hygiene in their surroundings to avoid mosquitoes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X