ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಸಿದ್ದರಾಮಯ್ಯಗೆ ಪ್ರವೀಣ್ ತೊಗಾಡಿಯಾ ಪತ್ರ!

|
Google Oneindia Kannada News

ಬೆಂಗಳೂರು, ಮಾ.10 : ಕರ್ನಾಟಕದಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಲು ಅವಕಾಶ ನೀಡದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ವಿಶ್ವ ಹಿಂದೂ ಪರಿಷತ್‌ನ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರಿಗೆ ಆಗಮಿಸದಂತೆ ನಿಷೇಧ ಹೇರಿದ್ದಾಗ, ಹೊಸೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾಗ ಕರ್ನಾಟಕ ಪೊಲೀಸರು ನನಗೆ ತೊಂದರೆ ನೀಡಿದ್ದಾರೆ. ರಾಜಕೀಯ ಪ್ರೇರಿತವಾದ ಸಿಎಂ ಸಿದ್ದರಾಮಯ್ಯ ಅವರ ಈ ನಡೆ ನನಗೆ ಅಚ್ಚರಿ ತಂದಿದೆ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. [ಉಡುಪಿ ಪ್ರವೇಶಿಸದಂತೆ ತೊಗಾಡಿಯಾಗೆ ನಿಷೇಧ]

Praveen Togadia

'ಮಾರ್ಚ್ 11ರಂದು ಮೈಸೂರಿನಲ್ಲಿ ಭಾಷಣ ಮಾಡುತ್ತೇನೆ ಎಂಬುದನ್ನು ಅರಿತು ವೈಯಕ್ತಿಕ ಹಿತಾಸಕ್ತಿಯಿಂದ ನನಗೆ ನಿಷೇಧ ಹೇರಲಾಗಿದೆ. ಮಾರ್ಚ್‌ 9 ರಂದು ಕರ್ನಾಟಕದ ಪೊಲೀಸರನ್ನು ಅಹಮದಾಬಾದ್‌ಗೆ ಕಳುಹಿಸಿ, ನಾನು 10 ವರ್ಷದ ಹಿಂದೆ ತೊರೆದಿರುವ ನನ್ನ ನಿವಾಸಕ್ಕೆ ಹೋಗಿ ಈ ಕುರಿತು ನೋಟಿಸ್ ನೀಡಲಾಗಿದೆ'. [ಚಿಕ್ಕಮಗಳೂರು ಪ್ರವೇಶಿಸದಂತೆ ತೊಗಾಡಿಯಾಗೆ ನಿಷೇಧ]

'ನನ್ನನ್ನು ನಿಷೇಧಿಸುವ ಸಲುವಾಗಿ ಪೊಲೀಸರನ್ನು ಗುಜರಾತ್‌ಗೆ ಕಳುಹಿಸುವ ಅಗತ್ಯವಿರಲ್ಲಿಲ್ಲ. ಹಿಂದೂ ಸಮಾಜೋತ್ಸವವನ್ನು ಆಯೋಜನೆ ಮಾಡಿದ ಕರ್ನಾಟಕದ ವಿಶ್ವಹಿಂದೂ ಪರಿಷತ್ ನಾಯಕರು ಅಥವ ಕಚೇರಿಗೆ ನೊಟೀಸ್‌ ನೀಡಬಹುದಿತ್ತು' ಎಂದು ತೊಗಾಡಿಯಾ ಹೇಳಿದ್ದಾರೆ.

ಅಂದಹಾಗೆ ಪ್ರವೀಣ್ ತೊಗಾಡಿಯಾ ಅವರು ಬೆಂಗಳೂರು, ಉಡುಪಿ, ಚಿಕ್ಕಮಗಳೂರು, ಮೈಸೂರಿನಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳದಂತೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಆದ್ದರಿಂದ ತೊಗಾಡಿಯಾ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಈ ಪತ್ರ ಬರೆದಿದ್ದಾರೆ.

English summary
Praveen Togadia banned from entering Karnataka for 'Hindu Samajotsava'. VHP international working president Togadia writes letter to Karnataka Chief Minister Siddaramaiah and expressed unhappiness over ban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X