ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪ್ ಸಿಂಹ ಕಣಕ್ಕೆ

By Srinath
|
Google Oneindia Kannada News

ಬೆಂಗಳೂರು, ಮಾರ್ಚ್ 13- ಕನ್ನಡದ ಖ್ಯಾತ ಅಂಕಣಕಾರ ಪ್ರತಾಪ್ ಸಿಂಹ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದ್ದು, ಮೈಸೂರಿನಿಂದ ಕಣಕ್ಕಿಳಿಯುತ್ತಿದ್ದಾರೆ. ಈ ಬಗ್ಗೆ ಕನ್ನಡ ಪ್ರಭ ಪತ್ರಿಕೆಯಲ್ಲಿ ಇಂದು ಪ್ರಕಟವಾಗಿರುವ ವರದಿಯು ಇದನ್ನು ಖಚಿತಪಡಿಸಿದೆ. ರಾಜ್ಯ ನಾಯಕರು ಬುಧವಾರ ಅಂತಿಮ ಪಡಿಸಿರುವ ಪಟ್ಟಿಯಲ್ಲಿ ಪ್ರತಾಪ್ ಸಿಂಹ ಹೆಸರಿದ್ದು, ದಿಲ್ಲಿ ಬಿಜೆಪಿ ವರಿಷ್ಠರು ಇದಕ್ಕೆ ಅಸ್ತು ಅನ್ನಬೇಕಿದೆ.

ಗುರುವಾರ ಮಧ್ಯಾಹ್ನ ನಡೆಯುವ ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ಬಾಕಿಯಿರುವ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಅಧಿಕೃತವಾಗಿ ಹೊರಬೀಳುವ ಅಂದಾಜಿದೆ. ಅಂಕಣಕಾರ ಪ್ರತಾಪ್ ಸಿಂಹ ಸೇರಿದಂತೆ ಐವರು ಅಭ್ಯರ್ಥಿಗಳ ಹೆಸರನ್ನು ರಾಜ್ಯ ಬಿಜೆಪಿ ನಾಯಕರು ಬುಧವಾರ ಅಂತಿಮಗೊಳಿಸಿದ್ದಾರೆ.

5 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ರಾಜ್ಯ ಬಿಜೆಪಿ

5 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ರಾಜ್ಯ ಬಿಜೆಪಿ

3 ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಜವಾಬ್ದಾರಿಯು ದಿಲ್ಲಿ ನಾಯಕರ ಹೆಗಲೇರಿದೆ. ಅಂದರೆ ಬೀದರ್, ತುಮಕೂರು ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ದಿಲ್ಲಿಯಲ್ಲೇ ಆಗಲಿದೆ. ಇದೇ ಸಂದರ್ಭದಲ್ಲಿ ಬಿಎಸ್ಸಾರ್ ಕಾಂಗ್ರೆಸ್ ವಿಲೀನ ಪ್ರಕ್ರಿಯೆ ಬಗ್ಗೆಯೂ ರಾಜ್ಯ ನಾಯಕರು ಅಂತಿಮ ನಿರ್ಣಯ ತೆಗೆದುಕೊಂಡಿದ್ದು, ಅದನ್ನು ದಿಲ್ಲಿ ವರಿಷ್ಠರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.

ಉಡುಪಿ-ಚಿಕ್ಕಮಗಳೂರಿಗೆ ಶೋಭಾ, ಹಾಸನಕ್ಕೆ ವಿಜಯಶಂಕರ್

ಉಡುಪಿ-ಚಿಕ್ಕಮಗಳೂರಿಗೆ ಶೋಭಾ, ಹಾಸನಕ್ಕೆ ವಿಜಯಶಂಕರ್

ಬೆಂಗಳೂರಿನಲ್ಲಿ ಬುಧವಾರ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲಿ ಮೈಸೂರು (ಪ್ರತಾಪ್), ಉಡುಪಿ-ಚಿಕ್ಕಮಗಳೂರು (ಶೋಭಾ ಕರಂದ್ಲಾಜೆ), ಹಾಸನ (ಸಿಎಚ್ ವಿಜಯಶಂಕರ್), ಕೋಲಾರ (ಬಿ ನಾರಾಯಣಸ್ವಾಮಿ) ಹಾಗೂ ಮಂಡ್ಯ (ಬಿ ಶಿವಲಿಂಗಯ್ಯ) ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಸೂಚಿಸಿ, ಬಿಜೆಪಿ ಕೇಂದ್ರ ಚುನಾವಣೆ ಸಮಿತಿಗೆ ಕಳುಹಿಸಲಾಗಿದೆ.

ತುಮಕೂರು, ಬೀದರ್‌ ಕ್ಷೇತ್ರಗಳಿಗೆ ಯಡಿಯೂರಪ್ಪ ಪಟ್ಟು

ತುಮಕೂರು, ಬೀದರ್‌ ಕ್ಷೇತ್ರಗಳಿಗೆ ಯಡಿಯೂರಪ್ಪ ಪಟ್ಟು

ಇನ್ನು, ತುಮಕೂರು ಹಾಗೂ ಬೀದರ್ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯ ಜವಾಬ್ದಾರಿಯನ್ನು ಕೇಂದ್ರ ಚುನಾವಣೆ ಸಮಿತಿಗೆ ನೀಡಲಾಗಿದೆ. ತುಮಕೂರಿನಿಂದ ಜಿಎಸ್ ಬಸವರಾಜ್ ಹಾಗೂ ಬೀದರ್‌ನಿಂದ ಗುರುಪಾದಪ್ಪ ನಾಗಮಾರಪಲ್ಲಿ ಅವರ ಪುತ್ರನಿಗೆ ಟಿಕೆಟ್ ನೀಡಬೇಕು ಎನ್ನುವುದು ಯಡಿಯೂರಪ್ಪ ಅವರ ಹಠವಾಗಿದೆ. ಆದರೆ ಇವೆರಡು ಕ್ಷೇತ್ರಗಳಲ್ಲಿ ಬೇರೊಂದು ಅಭ್ಯರ್ಥಿಯ ಆಯ್ಕೆಗೆ ರಾಜ್ಯ ಬಿಜೆಪಿಯ ಇತರ ಮುಖಂಡರು ಒಲವು ತೋರಿದ್ದಾರೆ.

ಶ್ರೀರಾಮುಲು ಬಳ್ಳಾರಿ ಬಿಜೆಪಿಯ ಅಭ್ಯರ್ಥಿ?

ಶ್ರೀರಾಮುಲು ಬಳ್ಳಾರಿ ಬಿಜೆಪಿಯ ಅಭ್ಯರ್ಥಿ?

ಮತ್ತೊಂದು ಕ್ಷೇತ್ರವಾದ ಬಳ್ಳಾರಿ ಲೋಕಸಭೆಯ ಅಭ್ಯರ್ಥಿ ಆಯ್ಕೆ ಬಿಜೆಪಿಯಲ್ಲಿ ಬಿಎಸ್ಸಾರ್ ಕಾಂಗ್ರೆಸ್ ವಿಲೀನವನ್ನು ಅವಲಂಬಿಸಿದೆ. ವಿಲೀನ ಖಚಿತವಾದರೆ ಮಾಜಿ ಸಚಿವ ಬಿ ಶ್ರೀರಾಮುಲು ಅವರೇ ಬಿಜೆಪಿಯ ಅಭ್ಯರ್ಥಿಯಾಗಲಿದ್ದಾರೆ.

English summary
An ardent follower of Bharatiya Janata Party prime ministerial candidate Narnedra Modi, Kannada journalist Bettale Jagattu fame Pratap Simha will contest from Mysore Lok Sabha seat reports Kannada Daily Kannada Prabha in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X