ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಂತಕರ ಮೇಲೆ ಸ್ವಯಂಪ್ರೇರಿತ ಕೇಸ್ ದಾಖಲಿಸಿ: ಮುತಾಲಿಕ್ ಆಗ್ರಹ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್.06: ಬೆಂಗಳೂರಿನಲ್ಲಿ ಗೌರಿ ಲಂಕೇಶ್ ಹತ್ಯೆಯಾಗಿ ವರ್ಷ ಕಳೆದ ಹಿನ್ನೆಲೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ "ನಾನು‌ ನಗರದ ನಕ್ಸಲೇಟ್ ಎಂದು ಸಾಹಿತಿ ಗಿರೀಶ್ ಕಾರ್ನಾಡ್ ಬೋರ್ಡ್‌ ಹಾಕಿಕೊಂಡಿದ್ದು ಕಾನೂನು ಬಾಹಿರ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದರು.

ಇಂದು ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರಗತಿಪರರು ಬ್ಯಾನ್ ಆರ್ಗನೈಜೇಶನ್ ಪರವಾಗಿ ನಿಂತಿರುವುದು ದೊಡ್ಡ ಅಪರಾಧ. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹಕ್ಕಾಗಿ ವಿಶೇಷ ಪಡೆಯಿದೆ.

'ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತ ವ್ಯಕ್ತಿ ನನ್ನ ಪರಿಚಿತ''ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತ ವ್ಯಕ್ತಿ ನನ್ನ ಪರಿಚಿತ'

ಯಾರು ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಾರೋ ಅವರನ್ನು ಹತ್ತಿಕ್ಕಲು ಸರ್ಕಾರವೇ ರಚಿಸಿದ ತಂಡವಿದೆ. ಆದರೂ ನಾನೂ ನಕ್ಸಲ್ ಎಂದು ಬೋರ್ಡ್ ಹಾಕಿಕೊಂಡು ಕಾರ್ಯಕ್ರಮ ನಡೆಸಿದವರು ಅಪರಾಧಿಗಳು.

Pramod Muthalik said Register sumoto case on the thinkers

ಸಾಹಿತಿ ಗಿರೀಶ್ ಕಾರ್ನಾಡ್, ಪ್ರಕಾಶ್ ರೈ, ರೆಹಮತ್ ತರೀಕೆರೆ ಮೊದಲಾದವರು ಕಾರ್ಯಕ್ರಮ ನಡೆಸಿದ್ದು, ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸಿದ ಸಾಹಿತಿ, ಚಿಂತಕರುಗಳ ಮೇಲೆ ಸರ್ಕಾರ ಸುಮೋಟೋ ಕೇಸ್ ದಾಖಲಿಸಲಿ ಎಂದು ಆಗ್ರಹಿಸಿದರು.

 'ನನಗೂ ಸಂಘ ಪರಿವಾರದಿಂದ ಹಿಂಸೆ ನೀಡಲಾಗಿದೆ' 'ನನಗೂ ಸಂಘ ಪರಿವಾರದಿಂದ ಹಿಂಸೆ ನೀಡಲಾಗಿದೆ'

ನಗರ ನಕ್ಸಲ್ ಎನ್ನುವುದರ ಅರ್ಥ ಇವರು ಕಾಡಿನಲ್ಲಿರುವವರಿಗೆ ಸಹಕಾರ ನೀಡುತ್ತಿದ್ದಾರಾ? ಎಂಬ ಸಂಶಯ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಹೈದರಾಬಾದ್ ಸ್ಫೋಟ ಪ್ರಕರಣ ಆರೋಪಿಗಳಿಗೆ ಹೈದರಾಬಾದ್ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.

ರಾಮನವಮಿ ತಡೆ ನೀಡುವ ಗೂಂಡಾ ಸರ್ಕಾರ ರಾಜ್ಯದಲ್ಲಿದೆ : ಮುತಾಲಿಕ್ರಾಮನವಮಿ ತಡೆ ನೀಡುವ ಗೂಂಡಾ ಸರ್ಕಾರ ರಾಜ್ಯದಲ್ಲಿದೆ : ಮುತಾಲಿಕ್

ಆ ಆರೋಪಿಗಳು ಚಿಕ್ಕಮಗಳೂರಲ್ಲಿ ತರಬೇತಿ ಪಡೆದು ಸಹಕಾರ ಪಡೆದಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಕಾಫಿನಾಡು ಬಾಂಗ್ಲಾ ವಲಸಿಗರು ಸೇರಿದಂತೆ ಭಯೋತ್ಪಾದಕರ ಸೆಂಟರ್ ಆಗುವ ಭಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

English summary
Sri Ram Sene chief Pramod Muthalik Said that in Chikkamagaluru Register sumoto case on the thinkers. Thinkers stand on behalf of Ban Organization it is a great crime.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X