ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budget 2023; ಈ ಬಾರಿ ಪೊಲಿಟಿಕಲ್ ಪಾರ್ಟಿ ಬಿಟ್ರೆ, ಜನರು ಬಜೆಟ್ ಸ್ವಾಗತ ಮಾಡಿದ್ದಾರೆ: ಪ್ರಲ್ಹಾದ್ ಜೋಶಿ

|
Google Oneindia Kannada News

ಬೆಂಗಳೂರು,ಫೆಬ್ರವರಿ3: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅತಿ ಹೆಚ್ಚು ಅನುದಾನ ಲಭಿಸಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಅವರು ತಿಳಿಸಿದರು.

ಶುಕ್ರವಾರ ಬಿಜೆಪಿ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಸ್ತೆ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಹೊಸ ಮಾರ್ಗಗಳು, ಹಳಿ ದ್ವಿಪಥ, ಹಳಿ ವಿದ್ಯುದೀಕರಣ ಸೇರಿ ಮೂಲಭೂತ ಸೌಕರ್ಯಗಳಿಗಾಗಿ ಗರಿಷ್ಠ ಅನುದಾನವನ್ನು ಕೊಡಲಾಗಿದೆ ಎಂದು ತಿಳಿಸಿದರು.

Vande Bharat Express: ಏಕಕಾಲಕ್ಕೆ ಎರಡು ಹೊಸ ರೈಲು ಆರಂಭ- ಮಾರ್ಗ, ನಿಲ್ದಾಣಗಳ ಮಾಹಿತಿVande Bharat Express: ಏಕಕಾಲಕ್ಕೆ ಎರಡು ಹೊಸ ರೈಲು ಆರಂಭ- ಮಾರ್ಗ, ನಿಲ್ದಾಣಗಳ ಮಾಹಿತಿ

ರೈಲು ಹಳಿ ವಿದ್ಯುದೀಕರಣ ಕಾರ್ಯ 1960ರಿಂದ ಆರಂಭವಾಗಿತ್ತು. ಅಲ್ಲಿಂದ 2014ರವರೆಗೆ ಆದ ಕಿಮೀಗಳ ಎರಡು ಪಟ್ಟು (ಡಬಲ್) ಕಿಮೀಗಳಿಗೆ ವಿದ್ಯುದೀಕರಣವು ಈ 8 ವರ್ಷಗಳಲ್ಲಿ ಆಗಿದೆ. ಇದರಲ್ಲಿ ಕರ್ನಾಟಕವೂ ಸೇರಿದೆ ಎಂದು ವಿವರಿಸಿದರು. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಕೊಡಲಾಗಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಅಂದರೆ 10 ಲಕ್ಷ ಕೋಟಿ ರೂಪಾಯಿಯನ್ನು ಮೂಲಸೌಕರ್ಯಕ್ಕಾಗಿ ನಾವು ಖರ್ಚು ಮಾಡುತ್ತಿದ್ದೇವೆ. ಇದರಿಂದ ಉದ್ಯೋಗ ಸೃಷ್ಟಿ ಆಗಲಿದೆ. ಆರ್ಥಿಕ ಪ್ರಗತಿಯೂ ಆಗಲಿದೆ ಎಂದು ತಿಳಿಸಿದರು.

Pralhad Joshi Reaction on Union Budget 2023

ಈ ದೇಶ ಮಾತ್ರವಲ್ಲದೆ ಜಗತ್ತಿನ ಆರ್ಥಿಕ ತಜ್ಞರೂ ನಮ್ಮ ಬಜೆಟ್‍ನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಆರ್ಥಿಕ ಬೆಳವಣಿಗೆ ದರ ಶೇ 6.8ರಿಂದ 7ರಷ್ಟು ಇರಬಹುದು. ಭಾರತವು ವೇಗವಾಗಿ ಪ್ರಗತಿ ಸಾಧಿಸುವ ಕುರಿತು ತಿಳಿಸಿದ್ದಾರೆ ಎಂದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನನ್ನನ್ನು ಭೇಟಿ ಮಾಡಿದ್ದು ಸತ್ಯ. ಬೇರೆ ಯಾರನ್ನು ಭೇಟಿ ಮಾಡಿದ್ದಾರೆಂದು ಗೊತ್ತಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೆಚ್ಚು ಪಾಲಿಲ್ಲ ಎಂಬ ಕಾಂಗ್ರೆಸ್ ನಾಯಕರ ಆರೋಪ ವಿಚಾರವಾಗಿ ಮಾತನಾಡಿ, ಹೆಚ್ಚು ಅನುದಾನ ಬಂದಿಲ್ಲ ಅನ್ನೋದಕ್ಕೆ ಆಧಾರವಿಲ್ಲ. ಮೋದಿ ಅವರ ಆಡಳಿತದಲ್ಲಿ ಹೆಚ್ಚು ಅನುದಾನ ಬಂದಿದೆ. ಕಳೆದ ಎಂಟು ವರ್ಷಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ರೋಡ್,ಹೈವೇ,ರೈಲು ಹೊಸ ಮಾರ್ಗ,ರೈಲು ಡಬಲ್ಲಿಂಗ್, ಎಲೆಕ್ಟ್ರಿಫಿಕೇಶನ್ ಮಾಡಲಾಗಿದೆ. ಇಡೀ ದೇಶ,‌ ಕರ್ನಾಟಕದಲ್ಲೂ ಕೂಡ ಆಗಿದೆ. 1960ರಿಂದ ಏನು ಆಗಿದೆ ಎಂಟು ವರ್ಷದಲ್ಲಿ ಅದರ ಡಬಲ್ ಕೆಲಸ ರೈಲ್ವೇನಲ್ಲಿ ಆಗಿದೆ. ಭದ್ರ ಯೋಜನೆಗೆ 50:40 ರೇಶಿಯೋದಲ್ಲಿ ಆಗಿದೆ. ಹೆಚ್ಚು ಖರ್ಚು ಮಾಡಿ ಯೋಜನೆ ರೂಪಿಸಲಾಗಿದೆ. ಈ ಬಾರಿ ಪೊಲಿಟಿಕಲ್ ಪಾರ್ಟಿ ಬಿಟ್ರೆ ಜನರು ಬಜೆಟ್ ಸ್ವಾಗತ ಮಾಡಿದ್ದಾರೆ ಎಂದರು.

Pralhad Joshi Reaction on Union Budget 2023

ರಮೇಶ್ ಜಾರಕಿಹೊಳಿ ಭೇಟಿ ವಿಚಾರ ಕುರಿತು ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಒಬ್ಬ ಶಾಸಕರು, ಒಬ್ಬ ಮಾಜಿ ಸಚಿವರು, ಇವತ್ತು ಅವರು ದೆಹಲಿಗೆ ಬಂದಿದ್ರು, ನನ್ನನ್ನು ಭೇಟಿ ಮಾಡಿದ್ದು ನಿಜ. ಆದರೆ ನನ್ನನ್ನು ಬಿಟ್ಟು ಬೇರೆ ಯಾರನ್ನು ಭೇಟಿ ಮಾಡಿದರು ಅಂತಾ ಗೊತ್ತಿಲ್ಲ. ಅವರ ಬೇರೊಂದು ಕಾರಣಕ್ಕೆ ಬಂದು ಹಾಗೇ ನನ್ನನ್ನು ಭೇಟಿ ಮಾಡಿದ್ರು ಅಷ್ಟೇ. ಸಿಡಿ ಪ್ರಕರಣವನ್ನು ಸಿಬಿಐಗೆ ಕೊಡುವ ಬಗ್ಗೆ ನನ್ನ ಬಳಿ ಅವರು ಏನು ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದರು.

English summary
Budget 2023 Reactions : pralhad joshi about Union Budget 2023-24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X