ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಕಾಶ-ಜಗ್ಗೇಶ ನಡುವೆ ಟ್ವಿಟ್ಟರ್ ನಲ್ಲಿ 'ಅರ್ಹತೆ' ಪ್ರಶ್ನೋತ್ತರ

By Mahesh
|
Google Oneindia Kannada News

Recommended Video

ಮೋದಿ ವಿಷಯಕ್ಕೆ ಪ್ರಕಾಶ್ ರೈ ಹಾಗು ಜಗ್ಗೇಶ್ ನಡುವೆ ಟ್ವಿಟ್ಟರ್ ವಾರ್ | Oneindia Kannada

ಬೆಂಗಳೂರು, ಫೆಬ್ರವರಿ 19: ನಟ ಕಮ್ ರಾಜಕಾರಣಿ ಜಗ್ಗೇಶ್ ಹಾಗೂ ನಟ ಪ್ರಕಾಶ್ ರೈ ನಡುವೆ ಸ್ವಾರಸ್ಯಕರ ಪ್ರಶ್ನೋತ್ತರ ಸರಣಿ ನಡೆದಿದೆ. ಎಂದಿನಂತೆ ಪ್ರಕಾಶ್ ರೈ ಅವರು ತಮ್ಮ justasking ಹ್ಯಾಶ್ ಟ್ಯಾಗ್ ಸರಣಿಯಲ್ಲಿ ಪ್ರಧಾನಿ ಮೋದಿ ಅವರ ಅರ್ಹತೆ ಬಗ್ಗೆ ಪ್ರಶ್ನಿಸಿದ್ದಾರೆ.

ಮೋದಿಗೆ ರಾಜ್ಯಭಾರ ಮಾಡಲು ಅರ್ಹತೆ ಇದೆಯೇ? ಎಂದು ಪ್ರಶ್ನಿಸಿದ್ದ ರೈ ಅವರ ವಿರುದ್ಧ ಜಗ್ಗೇಶ್ ತಿರುಗಿ ಬಿದ್ದಿದ್ದು, ತಮ್ಮ ಟಿಪಿಕಲ್ ಭಾಷೆ ಪ್ರಯೋಗಿಸಿ, ಉತ್ತರಿಸಿದ್ದಾರೆ.

ತಾವು ಹಾಗೂ ಪ್ರಕಾಶ್ ರೈ ಚಿತ್ರರಂಗಕ್ಕೆ ಕಾಲಿಟ್ಟ ದಿನಗಳನ್ನು ಸ್ಮರಿಸಿದ್ದಾರೆ. ಅದರೆ, ಮೋದಿ ಅವರನ್ನು ಪ್ರಶ್ನಿಸುವ ಮೊದಲು ನಿಮ್ಮ ಅರ್ಹತೆ ಬಗ್ಗೆ ಹೇಳಿ ಎಂದು ಕೇಳಿದ್ದಾರೆ.

ಇದಕ್ಕೆ ಪ್ರಕಾಶ್ ರೈ ಅವರು ಉತ್ತರಿಸಿದ್ದು, ಜಗ್ಗೇಶ್ ಅವರೇ ನಿಮ್ಮ ಭಾಷೆ ಪ್ರಯೋಗದಲ್ಲಿ ಶುದ್ಧತೆ ಇರಲಿ ಎಂದಿದ್ದಾರೆ. ಇಬ್ಬರ ನಡುವಿನ ಚರ್ಚೆಯಿಂದ ವಿವಾದ ಉಂಟಾಗಿದೆ ಎಂದು ವರದಿ ಮಾಡಿದ ಮಾಧ್ಯಮಗಳಿಗೂ ಜಗ್ಗೇಶ್ ಟಾಂಗ್ ಕೊಟ್ಟಿದ್ದಾರೆ.

ಗಂಡಸುತನ ಅಂದಿದ್ದಕ್ಕೆ ಅಸಹ್ಯ ಅನ್ನಿಸಿತೆ ತಮಗೆ?

ಗಂಡಸುತನ ಅಂದಿದ್ದಕ್ಕೆ ಅಸಹ್ಯ ಅನ್ನಿಸಿತೆ ತಮಗೆ?

ಗಂಡಸುತನ ಅಂದಿದ್ದಕ್ಕೆ ಅಸಹ್ಯ ಅನ್ನಿಸಿತೆ ತಮಗೆ? ನನ್ನಪ್ರಕಾರ ಗಂಡಸ್ಸುತನ ಪದಬಳಕೆ ರಾಜಕೀಯದಲ್ಲಿ ಹೋರಾಟ! ನನಗೆ ಗೊತ್ತಿರಲಿಲ್ಲಾ ನಿಮ್ಮ ಪ್ರಕಾರ ಗಂಡಸುತನ ಹೆಂಡತಿಯರಿಗೆ ಬಳಸುವುದು ಎಂದು! ನನ್ನಬಧ್ಧತೆ ಕನ್ನಡನೆಲ ಕನ್ನಡಚಿತ್ರರಂಗ ಕನ್ನಡಿಗರುಮಾತ್ರ ಸಹೋದರ. ಜೇವನಪೂರ್ತಿ ತಮಿಳುಸೇವೆ ಮಾಡಿ ಇಳಿವಯಸ್ಸಿನಲ್ಲಿ ಕನ್ನಡಕ್ಕಾಗಿ ತಮ್ಮ ಸೇವೆ😎🌹-ಜಗ್ಗೇಶ

ಜಗ್ಗೇಶ್ ಕೇಳಿದ ಮೊದಲ ಪ್ರಶ್ನೆ

ಜಗ್ಗೇಶ್ ಕೇಳಿದ ಮೊದಲ ಪ್ರಶ್ನೆ

ತಮಗೆ ಅರ್ಹತೆ ಏನಿದೆ?
ರಾಜಕೀಯ ಅನುಭವ? ಇಲ್ಲಾ!
ಕಾನೂನು ವಿದ್ಯಾರ್ಥಿಯೇ? ಇಲ್ಲಾ!
ಗ್ರಾಮ, ಜಿಲ್ಲಾ, ತಾಲ್ಲೂಕು, ಪಂಚಾಯ್ತಿ ಮತಗಟ್ಟೆ, ಸಂಘಟನೆ, ಸ್ಪರ್ಧೆ, ವಿಧಾನಸೌಧ, ಲೋಕಸಭೆ ಪರಿಚಯ, ಇಲಾಖೆ ಮಾಹಿತಿ? ಅದೃಷ್ಟ ಪ್ರತಿಭೆ ಇತ್ತು ಬಿಡುವಿಲ್ಲದ ನಟನಾದೆ! ಈಗ? ಇಷ್ಟುದಿನ ತಮಿಳು ನಟನಾಗಿ ಕನ್ನಡಕ್ಕೆ ಸೊಲ್ಲಡಗಿತ್ತು! ಈಗ ಯಾಕೆ ಪೌರುಷ? ಪ್ರಚಾರ ತಾನೆ? ವ್ಯರ್ಥ ಬದುಕು? ತಮ್ಮನ್ನ ಆರಂಭದಿಂದ ನೋಡಿರುವೆ.

ಚಿತ್ರರಂಗದಲ್ಲಿ ಒಟ್ಟಿಗೆ ಕಾಲಿರಿಸಿದ ದಿನಗಳು

ಚಿತ್ರರಂಗದಲ್ಲಿ ಒಟ್ಟಿಗೆ ಕಾಲಿರಿಸಿದ ದಿನಗಳು

ತಮ್ಮನ್ನು ಆರಂಭದ ದಿನಗಳಿಂದ ನೋಡಿದ್ದೇನೆ. ನೆನಪಿದೆಯ ನಿಮ್ಮ ನಮ್ಮ ಪಯಣ ರಾಜಕಿಶೋರ್ ಜೊತೆ ಮೈಸೂರು ಜೈಲಿಂದ. ನಾನು ಮರೆತಿಲ್ಲ. ಹೆಮ್ಮೆಪಟ್ಟೆ ನಿಮ್ಮ ಬೆಳವಣಿಗೆಗೆ. ರಾತ್ರೋರಾತ್ರಿ ರಾಷ್ಟ್ರ ನಾಯಕನಾಗಲು ಮೋದಿ ತೆಗಳಲು ಆಯ್ಕೆ. ಅದ್ಭುತ ನಾಟಕ. ನೆನಪಿಡಿ ಮೋದಿ ಬಗ್ಗೆ ಮಾತಾಡಿದ್ದಕ್ಕೆ ತಮಗೆ ವೇದಿಕೆ ಸಿಗುತ್ತಿದೆ. ಅಲ್ಲಿಗೆ ನೋಡಿ ಮೋದಿ ಹವಾ! ಅಸಹ್ಯ ನಿಮ್ಮ ವಾಮಗುಣ!

ಬೇಕಿತ್ತ ಇಷ್ಟು ತಳಮಟ್ಟದ ನಡೆ?

ಬೇಕಿತ್ತ ಇಷ್ಟು ತಳಮಟ್ಟದ ನಡೆ?

ಸಂವಿಧಾನದಲ್ಲಿ ಪ್ರತಿ ಪ್ರಜೆಗೆ ಮಾತಾಡುವ ಹಕ್ಕಿದೆ. ಮಾತಾಡಿ ಆದರೆ, ಪ್ರಚಾರಕ್ಕೆ ಕೈ ನಾಯಕರ ಶಹಭಾಸ್ ಗಿರಿಗೆ ಬೇಕಿತ್ತ ಇಷ್ಟು ತಳಮಟ್ಟದ ನಡೆ? ಮೋದಿ ತೆಗಳಿ ಯಾರೋ ಏನೋ ಆದರು ಅಂತಾ ಅವರ ಸಾಲಲ್ಲಿ ನಿಂತು ಯಾಕೆ ಚಪ್ಪಾಳೆ ತಿಪ್ಪೆ ಸೇರಿಸುತ್ತೀರಿ? ನಿಲ್ಲಿ ಚುನಾವಣೆಗೆ ತಟ್ಟಿ ತೊಡೆ ಅದು ಗಂಡಸುತನ. ಯಾಕೆ ಚುನಾವಣೆ ವಸ್ತಿಲಲ್ಲಿ ಈ ಡ್ರಾಮಾ ಕಂಪನಿ?' ಎಂದು ಪ್ರಶ್ನಿಸಿದ್ದಾರೆ.

ಜಗ್ಗೇಶ್ ಅವರ ಮೂರು ಪ್ರಶ್ನೆಗೆ ಉತ್ತರ

ಜಗ್ಗೇಶ್ ಅವರ ಮೂರು ಪ್ರಶ್ನೆಗೆ ಉತ್ತರ

ನನ್ನ ಅರ್ಹತೆ.... ಕೋಮುವಾದವನ್ನು ಖಂಡಿಸುವುದರ ಬಗ್ಗೆ, ಸಂವಿಧಾನದ ಬದಲಿಸುವುದರ ಬಗ್ಗೆ ಉತ್ತರಿಸಿ, ನೀವು ಹೇಳುವ ಯಾವ ಅರ್ಹತೆಗಳೂ ಬೇಡ... ಮನುಷ್ಯರನ್ನ ಮನುಷ್ಯರನ್ನಾಗಿ ನೋಡುವ ಮಾನವೀಯ ಹೃದಯವೊಂದಿದ್ದರೆ ಸಾಕು ಎಂದಿದ್ದಾರೆ.

ಮೋದಿಜೀ ಅವರನ್ನು ಪ್ರಶ್ನಿಸುತ್ತಿರುವುದರ ಬಗ್ಗೆ ಉತ್ತರಿಸಿದ್ದಾರೆ. ಕೊನೆಯದಾಗಿ ತಾವು ಕಲಾವಿದರು ದಯವಿಟ್ಟು ಬಳಸುವ ಮಾತಿನ ಮೇಲೆ ಸ್ವಲ್ಪ ಹಿಡಿತವಿರಲಿ.

ವಿವಾದ ಎಂದು ಏಕೆ ಭಾವಿಸುತ್ತೀರಿ!

ವಿವಾದ ಎಂದು ಏಕೆ ಭಾವಿಸುತ್ತೀರಿ! ವಿಷಯ ಚರ್ಚೆಯ ವಿನಿಮಯ ಅಂದುಕೊಳ್ಳಿ..! ಅವರ ಅಭಿಪ್ರಾಯಕ್ಕೆ ನನ್ನ ಅನಿಸಿಕೆ! ನನ್ನ ಅನಿಸಿಕೆಗೆ ಅವರ ಅಭಿಪ್ರಾಯ..! ನನ್ನ ಪಕ್ಷದ ರಾಷ್ಟ್ರ ಅಂತಾರಾಷ್ಟ್ರ ಮೆಚ್ಚಿದ ಮೋದಿಯವರ ಬಗ್ಗೆ ಕೀಳಾಗಿ ಮಾತಾಡಿದಾಗ..ನನ್ನ ಕರ್ತವ್ಯ ಹಾಗು ಬಧ್ಧತೆ ಪ್ರಶ್ನೆಮಾಡಿದೆ..! ಜನಾಭಿಪ್ರಾಯ ಸಂಗ್ರಹಿಸಿ ನಿರ್ದಾರಕ್ಕೆ ಬನ್ನಿ.ಧನ್ಯವಾದ

English summary
Catch the interesting discussion via Tweets between Actor Prakash Raj and actor cum politician Jaggesh. Prakash Raj with his justasking hashtag has given answer to Jaggesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X