ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ನಲ್ಲಿ ಪ್ರಜ್ವಲ್ ರೇವಣ್ಣಗೆ ಹೊಸ ಹುದ್ದೆ, ದೇವೇಗೌಡ್ರ ಮಾಸ್ಟರ್ ಪ್ಲಾನ್

|
Google Oneindia Kannada News

Recommended Video

ದೇವೇಗೌಡ್ರ ಮಾಸ್ಟರ್ ಪ್ಲಾನ್ : ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ ಪ್ರಜ್ವಲ್ ರೇವಣ್ಣ

ಬೆಂಗಳೂರು, ನವೆಂಬರ್ 27 : 2018ರ ವಿಧಾಸಭಾ ಚುನಾವಣೆಗೆ ಸ್ಪರ್ಧಿಸಲು ಹಾತೊರೆಯುತ್ತಿದ್ದ ಎಚ್ ಡಿ ರೇವಣ್ಣ ಪುತ್ರ ಯುವ ನಾಯಕ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಜೆಡಿಎಸ್ ವರಿಷ್ಠ ಎಚ್. ಡಿ ದೇವೇಗೌಡ ಅವರು ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಸೋಮವಾರ ಆದೇಶ ಹೊರಡಿಸಿದರು.

ಪುತ್ರ ಪ್ರಜ್ವಲ್ ಚುನಾವಣೆ ಸ್ಪರ್ಧೆ ಬಗ್ಗೆ ಕಡ್ಡಿ ಮುರಿದಂತೆ ಹೇಳಿದ ರೇವಣ್ಣಪುತ್ರ ಪ್ರಜ್ವಲ್ ಚುನಾವಣೆ ಸ್ಪರ್ಧೆ ಬಗ್ಗೆ ಕಡ್ಡಿ ಮುರಿದಂತೆ ಹೇಳಿದ ರೇವಣ್ಣ

ಈ ಮೂಲಕ ಚುನಾವಣೆ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಗೌಡರ ಕುಟುಂಬದಲ್ಲಿ ಎದ್ದಿದ್ದ ಅಸಮಾಧಾನದ ಹೊಗೆಯನ್ನು ಸರಿಪಡಿಸಲು ದೇವೇಗೌಡ್ರು ಈ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ.

ಪ್ರಜ್ವಲ್ ರೇವಣ್ಣ ಬಗ್ಗೆ ನಿಖಿಲ್ ಗೌಡ ಹೇಳಿದ್ದು ಹೀಗೆಪ್ರಜ್ವಲ್ ರೇವಣ್ಣ ಬಗ್ಗೆ ನಿಖಿಲ್ ಗೌಡ ಹೇಳಿದ್ದು ಹೀಗೆ

ಪ್ರಜ್ವಲ್ ರೇವಣ್ಣ ಮುಂದಿನ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದರು. ಆದರೆ, ಇದಕ್ಕೆ ದೊಡ್ಡ ಗೌಡ್ರು ಕಲ್ಲು ಹಾಕಿದ್ದರು.

ಪ್ರಜ್ವಲ್ ಸ್ಪರ್ಧಿಸುವ ಬಗ್ಗೆ ದೇವೇಗೌಡ್ರ ಮನೆಯಿಂದ ದಿನಕ್ಕೊಂದು ಮಾತುಪ್ರಜ್ವಲ್ ಸ್ಪರ್ಧಿಸುವ ಬಗ್ಗೆ ದೇವೇಗೌಡ್ರ ಮನೆಯಿಂದ ದಿನಕ್ಕೊಂದು ಮಾತು

ಇದರಿಂದ ಅಸಮಾಧಾನಗೊಂಡಿದ್ದ ಪ್ರಜ್ವಲ್, ಜೆಡಿಎಸ್ ನಲ್ಲಿ ಸೂಟ್ ಕೇಸ್ ಕೊಟ್ಟವರಿಗೆ ಮಣೆ ಹಾಕಲಾಗುತ್ತಿದೆ ಎಂದು ಚಿಕ್ಕಪ್ಪ ಕುಮಾರಸ್ವಾಮಿ ಹಾಗೂ ತಾತ ದೇವೇಗೌಡರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಇದೀಗ ಪ್ರಜ್ವಲ್ ಗೆ ಮೊದಲ ಬಾರಿಗೆ ಪಕ್ಷದ ಪದಾಧಿಕಾರಿಯಲ್ಲಿ ಸ್ಥಾನ ನೀಡಲಾಗಿದೆ.

ಆರ್ ಆರ್ ನಗರದಿಂದ ಕಣಕ್ಕೆ ಎಂಬ ಗಾಳಿಪಟ

ಆರ್ ಆರ್ ನಗರದಿಂದ ಕಣಕ್ಕೆ ಎಂಬ ಗಾಳಿಪಟ

ಪ್ರಜ್ವಲ್ ರೇವಣ್ಣ ಅವರಿಗೆ ಹುಣಸೂರು ಕ್ಷೇತ್ರದ ಟಿಕೆಟ್ ಕೈತಪ್ಪಿದ ಬಳಿಕ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಸ್ಪರ್ಧಿಸಲು ದೇವೇಗೌಡ್ರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಗಾಳಿಪಟ ರಾಜ್ಯ ರಾಜಕಾರಣದಲ್ಲಿ ಹಾರಾಡಲು ಪ್ರಾರಂಭಿಸಿತ್ತು.

 ಪ್ರಜ್ವಲ್ ಸ್ಪರ್ಧೆಗೆ ಭವಾನಿ ರೇವಣ್ಣ ಸುಳಿವು

ಪ್ರಜ್ವಲ್ ಸ್ಪರ್ಧೆಗೆ ಭವಾನಿ ರೇವಣ್ಣ ಸುಳಿವು

ಪ್ರಜ್ವಲ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಎಂಬ ಕುತೂಹಲದ ಪ್ರಶ್ನೆಗೆ ಪ್ರಜ್ವಲ್ ಅವರ ತಾಯಿ ಭವಾನಿ ರೇವಣ್ಣ ಅವರು ಇತ್ತೀಚೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪ್ರಜ್ವಲ್ ಮುಂಬರುವ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾನೆ ಎಂದು ಹರದನಹಳ್ಳಿಯಲ್ಲಿ ಸುಳಿವು ನೀಡಿದ್ದರು.

ಪ್ರಜ್ವಲ್ ಸ್ಪರ್ಧೆಗೆ ದೇವೇಗೌಡರ ಸ್ಪಷ್ಟನೆ

ಪ್ರಜ್ವಲ್ ಸ್ಪರ್ಧೆಗೆ ದೇವೇಗೌಡರ ಸ್ಪಷ್ಟನೆ

ಭವಾನಿ ರೇವಣ್ಣ ಹೇಳಿಕೆಗೆ ಪ್ರತಿಕ್ರಯಿಸಿದ್ದ ದೇವೇಗೌಡ, ಪ್ರಜ್ವಲ್ ಹಾಗೂ ನಿಖಿಲ್ ಇಬ್ಬರೂ ರಾಜಕೀಯಕ್ಕೆ ಬರುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಇದು ಸಕಾಲವಲ್ಲ, ಪ್ರಜ್ವಲ್ ಅವರ ಸ್ಪರ್ಧೆ ಹಾಗೂ ಅಸೆಂಬ್ಲಿ ಚುನಾವಣೆಯಲ್ಲಿ ಅವರ ಪಾತ್ರದ ಬಗ್ಗೆ ಪಕ್ಷ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಮಗ್ಗಲು ಮುಳ್ಳಾಗಿರುವ ಪ್ರಜ್ವಲ್ ರೇವಣ್ಣ

ಮಗ್ಗಲು ಮುಳ್ಳಾಗಿರುವ ಪ್ರಜ್ವಲ್ ರೇವಣ್ಣ

ಹುಣಸೂರು ಕ್ಷೇತ್ರದ ಟಿಕೆಟ್ ಕೈತಪ್ಪಿದಕ್ಕೆ ಬಳಿ ಜೆಡಿಎಸ್ ನಲ್ಲಿ ಸೂಟ್ ಕೇಸ್ ನೀಡುವರಿಗೆ ಟಿಕೆಟ್ ನೀಡಲಾಗುತ್ತೆ ಎಂದು ಪರೋಕ್ಷವಾಗಿ ತಾತಾ (ದೇವೇಗೌಡ) ಮತ್ತು ಚಿಕ್ಕಪ್ಪ (ಕುಮಾರಸ್ವಾಮಿ) ವಿರುದ್ದ ಇತ್ತೀಚೆಗೆ ಪ್ರಜ್ವಲ್ ರಣ ಕಹಾಳೆ ಊದಿದ್ದರು. ಇದಾದ ಬಳಿಕ ಪ್ರಜ್ವಲ್ ಬೇಲೂರು ಕ್ಷೇತ್ರಕ್ಕೂ ಟವಲ್ ಹಾಕಿದ್ದರು. ಇದಕ್ಕೂ ದೇವೇಗೌಡ ನೋ ಚಾನ್ಸ್ ಎಂದಿದ್ದರು.

English summary
JD(S) supremo HD DeveGowda appoints former minister HD Revanna's son Prajwal Revanna as state JD(S) General Secretary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X