ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ಯೋಧರ ಜನ್ಮದಿನ ಆಚರಿಸಿ, ಸಿದ್ದುಗೆ ಜೋಶಿ ಸವಾಲ್!

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್, 14 : ಮತಾಂಧ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ಬದಲು ವೀರ ಮದಕರಿ ನಾಯಕ, ಕಿತ್ತೂರ ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ರಂತಹ ದೇಶಭಕ್ತರ ಜಯಂತಿ ಆಚರಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕರ್ನಾಟಕ ಬಂದ್ ಪ್ರಯುಕ್ತ ಶುಕ್ರವಾರ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ' ರಾಜ್ಯ ಸರ್ಕಾರಕ್ಕೆ ವೋಟ್ ಬ್ಯಾಂಕ್ ತತ್ವ ಅನುಸರಿಸುತ್ತಿದ್ದು, ಇದಕ್ಕಾಗಿ ಮತಾಂಧ ಟಿಪ್ಪುವಿನ ಜಯಂತಿ ಆಚರಿಸುತ್ತಿದೆ. ಮತಾಂಧನ ಟಿಪ್ಪುವಿನ ಜಯಂತಿ ಇನ್ನೆಂದಿಗೂ ಆಚರಿಸಲು ನಮ್ಮ ಪಕ್ಷ ಬಿಡುವುದಿಲ್ಲ. ಮಡಿಕೇರಿ ಗಲಭೆಯಲ್ಲಿ ಗಾಯಗೊಂಡ ಹಾಗೂ ಮೃತಪಟ್ಟವರಿಗೆ ನೀಡುವ ಪರಿಹಾರ ಹಣದಲ್ಲಿಯೂ ಕೂಡ ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.['ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದು']

Prahlad joshi has insisted government to celebrate the Veera Madakari birthday at Hubballi

ಗದಗದಲ್ಲಿ 'ಮತಾಂತರ ಜಾಗೃತಿ ಅಭಿಯಾನ'

ಗದಗ, ನವೆಂಬರ್, 14 : ಶ್ರೀರಾಮ ಸೇನೆಯು ಲಂಬಾಣಿ ಜನಾಂಗದವರಿಗೆ ಮತಾಂತರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮುಂಡರಗಿ ತಾಲೂಕಿನ ಸಿಂಗಟರಾಯನ ಕೆರೆ ತಾಂಡಾದಲ್ಲಿ 'ಮತಾಂತರ ಜಾಗೃತಿ ಅಭಿಯಾನ'ವನ್ನು ಭಾನುವಾರ ನವೆಂಬರ್ 15 ರಂದು ಹಮ್ಮಿಕೊಂಡಿದೆ.[ಗದಗದಲ್ಲಿ ಶ್ರೀರಾಮಸೇನಾ ಕಾರ್ಯಕರ್ತರ ಮೇಲೆ ಹಲ್ಲೆ]

ಕೆಲ ಕ್ರಿಶ್ಚಿಯನ್ ಸಂಘಟನೆಗಳು ಮುಗ್ಧ ಲಂಬಾಣಿ ಜನರಿಗೆ ವಿವಿಧ ಆಮಿಷಗಳನ್ನು ಒಡ್ಡುವ ಮೂಲಕ ಮತಾಂತರ ಆಗುವಂತೆ ಮಾಡುತ್ತಿದ್ದಾರೆ. ಈಗಾಗಲೇ ಮುಂಡರಗಿ ತಾಲೂಕಿನ ವಿವಿಧ ತಾಂಡಾಗಳಲ್ಲಿ ನೂರಾರು ಕುಟುಂಬಗಳು ಮತಾಂತರಗೊಂಡಿದ್ದು, ಇದೀಗ ತೀವ್ರ ಪರಿತಪಿಸುತ್ತಿವೆ. ಈ ದಿಶೆಯಲ್ಲಿ ಲಂಬಾಣಿಗರಲ್ಲಿ ಜನ ಜಾಗೃತಿ ಮೂಡಿಸಲು ಈ ಶಿಬಿರವನ್ನು ಆಯೋಜಿಸಿದ್ದಾಗಿ ಶ್ರೀರಾಮ ಸೇನಾ ಸಿಂಗಟರಾಯನ ಕೆರೆ ತಾಂಡಾ ಘಟಕದ ಅದ್ಯಕ್ಷ ಲಕ್ಷ್ಮಣ ಚವ್ಹಾಣ ತಿಳಿಸಿದ್ದಾರೆ.

English summary
BJP president Prahlad joshi has insisted government to celebrate the Veera Madakari birthday, on Friday, Hubballi. Sri rama sene has organize Religion awareness programme on Sunday at Gadag
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X