ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಳ : ಎಲ್ಲಿ, ಎಷ್ಟು ಏರಿಕೆ?

|
Google Oneindia Kannada News

ಬೆಂಗಳೂರು, ಮೇ 30 : ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ರಾಜ್ಯದಲ್ಲಿ ವಿದ್ಯುತ್ ದರವನ್ನು ಏರಿಕೆ ಮಾಡಿದೆ. ಇಂಧನಗಳ ಬೆಲೆ ಏರಿಕೆ ಆಗಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ ಎಂದು ಕೆಇಆರ್‌ಸಿ ದರ ಹೆಚ್ಚಳವನ್ನು ಸಮರ್ಥಿಸಿಕೊಂಡಿದೆ.

ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ವಿದ್ಯುತ್ ದರವನ್ನು ಹೆಚ್ಚಳ ಮಾಡಲಾಗಿದೆ. ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಕೆಇಆರ್‌ಸಿ ಅಧ್ಯಕ್ಷ ಶಂಭುದಯಾಳ್ ಮೀನ ಅವರು 2019-20 ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆಯನ್ನು ಪ್ರಕಟಿಸಿದರು.

ಚುನಾವಣೆ ಬಳಿಕ ಗ್ರಾಹಕರಿಗೆ ವಿದ್ಯುತ್ ದರ ಹೆಚ್ಚಳದ ಶಾಕ್ಚುನಾವಣೆ ಬಳಿಕ ಗ್ರಾಹಕರಿಗೆ ವಿದ್ಯುತ್ ದರ ಹೆಚ್ಚಳದ ಶಾಕ್

ಹೊಸ ಉಷ್ಣ ವಿದ್ಯುತ್ ಕೇಂದ್ರಗಳಿಂದ ಖರೀದಿಸುವ ನವೀಕರಿಸಬಹುದಾದ ಇಂಧನಗಳ ಬೆಲೆ ಏರಿಕೆಯಾಗಿದೆ. ನೌಕರರ ವೇತನ ಪರಿಷ್ಕರಣೆಯಾಗಿದೆ, ನಿರ್ವಹಣಾ ವೆಚ್ಚದಲ್ಲಿ ಏರಿಕೆಯಾಗಿದೆ. ಆದ್ದರಿಂದ, ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಕೆಇಆರ್‌ಸಿ ಹೇಳಿದೆ.

ಒಡಿಶಾದಲ್ಲಿ ಚಂಡಮಾರುತ, ಬೆಸ್ಕಾಂ ತಂಡದ ಕಾರ್ಯಕ್ಕೆ ಶ್ಲಾಘನೆs

ರಾಜ್ಯದ 5 ವಿದ್ಯುತ್ ಸರಬರಾಬು ಕಂಪನಿಗಳ ದರದಲ್ಲಿ ಹೆಚ್ಚಳ ಮಾಡಲಾಗಿದೆ. 2017-18ನೇ ಸಾಲಿನಲ್ಲಿ 2192.33 ಕೋಟಿ ನಷ್ಟವಾಗಿದೆ ಎಂದು ಕೆಇಆರ್‌ಸಿ ಹೇಳಿದೆ. ಗೃಹ ಬಳಕೆ, ವಾಣಿಜ್ಯ, ಕೈಗಾರಿಕೆ, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ದರ ಏರಿಕೆ ಎಷ್ಟಾಗಿದೆ? ಎಂಬ ಮಾಹಿತಿ ಇಲ್ಲಿದೆ.....

ಗೃಹ ಬಳಕೆ

ಗೃಹ ಬಳಕೆ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಗೃಹ ಬಳಕೆ ವಿದ್ಯುತ್‌ ಅನ್ನು ಪ್ರತಿ ಯೂನಿಟ್‌ಗೆ 25 ಪೈಸೆ ಹೆಚ್ಚಳ ಮಾಡಲು ಒಪ್ಪಿಗೆ ನೀಡಿದೆ.

* 30 ಯೂನಿಟ್ ತನಕ 3.75 ರೂ.
* 100 ಯೂನಿಟ್ ತನಕ 5.20 ರೂ.
* 200 ಯೂನಿಟ್ ತನಕ 6.25 ರೂ.
* 300 ಯೂನಿಟ್ ಮೇಲ್ಪಟ್ಟು 7.80 ರೂ.

ಕೈಗಾರಿಕೆಗೆ ಎಷ್ಟು ಹೆಚ್ಚಳ?

ಕೈಗಾರಿಕೆಗೆ ಎಷ್ಟು ಹೆಚ್ಚಳ?

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕೈಗಾರಿಕೆಗೆ ಬಳಸುವ ವಿದ್ಯುತ್‌ಗೆ 15 ರಿಂದ 20 ಪೈಸೆ ಹೆಚ್ಚಳ ಮಾಡಲು ಅನುಮತಿ ನೀಡಿದೆ.

* ಪ್ರತಿ 500 ಯೂನಿಟ್‌ಗೆ 5.65 ರೂ., 1000 ಯೂನಿಟ್ ಬಳಿಕ 6.95 ರೂ.

* ಬೆಸ್ಕಾಂ ಹೊರತುಪಡಿಸಿ ಇತರ ಪ್ರದೇಶಗಳಲ್ಲಿ 500 ಯೂನಿಟ್‌ಗೆ 5.35 ರೂ., 1000 ಯೂನಿಟ್‌ ತನಕ 6.30 ರೂ., 1000 ರೂ. ಮೇಲ್ಪಟ್ಟು 6.60 ರೂ.

ವಾಣಿಜ್ಯ ಬಳಕೆಗೆ ಎಷ್ಟು?

ವಾಣಿಜ್ಯ ಬಳಕೆಗೆ ಎಷ್ಟು?

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ನಗರ ಪ್ರದೇಶದಲ್ಲಿ ವಾಣಿಜ್ಯ ಬಳಕೆ ವಿದ್ಯುತ್‌ಗೆ 25 ಪೈಸೆ ದರ ಹೆಚ್ಚಳ ಮಾಡಲು ಒಪ್ಪಿಗೆ ಕೊಟ್ಟಿದೆ. 50 ಯೂನಿಟ್‌ಗೆ 8 ರೂ. 50ಕ್ಕಿಂತ ಹೆಚ್ಚು ಯೂನಿಟ್‌ಗೆ 9 ರೂ. ದರ ಹೆಚ್ಚಳ

ಗ್ರಾಮೀಣ ಪ್ರದೇಶದಲ್ಲಿ 50 ಯೂನಿಟ್ ತನಕ 7.50 ರೂ. ಮೇಲ್ಪಟ್ಟರೆ 8.50 ರೂ.

ಗ್ರಾಮೀಣ ಪ್ರದೇಶದಲ್ಲಿ ಎಷ್ಟು?

ಗ್ರಾಮೀಣ ಪ್ರದೇಶದಲ್ಲಿ ಎಷ್ಟು?

* 30 ಯೂನಿಟ್‌ ತನಕ 3.65 ರೂ.
* 100 ಯೂನಿಟ್‌ ತನಕ 4.90 ರೂ.
* 200 ಯೂನಿಟ್ ವರೆಗೆ 6.45 ರೂ.
* 300 ರೂ. ಮೇಲ್ಪಟ್ಟು 7.30 ರೂ.

English summary
Karnataka Electricity Regulatory Commission (KERC) hiked power traffic in Karnataka. KERC approved to increase of 33 paise per unit traffic. Here are the list of traffic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X