ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷಕ್ಕೆ ವಿದ್ಯುತ್ ದರ ಏರಿಕೆಯ ಕೊಡುಗೆ?

|
Google Oneindia Kannada News

ಬೆಂಗಳೂರು, ಡಿಸೆಂಬರ್. 10 : ಕರ್ನಾಟಕದ ಜನರಿಗೆ ಹೊಸ ವರ್ಷದಲ್ಲಿ ವಿದ್ಯುತ್ ದರ ಏರಿಕೆಯ ಉಡುಗೊರೆ ಸಿಗಲಿದೆ. ವಿದ್ಯುತ್ ದರ ಏರಿಕೆಗೆ ಅನುಮತಿ ನೀಡುವಂತೆ ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ವಿದ್ಯುತ್ ಸರಬರಾಜು ಕಂಪನಿಗಳು ಮನವಿ ಮಾಡಿವೆ.

 ವಿದ್ಯುತ್ ಖರೀದಿ : ಕೇಂದ್ರಕ್ಕೆ ಸವಾಲು ಹಾಕಿದ ಡಿಕೆಶಿ ವಿದ್ಯುತ್ ಖರೀದಿ : ಕೇಂದ್ರಕ್ಕೆ ಸವಾಲು ಹಾಕಿದ ಡಿಕೆಶಿ

ಪ್ರತಿ ಯೂನಿಟ್‌ಗೆ 1 ರೂ. ದರ ಏರಿಕೆ ಮಾಡಲು ಅನುಮತಿ ನೀಡಬೇಕು ಎಂದು ಕೋರಿ ಐದು ವಿದ್ಯುತ್ ಸರಬರಾಜು ಕಂಪನಿಗಳು ಮನವಿ ಮಾಡಿವೆ. ಕಲಬುರಗಿ ವಿದ್ಯುತ್ ಸರಬರಾಬು ಕಂಪನಿ (ಜೆಸ್ಕಾಂ) 1.46 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

 ವಿದ್ಯುತ್ ಖರೀದಿ ಹಗರಣದ ವರದಿ ಮಂಡನೆ, ಶಿಫಾರಸುಗಳು ವಿದ್ಯುತ್ ಖರೀದಿ ಹಗರಣದ ವರದಿ ಮಂಡನೆ, ಶಿಫಾರಸುಗಳು

Power tariff may hike soon in Karnataka

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದ ಬಳಿಕ ದರ ಏರಿಕೆಗೆ ಅನುಮತಿ ನೀಡಲಿದೆ. ಆದರೆ, ವಿಧಾನಸಭೆ ಚುನಾವಣೆ ಎದುರಾಗುತ್ತಿರುವುದರಿಂದ ದರ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಲಿದೆಯೇ? ಎಂದು ಕಾದು ನೋಡಬೇಕಿದೆ.

 ಲೋಡ್ ಶೆಡ್ಡಿಂಗ್ ಅನಿವಾರ್ಯ : ಡಿ.ಕೆ.ಶಿವಕುಮಾರ್ ಲೋಡ್ ಶೆಡ್ಡಿಂಗ್ ಅನಿವಾರ್ಯ : ಡಿ.ಕೆ.ಶಿವಕುಮಾರ್

ಹಿಂದೆ ವಿದ್ಯುತ್ ದರ ಹೆಚ್ಚಳ ಮಾಡಿದಾಗ ನಗರದ ಬಳಕೆದಾರರಿಗೆ 30 ಯೂನಿಟ್‌ಗೆ 30 ಪೈಸೆ, 31ರಿಂದ 100 ಯೂನಿಟ್‌ಗೆ 40 ಪೈಸೆ, 100 ಯೂನಿಟ್ ಮೇಲ್ಪಟ್ಟ ಬಳಕೆಗೆ ಪ್ರತಿ ಹಂತದಲ್ಲಿ 50 ಪೈಸೆ ಏರಿಕೆ ಮಾಡಲಾಗಿತ್ತು.

ಈಗ ಬೆಸ್ಕಾಂ (ಬೆಂಗಳೂರು ವಿಭಾಗ), ಚೆಸ್ಕಾಂ (ಮೈಸೂರು ವಿಭಾಗ), ಮೆಸ್ಕಾಂ (ಮಂಗಳೂರು ವಿಭಾಗ), ಹೆಸ್ಕಾಂ (ಹುಬ್ಬಳ್ಳಿ ವಿಭಾಗ) ಮತ್ತು ಜೆಸ್ಕಾಂ (ಕಲಬುರಗಿ ವಿಭಾಗ) ಪ್ರತಿ ಯೂನಿಟ್‌ಗೆ 1 ರೂ. ದರ ಏರಿಕೆ ಮಾಡಲಲು ಅನುಮತಿ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿವೆ.

English summary
Karnataka's 5 Electricity Supply Company's sent a proposal to Karnataka Electricity Regulatory Commission (KERC) and request for allow them to hike power hike 1 Rs per unit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X