ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬೇಸಿಗೆಯಲ್ಲಿ ಲೋಡ್‌ ಶೆಡ್ಡಿಂಗ್ ಇಲ್ಲ: ಸರ್ಕಾರದ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಬೇಸಿಗೆ ಬಂದರೆ ಸಾಕು ಕರ್ನಾಟಕದಲ್ಲಿ ವಿದ್ಯುತ್ ವ್ಯತ್ಯಯ. ಲೋಡ್ ಶೆಡ್ಡಿಂಗ್ ಸರ್ವೇ ಸಾಮಾನ್ಯವಾಗಿತ್ತು. ಜನರು ಯಾವಾಗ ವಿದ್ಯುತ್ ಕಡಿತವಾಗುತ್ತದೋ, ಯಾವಾಗ ಬರುತ್ತದೋ ಅಂತ ಕಾಯುತ್ತ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಬೇಸಿಗೆಯಲ್ಲಿ ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದ್ದರು ಕರ್ನಾಟಕ ವಿದ್ಯುತ್ ನಿಗಮದಿಂದ ಎಲ್ಲಿಯೂ ವಿದ್ಯುತ್ ವ್ಯತ್ಯಯವಾಗದಂತೆ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಸಲಾಗುತ್ತಿದೆ.

ಇನ್ನು ಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆಯನ್ನು ಮಾಡುವ ಮೂಲಗಳಲ್ಲಿ ವ್ಯತ್ಯಯವಾಗುತ್ತದೆ. ಕರ್ನಾಟಕ ಪ್ರಮುಖವಾಗಿ ನಂಬಿರೋದು ಜಲಶಕ್ತಿಯ ಮೂಲವನ್ನು. ಅಂದರೆ ಜಲಾಶಯಗಳಿಂದ ವಿದ್ಯತ್ ಅನ್ನು ಹೆಚ್ಚು ಉತ್ಪಾದನೆ ಮಾಡಲಾಗುತ್ತದೆ. ಇನ್ನು ಬೇಸಿಗೆ ಸಂದರ್ಭದಲ್ಲಿ ಜಲಾಶಯದಿಂದ ವಿದ್ಯುತ್ ಉತ್ಪಾದನೆ ಕಷ್ಟಕರವಾಗಲಿದೆ. ಇದರಿಂದಾಗಿ ಇತರೆ ವಿದ್ಯುತ್ ಉತ್ಪಾದನಾ ಮೂಲಗಳ ಕಡೆೆಗೆ ಹೆಚ್ಚು ಗಮನವನ್ನು ಹರಿಸಬೇಕಾಗುತ್ತದೆ. ಹಾಗಾಗಿ ಉಷ್ಣ ವಿದ್ಯುತ್ ಸ್ಥಾವರಗಳು ಮತ್ತು ಸೋಲಾರ್ ಯೋಜನೆಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದೆ.

ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಳವಾಗಿರುವ ಕಾರಣ ರಾಜ್ಯದಲ್ಲಿ ಭಾರೀ ಬೇಡಿಕೆ.

*12 ಸಾವಿರ ಮೆಗಾ ವ್ಯಾಟ್ ನಿಂದ 14 ಸಾವಿರ ಮೆ.ವಾ ಗಡಿ ದಾಟಿದೆ.

Power supply will not be hit Karnataka in Summer due to increase in power generation

*ಪರೀಕ್ಷಾ ಸಮಯವಾದ್ದ ರಿಂದ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕಟ್ಟು ನಿಟ್ಟಿನ ಸೂಚನೆಗಳನ್ನು ಸರ್ಕಾರ ನೀಡಿದೆ.

*ಮೇ ಅಂತ್ಯದ ತನಕ ಇದೇ ಸ್ಥಿತಿ ಮುಂದುವರೆಯಲಿದೆ ಎಂದು ಕರ್ನಾಟಕ ವಿದ್ಯುತ್ ನಿಗಮದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಹನ್ನೆರಡು ಸಾವಿರ ಮೆಗಾ ವ್ಯಾಟ್ ನ ಬೇಡಿಕೆ ಇರುತ್ತಿತ್ತು. ಇತ್ತೀಚೆಗೆ ಆ ಬೇಡಿಕೆ ಹದಿನಾಲ್ಕು ಮೆಗಾ ವ್ಯಾಟ್ ಗೆ ಹೆಚ್ಚಾಗಿದೆ. ಇನ್ನು ಪರೀಕ್ಷಾ ಸಮಯವಾಗಿದ್ದರಿಂದ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮವನ್ನು ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿ ಸೂಚನೆಯನ್ನು ಸರ್ಕಾರ ನೀಡಿದೆ. ಮೇ ಅಂತ್ಯದ ತನಕ ಯಾವುದೇ ವಿದ್ಯುತ್ ವ್ಯತ್ಯಯ ಮಾಡದಿರಲು ನಿರ್ಧರಿಸಲಾಗಿದೆ. ಮೇ ಅಂತ್ಯದ ವೇಳೆಗೆ ಮಳೆ ಬಂದರೆ ಜಲಾಶಯಗಳಿಂದ ಮತ್ತಷ್ಟು ವಿದ್ಯುತ್ ಉತ್ಪಾದನೆಯಾಗಲಿದ್ದು ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ತೀರ ಕ್ಷೀಣಿಸಿದೆ. ಇದರಿಂದಾಗಿ ಕೈಗಾರಿಕಾ ಪ್ರದೇಶ ಮಾತ್ರವಲ್ಲದೇ ವಸತಿ ಪ್ರದೇಶಗಳಲ್ಲೂ ವಿದ್ಯುತ್ ಕಡಿತಗೊಳಿಸದಿರಲು ಸೂಚಿಸಲಾಗಿದೆ.

Power supply will not be hit Karnataka in Summer due to increase in power generation

ಎಲ್ಲೆಲ್ಲಿ ವಿದ್ಯುತ್ ಉತ್ಪಾದನೆ..?

* ಶರಾವತಿ ಯೋಜನೆಯಲ್ಲಿ 1035 ಮೆ.ವಾ ವಿದ್ಯುತ್ ಉತ್ಪಾದನೆ ಸಾಮರ್ಥ್ಯವಿದ್ದು, ಸದ್ಯ 750 ಮೆ.ವಾ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

* ಆರ್‌ಟಿಪಿಎಸ್‌ನಲ್ಲಿ 1720 ಮೆ.ವಾ ಸಾಮರ್ಥ್ಯವಿದ್ದು, 790 ಮೆ.ವಾ, ಉತ್ಪಾದನೆ.

* ಬಿಟಿಪಿಎಸ್‌ನಲ್ಲಿ 1700 ಮೆ.ವಾ ಸಾಮರ್ಥ್ಯವಿದ್ದು, 872 ಮೆ.ವಾ ಉತ್ಪಾದನೆ ಮಾಡಲಾಗುತ್ತಿದೆ.

ಸದ್ಯ ಶರಾವತಿ ಯೋಜನೆಯಲ್ಲಿ 1035 ಮೆ.ವಾ ವಿದ್ಯುತ್ ಉತ್ಪಾದನೆ ಸಾಮರ್ಥ್ಯವಿದ್ದು, ಸದ್ಯ 750 ಮೆ.ವಾ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಆರ್‌ಟಿಪಿಎಸ್‌ನಲ್ಲಿ 1720 ಮೆ.ವಾ ಸಾಮರ್ಥ್ಯವಿದ್ದು, 790 ಮೆ.ವಾ, ಉತ್ಪಾದನೆಯನ್ನು ಮಾಡಲಾಗುತ್ತಿದೆ. ಬಿಟಿಪಿಎಸ್‌ನಲ್ಲಿ 1700 ಮೆ.ವಾ ಸಾಮರ್ಥ್ಯವಿದ್ದು, 872 ಮೆ.ವಾ ಉತ್ಪಾದನೆ ಮಾಡಲಾಗುತ್ತಿದೆ. ಈ ಉತ್ಪಾದನೆಯೊಂದೇ ಕರ್ನಾಟಕಕ್ಕೆ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಿಲ್ಲ.

ಕರ್ನಾಟಕದಲ್ಲಿನ ಸೋಲಾರ್ ಯೋಜನೆಗಳಿಂದಲೂ ವಿದ್ಯುತ್ ಲಭ್ಯ.

ಸೋಲಾರ್ ಯೋಜನೆಗಳಿಂದ ಹೆಚ್ಚಿನ ವಿದ್ಯುತ್ ಲಭ್ಯವಾಗುತ್ತಿರುವ ಕಾರಣ ಎಲ್ಲಿಯೂ ವಿದ್ಯುತ್ ಸಮಸ್ಯೆ ಸದ್ಯಕ್ಕೆ ಕಾಣಿಸಿಕೊಂಡಿಲ್ಲ. ಇರುವ ವಿದ್ಯುತ್‌ ಮೂಲಗಳಿಂದಲೇ ರಾಜ್ಯದಲ್ಲಿ ಬೇಡಿಕೆ ನಿಭಾಯಿಸಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ವಿದ್ಯುತ್ ನಿಗಮದ ಉನ್ನತ ಮೂಲಗಳ ಒನ್ ಇಂಡಿಯಾಕ್ಕೆ ಮಾಹಿತಿಯನ್ನು ನೀಡಿವೆ.

English summary
No Power Cut in Karnataka: Power supply will not be hit in Karnataka in Summer due to increase in power generation. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X