ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಇಡೀ ರಾಜ್ಯದಲ್ಲಿ ಆ.10ರಂದು ವಿದ್ಯುತ್ ವ್ಯತ್ಯಯ

|
Google Oneindia Kannada News

ಬೆಂಗಳೂರು, ಆಗಸ್ಟ್ 03; ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ಮಾಡುವ ಇಂಜಿನಿಯರ್‌ಗಳು, ಉದ್ಯೋಗಿಗಳು ಆಗಸ್ಟ್ 10ರಂದು ದೇಶಾದ್ಯಂತ ಮುಷ್ಕರ ನಡೆಸಲಿದ್ದಾರೆ. ಕರ್ನಾಟಕದಲ್ಲಿಯೂ ಉದ್ಯೋಗಿಗಳು ಇದಕ್ಕೆ ಬೆಂಬಲ ನೀಡಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರ ವಿದ್ಯುತ್ (ತಿದ್ದುಪಡಿ) ಮಸೂದೆ-2021 ಅನ್ನು ಸಂಸತ್‌ನಲ್ಲಿ ಮಂಡಿಸಲು ಹೊರಡಿಸಿದೆ. ಇದನ್ನು ವಿರೋಧಿಸಿ ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮುಷ್ಕರಕ್ಕೆ ಕರೆ ನೀಡಿದ್ದಾರೆ. ವಿದ್ಯುತ್ ಉದ್ಯೋಗಿಗಳು ಮತ್ತು ಇಂಜಿನಿಯರ್‌ಗಳ ರಾಷ್ಟ್ರೀಯ ಸಹಕಾರ ಸಮಿತಿ (ಎನ್‌ಸಿಸಿಒಇಇಇ) ಮುಷ್ಕರಕ್ಕೆ ಕರೆ ನೀಡಿದೆ.

ವಿದ್ಯುತ್ ತಗುಲಿ ಆನೆ ಸಾವು, ಕರ್ನಾಟಕದಲ್ಲಿ ಆನೆ ಸಾವಿನ ಅಂಕಿ-ಅಂಶಗಳು ವಿದ್ಯುತ್ ತಗುಲಿ ಆನೆ ಸಾವು, ಕರ್ನಾಟಕದಲ್ಲಿ ಆನೆ ಸಾವಿನ ಅಂಕಿ-ಅಂಶಗಳು

ನವದೆಹಲಿಯ ಜಂತರ್ ಮಂತರ್‌ನಲ್ಲಿ ಆಗಸ್ಟ್‌ 3 ರಿಂದ 6ರ ತನಕ ಸರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 3ರಂದು ಪೂರ್ವ ಮತ್ತು ಆಗಸ್ಟ್ 4ರಂದು ಈಶಾನ್ಯ ವಿಭಾಗದ ಉದ್ಯೋಗಿಗಳು, ಆಗಸ್ಟ್ 5ರಂದು ಪೂರ್ವ ಮತ್ತು 6ರಂದು ದಕ್ಷಿಣ ವಲಯದ ಉದ್ಯೋಗಿಗಳು ಈ ಸತ್ಯಾಗ್ರಹಲ್ಲಿ ಪಾಲ್ಗೊಳ್ಳಲಿದ್ದಾರೆ.

ಚಿತ್ರದುರ್ಗ; ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಸಂಬಳವೇ ನೀಡಿಲ್ಲ ಚಿತ್ರದುರ್ಗ; ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಸಂಬಳವೇ ನೀಡಿಲ್ಲ

 Power Sector Employees Strike On August 10

ಪ್ರಸ್ತುತ ಮುಂಗಾರು ಅಧಿವೇಶನ ನಡೆಯುತ್ತಿದೆ. ಕೇಂದ್ರ ಸರ್ಕಾರ ಆಗಸ್ಟ್ 10ರಂದು ಸಂಸತ್‌ನಲ್ಲಿ ವಿದ್ಯುತ್ (ತಿದ್ದುಪಡಿ) ಮಸೂದೆ-2021 ಮಂಡನೆ ಮಾಡಲು ಸಿದ್ಧತೆ ನಡೆಸಿದೆ. ಆದ್ದರಿಂದ ಅಂದು ದೇಶಾದ್ಯಂತ ಉದ್ಯೋಗಿಗಳು ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಹೈದರಾಬಾದ್‌ನ ಐಟಿ ಕಾರಿಡಾರ್‌ಗೆ ನಿರಂತರ ವಿದ್ಯುತ್ ಸಂಪರ್ಕಹೈದರಾಬಾದ್‌ನ ಐಟಿ ಕಾರಿಡಾರ್‌ಗೆ ನಿರಂತರ ವಿದ್ಯುತ್ ಸಂಪರ್ಕ

"ಸರ್ಕಾರ ಸದ್ಯ ಇರುವ ವಿದ್ಯುತ್ ಪೂರೈಕೆಯ ಹಂಚಿಕಾ ವ್ಯವಸ್ಥೆಯನ್ನು ವಿಂಗಡಿಸಲು ಏಕಪಕ್ಷೀಯವಾಗಿ ನಿರ್ಧರಿಸಿದರೆ ಎನ್‌ಸಿಸಿಒಇಇಇಯ 25 ಲಕ್ಷ ಸದಸ್ಯರು ಒಂದು ದಿನದ ಬಂದ್ ಆಚರಣೆ ಮಾಡುವುದಾಗಿ" ಎನ್‌ಸಿಸಿಒಇಇಇ ಸಹ ಸಂಚಾಲಕ ಶೈಲೇಂದ್ರ ದುಬೆ ಎಚ್ಚರಿಕೆ ನೀಡಿದ್ದಾರೆ.

ಬಂದ್ ನಡೆಸುವ ಕುರಿತು ಸರ್ಕಾರಕ್ಕೆ ಈಗಾಗಲೇ ನೋಟಿಸ್ ಕಳಿಸಲಾಗಿದೆ. ಸರ್ಕಾರ ತನ್ನ ನಿರ್ಧಾರ ಬದಲಿಸದಿದ್ದರೆ ಮುಂದಿನ ಹೋರಾಟದ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಮಸೂದೆ ಜನವಿರೋಧಿ ಮತ್ತು ಕಾರ್ಪೊರೇಟ್ ಕಂಪನಿಗಳ ಪರವಾಗಿದೆ ಎಂದು ಉದ್ಯೋಗಿಗಳು ಆರೋಪವನ್ನು ಮಾಡುತ್ತಿದ್ದಾರೆ.

ಉದ್ಯೋಗಿಗಳು ಆಗಸ್ಟ್ 10ರಂದು ಕೆಲಸಕ್ಕೆ ಹಾಜರಾಗದೇ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಕರ್ನಾಟಕದಲ್ಲಿಯೂ ವಿದ್ಯುತ್ ಇಲಾಖೆ ನೌಕರರು ಮುಷ್ಕರಕ್ಕೆ ಬೆಂಬಲ ನೀಡಿದ್ದು, ರಾಜ್ಯಾದ್ಯಂತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಮಸೂದೆಗೆ ವಿರೋಧ; ವಿದ್ಯುತ್ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರ ವಿದ್ಯುತ್ (ತಿದ್ದುಪಡಿ) ಮಸೂದೆ-2021 ಜಾರಿಗೆ ತರಲು ಮುಂದಾಗಿದೆ. ನೂತನ ಮಸೂದೆ ಅನ್ವಯ ಮೊಬೈಲ್ ಕಂಪನಿಗಳ ಮಾದರಿಯಲ್ಲಿ ಗ್ರಾಹಕರು ವಿದ್ಯುತ್ ಒದಗಿಸುವ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ವಿದ್ಯುತ್ ಕ್ಷೇತ್ರದಲ್ಲಿ ಸ್ಪರ್ಧೆ, ಮೇಲ್ಮನವಿ ನ್ಯಾಯಮಂಡಳಿಯನ್ನು ಬಲಪಡಿಸುವುದು, ನವೀಕರಿಸಬಹುದಾದದ ವಿದ್ಯುತ್ ಖರೀದಿ ಒಪ್ಪಂದ ಮುಂತಾದ ಅಂಶಗಳನ್ನು ಈ ನೂತನ ಮಸೂದೆ ಒಳಗೊಂಡಿದೆ.

ಈ ಮಸೂದೆ ಟಿಪ್ಪಣಿಯನ್ನು ಕೇಂದ್ರ ಸರ್ಕಾರ ಈಗಾಲಗೇ ಸಂಬಂಧಿಸಿದ ಸಚಿವಾಲಯಗಳಿಗೆ ಕಳಿಸಿದೆ. ಕಾನೂನು ಸಚಿವಾಲಯ ಕೆಲವು ವಿವರಣೆಗಳನ್ನು ಪಡೆದುಕೊಂಡಿದೆ. ಆಗಸ್ಟ್ 10ರಂದು ಸಂಸತ್‌ನಲ್ಲಿ ಈ ಮೂಸೂದೆ ಮಂಡನೆಯಾಗುವ ನಿರೀಕ್ಷೆ ಇದೆ.

ಎನ್‌ಡಿಎ ಸರ್ಕಾರ ಲೋಕಸಭೆಯಲ್ಲಿ ಸ್ಪಷ್ಟಬಹುಮತ ಹೊಂದಿದೆ. ಆದ್ದರಿಂದ ಮಸೂದೆ ಮಂಡನೆ ಮಾಡಿದರೆ ಅನುಮೋದನೆ ಸಿಗಲಿದೆ. ರಾಜ್ಯಸಭೆಯಲ್ಲಿ ಮಸೂದೆಗೆ ಒಪ್ಪಿಗೆ ಪಡೆಯಲು ಕೆಲವು ಪಕ್ಷಗಳ ಬೆಂಬಲವನ್ನು ಪಡೆಯಬೇಕಾಗುತ್ತದೆ.

ಪ್ರಸ್ತುತ ಸರ್ಕಾರಿ ಮತ್ತು ಕೆಲವು ಖಾಸಗಿ ಕಂಪನಿಗಳು ವಿದ್ಯುತ್ ಪೂರೈಕೆ ಮೇಲೆ ಹಿಡಿತವನ್ನು ಹೊಂದಿದೆ. ಆದ್ದರಿಂದ ಜನರಿಗೆ ಆಯ್ಕೆಗಳು ಇಲ್ಲವಾಗಿದೆ. ಮಸೂದೆಗೆ ಒಪ್ಪಿಗೆ ಸಿಕ್ಕಿದರೆ ಖಾಸಗಿ ಕಂಪನಿಗಳು ಬರಲಿದ್ದು, ಕಂಪನಿಗಳ ಆಯ್ಕೆ ಜನರಿಗೆ ಸಿಗಲಿದೆ. ಆಗ ವಿದ್ಯುತ್ ಕ್ಷೇತ್ರದಲ್ಲಿ ಸ್ಪರ್ಧೆ, ದರ ಸಮರ ಏರ್ಪಡಲಿದೆ.

Recommended Video

ಮೈದಾನದಲ್ಲಿ ವಾಂತಿ ಮಾಡಿ ಮುಜುಗರಕ್ಕೆ ಒಳಗಾದ Andrew tye | Oneindia Kannada

ಗ್ರಾಹಕರ ಹಿತಕ್ಕೆ ಮಸೂದೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿದ್ಯುತ್ ಪೂರೈಕೆ ಮಾಡುವ ಕಂಪನಿಗಳು ಮೊದಲೇ ಮಾಹಿತಿ ನೀಡದೇ ವಿದ್ಯುತ್ ಕಡಿತ ಮಾಡಿದರೆ ಗ್ರಾಹಕರಿಗೆ ಪರಿಹಾರವನ್ನು ಸಹ ನೀಡಬೇಕಾಗುತ್ತದೆ.

English summary
Power sector employees called for one day strike/ work boycott on August 10 across country. Employees opposing Electricity (Amendment) Bill 2021. Bill may tabled in on August 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X