ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರದ ನಿರ್ಧಾರದ ವಿರುದ್ದ ಹೈಕೋರ್ಟಿನಲ್ಲಿ ತೊಡೆತಟ್ಟಿದ ರೇವಣ್ಣ

|
Google Oneindia Kannada News

Recommended Video

ಕೆ ಎಂ ಎಫ್ ಚುನಾವಣೆ ಹಿನ್ನೆಲೆ ಬಿ ಎಸ್ ವೈ ನಿರ್ಧಾರದ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಎಚ್ ದ್ ರೇವಣ್ಣ |

ಬೆಂಗಳೂರು, ಜುಲೈ 31: ಸೋಲುತ್ತೇವೆ ಎನ್ನುವ ಭೀತಿಯಿಂದ ಕೆಎಂಎಫ್ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದ ಎಚ್ ಡಿ ರೇವಣ್ಣ, ಸರಕಾರದ ವಿರುದ್ದ ತೊಡೆತಟ್ಟಿದ್ದಾರೆ.

ಈ ಸಂಬಂಧ ಹೈಕೋರ್ಟ್ ಮೆಟ್ಟಲೇರಿರುವ ರೇವಣ್ಣ, ಸರಕಾರದ ಆದೇಶವನ್ನು ಈ ಕೂಡಲೇ ರದ್ದು ಪಡಿಸಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹೊರಡಿಸಿದ್ದ ಆದೇಶವನ್ನು ವಾಪಸ್ ಪಡೆಯಲು ಸೂಚಿಸಬೇಕೆಂದು ರೇವಣ್ಣ, ಕೋರ್ಟ್ ಮೊರೆ ಹೋಗಿದ್ದಾರೆ.

ಕೆಎಂಎಫ್ ಅಧ್ಯಕ್ಷ ಚುನಾವಣೆ ಮುಂದೂಡಿಕೆ: ಎಚ್‌.ಡಿ.ರೇವಣ್ಣಗೆ ಶಾಕ್ಕೆಎಂಎಫ್ ಅಧ್ಯಕ್ಷ ಚುನಾವಣೆ ಮುಂದೂಡಿಕೆ: ಎಚ್‌.ಡಿ.ರೇವಣ್ಣಗೆ ಶಾಕ್

ಯಾವ ಹಂತದಲ್ಲಿ ಚುನಾವಣಾ ಪ್ರಕ್ರಿಯೆ ನಿಂತಿತ್ತೋ, ಅಲ್ಲಿಂದಲೇ ಮತ್ತೆ ಪ್ರಕ್ರಿಯೆ ಮುಂದುವರಿಸಲು, ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ರೇವಣ್ಣ, ಕೋರ್ಟಿಗೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

Postponement Of KMF President Election, HD Revanna Moved To Karnataka High Court

ಇನ್ನೋರ್ವ ಮೈತ್ರಿ ಪಕ್ಷದ ಶಾಸಕ ಭೀಮಾ ನಾಯಕ್ ಜೊತೆ ತೀವ್ರ ಪೈಪೋಟಿಯಿದ್ದರೂ, ರೇವಣ್ಣ ಅಧ್ಯಕ್ಷ ಹುದ್ದೆಗೇರುವುದು ಬಹುತೇಕ ಖಚಿತವಾಗಿತ್ತು ಎನ್ನುವ ಸಮಯದಲ್ಲಿ, ಸರಕಾರ ಚುನಾವಣೆಯನ್ನು ಮುಂಡೂಡಿತ್ತು.

ಮುಖ್ಯಮಂತ್ರಿ ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದರು. ಆದರೆ, ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಎರಡು ಗಂಟೆಯಲ್ಲಿಯೇ ಚುನಾವಣೆ ಮುಂದೂಡಿದ್ದಾರೆ ಎಂದು ರೇವಣ್ಣ ಆರೋಪಿಸಿದ್ದರು.

ನಾವು ಗೆಲ್ಲುತ್ತೇವೆಂದು ಚುನಾವಣೆ ಮುಂದೂಡಿದ್ದಾರೆ: ಬಿಜೆಪಿ ಮೇಲೆ ರೇವಣ್ಣ ಕಿಡಿ ನಾವು ಗೆಲ್ಲುತ್ತೇವೆಂದು ಚುನಾವಣೆ ಮುಂದೂಡಿದ್ದಾರೆ: ಬಿಜೆಪಿ ಮೇಲೆ ರೇವಣ್ಣ ಕಿಡಿ

ಕೆಎಂಎಫ್‌ನ ಹಾಲಿ ಅಧ್ಯಕ್ಷ ನಾಗರಾಜ್ ಸಿಎಂ ಯಡಿಯೂರಪ್ಪ ಬಳಿ ಚುನಾವಣೆ ಮುಂದೂಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಸರಕಾರ ಸಮರ್ಥನೆ ನೀಡಿತ್ತು.

English summary
Postponement Of KMF (Karnataka Milk Federation) President Election, HD Revanna Moved To Karnataka High Court, challenging government decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X