ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷತ್ ಮತ ಎಣಿಕೆ ಮುಂದೂಡಿಕೆ; ಹೈಕೋರ್ಟ್‌ಗೆ ಅರ್ಜಿ

|
Google Oneindia Kannada News

ಬೆಂಗಳೂರು, ನವೆಂಬರ್ 04: ವಿಧಾನ ಪರಿಷತ್ನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆ ಮತ ಎಣಿಕೆ ನವೆಂಬರ್ 2ರಂದು ನಡೆಯಬೇಕಿತ್ತು. ಆದರೆ ಚುನಾವಣಾ ಆಯೋಗ ನವೆಂಬರ್ 10ಕ್ಕೆ ಮತ ಎಣಿಕೆ ಮುಂದೂಡಿದೆ.

ನ್ಯೂಸ್ ಇಂಡಿಯಾ ವೋಟರ್ಸ್ ಪೋರಂ ಮತ ಎಣಿಕೆ ಪ್ರಕ್ರಿಯೆ ಮುಂದೂಡಿರುವುದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ.

ವಿಧಾನ ಪರಿಷತ್ ಚುನಾವಣೆ; ಮತ ಎಣಿಕೆ ದಿನಾಂಕ ಮುಂದೂಡಿಕೆವಿಧಾನ ಪರಿಷತ್ ಚುನಾವಣೆ; ಮತ ಎಣಿಕೆ ದಿನಾಂಕ ಮುಂದೂಡಿಕೆ

ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಅರ್ಜಿಯಲ್ಲಿ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗವನ್ನು ಪ್ರತಿವಾದಿಯಾಗಿ ಮಾಡಲಾಗಿದೆ.

ಪರಿಷತ್ ಚುನಾವಣೆ; ಮತದಾನ ಮಾಡಿದ ಕೋವಿಡ್ ಸೋಂಕಿತರು ಪರಿಷತ್ ಚುನಾವಣೆ; ಮತದಾನ ಮಾಡಿದ ಕೋವಿಡ್ ಸೋಂಕಿತರು

Postpone Of Counting Legislative Council Election Petition To High Court

ಪರಿಷತ್ ಚುನಾವಣೆ ಮತಪೆಟ್ಟಿಗೆ ಇಟ್ಟಿರುವ ಸ್ಥಳಗಳಲ್ಲಿ ಭದ್ರತೆ ಕೊರತೆ ಇದೆ. ಆದ್ದರಿಂದ ತಕ್ಷಣವೇ ಮತ ಎಣಿಕೆ ನಡೆಸಿ ಫಲಿತಾಂಶ ಘೋಷಣೆ ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಉಪ ಚುನಾವಣೆ; ಆರ್. ಆರ್. ನಗರಕ್ಕಿಂತ ಶಿರಾದಲ್ಲೇ ಹೆಚ್ಚು ಮತದಾನ ಉಪ ಚುನಾವಣೆ; ಆರ್. ಆರ್. ನಗರಕ್ಕಿಂತ ಶಿರಾದಲ್ಲೇ ಹೆಚ್ಚು ಮತದಾನ

ಅಕ್ಟೋಬರ್ 28ರಂದು ಆಗ್ನೇಯ ಮತ್ತು ಪಶ್ಚಿಮ ಪದವೀಧರ ಕ್ಷೇತ್ರ, ಈಶಾನ್ಯ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಮತದಾನ ನಡೆದಿತ್ತು. ಮೊದಲು ನವೆಂಬರ್ 2ರಂದು ಮತ ಎಣಿಕೆ ಮಾಡುವುದಾಗಿ ದಿನಾಂಕ ನಿಗದಿಯಾಗಿತ್ತು.

Recommended Video

The Real Reason Behind Arnab Gosami Arrest : ಇದೆ ಕಾರಣಕ್ಕೆ ಅರೆಸ್ಟ್ ಆಗಿರೋದು | Oneindia Kannada

ನವೆಂಬರ್ 3ರಂದು ಆರ್. ಆರ್. ನಗರ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಇದ್ದ ಹಿನ್ನಲೆಯಲ್ಲಿ ಮತ ಎಣಿಕೆ ದಿನಾಂಕ ಮುಂದೂಡುವಂತೆ ಕಾಂಗ್ರೆಸ್ ಪಕ್ಷ ಮನವಿ ಸಲ್ಲಿಸಿತ್ತು. ಮನವಿ ಪರಿಗಣಿಸಿ ನವೆಂಬರ್ 10ಕ್ಕೆ ಮತ ಎಣಿಕೆ ದಿನಾಂಕ ನಿಗದಿ ಮಾಡಲಾಗಿತ್ತು.

English summary
Petition to high court of Karnataka after election commission postponed counting of 4 seat legislative council election from November 2nd to 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X