ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಚೆ ಇಲಾಖೆಯ ವಿಶೇಷ ಲಕೋಟೆ ಕೊಂಡುಕೊಳ್ಳಿ

|
Google Oneindia Kannada News

ಬೆಂಗಳೂರು, ಜ.14 : ನವೆಂಬರ್ 1ರಿಂದ ಜಾರಿಗೆ ಬರುವಂತೆ ಕರ್ನಾಟಕದ ಹನ್ನೆರಡು ನಗರಗಳ ಹೆಸರುಗಳನ್ನು ಮರುನಾಮಕರಣ ಮಾಡಲಾಗಿದೆ. ಮರುನಾಮಕರಣದ ಸ್ಮರಣೆಗಾಗಿ ಅಂಚೆ ಇಲಾಖೆ ವಿಶೇಷ ಲಕೋಟೆಗಳನ್ನು ಹೊರತರಲಿದೆ. ಈ ಲಕೋಟೆಗಳು ಮಾರಾಟಕ್ಕೆ ಮಾತ್ರ ಲಭ್ಯವಿರಲಿವೆ.

ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಅಂಚೆ ಮಹಾ ನಿರ್ದೇಶಕಿ (ವ್ಯಾಪಾರ ಅಭಿವೃದ್ಧಿ ವಿಭಾಗ) ವೀಣಾ ಆರ್.ಶ್ರೀನಿವಾಸ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಜ.16ರಿಂದ ನಡೆಯಲಿರುವ 4ದಿನಗಳ ಅಂಚೆ ಚೀಟಿಗಳ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಈ ವಿಶೇಷ ಲಕೋಟೆಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ.

post

ಲಕೋಟೆ ವಿಶೇಷವೇನು : 12 ನಗರಗಳ ವಿಶೇಷ ಲಕೋಟೆಗಳನ್ನು ಅಂಚೆ ಇಲಾಖೆ ಹೊರತರಲಿದೆ. ಪ್ರತಿ ನಗರದ ಲಕೋಟೆಯ ಮೇಲೆ ಆಯಾ ನಗರ/ಪಟ್ಟಣಗಳ ಐತಿಹಾಸಿಕ ಸ್ಮಾರಕಗಳ ಚಿತ್ರವನ್ನು ಮುದ್ರಿಸಲಾಗಿರುತ್ತದೆ. ವಿಶೇಷ ಲಕೋಟೆಗಳು ಮಾರಾಟಕ್ಕೆ ಮಾತ್ರ ಲಭ್ಯವಿರುತ್ತದೆ. [12 ನಗರಗಳಿಗೆ ಹೊಸ ಹೆಸರು]

ಮೈಸೂರು ನಗರದ ಲಕೋಟೆ ಮೇಲೆ ಅರಮನೆ ಚಿತ್ರವಿದ್ದರೆ, ವಿಜಯಪುರದ ಲಕೋಟೆ ಮೇಲೆ ಗೋಲಗುಮ್ಮಟದ ಚಿತ್ರವಿರಲಿದೆ. ಇದೇ ರೀತಿ ಬೆಂಗಳೂರು, ತುಮಕೂರು, ಬಳ್ಳಾರಿ, ಶಿವಮೊಗ್ಗ ಹೀಗೆ 12 ನಗರಗಳಿಗೆ ವಿಶೇಷ ಲಕೋಟೆ ಮುದ್ರಿಸಲಾಗುತ್ತದೆ. [ಇನ್ನು ವಿಜಯಾಪುರವಲ್ಲ, ವಿಜಯಪುರ ಎಂದು ಹೇಳಿರಿ]

ಒಮ್ಮೆ ಮಾತ್ರ ಬಿಡುಗಡೆ : ಅಂಚೆ ಇಲಾಖೆ ಈ ವಿಶೇಷ ಲಕೋಟೆಗಳನ್ನು ಒಮ್ಮೆ ಮಾತ್ರ ಬಿಡುಗಡೆ ಮಾಡಲಿದ್ದು, ಸಾರ್ವಜನಿಕರು ಇವುಗಳನ್ನು ಖರೀದಿಸಿ ತಮ್ಮ ಸಂಗ್ರಹದಲ್ಲಿ ಇಟ್ಟುಕೊಳ್ಳಬಹುದು. ಜ.16ರಂದು ಈ ಲಕೋಟೆ ಬಿಡುಗಡೆಯಾಗಲಿದೆ.

Karnataka

ಅಂದಹಾಗೆ ನ.1ರಿಂದ ಜಾರಿಗೆ ಬರುವಂತೆ ಬೆಂಗಳೂರು, ಮಂಗಳೂರು, ಬಳ್ಳಾರಿ, ವಿಜಯಪುರ, ಬೆಳಗಾವಿ, ಚಿಕ್ಕಮಗಳೂರು, ಕಲಬುರಗಿ, ಮೈಸೂರು, ಸೇರಿದಂತೆ ರಾಜ್ಯದ 12 ನಗರಗಳ ಹೆಸರನ್ನು ಶುದ್ಧ ಕನ್ನಡದಲ್ಲಿ ಉಚ್ಛರಿಸುವ ಹಾಗೆಯೇ ಬದಲಾವಣೆ ಮಾಡಲಾಗಿತ್ತು.

English summary
Postal department will launch special envelopes in Karnataka on January 16 for remembering the change of names of 12 cities in State. Karnataka's 12 major towns and cities revert to their old Kannada names from November 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X