• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋವಿಡ್‌-19 ಮುಕ್ತರಾದವರಿಗೆ ಉಚಿತ ವಿಶೇಷ ಆನ್‌ಲೈನ್‌ ಕಾರ್ಯಕ್ರಮ

|
Google Oneindia Kannada News

ಬೆಂಗಳೂರು ಅಕ್ಟೋಬರ್ 30: ಕೋವಿಡ್‌-19 ಸೋಂಕಿನಿಂದ ಗುಣಮುಖರಾದವರ ಆರೋಗ್ಯವನ್ನು ಇನ್ನಷ್ಟು ಸುಧಾರಿಸಲು ಎಲೆಟ್ಸ್ ಗ್ರೂಪ್ ಮತ್ತು ಮೈಲಾನ್ ಫಾರ್ಮಾಸ್ಯುಟಿಕಲ್ಸ್ ಪ್ರೈವೇಟ್ ಲಿಮಿಟೆಡ್ "ಪ್ಯಾನೇಸಿಯಾ" ಎಂಬ 6 ತಿಂಗಳ ವಿಶೇಷ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಕೋವಿಡ್‌ - 19 ನಿಂದ ಬಳಲಿದ ನಂತರ ಆ ವ್ಯಕ್ತಿಯ ಆರೋಗ್ಯ ಇನ್ನಷ್ಟು ಕ್ಷೀಣಿಸುತ್ತಿರುವುದು ಅಧ್ಯಯನದಿಂದ ದೃಢ ಪಟ್ಟಿದೆ. ಸೋಂಕಿನ ನಂತರವೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಯೋಗ ಅತ್ಯಂತ ಅವಶ್ಯಕ. ಹೀಗಾಗಿ ಈ ಸಂಸ್ಥೆ ಪ್ಯಾನೇಸಿಯಾ ಎಂಬ ಆರು ತಿಂಗಳ ಆನ್‌ಲೈನ್‌ ಕಾರ್ಯಕ್ರಮ ಆರಂಭಿಸಿದೆ..

ಕೊವಿಡ್19: ಜುಲೈ ತಿಂಗಳಲ್ಲಿ ರೆಮ್‌ಡೆಸಿವಿರ್ ಮಾರಾಟ, ಬೆಲೆ 4800 ರೂ!ಕೊವಿಡ್19: ಜುಲೈ ತಿಂಗಳಲ್ಲಿ ರೆಮ್‌ಡೆಸಿವಿರ್ ಮಾರಾಟ, ಬೆಲೆ 4800 ರೂ!

ಈ ಕಾರ್ಯಕ್ರಮದಲ್ಲಿ ಪೌಷ್ಟಿಕ ತಜ್ಞರು, ಮನೋವೈದ್ಯರು ಮತ್ತು ಯೋಗ ಬೋಧಕರಂತಹ ತಜ್ಞರಿಂದ ಸೆಷನ್ ನಡೆಸಲಾಗುವುದು. ಪಂಜಾಬ್, ಹರಿಯಾಣ ಮತ್ತು ಕರ್ನಾಟಕದ ಜನರಿಗೆ ಉಚಿತವಾಗಿದ್ದು, panacea.eletsonline.com ಈ ವೆಬ್‌ಸೈಟ್‌ ಮೂಲಕ ಆಸಕ್ತರು ಲಾಗಿನ್‌ ಆಗಿ ಪ್ರಯೋಜನ ಪಡೆದುಕೊಳ್ಳಬಹುದು. ಈ ಕಾರ್ಯಕ್ರಮ ಆರು ತಿಂಗಳ ಕಾಲ ಇರಲಿದೆ.

ಮೈಲಾನ್ ಫಾರ್ಮಾಸ್ಯುಟಿಕಲ್ಸ್ ಪ್ರೈವೇಟ್ ಲಿಮಿಟೆಡ್‌ನ ಸಹಾಯಕ ಉಪಾಧ್ಯಕ್ಷ ನರೇಶ್ ಹಸೀಜಾ ಮಾತನಾಡಿ, " ನಮ್ಮ ಸಂಸ್ಥೆ ಈ ಸಾಮಾಜಿಕ ಉಪಕ್ರಮದ ಒಂದು ಭಾಗವಾಗಿರುವುದಕ್ಕೆ ಸಂತೋಷವಾಗಿದೆ, ಯೋಗ, ಪೋಷಣೆ ಮತ್ತು ಮಾನಸಿಕ ಯೋಗಕ್ಷೇಮ ಪ್ರತಿಯೊಬ್ಬರಿಗೂ ಬೇಕಾಗಿದೆ. ಕೋವಿಡ್ 19 ಸೋಂಕಿನ ಬಳಿಕವೂ ಮಾನವ ದೇಹದ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದು ಬಂದಿದೆ'' ಎಂದರು

ಉತ್ತರ ಪ್ರದೇಶ ರಾಜ್ಯ ಆಯುಷ್ ಸೊಸೈಟಿಯ ವಿಶೇಷ ಕಾರ್ಯದರ್ಶಿ ಡಾ. ರಾಜ್ ಕಮಲ್ ಯಾದವ್ ಮಾತನಾಡಿ, "ಯೋಗವು ಭಾರತದಿಂದ ಬಂದ ಒಂದು ಪ್ರಾಚೀನ ವ್ಯಾಯಾಮವಾಗಿದೆ. ಈ ಸಾಮೂಹಿಕ ಅಭಿಯಾನವು ಯೋಗ ಮತ್ತು ಸಮಗ್ರ ಪ್ರಯೋಜನಗಳನ್ನು ಜನರಿಗೆ ತಿಳಿಸುವ ಅತ್ಯುತ್ತಮ ಉಪಕ್ರಮವಾಗಿದೆ'' ಎಂದರು

ಬೆಂಗಳೂರಿನ ಅಪೊಲೊ ಆಸ್ಪತ್ರೆಗಳ ಪಲ್ಮನಾಲಜಿ, ಇಂಟರ್ವೆನ್ಷನಲ್ ಪಲ್ಮನಾಲಜಿ ಮತ್ತು ಕ್ರಿಟಿಕಲ್ ಕೇರ್ ನ ಹಿರಿಯ ಸಲಹೆಗಾರ ಡಾ. ರವೀಂದ್ರ ಮೆಹ್ತಾ ಮಾತನಾಡಿ, "ಈ ಕೋವಿಡ್ -19 ನ್ಯುಮೋನಿಯಾದ ಹೊಸ ಅಲೆಗಳ ಸಾಧ್ಯತೆ ಮತ್ತು ಸೀಕ್ವೆಲೇಯನ್ನು ಮೇಲ್ವಿಚಾರಣೆ ಮಾಡುವ ಅಗತ್ಯತೆ ಇದೆ. ಅದರ ರೋಗನಿರ್ಣಯ ಮತ್ತು ಚಿಕಿತ್ಸಕ ಸಾಧನಗಳೊಂದಿಗೆ, ನಿರ್ದಿಷ್ಟವಾಗಿ ಬ್ರಾಂಕೋಸ್ಕೋಪ್‌ಗಳು, ಶ್ವಾಸಕೋಶದ ಕಾರ್ಯ ಮತ್ತು ಎದೆಗೂಡಿನ ಅಲ್ಟ್ರಾಸೌಂಡ್ ಅನ್ನು ಆಧುನಿಕ ಔಷಧದಲ್ಲಿ ಪ್ರಮುಖವೆಂದು ಪರಿಗಣಿಸಬೇಕು.

   ಭಾರತದಿಂದ ಕೊರೊನಾ‌ ತವರಿಗೆ ಶುರುವಾಯ್ತು ವಿಮಾನಯಾನ | Oneindia Kannada

   ಈ ಕಾರ್ಯಕ್ರಮವು, ಪೌಷ್ಟಿಕತಜ್ಞರು, ಮನೋವೈದ್ಯರು ಮತ್ತು ಯೋಗ ಬೋಧಕರು ವರ್ಚುವಲ್ ಪ್ಲಾಟ್‌ಫಾರ್ಮ್‌ನಲ್ಲಿ ಕೋವಿಡ್ 19 ನಿಂದ ಬಳಲುತ್ತಿರುವ ಮತ್ತು ಕೋವಿಡ್ -19 ನಿಂದ ಚೇತರಿಸಿಕೊಂಡಿರುವ ಜನರಿಗೆ ಕಲಿಸಲು ಮತ್ತು ಸಮಾಲೋಚಿಸಲು ಅತ್ಯಂತ ಸಹಕಾರಿಯಾಗಿದೆ,
   ಪ್ರತಿಯೊಂದು ಕಾರ್ಯಕ್ರಮ 1 ರಿಂದ 1 ಗಂಟೆ 30 ನಿಮಿಷ ಇರಲಿದೆ. ಈ ಸೆಷನ್‌ಗಳನ್ನು ವರ್ಚುವಲ್ ಪ್ಲಾಟ್‌ಫಾರ್ಮ್‌ನಲ್ಲಿ ಆಯೋಜಿಸಲಾಗುವುದು ಮತ್ತು ಪಾಲ್ಗೊಳ್ಳುವವರು ಮೊದಲೇ ನೋಂದಾಯಿಸಿಕೊಳ್ಳಬೇಕು.

   English summary
   Mylan pharmaceuticals Pvt ltd and Elite group launched 6 months Panacea online event for post Covid 19 persons and its free for Karnataka, Haryana and Punjab.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X