ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ನಂತರ ಕೊನೆಗೂ ಸರ್ಕಾರಿ ನೌಕರರಿಗೆ ಸಂಬಳ ಸಿಗಲಿದೆ!

By Mahesh
|
Google Oneindia Kannada News

Recommended Video

ಸರ್ಕಾರೀ ನೌಕರರಿಗೆ ಜೂನ್ ತಿಂಗಳ ಸಂಬಳ ಸಿಗಲಿದೆ ಎಂದು ಘೋಷಿಸಿದ ಎಚ್ ಡಿ ಕುಮಾರಸ್ವಾಮಿ | Oneindia Kannada

ಬೆಂಗಳೂರು, ಜುಲೈ 10 : ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ, ವಿತ್ತಸಚಿವರಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಭಾಷಣದಲ್ಲಿ, ಸರ್ಕಾರಿ ನೌಕರರ ನಿರೀಕ್ಷೆಯ ತುಟ್ಟಿಭತ್ಯೆ ಹೆಚ್ಚಳ, ಸಂಬಳ ಏರಿಕೆ, ಆರನೇ ವೇತನ ಆಯೋಗದ ಶಿಫಾರಸ್ಸಿಗೆ ಅಧಿಕೃತ ಮುದ್ರೆ ಒತ್ತಿದರು.

ಆದರೆ, ಬಜೆಟ್ ಮಂಡನೆಯಾದ ಬಳಿಕವೂ ಸರ್ಕಾರಿ ನೌಕರರಿಗೆ ತಿಂಗಳ ಸಂಬಳ ಇನ್ನೂ ಕೈ ಸೇರಿಲ್ಲ. ಇದಕ್ಕೆ ತಾಂತ್ರಿಕ ಸಮಸ್ಯೆಯ ಕಾರಣವಾಗಿದೆ. ಸದ್ಯಕ್ಕೆ ಶೇ 60ರಷ್ಟು ಮಂದಿಗೆ ಮಾತ್ರ ಜೂನ್ ತಿಂಗಳ ಸಂಬಳ ಸಿಗುವ ಭರವಸೆ ಸಿಕ್ಕಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ

ಆರನೇ ವೇತನ ಆಯೋಗದ ಶಿಫಾರಸಿನ ಪ್ರಕಾರ, ರಾಜ್ಯ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಶೇ. 30 ಹೆಚ್ಚಳವಾಗಲಿದೆ. ಆದರೆ, ತಿಂಗಳ ಸಂಬಳ ಪೂರ್ಣ ಪ್ರಮಾಣವಾಗಿ ಸಿಗುತ್ತಿಲ್ಲ.

Post Budget 2018: 40 Pc of Government employees to get salary of June

ರಾಜ್ಯದ ಶೇ 40ರಷ್ಟು ಸರ್ಕಾರಿ ನೌಕರರಿಗೆ ಇನ್ನೂ ಜೂನ್ ತಿಂಗಳ ವೇತನ ಪಾವತಿ ಆಗಿಲ್ಲ. ಸೋಮವಾರದಂದು ಎಲ್ಲಾ ನೌಕರರ ಬ್ಯಾಂಕ್ ಖಾತೆಗೆ ಜಮಾ ಆಗುವುದು ಎಂಬ ಆರ್ಥಿಕ ಇಲಾಖೆಯ ಭರವಸೆ ಹುಸಿಯಾಗಿದೆ. ಸಚಿವಾಲಯದ ಸಿಬ್ಬಂದಿಗಳಿಗೂ ಸಂಬಳವಾಗಿಲ್ಲ ಇದಕ್ಕೆ ಎಚ್ ಆರ್ ಎಂಎಸ್ ಸಮಸ್ಯೆಯೇ ಕಾರಣ ಎನ್ನಲಾಗಿದೆ.

English summary
Karnataka Budget 2018 : Government employees expected salary before perks from HD Kumaraswamy. But, due to technical glitch only 60% of employees will get June month salary said HRMS department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X