ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆ: ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು

|
Google Oneindia Kannada News

ಈಗಿನ ಲೋಕಸಭೆಯ ಅವಧಿ ಮುಂದಿನ ವರ್ಷ ಮೇ ತಿಂಗಳಿಗೆ ಮುಗಿಯಲಿದೆ. ಅಂದರೆ ಸಾರ್ವತ್ರಿಕ ಚುನಾವಣೆ ನಡೆಯಲು ಇನ್ನೂ ಎಂಟೊಂಬತ್ತು ತಿಂಗಳು ಇದೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ಸಿನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಾಮಾಜಿಕ ತಾಣದಲ್ಲಿ ಎಗ್ಗಿಲ್ಲದೇ ಹರಿದಾಡುತ್ತಿದೆ.

ಸೋಮವಾರ (ಆ 13) ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಂದು ದಿನದ ಕರ್ನಾಟಕ ಪ್ರವಾಸದಲ್ಲಿರುತ್ತಾರೆ, ಬೀದರ್ ನಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಭಾಗವಹಿಸಲಿದ್ದಾರೆ. ಆ ಮೂಲಕ, ಚುನಾವಣೆಗೆ ಅನಧಿಕೃತ ಚಾಲನೆ ನೀಡಲಿದ್ದಾರೆ.

ಲೋಕಸಭೆ ಚುನಾವಣೆ : ಕರ್ನಾಟಕ ಕಾಂಗ್ರೆಸ್‌ ಕಾರ್ಯತಂತ್ರ ಬದಲು!ಲೋಕಸಭೆ ಚುನಾವಣೆ : ಕರ್ನಾಟಕ ಕಾಂಗ್ರೆಸ್‌ ಕಾರ್ಯತಂತ್ರ ಬದಲು!

ಈಗ ಹರಿದಾಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಅವಲೋಕಿಸಿದರೆ, ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದವರ ಒಂದೋ ಕ್ಷೇತ್ರದ ಬದಲಾವಣೆಯಾಗಲಿದೆ, ಇಲ್ಲವೇ ಟಿಕೆಟ್ ವಂಚಿತರಾಗಲಿದ್ದಾರೆ.

ಈ ಪಟ್ಟಿಯಲ್ಲಿ ಎಲ್ಲಾ 28 ಕ್ಷೇತ್ರಗಳ ಹೆಸರು ಇದ್ದು, ಜೆಡಿಎಸ್ ಜೊತೆ ಸ್ಥಾನ ಹೊಂದಾಣಿಕೆಯ ವಿಚಾರದ ಬಗ್ಗೆ ಸ್ಪಷ್ಟನೆಯಿಲ್ಲ. ಜೆಡಿಎಸ್ 8 ರಿಂದ 10 ಸೀಟಿಗೆ ಚೌಕಾಸಿ ನಡೆಸುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದವು.

ಲೋಕಸಭೆ ಚುನಾವಣೆ ಟಿಕೆಟ್ ವಿತರಿಸಲು ಬಿಜೆಪಿ ಆಂತರಿಕ ಸಮೀಕ್ಷೆ ಲೋಕಸಭೆ ಚುನಾವಣೆ ಟಿಕೆಟ್ ವಿತರಿಸಲು ಬಿಜೆಪಿ ಆಂತರಿಕ ಸಮೀಕ್ಷೆ

ಕೆಲವೊಂದು ಕಾಂಗ್ರೆಸ್ ಮುಖಂಡರು ಈಗಾಗಲೇ ತಾವು ಸ್ಪರ್ಧಿಸಲು ಬಯಸುತ್ತಿರುವ ಕ್ಷೇತ್ರದಲ್ಲಿ ಒಂದು ರೌಂಡ್ ಸಮೀಕ್ಷೆ ನಡೆಸಿದ್ದಾಗಿದೆ. ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ರಮ್ಯಾ ಅವರ ಹೆಸರೂ ಇದೆ. ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ, ಮುಂದಿದೆ..

ವಿಜಯಪುರ, ಕೊಪ್ಪಳ

ವಿಜಯಪುರ, ಕೊಪ್ಪಳ

ಚಿಕ್ಕೋಡಿ: ಪ್ರಕಾಶ್ ಹುಕ್ಕೇರಿ
ಬಳ್ಳಾರಿ: ನೆಟ್ಟಕಲ್ಲಪ್ಪ, ರಾಮಪ್ರಸಾದ್
ವಿಜಯಪುರ: ಶಿವರಾಜ ತಂಗಡಗಿ
ಕೊಪ್ಪಳ: ರಾಘವೇಂದ್ರ ಹಿತ್ನಾಳ್, ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ
(ಚಿತ್ರದಲ್ಲಿ : ಪ್ರಕಾಶ ಹುಕ್ಕೇರಿ)

ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ: ಎಚ್ ಡಿ ದೇವೇಗೌಡಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ: ಎಚ್ ಡಿ ದೇವೇಗೌಡ

ಕೋಲಾರ, ದಕ್ಷಿಣಕನ್ನಡ

ಕೋಲಾರ, ದಕ್ಷಿಣಕನ್ನಡ

ತುಮಕೂರು: ಮುದ್ದ ಹನುಮೇಗೌಡ
ಚಿಕ್ಕಬಳ್ಳಾಪುರ: ಎಂ ಆರ್ ಸೀತಾರಾಂ, ವೀರಪ್ಪ ಮೊಯಿಲಿ
ಕೋಲಾರ: ಕೆ ಎಚ್ ಮುನಿಯಪ್ಪ
ದಕ್ಷಿಣಕನ್ನಡ: ರಮಾನಾಥ್ ರೈ
(ಚಿತ್ರದಲ್ಲಿ: ಕೆ ಎಚ್ ಮುನಿಯಪ್ಪ)

ಉಡುಪಿ - ಚಿಕ್ಕಮಗಳೂರು

ಉಡುಪಿ - ಚಿಕ್ಕಮಗಳೂರು

ಉಡುಪಿ - ಚಿಕ್ಕಮಗಳೂರು : ವಿನಯಕುಮಾರ ಸೊರಕೆ, ವೀರಪ್ಪ ಮೊಯಿಲಿ
ಮೈಸೂರು - ಕೊಡಗು: ವಿಜಯಶಂಕರ, ಅಂಬರೀಶ್, ಸಿದ್ದರಾಮಯ್ಯ
ಚಾಮರಾಜ ನಗರ: ಧ್ರುವನಾರಾಯಣ
ಹಾವೇರಿ: ಡಿ ಆರ್ ಪಾಟೀಲ್
(ಚಿತ್ರದಲ್ಲಿ ವೀರಪ್ಪ ಮೊಯಿಲಿ)

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ರಮ್ಯಾ ಹೆಸರೂ ಇದೆ

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ರಮ್ಯಾ ಹೆಸರೂ ಇದೆ

ಬೆಂಗಳೂರು ಉತ್ತರ: ಕೃಷ್ಣ ಭೈರೇಗೌಡ, ರಮ್ಯಾ
ಬೆಂಗಳೂರು ದಕ್ಷಿಣ: ಪ್ರಿಯಕೃಷ್ಣ, ಯು ಬಿ ವೆಂಕಟೇಶ
ಬೆಂಗಳೂರು ಕೇಂದ್ರ: ರೋಷನ್ ಬೇಗ್, ಎಚ್ ಟಿ ಸಾಂಗ್ಲಿಯಾನ
ಬೆಂಗಳೂರು ಗ್ರಾಮಾಂತರ: ಡಿ ಕೆ ಸುರೇಶ್
(ಚಿತ್ರದಲ್ಲಿ: ರಮ್ಯಾ)

ದಾವಣಗೆರೆ, ಹುಬ್ಬಳ್ಳಿ - ಧಾರವಾಡ

ದಾವಣಗೆರೆ, ಹುಬ್ಬಳ್ಳಿ - ಧಾರವಾಡ

ಚಿತ್ರದುರ್ಗ: ಬಿ ಎನ್ ಚಂದ್ರಪ್ಪ
ದಾವಣಗೆರೆ: ಎಸ್ ಎಸ್ ಮಲ್ಲಿಕಾರ್ಜುನ
ಹುಬ್ಬಳ್ಳಿ - ಧಾರವಾಡ: ಸಂತೋಶ್ ಲಾಡ್, ವಿನಯ ಕುಲಕರ್ಣಿ
ಬೆಳಗಾವಿ: ಸತೀಶ ಜಾರಕಿಹೊಳಿ
(ಚಿತ್ರದಲ್ಲಿ: ಸಂತೋಶ್ ಲಾಡ್)

ಶಿವಮೊಗ್ಗ, ಉತ್ತರ ಕನ್ನಡ

ಶಿವಮೊಗ್ಗ, ಉತ್ತರ ಕನ್ನಡ

ಬಾಗಲಕೋಟೆ: ಎಸ್ ಆರ್ ಪಾಟೀಲ್, ಅಜಯ್ ಕುಮಾರ್ ಸರನಾಯಕ್
ಶಿವಮೊಗ್ಗ: ಕಿಮ್ಮನೆ ರತ್ನಾಕರ, ಕಾಗೋಡು ತಿಮ್ಮಪ್ಪ, ಮಂಜುನಾಥ ಭಂಡಾರಿ
ಉತ್ತರ ಕನ್ನಡ: ಬಿಕೆ ಹರಿಪ್ರಸಾದ್, ನಿವೇದಿತ್ ಆಳ್ವ
ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ
(ಚಿತ್ರದಲ್ಲಿ: ನಿವೇದಿತ್ ಆಳ್ವ)

ಧರಂ ಸಿಂಗ್ ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್

ಧರಂ ಸಿಂಗ್ ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್

ಬೀದರ್: ಧರಂ ಸಿಂಗ್ ಕುಟುಂಬದ ಸದಸ್ಯರೊಬ್ಬರಿಗೆ
ಮಂಡ್ಯ: ಅಂಬರೀಶ್, ಚೆಲುವರಾಯಸ್ವಾಮಿ
ಹಾಸನ: ಎ ಮಂಜು
ರಾಯಚೂರು: ಬಿ ವಿ ನಾಯಕ
(ಚಿತ್ರದಲ್ಲಿ : ಚೆಲುವರಾಯಸ್ವಾಮಿ)

English summary
Possible Congress candidate list for the upcoming general election 2019, spreading in social media. List contains new and existing face and some of the present MPs seeking for new constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X