ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ದಿನ ಬೆಂ-ಬೆಳಗಾವಿ, ಬೆಂ-ಮೈಸೂರು ರೈಲಿಗೆ ಪ್ರಯಾಣಿಕರ ಕೊರತೆ

|
Google Oneindia Kannada News

ಬೆಂಗಳೂರು, ಮೇ 22 : ಲಾಕ್ ಡೌನ್ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಶುಕ್ರವಾರ ಕರ್ನಾಟಕದಲ್ಲಿ ಅಂತರ ಜಿಲ್ಲಾ ರೈಲು ಸಂಚಾರ ಆರಂಭವಾಗಿದೆ. ರಾಜ್ಯದಲ್ಲಿ ಸಂಚಾರ ಆರಂಭಿಸಿರುವ ಎರಡೂ ರೈಲುಗಳಲ್ಲೂ ಮೊದಲ ದಿನ ಪ್ರಯಾಣಿಕರ ಕೊರತೆ ಇತ್ತು.

Recommended Video

ದೂರದ ಕತಾರ್‌ನಿಂದ ಭಾರತಕ್ಕೆ ಹಿಂದಿರುಗುತ್ತಿರುವ ಕನ್ನಡಿಗರು | Oneindia Kannada

ಬೆಂಗಳೂರು-ಬೆಳಗಾವಿ, ಬೆಂಗಳೂರು-ಮೈಸೂರು ರೈಲುಗಳು ಶುಕ್ರವಾರ ಸಂಚಾರ ಆರಂಭಿಸಿವೆ. ಬೆಂಗಳೂರು-ಬೆಳಗಾವಿ ರೈಲು ವಾರದಲ್ಲಿ ಮೂರು ದಿನ, ಬೆಂಗಳೂರು-ಮೈಸೂರು ರೈಲು ವಾರದಲ್ಲಿ 6 ದಿನ ಸಂಚಾರ ನಡೆಸಲಿವೆ. ಭಾನುವಾರ ಎರಡೂ ರೈಲು ಇರುವುದಿಲ್ಲ.

ಕರ್ನಾಟಕ; ಶುಕ್ರವಾರದಿಂದ ಅಂತರ ಜಿಲ್ಲಾ ರೈಲು, ವೇಳಾಪಟ್ಟಿ ಕರ್ನಾಟಕ; ಶುಕ್ರವಾರದಿಂದ ಅಂತರ ಜಿಲ್ಲಾ ರೈಲು, ವೇಳಾಪಟ್ಟಿ

ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಬೆಳಗಾವಿಗೆ ಬೆಳಗ್ಗೆ 8 ಗಂಟೆಗೆ ರೈಲು ಹೊರಟಿತು. 1484 ಸೀಟುಗಳ ರೈಲಿನಲ್ಲಿ ಬೆಂಗಳೂರಿನಿಂದ ಕೇವಲ 176 ಪ್ರಯಾಣಿಕರು ಇದ್ದರು. ತುಮಕೂರಿನಲ್ಲಿ 98, ದಾವಣಗೆರೆಯಲ್ಲಿ 64 ಪ್ರಯಾಣಿಕರು ರೈಲು ಹತ್ತಿದ್ದಾರೆ.

ಶ್ರಮಿಕ್ ರೈಲು ಸಂಚಾರ; ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿ ಶ್ರಮಿಕ್ ರೈಲು ಸಂಚಾರ; ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿ

ಆನ್‌ಲೈನ್ ಮೂಲಕ ಮಾತ್ರ ಟಿಕೆಟ್ ಬುಕ್ ಮಾಡಿಕೊಂಡು ಸಂಚಾರ ನಡೆಸಲು ಅನುಮತಿ ನೀಡಲಾಗಿದೆ. ಎರಡೂ ಅಂತರ ಜಿಲ್ಲಾ ರೈಲುಗಳಲ್ಲಿಯೂ 14 ಬೋಗಿ ಇದೆ. ಸರ್ಕಾರಿ ಬಸ್‌ ಸೇವೆ ಸಹ ಆರಂಭವಾಗಿರುವುದರಿಂದ ಪ್ರಯಾಣಿಕರ ಕೊರತೆ ಎದುರಾಗಿರಬಹುದು...

ಬೆಂ-ಬೆಳಗಾವಿ, ಬೆಂಗಳೂರು-ಮೈಸೂರು ನಡುವೆ ರೈಲು ಸಂಚಾರಕ್ಕೆ ಒಪ್ಪಿಗೆಬೆಂ-ಬೆಳಗಾವಿ, ಬೆಂಗಳೂರು-ಮೈಸೂರು ನಡುವೆ ರೈಲು ಸಂಚಾರಕ್ಕೆ ಒಪ್ಪಿಗೆ

ಬೆಂಗಳೂರು-ಮೈಸೂರು ರೈಲು

ಬೆಂಗಳೂರು-ಮೈಸೂರು ರೈಲು

ಕೆಎಸ್ಆರ್‌ ಬೆಂಗಳೂರಿನಿಂದ ಹೊರಟ ಬೆಂಗಳೂರು-ಮೈಸೂರು ರೈಲಿಗೂ ಪ್ರಯಾಣಿಕರ ಕೊರತೆ ಎದುರಾಗಿತ್ತು. 1415 ಸೀಟುಗಳನ್ನು ಹೊಂದಿರುವ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಟಾಗ 37 ಪ್ರಯಾಣಿಕರಿದ್ದರು. ಕೆಂಗೇರಿ ಮತ್ತು ಮಂಡ್ಯದಲ್ಲಿ 26 ಜನರು ರೈಲಿಗೆ ಹತ್ತಿದರು. ಮೈಸೂರಿನಿಂದ ರೈಲು ಬೆಂಗಳೂರಿಗೆ ಹೊರಟಾಗ 59 ಪ್ರಯಾಣಿಕರು ಇದ್ದರು.

ಟಿಕೆಟ್ ಕೌಂಟರ್ ಓಪನ್

ಟಿಕೆಟ್ ಕೌಂಟರ್ ಓಪನ್

ಎರಡೂ ರೈಲಿಗೆ ಆನ್‌ಲೈನ್ ಮೂಲಕ ಮಾತ್ರ ಟಿಕೆಟ್ ಬುಕ್ ಮಾಡುವ ವ್ಯವಸ್ಥೆ ಮಾಡಿದ್ದ ಕಾರಣ ಪ್ರಯಾಣಿಕರ ಕೊರತೆ ಎದುರಾಗಿರಬಹುದು. ಶನಿವಾರದಿಂದ ಪ್ರಮುಖ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್ ಆರಂಭವಾಗಲಿದೆ. ಇದರಿಂದಾಗಿ ಆನ್‌ಲೈನ್ ಮೂಲಕ ಬುಕ್ ಮಾಡದವರಿಗೂ ಸಂಚಾರ ನಡೆಸಲು ಅನುಕೂಲವಾಗಲಿದೆ. ಆಗ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

ಬೆಂಗಳೂರು-ಬೆಳಗಾವಿ ರೈಲು

ಬೆಂಗಳೂರು-ಬೆಳಗಾವಿ ರೈಲು

ಬೆಂಗಳೂರು-ಬೆಳಗಾವಿ ರೈಲು ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಂಗಳೂರು ನಗರದಿಂದ ಬೆಳಗ್ಗೆ 8ಕ್ಕೆ ಹೊರಡಲಿದ್ದು, 3.30ಕ್ಕೆ ಹುಬ್ಬಳ್ಳಿ ತಲುಪಲಿದೆ. 6.30ಕ್ಕೆ ಬೆಳಗಾವಿಗೆ ತಲುಪಲಿದೆ.

ಬೆಳಗಾವಿ-ಬೆಂಗಳೂರು ರೈಲು ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಗ್ಗೆ 8 ಗಂಟೆಗೆ ಬೆಳಗಾವಿಯಿಂದ ಹೊರಡಲಿದ್ದು, ಸಂಜೆ 6.30ಕ್ಕೆ ಬೆಂಗಳೂರಿಗೆ ಬರಲಿದೆ. ಭಾನುವಾರ ರೈಲು ಇರುವುದಿಲ್ಲ.

ರೈಲು ಯಶವಂತಪುರ, ತುಮಕೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡದಲ್ಲಿ ನಿಲುಗಡೆಗೊಳ್ಳಲಿದೆ.

ಬೆಂಗಳೂರು-ಮೈಸೂರು ರೈಲು

ಬೆಂಗಳೂರು-ಮೈಸೂರು ರೈಲು

ಬೆಂಗಳೂರು-ಮೈಸೂರು ರೈಲು ಪ್ರತಿದಿನ ಸಂಚಾರ ನಡೆಸಲಿದೆ. ಬೆಳಗ್ಗೆ 9.20ಕ್ಕೆ ಕೆಎಸ್ಆರ್ ಬೆಂಗಳೂರು ಬಿಡಲಿದ್ದು, 12.45ಕ್ಕೆ ಮೈಸೂರು ತಲುಪಲಿದೆ.

ಮಧ್ಯಾಹ್ನ 1.45ಕ್ಕೆ ಮೈಸೂರು ಬಿಡಲಿದ್ದು, 5 ಗಂಟೆಗೆ ಬೆಂಗಳೂರಿಗೆ ವಾಪಸ್ ಆಗಲಿದೆ. ಕೆಂಗೇರಿ, ರಾಮನಗರ, ಮದ್ದೂರು, ಮಂಡ್ಯ, ಪಾಂಡವಪುರ, ನಾಗನಹಳ್ಳಿಯಲ್ಲಿ ರೈಲು ನಿಲುಗಡೆ ಇದೆ.

English summary
Poor response for the train run between Bengaluru-Belagavi and Bengaluru-Mysuru on 1st day May 22, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X