ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಣ ಸಚಿವರ ಬಾಯಲ್ಲಿ ಎಂಥಾ ಮಾತು!

|
Google Oneindia Kannada News

ಬೆಂಗಳೂರು, ಅ. 17 : 'ರಾಜಕಾರಣಿಗಳನ್ನು ಮಾತ್ರ ಆದರ್ಶ ವಾಗಿಟ್ಟುಕೊಳ್ಳಬೇಡಿ, ಅಂಥ ಆದರ್ಶ ಇಟ್ಟುಕೊಂಡವರು ಯಾರು ಇಂದು ನಮ್ಮೊಂದಿಗಿಲ್ಲ' ಇದು ಯಾವ ಸಾಮಾಜಿಕ ಕಾರ್ಯಕರ್ತನ ಮಾತಲ್ಲ. ಸ್ವತಃ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ವಿದ್ಯಾರ್ಥಿಗಳಿಗೆ ಹೇಳಿದ ಕಿವಿಮಾತು.

ಬೆಂಗಳೂರಿನಲ್ಲಿ ಗುರುವಾರ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದವೊಂದರಲ್ಲಿ ಭಾಗವಹಿಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ನನೆ ರತ್ನಾಕರ್‌ ಇಂಥದ್ದೊಂದು ಮಾತು ಹೇಳಿದ್ದು ಇಂದಿನ ರಾಜಕಾರಣದ ಸ್ಥಿತಿಯನ್ನು ವ್ಯಂಗ್ಯಮಾಡಿದಂತಿತ್ತು.[ಕೆಪಿಸಿಸಿ ಕಚೇರಿಯಲ್ಲಿ ಶಿಕ್ಷಕರಿಗೆ ಸಚಿವ ಕಿಮ್ಮನೆ ಪಾಠ]

kimmane

ನಾವೇ(ರಾಜಕಾರಣಿಗಳು) ಕಾನೂನು ರೂಪಿಸುವವರು ಮತ್ತು ಉಲ್ಲಂಘಿಸುವವರು ಎರಡು ಆಗಿದ್ದೇವೆ. ಹಾಗಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದೇವೆ ಎಂದು ಹೇಳಿದರು.[ಶಿಕ್ಷಕರಾಗಲು ಇಂಗ್ಲಿಷ್, ಕಂಪ್ಯೂಟರ್ ಜ್ಞಾನ ಕಡ್ಡಾಯ]

ಶಿಕ್ಷಣ ವ್ಯವಸ್ಥೆಯಲ್ಲಿ ಕೆಲವು ಗೊಂದಲಗಳಿವೆ. ಅವುಗಳ ನಿವಾರಣೆಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸಲಾಗುತ್ತಿದೆ. ಪಠ್ಯಕ್ರಮಗಳಲ್ಲಿನ ಗೊಂದಲ, ಸಿಬಿಎಸ್ ಸಿ, ರಾಜ್ಯಪಠ್ಯ ಈ ರೀತಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿರುವ ಅಂಶಗಳನ್ನು ಮನಗಂಡು ಸಮರ್ಪಕ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.

English summary
'There is no good things in today's politician. You can not take a politician as a role model' Primary and secondary education minister Kimmane Ratnakar said to children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X