ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ 1994 ಮತ್ತು 2018ರ ರಾಜಕೀಯ ದಂಗೆಯ ಕಥೆ!

|
Google Oneindia Kannada News

Recommended Video

ಕರ್ನಾಟಕದಲ್ಲಿ ದಂಗೆ ಕಥೆ ನಡೆದಿದ್ದು 1994 ಹಾಗು 2018ರಲ್ಲಿ | Oneindia kannada

ಬೆಂಗಳೂರು, ಸೆಪ್ಟೆಂಬರ್ 21: ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಬಿಜೆಪಿ ತೆರೆಮರೆಯ ಪ್ರಯತ್ನ ಆರಂಭಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ದಂಗೆ ನಡೆಸುವುದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಘಟನೆಯಿಂದ ರಾಜ್ಯ ಕಾರಣದಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿದ್ದು, ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದೆ. ಆದರೆ ಕರ್ನಾಟಕದ ಇತಿಹಾಸದಲ್ಲಿ ಇದಕ್ಕಿಂತ ಭಾರಿ ದಂಗೆಯೊಂದು 90 ದಶಕದಲ್ಲಿ ನಡೆದಿತ್ತು. ಈಗ ಅಧಿಕಾರ ಉಳಿಸಿಕೊಳ್ಳಲು ದಂಗೆಗೆ ಕುಮಾರಸ್ವಾಮಿ ಕರೆ ಕೊಟ್ಟಿದ್ದರೆ ಹಿಂದೆ ಎಚ್.ಡಿ.ದೇವೇಗೌಡರಿಗೆ ಅಧಿಕಾರಕ್ಕಾಗಿ ಬೆಂಬಲಿಗರ ದಂಗೆ ನಡೆಸಿದ್ದರು.

ಇಂದಿನ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಪಟ್ಟದಲ್ಲೇ ಕುಳಿತಿದ್ದರೂ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನದ ವಿರುದ್ಧ ದಂಗೆ ಎಬ್ಬಿಸುವ ಮಾತನಾಡಿರುವುದು ಬೀದಿ ರಾಜಕಾರಣಕ್ಕೆ ಸಾಕ್ಷಿಯಾಗಿ ನಿಂತಿದೆ.

3 ಪಕ್ಷಗಳ ಹೊಲಸು ರಾಜಕೀಯದ ವಿರುದ್ದ ಜನರು ಮೊದಲು 'ದಂಗೆ' ಏಳಬೇಕಾಗಿದೆ 3 ಪಕ್ಷಗಳ ಹೊಲಸು ರಾಜಕೀಯದ ವಿರುದ್ದ ಜನರು ಮೊದಲು 'ದಂಗೆ' ಏಳಬೇಕಾಗಿದೆ

ಒಂದೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ನ ಶಾಸಕರನ್ನು ಸೆಳೆದು, ರಾಜಿನಾಮೆ ಕೊಡಿಸಲು ಬಿಜೆಪಿ ಪ್ರಯತ್ನ ನಡೆಸಿದೆ ಎಂಬ ಬಲವಾದ ಆರೋಪ ಕೇಳಿಬಂದಿದ್ದರೆ, ಮತ್ತೊಂದೆಡೆ, ಕೇಂದ್ರೀಯ ಸಂಸ್ಥೆಗಳಾದ ಆದಾಯ ತೆರಿಗೆ ಇಲಾಖೆ, ಸಿಬಿಐ ಹಾಗೂ ಅಂತಿಮವಾಗಿ ಜಾರಿ ನಿರ್ದೇಶನಾಲಯದ ಮೂಲಕ ಕಾಂಗ್ರೆಸ್‌ನ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರ ವಿರುದ್ಧ ನಿಯಂತ್ರಣ ಹೇರಲು ಬಿಜೆಪಿ ಜಾಲ ಬೀಸಿದೆ ಎಂಬ ಆತಂಕ ಸಮ್ಮಿಶ್ರ ಸರ್ಕಾರವನ್ನು ಆತಂಕಕ್ಕೆ ದೂಡಿದೆ.

ಚಿಂದಿಯಾಗಿದ್ದ ವಿಧಾನಸೌಧದ ಕಾರಿಡಾರ್

ಚಿಂದಿಯಾಗಿದ್ದ ವಿಧಾನಸೌಧದ ಕಾರಿಡಾರ್

ಇಂದಿನ ಘಟನೆ 90ರ ದಶಕದಲ್ಲಿ ಎಚ್.ಡಿ.ದೇವೇಗೌಡ ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ನಡೆದ ಬಹಿರಂಗ ಅಟಾಟೋಪವನ್ನು ನೆನಪಿಸಿಕೊಳ್ಳುವಂತೆ ಮಾಡಿದೆ. 1994ರಲ್ಲಿ ಜನತಾದಳ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಾಗ ಜನತಾ ಪರಿವಾರದ ನಾಯಕತ್ವಕ್ಕೆ ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರ ನಡುವೆ ಭಾರಿ ಪೈಪೋಟಿಯನ್ನೇ ಸೃಷ್ಟಿಸಿತ್ತು.

ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ನೀಡುತ್ತೇನೆ: ಎಚ್‌ಡಿಕೆ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ನೀಡುತ್ತೇನೆ: ಎಚ್‌ಡಿಕೆ

ಹೆಗಡೆ ಬೆಂಬಲಿಗರನ್ನು ಬಡಿದರು!

ಹೆಗಡೆ ಬೆಂಬಲಿಗರನ್ನು ಬಡಿದರು!

ರಾಮಕೃಷ್ಣ ಹೆಗಡೆ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೆ ಎಂಬಂತಹ ವಾತಾವರಣ ನಿರ್ಮಾಣವಾದಾಗ ದೇವೇಗೌಡರ ಬೆಂಬಲಿಗರು ಎನ್ನಲಾದ ಸಾವಿರಾರು ಜನರು ವಿಧಾನಸೌಧಕ್ಕೆ ನುಗ್ಗಿ ದಾಂಧಲೆ ನಡೆಸಿದ್ದರು. ಹೆಗಡೆ ಬೆಂಬಲಿಗರನ್ನು ಸಿಕ್ಕಸಿಕ್ಕಲ್ಲಿ ಬಡಿದಿದ್ದರು. ವಿಶೇಷವಾಗಿ ಉತ್ತರ ಕರ್ನಾಟಕದಿಂದ ಬಂದಿದ್ದ ಸಾವಿರಾರು ಸಂಖ್ಯೆಯ ಜನತಾದಳದ ಕಾರ್ಯಕರ್ತರನ್ನು ದೊಣ್ಣೆ, ಕೋಲು, ಕುರ್ಚಿಗಳಿಂದ ಅಟ್ಟಾಡಿಸಿ ಹೊಡೆದಿದ್ದರು. ಅಷ್ಟೇ ಅಲ್ಲ, ತುಮಕೂರು ರಸ್ತೆಯಲ್ಲಿ ಹುಬ್ಬಳ್ಳಿ ಕಡೆಗೆ ಹೋಗುವ ವಾಹನಗಳನ್ನು ರಸ್ತೆಮಧ್ಯೆ ನಿಲ್ಲಿಸಿ, ಅದರಲ್ಲಿದ್ದ ಕಾರ್ಯಕರ್ತರನ್ನು ಥಳಿಸಲಾಗಿತ್ತು.

ರಾಜಕೀಯ ಸಂಚಲನ ಮೂಡಿಸಿದ ಎಚ್‌ಡಿಕೆ ಸಿದ್ದರಾಮಯ್ಯ ಭೇಟಿ ರಾಜಕೀಯ ಸಂಚಲನ ಮೂಡಿಸಿದ ಎಚ್‌ಡಿಕೆ ಸಿದ್ದರಾಮಯ್ಯ ಭೇಟಿ

ದೇವೇಗೌಡರಿಗೆ ಸಿಕ್ಕಿತ್ತು ಪಟ್ಟ

ದೇವೇಗೌಡರಿಗೆ ಸಿಕ್ಕಿತ್ತು ಪಟ್ಟ

ಅಂತಹ ಪರಿಸ್ಥಿತಿಯ ನಡುವೆಯೇ ಅಂತಿಮವಾಗಿ ಹೆಗಡೆ ಅವರನ್ನು ಕೈಬಿಟ್ಟು ದೇವೇಗೌಡರು ನೂತನ ಮುಖ್ಯಮಂತ್ರಿಯನ್ನಾಗಿ ಜನತಾ ದಳದ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಅಂದಿನಿಂದ ರಾಜ್ಯ ರಾಜಕಾರಣದಲ್ಲಿ ತಮ್ಮ ಹಿಡಿತವನ್ನು ಬಲಪಡಿಸುತ್ತಲೇ ಬಂದಿದ್ದ ದೇವೇಗೌಡರು ಎರಡೇ ವರ್ಷದಲ್ಲಿ ದೇಶದ ಪ್ರಧಾನಿಯಾಗಿ ದೆಹಲಿಗೆ ಹೋದರು. ಆಗ ಹೆಗಡೆ ಗೌಡರ ಸಂಪುಟದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಕೆಲಸ ಮಾಡಬೇಕಾಯಿತು.

ಎಚ್ಡಿಕೆ ದಂಗೆ ಮಾತು ನಕ್ಸಲರ ಹೇಳಿಕೆಯಂತಿದೆ: ಅಶೋಕ್ ವಾಗ್ದಾಳಿ ಎಚ್ಡಿಕೆ ದಂಗೆ ಮಾತು ನಕ್ಸಲರ ಹೇಳಿಕೆಯಂತಿದೆ: ಅಶೋಕ್ ವಾಗ್ದಾಳಿ

ರಾಜಕಾರಣ ಆಗುತ್ತಿದೆ ಬಲುದೊಡ್ಡ ದಂಧೆ

ರಾಜಕಾರಣ ಆಗುತ್ತಿದೆ ಬಲುದೊಡ್ಡ ದಂಧೆ

ಅಪೋಲೊ ಆಸ್ಪತ್ರೆಯಲ್ಲಿ ಉದರ ನೋವಿನ ಚಿಕಿತ್ಸೆಗಾಗಿ ದಾಖಲಾಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಆರೋಗ್ಯ ವಿಚಾರಿಸಲು ಕೆಲ ಶಾಸಕರ ಜತೆ ಗುರುವಾರ ತೆರಳಿದ್ದ ಸಿಎಂ ಕುಮಾರಸ್ವಾಮಿ, ಅಲ್ಲಿಂದ ಹೊರಬರುತ್ತಲೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರಲ್ಲದೇ ಪರ್ಸಂಟೇಜ್ ಜನಕ ಎಂದು ಜರಿದಿದ್ದರು. ಅದಾದ ಕೆಲವೇ ಸಮಯದಲ್ಲಿ ಹಾಸನಕ್ಕೆ ತೆರಳಿ, ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಕೈಬಿಡದಿದ್ದರೆ ಬಿಜೆಪಿ ವಿರುದ್ಧ ಜನರನ್ನು ದಂಗೆ ಎಬ್ಬಿಸಬೇಕಾಗುತ್ತದೆ ಎಂದು ಬಹಿರಂಗ ಬೆದರಿಕೆ ಒಡ್ಡಿದ್ದರು. ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ. ಕಾಕತಾಳೀಯ ಎಂಬಂತೆ ಕೆಲ ನಿಮಿಷಗಳಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಯಡಿಯೂರಪ್ಪ ನಿವಾಸಕ್ಕೆ ನುಗ್ಗಲು ಯತ್ನಿಸಿದ್ದರಿಂದ ಹೈಡ್ರಾಮಾವೇ ನಡೆದು ಹೋಯಿತು.

ರಾಷ್ಟ್ರಪತಿ ಆಳ್ವಿಕೆ ಬರಲಿ ಎಂದ ಗೌಡರ ಮಾತಿನ ಅಂತರಾಳರಾಷ್ಟ್ರಪತಿ ಆಳ್ವಿಕೆ ಬರಲಿ ಎಂದ ಗೌಡರ ಮಾತಿನ ಅಂತರಾಳ

English summary
Chief minister H.D.Kumaraswamy has warned Bjp against operation lotus otherwise he would like to call political rebellion in the state. The politics has another history of political rebellion in 1994. Here is the interesting story about.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X