ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ರಥಯಾತ್ರೆ, ಪಾದಯಾತ್ರೆ ನಡೆದು ಬಂದ ದಾರಿ...

By ರವೀಂದ್ರ ಕೊಟಕಿ
|
Google Oneindia Kannada News

ಯಾತ್ರೆಗಳ ರಾಜಕೀಯ ಬಹಳ ಹಿಂದಿನದು. ಈ ದೇಶದಲ್ಲಿ ಯಾತ್ರಾ ರಾಜಕೀಯ ಅಂದ ತಕ್ಷಣ ನೆನಪಿಗೆ ಬರುವುದು ಬಿಜೆಪಿಯ ಭೀಷ್ಮಪಿತಾಮಹ ಎಲ್.ಕೆ.ಅಡ್ವಾಣಿಯವರ ರಾಮಜನ್ಮಭೂಮಿಯ ರಥಯಾತ್ರೆ ಆದರೆ ಯಾತ್ರಾ ರಾಜಕೀಯಕ್ಕೆ ಮುನ್ನುಡಿ ಬರೆದಿದ್ದು ಅವರಲ್ಲ, ಬದಲಾಗಿ ಎನ್.ಟಿ. ರಾಮರಾವ್.

ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

ಇಂದಿಗೂ ವಿಶ್ವದಲ್ಲೇ ಒಂದು ಪಕ್ಷ ಸ್ಥಾಪಿಸಿದ ಎಂಬತ್ತು ತಿಂಗಳಲ್ಲಿ ಅಧಿಕಾರ ಪಡೆದ ಉದಾಹರಣೆ ಮತ್ತೊಂದಿಲ್ಲ. ಇದು ಗಿನ್ನಿಸ್ ದಾಖಲೆಯಲ್ಲೂ ಸೇರ್ಪಡೆಯಾಗಿರುವುದು ವಿಶೇಷ.

ಜನಸಾಮಾನ್ಯರು ಮೋಕ್ಷಕ್ಕಾಗಿ ಯಾತ್ರೆ (ತೀರ್ಥಯಾತ್ರೆ) ಮಾಡುತ್ತಾರೆ. ಅದೇ ರಾಜಕಾರಣಿಗಳು ಅಧಿಕಾರಕ್ಕಾಗಿ ಯಾತ್ರೆ (ಪ್ರಚಾರ) ಮಾಡುತ್ತಾರೆ. ರಾಜ್ಯದಲ್ಲಂತೂ ಈಗ ಯಾತ್ರೆಗಳ ಪರ್ವ.

ಮೊದಲು ಯಡಿಯೂರಪ್ಪನವರ ಕಮಲದಿಂದ 'ಪರಿವರ್ತನಾ ಯಾತ್ರೆ'ಯ ಮೊದಲಗೊಂಡಿದ್ದು, ತದನಂತರದ ಸರದಿಯಲ್ಲಿ ಕುಮಾರಪರ್ವದಲ್ಲಿ 'ವಿಕಾಸ ಯಾತ್ರೆ' ಆರಂಭವಾಗಿದ್ದು ಕೊನೆಯದಾಗಿ ಸಿದ್ದು-ಪರಂಯವರ ಕೈ ಆಟದಲ್ಲಿ 'ಸಾಧನ ಯಾತ್ರೆ' ಯಾವಾಗ ಆರಂಭವಾಗತ್ತದೋ ಕಾದು ನೋಡಬೇಕಿದೆ.

ಅದು 1982ರ ಸಮಯ

ಅದು 1982ರ ಸಮಯ

ಅದು 1982ರ ಸಮಯ, ಆಗಿನ ಕಾಂಗ್ರೆಸಿನ ಯುವರಾಜ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜೀವ್‍ಗಾಂಧಿಯವರು ಹೈದರಾಬಾದ್ ವಿಮಾನನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಬಂದಿದ್ದ ಅಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ಟಿ. ಅಂಜಯ್ಯನವರನ್ನು ಸಾರ್ವಜನಿಕವಾಗಿ ಅವಮಾನಿಸುತ್ತಾರೆ.

ಇದರ ವಿರುದ್ದ ಸಿಡಿದೆದ್ದ ಜನಪ್ರಿಯ ತೆಲುಗು ಸಿನಿಮಾ ನಟ ಎನ್.ಟಿ.ರಾಮರಾವ್ 'ರಾಜೀವ್‍ಗಾಂಧಿ ಸಾರ್ವಜನಿಕವಾಗಿ ಅಪಮಾನ ಮಾಡಿದ್ದು ಒಬ್ಬ ಮುಖ್ಯಮಂತ್ರಿಗಲ್ಲ ಬದಲಾಗಿ ತೆಲುಗರ ಆತ್ಮಗೌರವಕ್ಕೆ ಮಾಡಿದ ಅಪಮಾನವಿದು' ಎಂದು ಘೋಷಿಸುತ್ತಾರೆ.

ತೆಲುಗರ ಆತ್ಮಗೌರವವೇ ಅಜೆಂಡಾ

ತೆಲುಗರ ಆತ್ಮಗೌರವವೇ ಅಜೆಂಡಾ

ತೆಲುಗರ ಆತ್ಮಗೌರವವನ್ನು ಪ್ರಧಾನ ಅಜೆಂಡಾ ಮಾಡಿಕೊಂಡು ಮಾರ್ಚ್ 29, 1982ರಂದು 'ತೆಲುಗುದೇಶಂ'ಪಕ್ಷವನ್ನು ಸ್ಥಾಪಿಸಿದರು. ಅಲ್ಲದೇ ಮುಂದಿನ ವಿಧಾನಸಭಾ ಚುನಾವಣೆಗೆ ಹೆಚ್ಚಿನ ಸಮಯ ಕೂಡ ಅವರಿಗೆ ಇರಲಿಲ್ಲ.

ಸ್ವಾತಂತ್ರಕಾಲದಿಂದಲ್ಲೂ ಅಧಿಕಾರದಲ್ಲಿದ್ದ ಕಾಂಗ್ರೆಸ್‍ಯನ್ನು ಸೋಲಿಸುವುದು ಅಷ್ಟೊಂದು ಸುಲಭವೂ ಆಗಿರಲಿಲ್ಲ. ಬಹುತೇಕ ರಾಜಕೀಯಪಂಡಿತರು ಹೆಚ್ಚೆಂದರೆ ಎನ್.ಟಿ.ಆರ್ ಕಾಂಗ್ರೆಸಿಗೆ ಸಣ್ಣಮಟ್ಟದ ಸವಾಲ್ ಆಗಬಹುದೇ ಹೊರತು ಅದರಿಂದ ಅಧಿಕಾರ ಕಿತ್ತುಕೊಳ್ಳುವುದು ಅಸಾಧ್ಯವೆಂದು ಭವಿಷ್ಯ ನುಡಿದಿದ್ದರು.

ರಾಜಕೀಯದಲ್ಲಿ ಹೊಸ ಆಟಕ್ಕೆ ಮುನ್ನುಡಿ

ರಾಜಕೀಯದಲ್ಲಿ ಹೊಸ ಆಟಕ್ಕೆ ಮುನ್ನುಡಿ

ಚಾಣಾಕ್ಷ ಎನ್.ಟಿ.ಆರ್. ರಾಜಕೀಯದಲ್ಲಿ ಹೊಸ ಆಟಕ್ಕೆ ಆಗ ಮುನ್ನುಡಿ ಬರೆದರು. ಮೊದಲೇ ಅನ್ನಗಾರು (ಅಣ್ಣಾವ್ರು) ಎಂಬ ಬಿರುದು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯಾಗಿದೆ. ಕಾಂಗ್ರೆಸ್ ವಿರುದ್ದ ಜನಾಕ್ರೋಶವು ಮನೆಮಾಡಿತು.

ವಿರೋಧಪಕ್ಷದ ಕುರ್ಚಿಯೂ ಖಾಲಿಯಾಗಿತ್ತು.. ಅಂದರೆ ಕಾಂಗ್ರೆಸ್‍ಗೆ ಪರ್ಯಾಯವಾಗಿ ತಾನು ಹೋರಾಟ ಮಾಡುವುದ್ದಕ್ಕೆ ಇದೇ ಸರಿಯಾದ ಸಮಯ ಎಂಬ ನಿರ್ಧರಿಸಿದ ಅವರು ಆಗ ಆರಂಭಿಸಿದ್ದೇ 'ಚೈತನ್ಯ ರಥ ಯಾತ್ರೆ'.

ಚೈತ್ಯನರಥ

ಚೈತ್ಯನರಥ

ಪೌರಾಣಿಕ ಪಾತ್ರಗಳಿಂದ ಅದರಲ್ಲೂ ವಿಶೇಷವಾಗಿ ಶ್ರೀಕೃಷ್ಣನ ಪಾತ್ರಧಾರಿಯಾಗಿ ಅವರು ತೆಲುಗರ ಪಾಲಿಗೆ ಶ್ರೀಕೃಷ್ಣನ ಸ್ವರೂಪವಾಗಿ ಆಗಿಬಿಟ್ಟಿದ್ದರು. ಹೀಗಾಗಿಯೇ ಅವರು ತಮ್ಮ ಪ್ರಚಾರವಾಹನಕ್ಕೆ 'ಚೈತ್ಯನರಥ' ಅಂತ ನಾಮಕರಣ ಮಾಡಿ, ರಥಯಾತ್ರೆ ಎಂಬ ಹೆಸರಿಟ್ಟು ಹಳ್ಳಿ,ನಗರ,ಪಟ್ಟಣಗಳೆನ್ನಲ್ಲಾ ತಮ್ಮ ಚೈತನ್ಯರಥದ ಮೂಲಕ ಸುತ್ತಾಡಿ ಕೇವಲ ಎಂಬತ್ತು ತಿಂಗಳಲ್ಲಿ ಅಂದರೆ ಜನವರಿ 9, 1983ರಂದು 294 ವಿಧಾನಸಭಾ ಕ್ಷೇತ್ರಗಳ ಪೈಕಿ 201 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರಕ್ಕೆ ಬಂದರು.

ಅಡ್ವಾಣಿಯವರ ರಥೆಯಾತ್ರೆ

ಅಡ್ವಾಣಿಯವರ ರಥೆಯಾತ್ರೆ

ಹೀಗೆ ಒಂದು ರಥಯಾತ್ರೆಯ ಮೂಲಕ ಚುನಾವಣಾ rallyಗಳಿಂತ ಹೆಚ್ಚು ಪ್ರದೇಶಗಳನ್ನು, ಜನರನ್ನು ವಿಶೇಷವಾಗಿ ರೈತರು, ಕೂಲಿ-ಕಾರ್ಮಿಕರು,ಹಳ್ಳಿಗಾಡಿನ ಜನರನ್ನು ಸುಲಭವಾಗಿ ತಲಪಬಹುದು ಅದರಿಂದ ಸಿಗುವ ಇಮೇಜ್ ಕೂಡ ದೊಡ್ಡದಾಗಿರುತ್ತದೆ ಅಂತ ರಾಜಕಾರಣಕ್ಕೆ ಮೊದಲು ತೋರಿಸಿಕೊಟ್ಟಿದೇ ಎನ್.ಟಿ.ಆರ್. ನಂತರ ಬಂದ ಅಡ್ವಾಣಿಯವರ ರಥೆಯಾತ್ರೆ ದೇಶದ ರಾಜಕೀಯ ದಿಕ್ಕನ್ನು ಬದಲಾಯಿಸಿತು.

ಅಲ್ಲಿಂದ ರಥಯಾತ್ರೆಗಳು, ಮುಂದುವರಿದು ಪಾದಯಾತ್ರೆಗಳ ರಾಜಕಾರಣ ಎಲ್ಲಡೆ ಪಸರಿಸಿತು. ಮೋದಿಯವರು ಸಹ ಗುಜರಾತ್ ಚುನಾವಣೆಯ ಸಮಯದಲ್ಲಿ 'ಗುಜರಾತ್ ಗೌರವ್ ಯಾತ್ರೆ'ಗಳನ್ನು ನಡೆಸುತ್ತ ಅದರಿಂದ ಪದೇ ಪದೇ ಅಧಿಕಾರಕ್ಕೆ ಬರುತ್ತಿದ್ದರು.

2004ರಲ್ಲಿ ಕಾಂಗ್ರೆಸನ್ನು ಅಧಿಕಾರಕ್ಕೆ

2004ರಲ್ಲಿ ಕಾಂಗ್ರೆಸನ್ನು ಅಧಿಕಾರಕ್ಕೆ

ಆಂಧ್ರದ ಮುಖ್ಯಮಂತ್ರಿ ದಿ. ರಾಜಶೇಖರ್ ರೆಡ್ಡಿ ಪಾದಯಾತ್ರೆಯ ಮೂಲಕವೇ 2004ರಲ್ಲಿ ಕಾಂಗ್ರೆಸನ್ನು ಅಧಿಕಾರಕ್ಕೆ ತಂದಿದ್ದು, ಬಳ್ಳಾರಿ ಪಾದಯಾತ್ರೆಯ ಮೂಲಕವೇ ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸಿದ್ದರಾಮಯ್ಯನವರು ಜನನಾಯಕರಾಗಿ ಗಮನಸೆಳೆದು ಅಧಿಕಾರ ಪಡೆದಿದ್ದನ್ನು ಇಲ್ಲಿ ಮರೆಯುವಂತಿಲ್ಲ. ಆದರೆ, ಈ ಬಾರಿ ಕರ್ನಾಟದಲ್ಲಿ ಕಾಂಗ್ರೆಸ್ ಯಾವ ಯಾತ್ರೆಗೂ ಮನಸ್ಸು ಮಾಡದೆ, ಮನೆ ಮನೆಗೆ ಕಾಂಗ್ರೆಸ್ ಹಮ್ಮಿಕೊಂಡಿದೆ.

ಬಿಜೆಪಿ -ನವ ಕರ್ನಾಟಕ ಪರಿವರ್ತನಾ ಯಾತ್ರೆ

ಬಿಜೆಪಿ -ನವ ಕರ್ನಾಟಕ ಪರಿವರ್ತನಾ ಯಾತ್ರೆ

ಕರ್ನಾಟಕ ಬಿಜೆಪಿ ಕೂಡಾ ನವ ಕರ್ನಾಟಕ ಪರಿವರ್ತನಾ ಯಾತ್ರೆ 75 ದಿನಗಳ ಕಾಲ ನಡೆಯಲಿದೆ. ಜೆಡಿಎಸ್ ಕೂಡಾ ವಿಕಾಸ ಯಾತ್ರೆ ಆರಂಭಿಸಿದೆ.
ಈಗಲೂ ಅವರ 'ಪ್ರಜಾಸಂಕಲ್ಪ' ಪಾದಯಾತ್ರೆ ನಡೆಯುತ್ತಿದೆ. ಆದರೆ ಅಧಿಕಾರ ಮಾತ್ರ ಗಗನಕಸುಮವಾಗಿದೆ. ಅಂತಹದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಈ ಯಾತ್ರೆಗಳ ರಾಜಕಾರಣ ಎಷ್ಟರಮಟ್ಟಿಗೆ ಫಲಕೊಡುತ್ತದೆ ಅಂತ ಕಾದುನೋಡಬೇಕು.

English summary
Political Rath yatra Journey From NTR to Yeddyurappa : Padayatra or rath yatra is always a success mantra for politicians across the all parties. It was actor-politician the late N. T. Rama Rao (NTR), who actually brought glamour touch and popular way to campaign during the election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X