ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕನ್ನಡ ಚುನಾವಣಾ ಕಣ : ಅನಂತ್ v/s ಆನಂದ್ ಅಸ್ನೋಟಿಕರ್

|
Google Oneindia Kannada News

Recommended Video

Lok Sabha Elections 2019 : ಉತ್ತರ ಕನ್ನಡದಲ್ಲಿ ಅನಂತಕುಮಾರ್ ಹೆಗಡೆ ಗೆಲ್ತಾರಾ?

ಉತ್ತರ ಕನ್ನಡ, ಏಪ್ರಿಲ್ 01 : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರುತ್ತಿದೆ. ಕೇಂದ್ರ ಸಚಿವರ ತವರು ಕ್ಷೇತ್ರದಲ್ಲಿ ಜಯಗಳಿಸಲು ಕಾಂಗ್ರೆಸ್‌-ಜೆಡಿಎಸ್ ತಂತ್ರ ರೂಪಿಸುತ್ತಿವೆ. ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕರ್ನಾಟಕ ಬಿಜೆಪಿಯ ಫೈರ್ ಬ್ರಾಂಡ್ ಎಂದು ಖ್ಯಾತಿಗಳಿಸಿರುವ ಅನಂತ್ ಕುಮಾರ್ ಹೆಗಡೆ ಉತ್ತರ ಕನ್ನಡ ಕ್ಷೇತ್ರದ ಹಾಲಿ ಸಂಸದರು. 2019ರ ಚುನಾವಣೆಯಲ್ಲಿಯೂ ಅವರೇ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡಿದೆ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಕ್ಷೇತ್ರದಿಂದ 5 ಬಾರಿ ಗೆದ್ದು ಸಂಸತ್ ಪ್ರವೇಶಿಸಿರುವ ಅನಂತ್ ಕುಮಾರ್ ಹೆಗಡೆ ಅವರನ್ನು ಕಟ್ಟಿಹಾಕಲು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ. ಮೈತ್ರಿಕೂಟದ ಅಭ್ಯರ್ಥಿ ಆನಂದ್ ಅಸ್ನೋಟಿಕರ್. ಎರಡೂ ಪಕ್ಷಗಳು ಒಂದಾಗಿರುವುದು ಹೇಗೆ ಸಹಾಯಕವಾಗಲಿದೆ? ಕಾದು ನೋಡಬೇಕು.

ಉತ್ತರ ಕನ್ನಡದ ಪರಿಚಯ ಓದಿ

2014ರ ಚುನಾವಣೆಯಲ್ಲಿ 1,40,700 ಮತಗಳ ಅಂತದಲ್ಲಿ ಅನಂತ್ ಕುಮಾರ್ ಹೆಗಡೆ ಗೆದಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರು. ವಿವಾದಾತ್ಮಹ ಹೇಳಿಕೆಗಳೇ ಅವರಿಗೆ ಹಿನ್ನಡೆ ಉಂಟು ಮಾಡಲಿದೆಯೇ? ಎಂಬುದನ್ನು ತಿಳಿಯಲು ಮೇ 23ರ ತನಕ ಕಾಯಬೇಕು.....

ಬಿಜೆಪಿ ಭದ್ರಕೋಟೆ ಉತ್ತರ ಕನ್ನಡ

ಬಿಜೆಪಿ ಭದ್ರಕೋಟೆ ಉತ್ತರ ಕನ್ನಡ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಅನಂತ್ ಕುಮಾರ್ ಹೆಗಡೆ ಅವರು 5 ಬಾರಿ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. 6ನೇ ಬಾರಿ ಅವರು ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಅವರನ್ನು ಕಟ್ಟಿಹಾಕಲು ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಆನಂದ್ ಅಸ್ನೋಟಿಕರ್ ಅಭ್ಯರ್ಥಿಯಾಗಿದ್ದಾರೆ.

5 ಬಿಜೆಪಿ ಶಾಸಕರಿದ್ದಾರೆ

5 ಬಿಜೆಪಿ ಶಾಸಕರಿದ್ದಾರೆ

ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಉತ್ತರ ಕನ್ನಡ ಕ್ಷೇತ್ರ ಒಳಗೊಂಡಿದೆ. ಇವುಗಳಲ್ಲಿ 5 ಕಡೆ ಬಿಜೆಪಿ ಮತ್ತು 3 ಕಡೆ ಕಾಂಗ್ರೆಸ್‌ ಶಾಸಕರು ಇದ್ದಾರೆ. ಅನಂತ್ ಕುಮಾರ್ ಹೆಗಡೆ ಅವರು ವರ್ಚಸ್ಸು ಸಹ ಚುನಾವಣೆಯಲ್ಲಿ ಕೆಲಸ ಮಾಡಲಿದೆ. ಕ್ಷೇತ್ರದಲ್ಲಿ ಯಾವುದೇ ಶಾಸಕರು ಇಲ್ಲದಿದ್ದರೂ ಕ್ಷೇತ್ರವನ್ನು ಕಾಂಗ್ರೆಸ್‌ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದೇಕೆ? ಎಂದು ಚರ್ಚೆ ನಡೆಯುತ್ತಿದೆ.

ಆನಂದ್ ಅಸ್ನೋಟಿಕರ್ ಪ್ರಚಾರ

ಆನಂದ್ ಅಸ್ನೋಟಿಕರ್ ಪ್ರಚಾರ

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆನಂದ್ ಅಸ್ನೋಟಿಕರ್ ಜೆಡಿಎಸ್ ಸೇರಿದ್ದರು. ಕಾರವಾರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು. ಈಗ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಲಾಗಿದೆ. ಕ್ಷೇತ್ರದಲ್ಲಿ ಅವರು ಬಿರುಸಿನಿಂದ ಪ್ರಚಾರವನ್ನು ನಡೆಸುತ್ತಿದ್ದಾರೆ.

ಗೆಲುವಿನ ಅಂತರ ಹೆಚ್ಚುತ್ತಿದೆ

ಗೆಲುವಿನ ಅಂತರ ಹೆಚ್ಚುತ್ತಿದೆ

2009ರ ಚುನಾವಣೆಯಲ್ಲಿ ಅನಂತ್ ಕುಮಾರ್ ಹೆಗಡೆ ಅವರ ಗೆಲುವಿನ ಅಂತರ ಕೇವಲ 22,769. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾರ್ಗರೇಟ್ ಆಳ್ವ ಪ್ರಬಲ ಪೈಪೋಟಿ ನೀಡಿದ್ದರು. 2014ರ ಚುನಾವಣೆಯಲ್ಲಿ 1,40,700 ಮತಗಳ ಅಂತರದಿಂದ ಅನಂತ್ ಕುಮಾರ್ ಹೆಗಡೆ ಗೆದ್ದಿದ್ದಾರೆ. ಅನಂತ್ ಕುಮಾರ್ ಹೆಗಡೆ ಅವರಿಗೆ ಹೋಲಿಕೆ ಮಾಡಿದರೆ ಅಸ್ನೋಟಿಕರ್ ಪ್ರಬಲ ಅಭ್ಯರ್ಥಿಯಲ್ಲ ಎಂಬುದು ಕ್ಷೇತ್ರದ ಜನರ ಮಾತು.

2014ರ ಫಲಿತಾಂಶ

2014ರ ಫಲಿತಾಂಶ

2014ರ ಚುನಾವಣೆಯಲ್ಲಿ ಅನಂತ್ ಕುಮಾರ್ ಹೆಗಡೆ ಅವರು 546399 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಪ್ರಶಾಂತ್ ದೇಶಪಾಂಡೆ ಅವರು 406239 ಮತಗಳನ್ನು ಪಡೆದಿದ್ದರು. ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.

English summary
Political picture of Uttara Kannada lok sabha seat represent by central minister Ananth Kumar Hegde. Ananth Kumar Hegde won 5 times in the seat and he is the BJP candidate for 2019 lok sabha elections. Anand Asnotikar Congress and JDS candidate. Election will be held on April 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X