ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬೇಡ್ಕರ್ ಜಯಂತಿ: ಇಂದಿನ (14-04-2022) ಪ್ರಮುಖ ರಾಜಕೀಯ ವಿದ್ಯಮಾನಗಳು ಹೀಗಿವೆ

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಬೆಂಗಳೂರು, ಏ.14: ಇಂದು ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ. ಈ ದಿನ ಕರ್ನಾಟಕದ ಪ್ರಮುಖ ರಾಜಕೀಯ ನಾಯಕರ ಕಾರ್ಯಕ್ರಮಗಳು ಮತ್ತು ರಾಜಕೀಯ ಪಕ್ಷಗಳ ಬೆಳವಣಿಗೆಗಳು ಏನೇನಿವೆ ಎಂಬುದನ್ನು ಇಲ್ಲಿ ಪರಿಶೀಲಿಸಿ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:

ಬೆಳಗ್ಗೆ 9: ಬಿಬಿಎಂಪಿ ವತಿಯಿಂದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಪಟೇಲ್ ಬೈರಹನುಮಯ್ಯ ಕೊಳಚೆ ಪ್ರದೇಶದ ಫಲಾನುಭವಿಗಳಿಗೆ ನಿರ್ಮಾಣಗೊಂಡಿರುವ ಬಹುಮಹಡಿ ಕಟ್ಟಡ ಉದ್ಘಾಟನೆ ಮತ್ತು ಶಂಕುಸ್ಥಾಪನೆ. ಸ್ಥಳ: ಸಂವಿಧಾನ ವೃತ್ತ, ಯಶವಂತಪುರ

ಬೆಳಗ್ಗೆ 10: ಸಂವಿಧಾನ ಶಿಲ್ಪಿ, ಭಾರತ ರತ್ನ, ಬಾಬಾಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೆ ಜನ್ಮದಿನಾಚರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ. ಸ್ಥಳ: ವಿಧಾನಸೌಧ ಮುಂಭಾಗ. ಬಳಿಕ ವಿಕಾಸಸೌಧ ಪಶ್ಚಿಮ ದ್ವಾರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ 'ಸ್ಫೂರ್ತಿಭವನ' ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ.

Karnataka Political News & Developments Today (14-04-2022): Political Parties News and Updates

ಬೆಳಗ್ಗೆ 11: ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ. ಸ್ಥಳ: ಬ್ಯಾಂಕ್ವೆಟ್ ಸಭಾಂಗಣ, ವಿಧಾನಸೌಧ

ಮಧ್ಯಾಹ್ನ 1: 2621ನೇ ಶ್ರಮಣ ಭಗವಾನ್ ಮಹಾವೀರರ ಜನ್ಮ ಕಲ್ಯಾಣ ಮಹೋತ್ಸವ ಕಾರ್ಯಕ್ರಮ. ಸ್ಥಳ: ಮರಾಠ ಹಾಸ್ಟೆಲ್ ಆವರಣ, ಚಾಮರಾಜಪೇಟೆ

ಮಧ್ಯಾಹ್ನ 2: ರಂಗೋಲಿ ಗಾರ್ಡನ್‌ಗೆ ಭೇಟಿ, ಸ್ಥಳ: ಎಂಜಿಐಆರ್‌ಇಡಿ, ಶ್ರೀರಾಂಪುರ ಕ್ರಾಸ್, ರಾಚೇನಹಳ್ಳಿ, ಜಕ್ಕೂರು

ಕಾಂಗ್ರೆಸ್:

ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕೆಪಿಸಿಸಿ ವತಿಯಿಂದ ಬೆಳಗ್ಗೆ 10ಕ್ಕೆ ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಿಂದ ಮುಖ್ಯಮಂತ್ರಿ ಮನೆಯವರೆಗೆ ಜಾಥಾ ನಡೆಸಲಾಗುತ್ತಿದೆ.

ಬಿಜೆಪಿ:

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಡಾ|| ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್, ರಾಜ್ಯ ವಕ್ತಾರ ಡಾ ಗಿರಿಧರ್ ಉಪಾಧ್ಯಾಯ ಮತ್ತು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷಜಿ ಮಂಜುನಾಥ್ ಅವರು ಭಾಗವಹಿಸಲಿದ್ದಾರೆ.

Recommended Video

ಬೆಲೆ ಏರಿಕೆ ಬಗ್ಗೆ ಗಾಂಧಿ ಬಜಾರ್ ಜನ ಏನ್ ಹೇಳ್ತಾರೆ ನೋಡಿ? | Oneindia Kannada

English summary
Karnataka political News and Developments Today (14-04-2022)- Stay informed about the recent political developments in Karnataka today, Political Parties Latest News and Updates. Check CM, Opposition, Congress and BJP Latest News,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X