ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾವ ಕವಿ ವ್ಯಾಸರಾವ್ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

By Manjunatha
|
Google Oneindia Kannada News

ಬೆಂಗಳೂರು, ಜುಲೈ 15: ಕವಿ, ಚಿತ್ರ ಸಾಹಿತಿ, ಕಾದಂಬರಿಕಾರ ಎಂ.ಎನ್.ವ್ಯಾಸರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸೇರಿದಂತೆ ರಾಜಕೀಯದ ಕ್ಷೇತ್ರದ ಹಲವು ಪ್ರಮುಖರು ಕಂಬನಿ ಮಿಡಿದಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರಾದ ವ್ಯಾಸರಾವ್ ಅವರು ಇಂದು ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟರು.

ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಅಗಲಿದ ಕವಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿದ್ದು, ಬ್ಯಾಂಕಿಂಗ್ ವೃತ್ತಿಯಲ್ಲಿದ್ದರೂ ಕವಿ, ಚಿತ್ರ ಸಾಹಿತಿಯಾಗಿ ಪ್ರಸಿದ್ಧಿ ಪಡೆದ ವ್ಯಾಸರಾವ್ ಅವರು ಪುಟ್ಟಣ್ಣ ಕಣಗಾಲರ ಚಿತ್ರಗಳಿಗೆ ಬರೆದ ಗೀತೆಗಳು, ಅವರು ರಚಿಸಿದ ಭಾವಗೀತೆಗಳು ಜನಮಾನಸದಲ್ಲಿ ಸದಾ ಹಸಿರಾಗಿರುತ್ತವೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ' ಎಂದು ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದ್ದಾರೆ.

Political leaders express their condolence to poet Vyasarav

ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಅವರು ಕೂಡ ಅಗಲಿದ ಕವಿಗೆ ಸಂತಾಪ ವ್ಯಕ್ತಪಡಿಸಿದ್ದು, ವ್ಯಾಸರಾವ್ ಅವರು ಅನೇಕ ಪ್ರಸಿದ್ಧ ಗೀತೆಗಳನ್ನು ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ. ವಿಶೇಷವಾಗಿ ಅವರು ರಚಿಸಿದ ಅನೇಕ ಭಾವಗೀತೆಗಳು ಸಂಗೀತ ಪ್ರಿಯರ ಮನದಲ್ಲಿ ಹಸಿರಾಗಿ ಉಳಿದಿದೆ ಎಂದಿದ್ದಾರೆ.

ಭಾವಗೀತೆಗಳ ಕವಿ ವ್ಯಾಸರಾವ್‌ ವಿಧಿವಶ ಭಾವಗೀತೆಗಳ ಕವಿ ವ್ಯಾಸರಾವ್‌ ವಿಧಿವಶ

ಮುಂದುವರೆದು, 'ವ್ಯಾಸರಾವ್ ಅವರು ಹಲವಾರು ಚಲನಚಿತ್ರ ಗೀತೆಗಳನ್ನೂ ರಚಿಸಿರುವ ಶ್ರೀ ವ್ಯಾಸರಾವ್, ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಸದಾ ನೆಲೆಸಿದ್ದಾರೆ ಎಂದರೆ ಉತ್ಪ್ರೇಕ್ಷೆಯಲ್ಲ, ಮೃತರ ಆತ್ಮಕ್ಕೆ ಶಾಂತಿ ಕೋರುವೆ. ಕುಟುಂಬದ ಸದಸ್ಯರಿಗೆ, ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ' ಎಂದಿದ್ದಾರೆ ಯಡಿಯೂರಪ್ಪ.

ಕೇಂದ್ರ ಸಚಿವ ಅನಂತ್‌ಕುಮಾರ್ ಅವರು ಸಹ ಟ್ವಿಟ್ಟರ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದು, ಭಗವಂತನು ಅವರ ಆತ್ಮಕ್ಕೆ ಚಿರ ಶಾಂತಿಯನ್ನು ಕೊಡಲಿ ಹಾಗು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.

ಅಗಲಿದ ಚೇತನಕ್ಕೆ ಕನ್ನಡ ಸಾರಸ್ವತ ಲೋಕದ ಹಲವು ಮಹನೀಯರು, ವ್ಯಾಸರಾವ್ ಅವರ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಸಂತಾಪ ಕೋರಿದ್ದಾರೆ.

English summary
Including CM Kumaraswamy and opposition leader Yeddyurappa many political leaders express their condolence to poet M.N.Vyasarao who expired today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X