ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಥಳೀಯ ಸಂಸ್ಥೆಗಳ ಚುನಾವಣೆ: ಯಾರು ಏನು ಹೇಳಿದರು?

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 3: ಒಟ್ಟು 105 ಸ್ಥಳೀಯ ಸಂಸ್ಥೆಗಳಿಗೆ ಆಗಸ್ಟ್ 31ರಂದು ಚುನಾವಣೆ ನಡೆಸಲಾಗಿದ್ದು ಇಂದು ಮತೆಣಿಕೆ ಕಾರ್ಯ ನಡೆದಿದೆ. 105 ಸ್ಥಳೀಯ ಸಂಸ್ಥೆಗಳಲ್ಲಿ ಮತೆಣಿಕೆ ಕಾರ್ಯ ಬಹುತೇಕವಾಗಿ ಪೂರ್ಣಗೊಂಡಿದೆ. ಈ ಕುರಿತು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದ ಸಚಿವರು, ಮುಖಂಡರುಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮೈಸೂರು, ತುಮಕೂರು, ಶಿವಮೊಗ್ಗ ಮಹಾನಗರ ಪಾಲಿಕೆಗಳಿಗೆ ಮತ ಎಣಿಕೆ ಕಾರ್ಯ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು, ರಾಜ್ಯದ 29 ನಗರಸಭೆ, 53 ಪುರಸಭೆ ಹಾಗೂ 20 ಪಟ್ಟಣ ಪಂಚಾಯತಿಗಳ ಮತ ಎಣಿಕೆ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಿತು.

LIVE: ಸ್ಥಳೀಯ ಸಂಸ್ಥೆ ಫಲಿತಾಂಶ: ಪಕ್ಷಗಳ ಬಲಾಬಲ: ಕಾಂಗ್ರೆಸ್ 982 , ಬಿಜೆಪಿ 927, ಜೆಡಿಎಸ್ 375LIVE: ಸ್ಥಳೀಯ ಸಂಸ್ಥೆ ಫಲಿತಾಂಶ: ಪಕ್ಷಗಳ ಬಲಾಬಲ: ಕಾಂಗ್ರೆಸ್ 982 , ಬಿಜೆಪಿ 927, ಜೆಡಿಎಸ್ 375

ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಭಾರಿ ಮಹತ್ವ ಪಡೆದಿದೆ. ರಾಜ್ಯ ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಸ್ವತಂತ್ರವಾಗಿಯೇ ಕಣಕ್ಕೆ ಇಳಿದಿವೆ ಕಾಂಗ್ರೆಸ್ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇದಕ್ಕೆ ಕಾಂಗ್ರೆಸ್ ನಾಯಕರು ಹರ್ಷ ವ್ಯಕ್ತಪಡಿಸಿದ್ದು ಸಮ್ಮಿಶ್ರ ಸರ್ಕಾರದ ಗೆಲುವು ಎಂದು ಹೇಳುತ್ತಿದ್ದಾರೆ.

ಲೋಕಲ್ ವಾರ್: ಮೈತ್ರಿ ಸರ್ಕಾರದ ಹಣಬಲಕ್ಕೆ ಗೆಲುವು ಎಂದ ಯಡಿಯೂರಪ್ಪ

ಲೋಕಲ್ ವಾರ್: ಮೈತ್ರಿ ಸರ್ಕಾರದ ಹಣಬಲಕ್ಕೆ ಗೆಲುವು ಎಂದ ಯಡಿಯೂರಪ್ಪ

ಬಿಜೆಪಿ ನಿರೀಕ್ಷಿಸಿದ ಸ್ಥಾನಗಳನ್ನು ಪಡೆಯಲು ಸಾಧ್ಯವಾಗಿಲ್ಲ, ಆದರೂ ಉತ್ತಮ ಸಾಧನೆ ಮಾಡಿದೆ, ಜೆಡಿಎಸ್ ,ಕಾಂಗ್ರೆಸ್ ಮೈತ್ರಿಯು ಈ ಚುನಾವಣೆಗೆ ಸ್ವಲ್ಪ ಪ್ರಮಾಣದ ಪರಿಣಾಮವನ್ನು ಬೀರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್, ಕಾಂಗ್ರೆಸ್‌ನ ಮೈತ್ರಿ ಹಾಗೂ ಹಣದ ಬಲದಿಂದಾಗಿ ನಮಗೆ ನಿರೀಕ್ಷಿಸಿದ ಫಲಿತಾಂಶ ಬಂದಿಲ್ಲಮ ಆದರೆ ಕೆಲವೆಡೆ ಬಹುಮತವನ್ನು ಗಳಿಸಿದ್ದೇವೆ, ಶಿವಮೊಗ್ಗ, ತುಮಕೂರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಇನ್ನುಳಿದಂತೆ 15ಪುರಸಭೆ, 8 ಪಟ್ಟಣ ಪಂಚಾಯ್ತಿಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತವನ್ನು ಪಡೆದಿದೆ ಎಂದರು.

ಕಾಂಗ್ರೆಸ್ ಮೊದಲಿಗಿಂತಲೂ ಕಡಿಮೆ ಸ್ಥಾನ ಗೆದ್ದಿದೆ

ಕಾಂಗ್ರೆಸ್ ಮೊದಲಿಗಿಂತಲೂ ಕಡಿಮೆ ಸ್ಥಾನ ಗೆದ್ದಿದೆ

ಮಾಜಿ ಉಪ ಮುಖ್ಯಮಂತ್ರಿ ಆರ್​. ಆಶೋಕ್​ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಕುರಿತು ಮಾತನಾಡಿ, ಕಾಂಗ್ರೆಸ್​ ಮೊದಲಿಗಿಂತ ಕಡಿಮೆ ಸ್ಥಾನ ಗೆದ್ದಿದೆ. ಹಲವೆಡೆ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನ ಈ ಬಾರಿ ನಮಗೆ ಸಿಕ್ಕಿದೆ. ಕಾಂಗ್ರೆಸ್​-ಜೆಡಿಎಸ್​ ಸರ್ಕಾರದ ಕೌಂಟ್​ಡೌನ್​ ಶುರುವಾಗಿದೆ ಎಂದು ಹೇಳಿದರು.

ಈ ಇಬ್ಬರು ಅಭ್ಯರ್ಥಿಗಳು ಗೆದ್ದಿದ್ದು ಮತಗಳಿಂದಲ್ಲ, ಚೀಟಿಯಿಂದ! ಈ ಇಬ್ಬರು ಅಭ್ಯರ್ಥಿಗಳು ಗೆದ್ದಿದ್ದು ಮತಗಳಿಂದಲ್ಲ, ಚೀಟಿಯಿಂದ!

ಸ್ಥಳೀಯ ಚುನಾವಣೆ, ಸಮ್ಮಿಶ್ರ ಸರ್ಕಾರದ ಜಯ ಎಂದ ಸಚಿವ ಕಾಂಶೆಂಪೂರ್

ಸ್ಥಳೀಯ ಚುನಾವಣೆ, ಸಮ್ಮಿಶ್ರ ಸರ್ಕಾರದ ಜಯ ಎಂದ ಸಚಿವ ಕಾಂಶೆಂಪೂರ್

ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತಎಣಿಕೆ ಬಹುತೇಕ ಮುಕ್ತಾಯಗೊಂಡಿದೆ. ರಾಜ್ಯದ ಜನತೆಗೆ ಸಮ್ಮಿಶ್ರ ಸರ್ಕಾರ ತೃಪ್ತಿ ತಂದಿದೆ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಅನೇಕಕಡೆಗಳಲ್ಲಿ ಜಯಭೇರಿ ಬಾರಿಸಿದೆ. ನಮ್ಮದು ಸುಭದ್ರ ಸರ್ಕಾರ ಎಂದು ಮತ್ತೊಮ್ಮೆ ಸಾಬೀತಾಗಿದೆ. ಸ್ಥಳೀಯ ಚುನಾವಣಾ ಫಲಿತಾಂಶದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Civic Polls: ಗೆದ್ದಿದ್ದಕ್ಕೆ ಶರ್ಟ್ ಬಿಚ್ಚಿ ಕುಣಿದ ಬಿಜೆಪಿ ಅಭ್ಯರ್ಥಿ! Civic Polls: ಗೆದ್ದಿದ್ದಕ್ಕೆ ಶರ್ಟ್ ಬಿಚ್ಚಿ ಕುಣಿದ ಬಿಜೆಪಿ ಅಭ್ಯರ್ಥಿ!

ಲೋಕಲ್ ಚುನಾವಣೆ ಕಾಂಗ್ರೆಸ್ ಸಾಧನೆ ತೃಪ್ತಿಕರವಾಗಿದೆ

ಲೋಕಲ್ ಚುನಾವಣೆ ಕಾಂಗ್ರೆಸ್ ಸಾಧನೆ ತೃಪ್ತಿಕರವಾಗಿದೆ

ಸ್ಥಳೀಯ ಸಂಸ್ಥೆಗಳ ಬಹುತೇಕ ಫಲಿತಾಂಶ ಹೊರಬಿದ್ದಿದ್ದು ಇದರಲ್ಲಿ ಕಾಂಗ್ರೆಸ್ ಸಾಕಷ್ಟು ಮುನ್ನಡೆಯನ್ನು ಕಾಯ್ದುಕೊಂಡಿದೆ, ಕಾಂಗ್ರೆಸ್ ಸಾಧನೆ ತೃಪತಿಕರವಾಗಿದೆ, ಬಿಜೆಪಿ ಪ್ರಾಭಲ್ಯ ಇರುವ ಕಡೆ ಸ್ವಲ್ಪ ಹಿನ್ನೆಡೆಯಾಗಿದೆ, ಅಗತ್ಯವಿದ್ದಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲಾಗುತ್ತದೆ, ಅತಂತ್ರ ಪರಿಸ್ಥಿತಿ ಇರುವ ಕಡೆ ಅದರ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ

ಬಾಗಲಕೋಟೆ ಜಿಲ್ಲೆಯಲ್ಲಿ ಅಧಿಕಾರದ ಹೆಚ್ಚಿನ ಪಾಲು ಬಿಜೆಪಿಗೆ ಬಾಗಲಕೋಟೆ ಜಿಲ್ಲೆಯಲ್ಲಿ ಅಧಿಕಾರದ ಹೆಚ್ಚಿನ ಪಾಲು ಬಿಜೆಪಿಗೆ

English summary
Karnataka Urbal local body elections results has been announced today. Various political leaders reacted to this results
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X