ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಬೆಟ್ಟಿಂಗ್‌ ಕಟ್ಟಿದರೆ ಕೋಕಾ, ಗೂಂಡಾ ಕಾಯ್ದೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 24 : ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳ ಮತದಾನ ಮಕ್ತಾಯಗೊಂಡಿದೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಬೆಟ್ಟಿಂಗ್ ಜೋರಾಗಿದೆ.

ಲೋಕಸಭಾ ಚುನಾವಣೆ 2019 ವಿಶೇಷ ಪುಟ

ಯಾವ ಕ್ಷೇತ್ರದಲ್ಲಿ ಯಾರು ಗೆಲುವು ಸಾಧಿಸುತ್ತಾರೆ? ಎಂಬ ಮಾತುಗಳು ಆರಂಭವಾಗಿವೆ. ತಮ್ಮ ನೆಚ್ಚಿನ ಅಭ್ಯರ್ಥಿ ಪರವಾಗಿ ಬೆಂಬಲಿಗರು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಆದರೆ, ಬೆಟ್ಟಿಂಗ್ ಕಟ್ಟುವವರಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಏನಿದು ಗೂಂಡಾ ಕಾಯ್ದೆ ಏನಿದು?ಏನಿದು ಗೂಂಡಾ ಕಾಯ್ದೆ ಏನಿದು?

ಚುನಾವಣಾ ಬೆಟ್ಟಿಂಗ್‌ನಲ್ಲಿ ತೊಡಗಿರುವವರ ವಿರುದ್ಧ ಗೂಂಡಾ ಅಥವ ಕೋಕಾ ಕಾಯ್ದೆಯನ್ನು ಜಾರಿಗೊಳಿಸಲು ಡಿಜಿಪಿ ನೀಲಮಣಿ ಎನ್.ರಾಜು ಅವರು ಆದೇಶ ಹೊರಡಿಸಿದ್ದಾರೆ. ಆದ್ದರಿಂದ, ಬೆಟ್ಟಿಂಗ್‌ನಲ್ಲಿ ತೊಡಗಿದರೆ ಜೈಲು ಸೇರುವುದು ಖಂಡಿತ, ಈ ಕಾಯ್ದೆಯಡಿ ಬಂಧನವಾದರೆ ತಕ್ಷಣ ಜಾಮೀನು ಸಿಗುವುದಿಲ್ಲ.

ಮಂಡ್ಯದಲ್ಲಿ ಭರ್ಜರಿ ಬೆಟ್ಟಿಂಗ್ : ಗೆದ್ದರೆ ಕೋಟಿ, ಸೋತರೆ ಲಂಗೋಟಿ!ಮಂಡ್ಯದಲ್ಲಿ ಭರ್ಜರಿ ಬೆಟ್ಟಿಂಗ್ : ಗೆದ್ದರೆ ಕೋಟಿ, ಸೋತರೆ ಲಂಗೋಟಿ!

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ, ಮೈಸೂರು, ಹಾಸನ, ರಾಮನಗರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಟ್ಟಿಂಗ್ ನಡೆಯುತ್ತಿದೆ. ಮಾಧ್ಯಮಗಳಲ್ಲಿಯೂ ಈ ಕುರಿತು ಸುದ್ದಿಗಳು ಪ್ರಕಟವಾಗುತ್ತಿವೆ. ಆದ್ದರಿಂದ, ಪೊಲೀಸರಿಗೆ ಡಿಜಿಪಿ ಸೂಚನೆಯನ್ನು ನೀಡಿದ್ದಾರೆ....

ಪೊಲೀಸರಿಗೆ ಸೂಚನೆಗಳು

ಪೊಲೀಸರಿಗೆ ಸೂಚನೆಗಳು

* ತಮ್ಮ ನಗರ ಅಥವ ಜಿಲ್ಲಾ ವ್ಯಾಪ್ತಿಗಳಲ್ಲಿ ಸಕ್ರಿಯವಾಗಿರುವ ಬೆಟ್ಟಿಂಗ್ ದಂಧೆಕೋರರನ್ನು ಹಾಗೂ ಬುಕ್ಕಿಗಳನ್ನು ಗುರುತಿಸಿ, ಅವರ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು.

* ಬೆಟ್ಟಿಂಗ್ ಸಂಬಂಧ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ಗುಪ್ತಚರ ಸಿಬ್ಬಂದಿಯೂ ನಿಗಾ ಇಡಬೇಕು.

* ಬೆಟ್ಟಿಂಗ್ ನಿಗ್ರಹಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ವಿಶೇಷ ತಂಡಗಳನ್ನು ರಚಿಸಿ ಅವುಗಳಿಗೆ ನಿರ್ದಿಷ್ಟ ಕಾರ್ಯಸೂಚಿ ನೀಡಬೇಕು.

ಗೂಂಡಾ, ಕೋಕಾ ಕಾಯ್ದೆ

ಗೂಂಡಾ, ಕೋಕಾ ಕಾಯ್ದೆ

* ಜೂಜುಕೋರರ ವಿರುದ್ಧ ಗೂಂಡಾ ಕಾಯ್ದೆ ಅಥವ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಅಡಿ ಕ್ರಮ ತೆಗೆದುಕೊಳ್ಳಬೇಕು.

* ಬೆಟ್ಟಿಂಗ್‌ನಿಂದ ದೂರ ಇರುವಂತೆ ಎಲ್ಲಾ ವಲಯಗಳ ಐಜಿಪಿ ಹಾಗೂ ಜಿಲ್ಲೆಗಳ ಎಸ್ಪಿಗಳು ತಮ್ಮ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ, ಜನ ಜಾಗೃತಿಯನ್ನು ಮೂಡಿಸಬೇಕು.

ಜಾಮೀನು ಸಿಗಲ್ಲ

ಜಾಮೀನು ಸಿಗಲ್ಲ

ಗೂಂಡಾ ಕಾಯ್ದೆ ಅಥವ ಕೋಕಾ ಅಡಿ ಬಂಧಿಸಿದ ವ್ಯಕ್ತಿಗಳನ್ನು 24 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಅಗತ್ಯವಿಲ್ಲ. ನೇರವಾಗಿ ಜೈಲಿಗೆ ಕಳಿಸಬಹುದಾಗಿದೆ. ಪೊಲೀಸ್ ಕಸ್ಟಡಿ ಅಥವ ನ್ಯಾಯಾಂಗ ಬಂಧನವನ್ನು ಪದೇ ಪದೇ ವಿಸ್ತರಣೆ ಮಾಡುವ ಅಗತ್ಯವಿಲ್ಲ. ಒಂದು ವರ್ಷಗಳ ತನಕ ಜೈಲಿನಲ್ಲಿ ಇರಿಸಬಹುದಾಗಿದೆ.

ಮಂಡ್ಯದಲ್ಲಿ ಹೆಚ್ಚು ಬೆಟ್ಟಿಂಗ್

ಮಂಡ್ಯದಲ್ಲಿ ಹೆಚ್ಚು ಬೆಟ್ಟಿಂಗ್

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯದಲ್ಲಿ ಹೆಚ್ಚಿನ ಬೆಟ್ಟಿಂಗ್ ನಡೆಯುತ್ತಿದೆ. ಕಾಂಗ್ರೆಸ್‌-ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಬೆಟ್ಟಿಂಗ್ ನಡೆಯುತ್ತಿದೆ. ಹಣ, ಬೈಕ್, ಜಾನುವಾರುಗಳನ್ನು ಬೆಟ್ಟಿಂಗ್ ಇಡಲಾಗುತ್ತಿದೆ.

English summary
Neelamani N Raju Director General and Inspector General of Police of Karnataka warned that Goonda and Karnataka Control of Organised Crime Act (KCOCA) will be field against persons who involved on election betting. Voting completed in Karnataka, Counting on May 23, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X