ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿ ಕೊಂದು 4 ಲಕ್ಷ ರೂ. ಆಭರಣ ಹರ್ಷಿತಾಗೆ ಕಳಿಸಿದ್ದ ಡಾ. ರೇವಂತ್!

|
Google Oneindia Kannada News

ಬೆಂಗಳೂರು, ಫೆಬ್ರವರಿ 26 : ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಲಕ್ಷ್ಮೇಶ ನಗರದಲ್ಲಿ ನಡೆದ ಕವಿತಾ ಕೊಲೆ ಪ್ರಕರಣದ ಬಗ್ಗೆ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿದೆ. ಪತ್ನಿಯನ್ನು ಕೊಲೆ ಮಾಡಿದ್ದ ದಂತವೈದ್ಯ ಡಾ. ರೇವಂತ್ ಆಭರಣಗಳನ್ನು ಪ್ರಿಯತಮೆಗೆ ಕೋರಿಯರ್ ಮಾಡಿದ್ದ. ಇದರ ಮೌಲ್ಯ ಸುಮಾರು 4.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

Recommended Video

ಎನ್ಕೌಂಟರ್ ವಿರುದ್ದ ತೆಲಂಗಾಣ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಕೆ | Oneindia Kannada

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿದ್ದ ಹರ್ಷಿತಾಗೆ ಆಭರಣಗಳನ್ನು ಡಾ. ರೇವಂತ್ ಕಳಿಸಿದ್ದ. ಕವಿತಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಕಡೂರು ಪೊಲೀಸರು ಬೆಂಗಳೂರಿಗೆ ಆಗಮಿಸಿ, ಹರ್ಷಿತಾ ತಾಯಿ ಬಳಿ ಇದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಮಸಾಲೆ ದೋಸೆ ತಿನ್ನಲು ಹೋಗಿ ಸಿಕ್ಕಿ ಬಿದ್ದಿದ್ದ ಡಾ. ರೇವಂತ್!ಮಸಾಲೆ ದೋಸೆ ತಿನ್ನಲು ಹೋಗಿ ಸಿಕ್ಕಿ ಬಿದ್ದಿದ್ದ ಡಾ. ರೇವಂತ್!

ಫೆಬ್ರವರಿ 17ರಂದು ಕವಿತಾರಿಗೆ ಇಂಜೆಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸಿ ಬಳಿಕ ಕತ್ತುಕೊಯ್ದು ಹತ್ಯೆ ಮಾಡಲಾಗಿತ್ತು. 5 ದಿನದ ಬಳಿಕ ಡಾ. ರೇವಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ರೇವಂತ್ ಆತ್ಮಹತ್ಯೆ ಸುದ್ದಿ ತಿಳಿದ ಬಳಿಕ ಆರ್. ಆರ್. ನಗರದ ಮನೆಯಲ್ಲಿ ಹರ್ಷಿತಾ ನೇಣಿಗೆ ಶರಣಾಗಿದ್ದರು.

ಒಂದು ಕೊಲೆ, ಎರಡು ಆತ್ಮಹತ್ಯೆ; ಡಾಕ್ಟರ್ ಜೀವನದ ದುರಂತ ಕಥೆ!ಒಂದು ಕೊಲೆ, ಎರಡು ಆತ್ಮಹತ್ಯೆ; ಡಾಕ್ಟರ್ ಜೀವನದ ದುರಂತ ಕಥೆ!

ಡಾ. ರೇವಂತ್ ಮತ್ತು ಹರ್ಷಿತಾ ನಡುವೆ ಅನೈತಿಕ ಸಂಬಂಧವಿತ್ತು. ಈ ವಿಚಾರ ಕವಿತಾಗೆ ತಿಳಿದಿತ್ತು, ಅವರು ಪತಿ ರೇವಂತ್ ಜೊತೆ ಗಲಾಟೆ ಮಾಡಿದ್ದರು. ಕವಿತಾಳನ್ನು ಕೊಂದು ಹರ್ಷಿತಾ ಜೊತೆ ಬಾಳಲು ಡಾ. ರೇವಂತ್ ಮಾಡಿದ್ದ ಆಲೋಚನೆಯ ಭಾಗವಾಗಿ ಕವಿತಾಳ ಹತ್ಯೆ ನಡೆದಿತ್ತು.

ಹರ್ಷಿತಾ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವುಹರ್ಷಿತಾ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು

ಡಾ. ರೇವಂತ್ ಯಾರು?

ಡಾ. ರೇವಂತ್ ಯಾರು?

ಡಾ. ರೇವಂತ್ ಚಿಕ್ಕಮಗಳೂರು ಜಿಲ್ಲೆ ಕಡೂರಿನ ಲಕ್ಷ್ಮೇಶ ನಗರದ ನಿವಾಸಿ. ಬೀರೂರಿನಲ್ಲಿ ಡೆಂಟಲ್ ಕ್ಲಿನಿಕ್ ಇಟ್ಟುಕೊಂಡಿದ್ದರು. ದಿ. ಸಂಜೀವ್ ಮತ್ತು ಕೆನರಾ ಬ್ಯಾಂಕ್ ಉದ್ಯೋಗಿಯಾದ ಅಲಮೇಲಮ್ಮ ಪುತ್ರ. ಏಳು ವರ್ಷದ ಹಿಂದೆ ಉಡುಪಿ ಮೂಲದ ಕವಿತಾರನ್ನು ವಿವಾಹವಾಗಿದ್ದರು. ಈ ದಂಪತಿಗೆ 5 ವರ್ಷದ ಗೌರವ್ ಮತ್ತು ಏಳು ತಿಂಗಳ ಆರ್ಯನ್ ಎಂಬ ಮಗುವಿದೆ.

ಕವಿಳಾರನ್ನು ಹತ್ಯೆ ಮಾಡಿದ್ದರು

ಕವಿಳಾರನ್ನು ಹತ್ಯೆ ಮಾಡಿದ್ದರು

ಹರ್ಷಿತಾ ಎಂಬುವವರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಡಾ. ರೇವಂತ್ ಫೆಬ್ರವರಿ 17ರಂದು ಪತ್ನಿ ಕವಿತಾರಿಗೆ ಇಂಜೆಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸಿದ್ದರು. ಬಳಿಕ ಅವರನ್ನು ಕಾರು ಶೆಡ್‌ಗೆ ಎಳೆದುಕೊಂಡು ಹೋಗಿ ಕತ್ತು ಕೊಯ್ದು ಕೊಲೆ ಮಾಡಿದ್ದರು. ಮಗ ಶಾಲೆಯಿಂದ ಬರುತ್ತಿದ್ದಂತೆ ಅವನನ್ನು ಮಸಾಲೆ ದೋಸೆ ತಿನ್ನಲು ಕರೆದುಕೊಂಡು ಹೋಗಿದ್ದರು. ಬಳಿಕ ಪೊಲೀಸರಿಗೆ ಕರೆ ಮಾಡಿ ಪತ್ನಿಯನ್ನು ಯಾರೋ ಕೊಂದು ಆಭರಣ, ಹಣ ದೋಚಿದ್ದಾರೆ ಎಂದು ಮಾಹಿತಿ ನೀಡಿದ್ದರು.

ಮನೆಯ ಬೀರು ಒಡೆದಿತ್ತು

ಮನೆಯ ಬೀರು ಒಡೆದಿತ್ತು

ಮನೆಯಿಂದ ಹೊರ ಹೋಗುವ ಸಮಯದಲ್ಲಿ ಮನೆಯ ಬೀರುವನ್ನು ಒಡೆದು 100 ಗ್ರಾಂ ಚಿನ್ನದ ಆಭರಣ, 2 ಕೆಜಿ ಬೆಳ್ಳಿಯ ಆಭರಣ, ಸ್ವಲ್ಪ ಹಣವನ್ನು ತೆಗೆದುಕೊಂಡು ಹೋಗಿದ್ದರು. ಚಿಕ್ಕಮಗಳೂರು ಎಸ್‌ಪಿ ಹರೀಶ್ ಪಾಂಡೆ ಕವಿತಾ ಕೊಲೆ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚನೆ ಮಾಡಿದ್ದರು. ಈ ತಂಡಕ್ಕೆ ಈಗ ಡಾ. ರೇವಂತ್ ಮನೆಯಲ್ಲಿ ಕಳುವಾದ ಆಭರಣ ಹರ್ಷಿತಾ ಮನೆಯಲ್ಲಿ ಸಿಕ್ಕಿದೆ.

ಹರ್ಷಿತಾ ರಿಸೀವ್ ಮಾಡಿದ್ದರು

ಹರ್ಷಿತಾ ರಿಸೀವ್ ಮಾಡಿದ್ದರು

ಪತ್ನಿ ಕವಿತಾರನ್ನು ಹತ್ಯೆ ಮಾಡಿದ್ದ ಡಾ. ರೇವಂತ್ ಮನೆಯಲ್ಲಿ ದೋಚಿದ್ದ ಕವಿತಾ ಆಭರಣಗಳನ್ನು ಕೋರಿಯರ್ ಮಾಡಿದ್ದರು. ಆರ್. ಆರ್. ನಗರದ ಮನೆಯಲ್ಲಿ ಹರ್ಷಿತಾ ಅದನ್ನು ರಿಸೀವ್ ಮಾಡಿದ್ದರು. ಬಳಿಕ ಅದನ್ನು ತಾಯಿಗೆ ನೀಡಿದ್ದರು. ಕೋರಿಯರ್ ಮಾಡಿದ್ದ ಬಗ್ಗೆ ಮಾಹಿತಿ ತಿಳಿದ ಪೊಲೀಸರು ರಾಜರಾಜೇಶ್ವರಿ ನಗರದ ಪೊಲೀಸರ ಸಹಾಯ ಪಡೆದು ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿದ್ದ ಹರ್ಷಿತಾ

ಆತ್ಮಹತ್ಯೆ ಮಾಡಿಕೊಂಡಿದ್ದ ಹರ್ಷಿತಾ

ಡಾ. ರೇವಂತ್ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಾಹಿತಿ ತಿಳಿದ ಹರ್ಷಿತಾ ಫೆಬ್ರವರಿ 22ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಫೆಬ್ರವರಿ 23ರಂದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಡಾ. ರೇವಂತ್ ಕಳಿಸಿದ್ದ ಆಭರಣಗಳನ್ನು ಅವರು ತಾಯಿಗೆ ನೀಡಿದ್ದರು.

English summary
Kadur and Bengaluru Rajarajeshwari Nagar police seized jewelry belongs to Kavitha who killed bu husband Dr. Revanth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X