ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗಲ್‌ಟನ್‌ ರೆಸಾರ್ಟ್‌ನ ಪೊಲೀಸ್‌ ಭದ್ರತೆ ವಾಪಸ್‌, ಬಿಎಸ್‌ವೈ ತಂತ್ರ?

By Manjunatha
|
Google Oneindia Kannada News

ಬಿಡದಿ, ಮೇ 17: ಕಾಂಗ್ರೆಸ್‌ ಶಾಸಕರು ತಂಗಿರುವ ಈಗಲ್‌ಟನ್ ರೆಸಾರ್ಟ್‌ಗೆ ನೀಡಲಾಗಿದ್ದ ಪೊಲೀಸ್ ಭದ್ರತೆಯನ್ನು ಹಿಂಪಡೆದುಕೊಳ್ಳಲಾಗಿದೆ. ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ನಡೆದಿರುವ ಈ ಬೆಳವಣಿಗೆ ಕುತೂಹಲ ಕೆರಳಿಸಿದೆ.

100% ಬಹುಮತ ಸಾಬೀತು ಮಾಡಿಯೇ ತೀರುತ್ತೇನೆ: ಯಡಿಯೂರಪ್ಪ 100% ಬಹುಮತ ಸಾಬೀತು ಮಾಡಿಯೇ ತೀರುತ್ತೇನೆ: ಯಡಿಯೂರಪ್ಪ

ಕುದುರೆ ವ್ಯಾಪಾರದಿಂದ ಪಾರಾಗಲು ಬಿಡದಿ ಬಳಿ ಇರುವ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ನಿನ್ನೆ ರಾತ್ರಿಯಿಂದಲೂ ಹಲವು ಶಾಸಕರು ವಾಸ್ತವ್ಯ ಹೂಡಿದ್ದಾರೆ, ನಿನ್ನೆ ರಾತ್ರಿಯಿಂದಲೂ ರೆಸಾರ್ಟ್‌ಗೆ ಭಾರಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು ಆದರೆ ಇಂದು ಬೆಳಿಗ್ಗೆ ಯಡಿಯೂರಪ್ಪ ಅವರು ಅಧಿಕಾರ ಸ್ವೀಕಾರ ಮಾಡಿದ ಕೆಲವೇ ಗಂಟೆಗಳಲ್ಲಿ ಭದ್ರತೆಯನ್ನು ವಾಪಾಸ್ ಪಡೆಯಲಾಗಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಮೌನ ಮುರಿದ ಆನಂದ್ ಸಿಂಗ್! ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಮೌನ ಮುರಿದ ಆನಂದ್ ಸಿಂಗ್!

ಪೊಲೀಸರು ಮಾಧ್ಯಮದವರನ್ನೂ ಸೇರಿದಂತೆ ಯಾರನ್ನೂ ರೆಸಾರ್ಟ್‌ ಒಳಗೆ ಮತ್ತು ಹೊರಗೆ ಹೋಗಲು ಬಿಡದೆ ಕಾವಲು ನಿಂತಿದ್ದರು ಆದರೆ ಈಗ ಪೊಲೀಸ್ ಭದ್ರತೆ ವಾಪಾಸ್ ಪಡೆದಿರುವ ಬೆನ್ನಲ್ಲೆ ಕಾಂಗ್ರೆಸ್‌ನ ಕಾರ್ಯಕರ್ತರೆ ಈಗಲ್‌ಟನ್ ರೆಸಾರ್ಟ್‌ ಮುಂದೆ ನಿಂತು ಕಾವಲು ಕಾಯುತ್ತಿದ್ದಾರೆ.

Police security given to Eagleton resort was taken back

ಬಹುಮತ ಸಾಬೀತು ಪಡೆಸಲು ನಾನಾ ಪ್ರಯತ್ನ ಮಾಡುತ್ತಿರುವ ಬಿಜೆಪಿಗೆ ಕಾಂಗ್ರೆಸ್‌ ಅಥವಾ ಜೆಡಿಎಸ್‌ನ ಶಾಸಕರನ್ನು ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಇದು ಯಡಿಯೂರಪ್ಪ ಅವರ ತಂತ್ರವಾಗಿದೆ, ಭದ್ರತೆ ತೆಗೆದುಹಾಕಿ ನಂತರ ಶಾಸಕರನ್ನು ವಾಮಮಾರ್ಗದಲ್ಲಿಯಾದರೂ ಸಂಪರ್ಕ ಮಾಡುವ ಪ್ರಯತ್ನದ ಭಾಗವಿದು ಎಂಬ ಅನುಮಾನ ಮೂಡಿಸಿದೆ.

Police security given to Eagleton resort was taken back

ಈಗಲ್‌ಟನ್‌ ರೆಸಾರ್ಟ್‌ನ ಭದ್ರತೆ ವಾಪಾಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶಾಸಕರನ್ನು ಕೊಚ್ಚಿಗೆ ವರ್ಗಾಯಿಸಲು ಕೂಡ ಕಾಂಗ್ರೆಸ್‌ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಶಾಸಕರನ್ನು ಕಾವಲು ಕಾಯುವ ಜವಾಬ್ದಾರಿಯನ್ನು ಸಂಸದ ಡಿ.ಕೆ.ಸುರೇಶ್ ಅವರಿಗೆ ನೀಡಲಾಗಿದೆ.

English summary
Police security taken back which given to Eagleton resort where congress MLA's were resident. From two days congress MLA's were in the Eagle ton resort in afraid of 'Operation BJP'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X