ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ಪಿಎಫ್‌ಐ ನಿದ್ದೆಗೆಡಿಸಿದ ಪೊಲೀಸ್ ರೇಡ್; 40ಕ್ಕೂ ಹೆಚ್ಚು ಕಡೆ ದಾಳಿ

|
Google Oneindia Kannada News

ಬೆಂಗಳೂರು, ಸೆ. 27: ಎನ್‌ಐಎ ದಾಳಿಯಾದ ಐದು ದಿನಗಳ ಬಳಿಕ ಇಂದು ಮಂಗಳವಾರ ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳಲ್ಲಿ ಪೊಲೀಸ್ ಮತ್ತು ಎನ್‌ಐಎ ತಂಡಗಳು ಇನ್ನೊಂದು ಸುತ್ತಿನ ದಾಳಿ ನಡೆಸಿವೆ.

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಅಸ್ಸಾಂ, ದೆಹಲಿ, ಉತ್ತರಪ್ರದೇಶ ಮೊದಲಾದ 8 ರಾಜ್ಯಗಳಲ್ಲಿ ನಡೆದ ರೇಡ್‌ನಲ್ಲಿ ನೂರಾರು ಮಂದಿಯನ್ನು ಬಂಧಿಸಲಾಗಿದೆ. ಕರ್ನಾಟಕ ರಾಜ್ಯವೊಂದರಲ್ಲೇ ಮಂಗಳವಾರ ನೂರಕ್ಕೂ ಹೆಚ್ಚು ಪಿಎಫ್‌ಐ ಮತ್ತು ಎಸ್‌ಡಿಪಿಐ ನಾಯಕರನ್ನು ಪೊಲೀಸರು ಬಂಧಿಸಿರುವ ಮಾಹಿತಿ ಬೆಳಕಿಗೆ ಬಂದಿದೆ.

ADGP ಅಲೋಕ್ ನೇತೃತ್ವದಲ್ಲಿ ಪಿಎಫ್ಐಗೆ ಸೇರಿದ ಸ್ಥಳಗಳಲ್ಲಿ ರಾಜ್ಯಾದ್ಯಂತ ದಾಳಿADGP ಅಲೋಕ್ ನೇತೃತ್ವದಲ್ಲಿ ಪಿಎಫ್ಐಗೆ ಸೇರಿದ ಸ್ಥಳಗಳಲ್ಲಿ ರಾಜ್ಯಾದ್ಯಂತ ದಾಳಿ

ಕರ್ನಾಟಕದಲ್ಲಿ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ಪೊಲೀಸರು 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ. ದಕ್ಷಿಣ ಕನ್ನಡ, ಬೆಳಗಾವಿ, ಹುಬ್ಬಳ್ಳಿ, ರಾಮನಗರ, ಕೋಲಾರ, ಬಾಗಲಕೋಟೆ, ವಿಜಯಪುರ, ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಮೊದಲಾದ ಜಿಲ್ಲೆಗಳಲ್ಲಿರುವ ಪಿಎಫ್‌ಐ ಮತ್ತು ಎಸ್‌ಡಿಪಿಐ ನಾಯಕರ ಮನೆ ಮತ್ತು ಕಚೇರಿಗಳ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ.

Police Raid on Over 40 Places of PFI Across Karnataka, 80 Detained

ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಕಣ್ಗಾವಲಿನಲ್ಲಿ ಈ ರೇಡ್ ನಡೆದಿವೆ. ಆಯಾ ಜಿಲ್ಲೆಗಳ ಎಸ್‌ಪಿ ಮತ್ತು ಕಮಿಷನರ್‌ಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಬಂಧನ?

ಯಾದಗಿರಿ ಮತ್ತು ಹಾಸನ ಜಿಲ್ಲೆಗಳಲ್ಲಿ ಎಸ್‌ಡಿಪಿಐನ ಜಿಲ್ಲಾಧ್ಯಕ್ಷರನ್ನು ವಶಕ್ಕೆ ಪಡೆಯಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಮಂದಿ ಪಿಎಫ್‌ಐ ನಾಯಕರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ. ರಾಮನಗರದಲ್ಲೂ 15ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೋಲಾರ, ಚಿತ್ರದುರ್ಗದಲ್ಲೂ PFI ಸಂಘಟನೆ ಮುಖಂಡರ ಬಂಧನಕೋಲಾರ, ಚಿತ್ರದುರ್ಗದಲ್ಲೂ PFI ಸಂಘಟನೆ ಮುಖಂಡರ ಬಂಧನ

ಪಿಎಫ್‌ಐ ಬಂಧಿತರು:

ದಕ್ಷಿನ ಕನ್ನಡ 25
ಮಂಗಳೂರು 10
ಬೆಳಗಾವಿ 5
ಹುಬ್ಬಳ್ಳಿ 10
ಕೋಲಾರ 7
ವಿಜಯಪುರ 2
ಬಾಗಲಕೊಟೆ 7
ರಾಮನಗರ 15
ಬೆಂಗಳೂರು ಗ್ರಾಮಾಂತರ 15
ಬೀದರ್: 5
ಬಳ್ಳಾರಿ: 5
ಕಲಬುರ್ಗಿ: 10

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ 9, ಹೊಸಕೋಟೆಯಲ್ಲಿ 4 ಮತ್ತು ದೊಡ್ಡಬಳ್ಳಾಪುರದಲ್ಲಿ 3 ಪಿಎಫ್‌ಐ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Police Raid on Over 40 Places of PFI Across Karnataka, 80 Detained

ಸೆಪ್ಟೆಂಬರ್ 22ರಂದು ದೇಶಾದ್ಯಂತ ಎನ್‌ಐಎ ಅಧಿಕಾರಿಗಳ ತಂಡಗಳು ಪಿಎಫ್‌ಐ ಕಚೇರಿಗಳು ಮತ್ತು ನಾಯಕರ ಮನೆಗಳ ಮೇಲೆ ರೇಡ್ ಮಾಡಿದ್ದವು. ಅದನ್ನು ವಿರೋಧಿಸಿ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆದವು. ಈ ವೇಳೆ ಹಿಂಸಾಚಾರಗಳೂ ಸಂಭವಿಸಿದ್ದವು.

ಆ ಪ್ರತಿಭಟನೆ ಮತ್ತು ಹಿಂಸಾಚಾರಗಳಲ್ಲಿ ಭಾಗಿಯಾದವರನ್ನು ಗುರಿ ಮಾಡಿ ಪೊಲೀಸ್ ರೇಡ್ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಹಾಗೆಯೇ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಮಾಡಿರುವುದು ಇವೇ ಮುಂತಾದ ಕಾರಣಕ್ಕೆ ಪೊಲೀಸರು ರಾಜ್ಯದ ವಿವಿಧೆಡೆ ಪಿಎಫ್‌ಐ ನಾಯಕರ ಮೇಲೆ ದಾಳಿ ಮಾಡಿದ್ದಾರೆನ್ನಲಾಗಿದೆ.

ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದೇನು?

ಇನ್ನು, ಪಿಎಫ್‌ಐ ಮೇಲೆ ನಡೆದ ಪೊಲೀಸ್ ರೇಡ್‌ನ ಉಸ್ತುವಾರಿ ಹೊತ್ತಿದ್ದ ಎಡಿಜಿಪಿ ಅಲೋಕ್ ಕುಮಾರ್ ನೀಡಿರುವ ಮಾಹಿತಿ ಪ್ರಕಾರ 80 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇಂದು ಮಧ್ಯಾಹ್ನ ಅಲೋಕ್ ಕುಮಾರ್ ಪತ್ರಿಕಾಗೋಷ್ಠಿ ನಡೆಸಿ ಈ ರೇಡ್‌ನ ಕೆಲ ಮಾಹಿತಿ ನೀಡಿದರು.

"ಕಳೆದ ವಾರ‌ ಪಿಎಫ್ಐ ಮುಖಂಡರ ಮೇಲೆ ಎನ್ಐಎ ದಾಳಿ‌ ನಡೆಸಿತ್ತು. ಇಂದು ಬೆಳಗ್ಗೆ 3 ಗಂಟೆಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಲಾಗಿದೆ. ಸುಮಾರು 80 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಶಕ್ಕೆ ಪಡೆದುಕೊಂಡ ಆರೋಪಿಗಳನ್ನು ಮುಂಜಾಗ್ರತ ಕ್ರಮವಾಗಿ ಆಯಾ ತಾಲೂಕು‌ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸ್ತೇವೆ. ಕಾನೂನು ಸುವ್ಯವಸ್ಥೆ ಧಕ್ಕೆ, ಕೋಮುಸೌಹಾರ್ಧಕ್ಕೆ ಹಾನಿ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಈ ದಾಳಿ ನಡೆಸಲಾಗಿದೆ. ವಶಕ್ಕೆ ಪಡೆದುಕೊಂಡ ಎಲ್ಲಾ‌ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು. ಮುಂಜಾಗ್ರತವಾಗಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಸೆಕ್ಷನ್ 107 ರಡಿ ಮುಚ್ಚಳಿಕೆ ಬರೆಸಲಾಗುವುದು. ಅಹಿತಕರ ಘಟನೆಯಲ್ಲಿ ಭಾಗಿಯಾಗಕೂಡದು, ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಬಾಂಡ್ ನಲ್ಲಿ ಬರೆಸಲಾಗುವುದು. 80 ಮಂದಿಯಲ್ಲಿ ಎಲ್ಲರೂ ಪಿಎಫ್ಐ ಹಾಗೂ ಎಸ್ ಡಿಪಿಐಯಲ್ಲಿ ಗುರುತಿಸಿಕೊಂಡಿದ್ದರು" ಎಂದು ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ದೇಶಾದ್ಯಂತ:

ಮಹಾರಾಷ್ಟ್ರದ ಔರಂಗಾಬಾದ್, ಜಲನ, ಪರ್ಭಾನಿ ಮೊದಲಾದ ಜಿಲ್ಲೆಗಳಲ್ಲಿ ಎನ್‌ಐಎ ರೇಡ್ ನಡೆದಿದೆ. ಈ ವೇಳೆ 27ಕ್ಕೂ ಹೆಚ್ಚು ಪಿಎಫ್‌ಐ ನಾಯಕರ ಬಂಧನವಾಗಿದೆ. ದೆಹಲಿಯಲ್ಲಿ 30ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಅಸ್ಸಾಂನಲ್ಲಿ 25ಕ್ಕೂ ಹೆಚ್ಚು ಮಂದಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮಧ್ಯಪ್ರದೇಶದಲ್ಲಿ ಎಟಿಎಸ್ ತಂಡಗಳು ಎಂಟು ಜಿಲ್ಲೆಗಳಲ್ಲಿ ಪಿಎಫ್‌ಐ ಕಚೇರಿಗಳ ಮೇಲೆ ದಾಳಿ 21 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉತ್ತರಪ್ರದೇಶದ ಮೀರತ್ ಸೇರಿ ಹಲವು ಕಡೆಯೂ ದಾಳಿಗಳಾಗಿವೆ.

ಮಧ್ಯಪ್ರದೇಶದ ಶಹಜಹನಾಬಾದ್ ಪ್ರದೇಶದ ಎಸ್‌ಡಿಪಿಐ ಕಚೇರಿಯಲ್ಲಿ ಎಟಿಎಸ್ ಸೋಮವಾರ ರಾತ್ರಿಯೇ ದಾಳಿ ಮಾಡಿ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಪಿಎಫ್‌ಐ ಸಂಘಟನೆಗೆ ಎಸ್‌ಡಿಪಿಐ ಫಂಡಿಂಗ್ ನೆರವು ಒದಗಿಸುತ್ತಿತ್ತು ಎಂಬುದು ಅನುಮಾನ. ಭಯೋತ್ಪಾದನಾ ನಿಗ್ರಹ ತಂಡ ಈ ದಾಳಿಯಲ್ಲಿ ಕೆಲ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸಿದೆ.

ಸೆಪ್ಟೆಂಬರ್ 22ರಂದು ನಡೆದ ಎನ್‌ಐಎ ದಾಳಿಯಲ್ಲಿ ಪಿಎಫ್‌ಐನ 106 ಮಂದಿಯನ್ನು ಅಧಿಕಾರಿಗಳು ಬಂಧಿಸಿದ್ದರು. ಈ ವೇಳೆ ಬಹಳಷ್ಟು ದಾಖಲೆಗಳನ್ನು ಜಪ್ತಿ ಮಾಡಿದ್ದರು.

(ಒನ್ಇಂಡಿಯಾ ಸುದ್ದಿ)

English summary
Karnataka police have raided on more than 40 places across the state belonging to PFI and have detained 80 persons as per information given by ADGP Alok Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X