• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ADGP ಅಲೋಕ್ ನೇತೃತ್ವದಲ್ಲಿ ಪಿಎಫ್ಐಗೆ ಸೇರಿದ ಸ್ಥಳಗಳಲ್ಲಿ ರಾಜ್ಯಾದ್ಯಂತ ದಾಳಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27: ರಾಜ್ಯಾದ್ಯಂತ ಏಕಕಾಲದಲ್ಲಿ ಕರ್ನಾಟಕ ಪೊಲೀಸರು ಪಿಎಫ್ಐ ಕಚೇರಿ, ನಾಯಕರ ನಿವಾಸದ ಮೇಲೆ ದಾಳಿಯನ್ನು ನಡೆಸಿದ್ದಾರೆ. ಕಾನೂನುಬಾಹಿರ ಚಟುವಟಿಕೆಯಲ್ಲಿ ಶಾಮೀಲಾದ ಅನುಮಾನದ ಮೇಲೆ 40ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ.

ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಪಿಎಫ್‌ಐ ನಾಯಕ ನಿವಾಸದ ಮೇಲೆ ದಾಳಿಯನ್ನು ನಡೆಸಿದ್ದಾರೆ. ಮಂಗಳೂರು, ಬಾಗಲಕೋಟೆ, ರಾಮನಗರ, ಕೊಪ್ಪಳ, ಬಳ್ಳಾರಿ, ಬೆಂಗಳೂರು ಗ್ರಾಮಂತರ, ಕೋಲಾರ, ಮೈಸೂರು, ಚಾಮರಾಜನಗರದಲ್ಲೂ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿಯನ್ನು ನಡೆಸಿ 40ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ತನಿಖೆಯನ್ನು ನಡೆಸುತ್ತಿದ್ದಾರೆ.

PFI ಕಚೇರಿ, ನಿವಾಸದಲ್ಲಿ NIA ಶೋಧ- ಸಿಕ್ಕಿದ್ದೇನು? ಯಾರೆಲ್ಲಾ ಬಂಧನ- ಇಲ್ಲಿದೆ ಸಂಪೂರ್ಣ ವಿವರPFI ಕಚೇರಿ, ನಿವಾಸದಲ್ಲಿ NIA ಶೋಧ- ಸಿಕ್ಕಿದ್ದೇನು? ಯಾರೆಲ್ಲಾ ಬಂಧನ- ಇಲ್ಲಿದೆ ಸಂಪೂರ್ಣ ವಿವರ

ಎನ್‌ಐಎ ದಾಳಿ ಬಳಿಕ ದೊಡ್ಡ ರೈಡ್

ಪಿಎಫ್‌ಐ ಮೇಲೆ ಕೆಲದಿನಗಳ ಹಿಂದೆಯಷ್ಟೆ ಎನ್‌ಐಎ, ಇಡಿ, ರಾಜ್ಯ ಪೊಲೀಸರ ಸಹಕಾರದೊಂದಿಗೆ ದೇಶದಾದ್ಯಂತ ಮಹತ್ವದ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಈ ದಾಳಿ ಸಮಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಲವು ಕಾರ್ಯಕರ್ತರು ಸಕ್ರಿಯವಾಗಿ ಪ್ರತಿಭಟನೆಯನ್ನು ನಡೆಸಿದ್ದರು. ಇವರ ಮೇಲೂ ಸಾಕಷ್ಟು ಅನುಮಾನಗಳು ಉಂಟಾದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ದಾಳಿಯನ್ನು ನಡೆಸಿದ್ದಾರೆ.

40ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ವಶಕ್ಕೆ

ಪಿಎಫ್‌ಐ ಕಾರ್ಯಕರ್ತ ಮತ್ತು ನಾಯಕರಿಗೆ ಸೇರಿದ ಸ್ಥಳ, ಕಚೇರಿ ಮತ್ತು ನಿವಾಸದ ಮೇಲೆ ದಾಳಿಯನ್ನು ನಡೆಸಲಾಗಿದ್ದು. ಕಾನೂನು ಬಾಹಿರ ಚಟುವಟಿಕೆಗಳಿಗೆ ಹಣಕಾಸಿನ ನೆರವನ್ನು ಪಡೆದ ಅನುಮಾನದ ಮೇಲೆ ಈ ಮಹತ್ವದ ಕಾರ್ಯಾಚರಣೆ ನಡೆದಿದೆ ಎನ್ನಲಾಗುತ್ತಿದೆ. ಜಿಲ್ಲೆಗಳಲ್ಲಿ ಜಿಲ್ಲೆಗಳ ಎಸ್ಪಿ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿದೆ. ಈಗಾಗಲೇ 40ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವ ರಾಜ್ಯ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

Police raid at PFI office across state More than 40 people have been detained

ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್‌ ಕುಮಾರ್ ಈ ದಾಳಿಯ ಮಾನಿಟರಿಂಗ್ ಮಾಡುತ್ತಿದ್ದು. ಯಾವ ಜಿಲ್ಲೆಯಲ್ಲಿ ಎಷ್ಟು ಜನರನ್ನು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ ಕಚೇರಿಯಲ್ಲಿ ಯಾವೆಲ್ಲಾ ವಸ್ತುಗಳು ಸಿಕ್ಕಿವೆ ಎನ್ನುವುದು ದಾಳಿ ಸಂಪೂರ್ಣವಾದ ಬಳಿಕವಷ್ಟೇ ತಿಳಿದುಬರಲಿದೆ.

English summary
Karnataka Police raided the PFI office and the leader's residence. More than 40 people have been detained on suspicion of involvement in illegal activities,Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X