ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ. ರೇವಂತ್‌ಗೆ ಬಂದ ಕರೆ ಕವಿತಾ ಕೊಲೆಗೆ ಕಾರಣವಾಯಿತು!

|
Google Oneindia Kannada News

ಬೆಂಗಳೂರು, ಫೆಬ್ರವರಿ 27 : ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದ ದಂತವೈದ್ಯ ಡಾ. ರೇವಂತ್ ಪತ್ನಿ ಕವಿತಾ ಕೊಲೆ ಪ್ರಕರಣ ಬೆಂಗಳೂರಿನ ತನಕ ಬಂದು ನಿಂತಿದೆ. ಕವಿತಾ ಕೊಲೆ ಮಾಡಿರುವುದು ಪತಿ ರೇವಂತ್ ಎಂಬುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಫೆಬ್ರವರಿ 17ರಂದು ಡಾ. ರೇವಂತ್ ಕವಿತಾಳಿಗೆ ಇಂಜೆಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸಿದ್ದ. ಬಳಿಕ ಕಾರು ಶೆಡ್‌ಗೆ ಆಕೆಯನ್ನು ಎಳೆದುಕೊಂಡು ಹೋಗಿ ಕತ್ತುಕೊಯ್ದು ಹತ್ಯೆ ಮಾಡಿದ್ದ. ಹತ್ಯೆಯ 5 ದಿನದ ಬಳಿಕ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ.

ಪತ್ನಿ ಕೊಂದು 4 ಲಕ್ಷ ರೂ. ಆಭರಣ ಹರ್ಷಿತಾಗೆ ಕಳಿಸಿದ್ದ ಡಾ. ರೇವಂತ್!ಪತ್ನಿ ಕೊಂದು 4 ಲಕ್ಷ ರೂ. ಆಭರಣ ಹರ್ಷಿತಾಗೆ ಕಳಿಸಿದ್ದ ಡಾ. ರೇವಂತ್!

ಡಾ. ರೇವಂತ್ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರದ ಹರ್ಷಿತಾ ನಡುವೆ ಅಕ್ರಮ ಸಂಬಂಧವಿತ್ತು. ಕವಿತಾ ಹತ್ಯೆ ಮಾಡಲು ಕುಮ್ಮಕ್ಕು ನೀಡಿದ್ದು ಹರ್ಷಿತಾ ಎಂದು ಕಡೂರು ಪೊಲೀಸರು ಹೇಳಿದ್ದಾರೆ. ಫೆಬ್ರವರಿ 22ರಂದು ಕವಿತಾ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡಾ. ರೇವಂತ್‌ಗೆ ಪತ್ನಿ ಕೊಲೆಯ ಐಡಿಯಾ ಕೊಟ್ಟಿದ್ದು ಹರ್ಷಿತಾ!ಡಾ. ರೇವಂತ್‌ಗೆ ಪತ್ನಿ ಕೊಲೆಯ ಐಡಿಯಾ ಕೊಟ್ಟಿದ್ದು ಹರ್ಷಿತಾ!

ಕವಿತಾ ಕೊಲೆ ಪ್ರಕರಣಕ್ಕೆ ಅಂತಿಮ ರೂಪುರೇಷೆ ಸಿಕ್ಕಿದೆ ಎಂದು ಕಡೂರು ಪೊಲೀಸರು ಹೇಳಿದ್ದಾರೆ. ಆದರೆ, ಡಾ. ರೇವಂತ್ ಮತ್ತು ಹರ್ಷಿತಾ ಆತ್ಮಹತ್ಯೆ ಪ್ರಕರಣದ ತನಿಖೆ ಇನ್ನೂ ಮುಂದುವರೆದಿದೆ. ಅದರಲ್ಲೂ ರೇವಂತ್ ದೂರವಾಣಿ ಕರೆಗಳ ಮಾಹಿತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಒಂದು ಕೊಲೆ, ಎರಡು ಆತ್ಮಹತ್ಯೆ; ಡಾಕ್ಟರ್ ಜೀವನದ ದುರಂತ ಕಥೆಒಂದು ಕೊಲೆ, ಎರಡು ಆತ್ಮಹತ್ಯೆ; ಡಾಕ್ಟರ್ ಜೀವನದ ದುರಂತ ಕಥೆ

ಪ್ರೇಮಿಗಳ ದಿನ ಬಂದ ಫೋನ್ ಕರೆ

ಪ್ರೇಮಿಗಳ ದಿನ ಬಂದ ಫೋನ್ ಕರೆ

ಫೆಬ್ರವರಿ 14 ಪ್ರೇಮಿಗಳ ದಿನ. ದಂತವೈದ್ಯ ಡಾ. ರೇವಂತ್ ಪತ್ನಿ ಕವಿತಾ ಮತ್ತು ಮಕ್ಕಳ ಜೊತೆ ಹೋಟೆಲ್‌ಗೆ ಊಟಕ್ಕೆ ಹೋಗಿದ್ದರು. ಆಗ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಹರ್ಷಿತಾ ಕರೆ ಮಾಡಿದ್ದರು. ಇದನ್ನು ಪಕ್ಕದಲ್ಲಿಯೇ ಇದ್ದ ಕವಿತಾ ಪ್ರಶ್ನೆ ಮಾಡಿದ್ದರು. ಮನೆಗೆ ಬಂದ ಬಳಿಕ ರೇವಂತ್ ಜೊತೆ ಈ ವಿಚಾರವಾಗಿ ಜಗಳವಾಡಿದ್ದರು.

ಹಿಂದೆಯೂ ಒಮ್ಮೆ ಗಲಾಟೆ ನಡೆದಿತ್ತು

ಹಿಂದೆಯೂ ಒಮ್ಮೆ ಗಲಾಟೆ ನಡೆದಿತ್ತು

ಡಾ. ರೇವಂತ್ ಮತ್ತು ಹರ್ಷಿತಾ ನಡುವೆ ಅಕ್ರಮ ಸಂಬಂಧ ಇರುವ ವಿಚಾರ ಕವಿತಾರಿಗೆ ತಿಳಿದಿತ್ತು. ಹಿಂದೆಯೂ ಇದೇ ವಿಚಾರದಲ್ಲಿ ದಂಪತಿಗಳ ನಡುವೆ ಜಗಳವಾಗಿತ್ತು. ಆಗ ಅವರು ಆತ್ಮಹತ್ಯೆಗೂ ಯತ್ನಿಸಿದ್ದರು. ಹರ್ಷಿತಾ ಸಹವಾಸ ಬಿಡುತ್ತೇನೆ ಎಂದು ರೇವಂತ್ ಭರವಸೆ ಕೊಟ್ಟಿದ್ದರು. ಆದರೆ, ಇಬ್ಬರೂ ಸಂಪರ್ಕದಲ್ಲಿದ್ದರು.

ಕೊಲೆಗೆ ಕುಮ್ಮಕ್ಕು ಕೊಟ್ಟಿದ್ದು ಹರ್ಷಿತಾ

ಕೊಲೆಗೆ ಕುಮ್ಮಕ್ಕು ಕೊಟ್ಟಿದ್ದು ಹರ್ಷಿತಾ

ಮನೆಯಲ್ಲಿ ಗಲಾಟೆಯಾದ ಬಳಿಕ ಡಾ. ರೇವಂತ್ ಹರ್ಷಿತಾಳಿಗೆ ಕರೆ ಮಾಡಿದ್ದರು. ಆಗ ಕವಿತಾ ಕೊಲೆ ಮಾಡಲು ಅವರು ಕುಮ್ಮಕ್ಕು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಹರ್ಷಿತಾ ಕುಮ್ಮಕ್ಕಿನಿಂದ ಕವಿತಾ ಕೊಲೆಗೆ ಸಂಚು ರೂಪಿಸಿ ಹತ್ಯೆ ಮಾಡಿದ ರೇವಂತ್ ತನಿಖೆ ದಾರಿ ತಪ್ಪಿಸಲು ಚಿನ್ನಾಭರಣ ದೋಚಿದ್ದರು. ಅದನ್ನು ಹರ್ಷಿತಾಗೆ ಕೋರಿಯರ್ ಮಾಡಿದ್ದರು. ಕಡೂರು ಪೊಲೀಸರು ಆ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರೇವಂತ್ ಮೇಲೆಯೇ ಅನುಮಾನ

ರೇವಂತ್ ಮೇಲೆಯೇ ಅನುಮಾನ

ಫೆಬ್ರವರಿ 17ರಂದು ಕವಿತಾ ಕೊಲೆ ನಡೆದ ಜಾಗಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಡಾ. ರೇವಂತ್ ಮೇಲೆಯೇ ಅನುಮಾನ ಬಂದಿತ್ತು. ರಕ್ತ ಬಿದ್ದಿದ್ದ ಜಾಗದ ಮೇಲೆ ಮ್ಯಾಟ್ ಹಾಕಲಾಗಿತ್ತು. ಬೀರುಗಳನ್ನು ಒಡೆದಿರುವುದು, ಚಿನ್ನಾಭರಣ ದೋಚಿದ ವಿಚಾರ ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಮೂರು ದಿನಗಳ ಬಳಿಕ ಕವಿತಾ ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದ ಮೇಲೆ ರೇವಂತ್ ಪಾತ್ರ ಇರುವುದು ಖಚಿತವಾಯಿತು. ವಿಚಾರಣೆಗೆ ಬರುವಂತೆ ಪೊಲೀಸರು ನೋಟಿಸ್ ನೀಡಿದರು.

ರೇವಂತ್ ಕೊನೆಯ ಕರೆಗಳು

ರೇವಂತ್ ಕೊನೆಯ ಕರೆಗಳು

ಪೊಲೀಸರು ನೋಟಿಸ್ ನೀಡುತ್ತಲೇ ಡಾ. ರೇವಂತ್ ಆತ್ಮಹತ್ಯೆಗೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ದಿನ ಹಲವು ಸ್ನೇಹಿತರಿಗೆ ಕರೆ ಮಾಡಿದ್ದ ರೇವಂತ್ ಇನ್ನು ಅರ್ಧಗಂಟೆ ಬಳಿಕ ನಾನು ಇರುವುದಿಲ್ಲ ಎಂದು ಹೇಳಿರುವುದು ಅವರ ಕರೆಗಳ ಮಾಹಿತಿ ಸಂಗ್ರಹಿಸಿದಾಗ ಪೊಲೀಸರಿಗೆ ತಿಳಿದಿದೆ. ರೇವಂತ್ ಸಾವಿನ ಸುದ್ದಿ ತಿಳಿಯುತ್ತಲೇ ಹರ್ಷಿತಾ ಬೆಂಗಳೂರಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

English summary
Kadur police probing dentist Dr.Revanth suicide and his wife Kavitha murder case. Kavitha murdered by Revanth on February 17 later he committed suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X