ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ರಿಂದ 245 ರವರೆಗೆ: ಕರ್ನಾಟಕದ ಶ್ವಾನಪಡೆಯ ಇತಿಹಾಸ ನಿಮಗೆ ಗೊತ್ತಾ?

|
Google Oneindia Kannada News

ಬೆಂಗಳೂರು ಏಪ್ರಿಲ್ 14: ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಆರು ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಸಂದೇಶ ಪೊಲೀಸರಿಗೆ ಕಳುಹಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಎಲ್ಲಾ ಪ್ರತಿಷ್ಠಿತ ಶಾಲೆಗಳ ತಪಾಸಣೆ ನಡೆಸಿದರಾದರೂ ಒಂದೇ ಒಂದು ಬಾಂಬ್ ಇರಲಿ ಅದರ ಕುರುಹು ಕೂಡ ಸಿಗಲಿಲ್ಲ. ಇಂದು ಬೆಳಗ್ಗೆ ಕೂಡ ಬೆಂಗಳೂರಿನ 16 ಶಾಲೆಗಳಿಗೆ ಅನಾಮಧೇಯ ಇಮೇಲ್ ಬಂದಿದ್ದು, ಶಾಲಾ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಎಚ್ಚರಿಸಲಾಗಿದೆ. ಶೀಘ್ರದಲ್ಲೇ, ಬಾಂಬ್ ನಿಷ್ಕ್ರಿಯ ದಳಗಳು ಕಾರ್ಯಾಚರಣೆಗೆ ಮುಂದಾಗಿವೆ. ಕಾರ್ಯಾಚರಣೆಯ ಮುಂಚೂಣಿಯಲ್ಲಿದ್ದ ಬೆಂಗಳೂರು ಪೊಲೀಸ್ ಶ್ವಾನದಳ ಘಟಕ ಇದು ನಕಲಿ ಸಂದೇಶ ಎಂದು ದೃಢಪಡಿಸಿದೆ.

ಸಿಲಿಕಾನ್‌ಸಿಟಿಯಲ್ಲಿ ಕಳೆದ ಕೆಲ ದಿನಗಳಿಂದ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಬೆದರಿಕೆ ಸಂದೇಶಗಳು ಬರುತ್ತಿವೆ. ಆದರೆ ಇದು ನಕಲಿ ಸಂದೇಶ ಎಂದು ಬೆಂಗಳೂರು ಶ್ವಾನಪಡೆ ಸಾಬೀತು ಮಾಡಿದೆ. ಈ ಸಂದೇಶದ ಮೂಲಕ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಅಂದಹಾಗೆ ನಮ್ಮ ರಾಜ್ಯದಲ್ಲಿ ಶ್ವಾನದಳಕ್ಕೆ ಒಂದು ಇತಿಹಾಸವಿದೆ. ಆರಂಭದಲ್ಲಿ ರಾಜ್ಯದಲ್ಲಿ ಆರೇ ಆರು ಶ್ವಾನಗಳಿದ್ದ ಘಟಕದಲ್ಲಿ ಇಂದು ಬರೋಬ್ಬರಿ 245 ಶ್ವಾನಗಳಿವೆ.

ಕರ್ನಾಟಕ ಪೊಲೀಸರು ಆರು ಪೊಲೀಸ್ ಕಮಿಷನರೇಟ್‌ಗಳು, 31 ಪೊಲೀಸ್ ಜಿಲ್ಲಾ ವ್ಯಾಪ್ತಿ ಮತ್ತು ಮೂರು ವಿಶೇಷ ಘಟಕಗಳಲ್ಲಿ ಒಟ್ಟಾರೆ ರಾಜ್ಯದಲ್ಲಿ 245 ಶ್ವಾನಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಜರ್ಮನ್ ಶೆಫರ್ಡ್ಸ್, ಲ್ಯಾಬ್ರಡಾರ್‌ಗಳು ಮತ್ತು ಬೆಲ್ಜಿಯನ್ ಮಾಲಿನೋಯಿಸ್ ಸೇರಿದಂತೆ 64 ಬಗೆಯ ಶ್ವಾನಗಳ ದೊಡ್ಡ ತಂಡವನ್ನು ಬೆಂಗಳೂರು ಹೊಂದಿದೆ.

Police Dept of Karnataka Has a 245-Strong Canine Force, Earlier It Has Just 6

ರಾಜ್ಯದ ಪೊಲೀಸ್ ಪಡೆಗೆ ಸರಿಸಮನಾಗಿ 54 ವರ್ಷಗಳ ಸುದೀರ್ಘ ಇತಿಹಾಸವನ್ನು ಶ್ವಾನದಳ ಹೊಂದಿದೆ. 1956 ರಲ್ಲಿ ಮೈಸೂರು ರಾಜ್ಯ ರಚನೆಯೊಂದಿಗೆ, ರಾಜ್ಯದಾದ್ಯಂತ ಪೊಲೀಸ್ ಚಟುವಟಿಕೆಗಳು ಮತ್ತು ಘಟಕಗಳನ್ನು ಬಲಪಡಿಸಲಾಯಿತು ಮತ್ತು ಬೆಂಗಳೂರು ಕಮಿಷನರೇಟ್ ಜುಲೈ 4, 1963 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ಕರ್ನಾಟಕ ಪೊಲೀಸ್ ಕಾಯಿದೆ 1963 ಏಪ್ರಿಲ್ 2, 1965 ರಿಂದ ಜಾರಿಗೆ ಬಂದಿತು. ಈ ವೇಳೆ ಶ್ವಾನದಳ ಸ್ಕ್ವಾಡ್‌ಗೆ ಬೇಡಿಕೆ ಇತ್ತು. ಬಳಿಕ 1968 ರಲ್ಲಿ ಮದ್ರಾಸ್ ಪೋಲಿಸ್‌ನಿಂದ ನಿವೃತ್ತ ಅಧಿಕಾರಿ ಜೆಬಿ ಸ್ಯಾಮುಯಲ್ ಅವರು ಕರ್ನಾಟಕದಲ್ಲಿ ಶ್ವಾನ ದಳವನ್ನು ಪ್ರಾರಂಭಿಸಿದರು.

Police Dept of Karnataka Has a 245-Strong Canine Force, Earlier It Has Just 6

"ನಾಯಿಗಳು ಯಾವಾಗಲೂ ಶಿಸ್ತಿನ ಇಲಾಖೆಗಳೊಂದಿಗೆ ಬಲವಾದ ಸಂಬಂಧವನ್ನು ಹೊಂದಿವೆ ಮತ್ತು ಸೈನ್ಯದಲ್ಲಿ ಪ್ರಾಣಿಗಳ ಪ್ರವೇಶವು ಪಶುವೈದ್ಯಕೀಯ ವಿಜ್ಞಾನದ ಶಾಖೆಯನ್ನು ಹುಟ್ಟುಹಾಕಿತು. 70 ಮತ್ತು 80 ರ ದಶಕದಲ್ಲಿ ಪೊಲೀಸ್ ಥೀಮ್‌ಗಳೊಂದಿಗೆ ಅನೇಕ ಕನ್ನಡ ಚಲನಚಿತ್ರಗಳು ತಂಡವನ್ನು ವೈಭವೀಕರಿಸಿದ ಕಾರಣ ಶ್ವಾನದಳ ಘಟಕ ಕರ್ನಾಟಕದಲ್ಲಿ ಇಲಾಖೆಯ ಹೆಮ್ಮೆಯಾಗಿದೆ. ಮಾತ್ರವಲ್ಲದೆ ಕೇವಲ ಶ್ವಾನಗಳ ಸಹಾಯದಿಂದ ರಾಜ್ಯದಲ್ಲಿ ಹಲವು ಕುಖ್ಯಾತ ಪ್ರಕರಣಗಳು ಪತ್ತೆಯಾಗಿವೆ ಎಂದು ಕರ್ನಾಟಕ ಪೊಲೀಸ್ ಇತಿಹಾಸ ಶೀರ್ಷಿಕೆಯ ಸರಣಿಯನ್ನು ಬರೆದ ಹಿರಿಯ ಇತಿಹಾಸಕಾರ ಮತ್ತು ಬರಹಗಾರ ಸುರೇಶ್ ಮೂನಾ ಅವರು ತಿಳಿಸಿದ್ದಾರೆ.

ಸ್ಕ್ವಾಡ್‌ ಶ್ವಾನಗಳ ನಿರ್ವಹಣೆಗಾಗಿ ಪ್ರತಿ ವರ್ಷ 2.7 ಕೋಟಿ ರೂ. ವೆಚ್ಚ

1968 ರಲ್ಲಿ ಮೊದಲ ತಂಡ ಕೇವಲ ಆರು ನಾಯಿಗಳನ್ನು ಹೊಂದಿತ್ತು. ಗೃಹ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ, 245 ಶ್ವಾನಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ಸರ್ಕಾರ ಶ್ವಾನದಳಕ್ಕೆ ವಾರ್ಷಿಕ ನಿರ್ವಹಣೆಗಾಗಿ 2.7 ಕೋಟಿ ರೂ. ಖರ್ಚು ಮಾಡುತ್ತದೆ.

ಬೆಂಗಳೂರು ಶ್ವಾನ ನಿರ್ವಹಣೆ ಘಟಕ ಪ್ರತಿ ನಾಯಿಗೆ ಸುಮಾರು 1.1 ಲಕ್ಷ ರೂಪಾಯಿಯೊಂದಿಗೆ ವರ್ಷಕ್ಕೆ 71 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ಹೀಗೆ ಮೈಸೂರು ಘಟಕದಲ್ಲಿ 10 ನಾಯಿಗಳು, ಹುಬ್ಬಳ್ಳಿ-ಧಾರವಾಡದಲ್ಲಿ ಆರು ನಾಯಿಗಳು ಮತ್ತು ಮಂಗಳೂರಿನಲ್ಲಿ ನಾಲ್ಕು ನಾಯಿಗಳು ಕ್ರಮವಾಗಿ 11.8 ಲಕ್ಷ, 7.1 ಲಕ್ಷ ಮತ್ತು 4.3 ಲಕ್ಷ ರೂ. ಖರ್ಚು ಮಾಡಲಾಗುತ್ತದೆ.

ಕುತೂಹಲಕಾರಿಯಾಗಿ, ವೈಯಕ್ತಿಕ ನಾಯಿಗಳಿಗಾಗಿ ಅತಿ ಹೆಚ್ಚು ಖರ್ಚು ಮಾಡುವವರು ಬೆಂಗಳೂರು ಅಥವಾ ಮೈಸೂರಿನಲ್ಲಿ ಇದ್ದಾರೆ. ಕೆಜಿಎಫ್ (ರೂ. 1.4 ಲಕ್ಷ) ಮತ್ತು ಬಾಗಲಕೋಟೆ (ರೂ. 1.2 ಲಕ್ಷ) ಘಟಕಗಳು ಕ್ರಮವಾಗಿ ನಾಲ್ಕು ಮತ್ತು ಐದು ನಾಯಿಗಳನ್ನು ಹೊಂದಿವೆ.

ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (KSISF), ಸಿಟಿ ಆರ್ಮ್ಡ್ ರಿಸರ್ವ್ (CAR) ಮತ್ತು ಆಂಟಿ-ನಕ್ಸಲ್ ಫೋರ್ಸ್ (ANF) ಸೇರಿದಂತೆ ವಿಶೇಷ ಘಟಕಗಳು ಶ್ವಾನಪಡೆಯನ್ನು ಹೊಂದಿವೆ. CARನಲ್ಲಿ 10ಶಾವನಗಳಿದ್ದು, ಎಲ್ಲಾ ಬೆಲ್ಜಿಯನ್ ಮಾಲಿನೋಯಿಸ್ ತಳಿಗಳಾಗಿವೆ. ಇವುಗಳ ನಿರ್ವಹಣೆಗೆ ವಾರ್ಷಿಕ 11.2 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಕೆಎಸ್‌ಐಎಸ್‌ಎಫ್ 12 ನಾಯಿಗಳನ್ನು ಹೊಂದಿದ್ದು, ಇವುಗಳ ನಿರ್ವಹಣೆಗೆ ರೂ. 13.2 ಲಕ್ಷ ಮತ್ತು ಎಎನ್‌ಎಫ್ ಎಂಟು ನಾಯಿಗಳನ್ನು ನೋಡಿಕೊಳ್ಳುತ್ತದೆ. ಇದು ವರ್ಷಕ್ಕೆ ರೂ. 8.9 ಲಕ್ಷ ಖರ್ಚು ಮಾಡುತ್ತದೆ. ರಾಜ್ಯದ ಶ್ವಾನದಳ ವಿಭಾಗಕ್ಕೆ ಇತ್ತೀಚೆಗೆ ಸೇರ್ಪಡೆಗೊಂಡಿರುವುದು ಬೆಲ್ಜಿಯನ್ ಮಾಲಿನೋಯಿಸ್ ನಾಯಿಮರಿಯನ್ನು 2021 ರಲ್ಲಿ ಮೈಸೂರು ನಗರ ಪೊಲೀಸರಿಗೆ ನಾಗರಿಕರೊಬ್ಬರು ದಾನ ಮಾಡಿದ್ದಾರೆ. ಕ್ರಿಸ್ತ ಯೋಧಾ ಎಂಬ ನಾಯಿಗೆ ಮೈಸೂರು ಶ್ವಾನದಳ ಘಟಕದಿಂದ ತರಬೇತಿ ನೀಡಲಾಗುತ್ತಿದೆ.

English summary
Karnataka police has a 245-strong canine force spread across six police commissionerates, 31 police districts and three special units. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X