ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ನೇಮಕಾತಿಯಾಗುತ್ತಿಲ್ಲ; ರೌಡಿ ಸಂಖ್ಯೆ ಹೆಚ್ಚುತ್ತಿದೆ!

By Srinath
|
Google Oneindia Kannada News

Police constable recruitment shortly but rowdy sheeters increasing KJ George
ಬೆಂಗಳೂರು, ಜ.31: ಶೀಘ್ರವೇ 8501 ಪೇದೆಗಳ ನೇಮಕವಂತೆ!ಇದು ಎಷ್ಟು ನಿಜವಾಗುತ್ತದೋ ಗೊತ್ತಿಲ್ಲ. ಏಕೆಂದರೆ ಈ ಹಿಂದೆಯೂ ಗೃಹಸಚಿವರಾಗಿದ್ದವರೂ ತಮ್ಮ ಆಡಳಿತ ಕಾಲದಲ್ಲಿ ಸಾವಿರಾರು ಪೊಲೀಸ್ ಪೇದೆಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದರು.

ಹಾಲಿ ಗೃಹ ಸಚಿವರೂ ಅಧಿಕಾರಕ್ಕೆ ಬರುತ್ತಿದ್ದಂತೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಬಿದ್ದಿರುವ ಎಲ್ಲ ಹುದ್ದೆಗಳಿಗೂ ನೇಮಕಾತಿ ನಡೆಯಲಿದೆ ಎಂದು ಪ್ರಕಟಿಸಿದ್ದರು. ಆದರೆ ಎಷ್ಟು ಮಂದಿ ನೇಮಕಗೊಂಡಿದ್ದಾರೆ ಎಂಬುದನ್ನು ನೇಮಕಾತಿ ಪತ್ರ ಪಡೆದವರೇ ಹೇಳಬೇಕು.

ಆದರೂ, ಗೃಹ ಸಚಿವ ಕೆಜೆ ಜಾರ್ಜ್ ಅವರು ನಿನ್ನೆ ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಉತ್ತರಿಸುತ್ತಾ 'ಶೀಘ್ರವೇ 8501 ಪೊಲೀಸ್ ಪೇದೆಗಳ ನೇಮಕವಾಗಲಿದೆ' ಎಂದಿದ್ದಾರೆ. ಬಿಜೆಪಿ ಸದಸ್ಯ, ಹಿರಿಯ ಸಾಹಿತಿ ಡಾ|| ದೊಡ್ಡರಂಗೇಗೌಡರು ಕೇಳಿದ ಪ್ರಶ್ನೆಗೆ ಗೃಹ ಸಚಿವ ಕೆಜೆ ಜಾರ್ಜ್ ಅವರು

'ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ಕೊರತೆಯಿದೆ. ಕೆಎಸ್ಆರ್ ಪಿ ಮತ್ತು ಸಿಎಆರ್ ಸೇರಿ 8501 ಪೇದೆಗಳನ್ನು ನೇಮಕ ಮಾಡಿಕೊಳ್ಳಲು ಆರ್ಥಿಕ ಇಲಾಖೆಯಿಂದ ಒಪ್ಪಿಗೆ ದೊರೆತಿದೆ. ಶೀಘ್ರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ' ಎಂದು ಹೇಳಿದರು. ಮುಂದಿನ 2 ವರ್ಷದೊಳಗೆ ಖಾಲಿಯಿರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಅವರು ಗಡುವು ವಿಧಿಸಿದ್ದಾರೆ. ಇದರಲ್ಲಿ 198 ಮಹಿಳಾ ಪೇದೆಗಳ ನೇಮಕವೂ ಆಗಲಿದೆ.

ಗೃಹ ಸಚಿವ ಕೆಜೆ ಜಾರ್ಜ್ ಅವರು ಹಿರಿಯರಾದ ದೊಡ್ಡರಂಗೇಗೌಡರಿಗೆ ಈ ಭರವಸೆಯ ಉತ್ತರ ನೀಡಿರುವುದರಿಂದ ಒಂದು ಕಡೆಯಿಂದ ಪೊಲೀಸ್ ಇಲಾಖೆಗೆ ಶೀಘ್ರವೇ 8 ಸಾವಿರ ಸಿಬ್ಬಂದಿ ನೇಮಕರಾಗುತ್ತಾರೆಂದು ಭಾವಿಸಬಹುದು, ಮತ್ತೊಂದು ದೃಷ್ಟಿಯಿಂದ ಉದ್ಯೋಗಾವಕಾಶ ಸೃಷ್ಟಿಯಾಗುವ ಸಂತಸ ಮೂಡಿದೆ.

ಈ ಮಧ್ಯೆ ಒಂದು ಆತಂಕಕಾರಿ ವಿಚಾರವನ್ನೂ ಗೃಹ ಸಚಿವರು ಸದನಕ್ಕೆ ತಿಳಿಸಿದ್ದಾರೆ. ಏನಪ್ಪಾ ಅಂದರೆ ಪೊಲೀಸ್ ಸಿಬ್ಬಂದಿ ಸಂಖ್ಯೆ ಹೆಚ್ಚಾಗದಿದ್ದರೂ ರೌಡಿಗಳ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಈಗಾಗಲೇ 10 ಸಾವಿರ ಮಂದಿ ರೌಡಿ ಶೀಟರುಗಳಿದ್ದು, ಹೆಚ್ಚು ವಯಸ್ಸಾದವರನ್ನು ಪಟ್ಟಿಯಿಂದ ಕೈಬಿಟ್ಟು ಇನ್ನೂ 10 ಸಾವಿರ ಮಂದಿಯನ್ನು ಹೊಸದಾಗಿ ಪಟ್ಟಿಗೆ ಸೇರಿಸಿಕೊಳ್ಳಲಾಗುವುದು ಎಂದು ಗೃಹ ಸಚಿವ ಜಾರ್ಜ್ ತಿಳಿಸಿದರು.

English summary
Karnataka Congress Home Minister KJ George has informed the Upper House that shortly more than 8000 Police constables will be recruited. The Minister also informed that the rowdy sheeters in the state increasing alarmingly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X