ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್: ಜನರ ಮೇಲೆ ಲಾಠಿ ದರ್ಪ ತೋರಿದರೆ ಪೊಲೀಸರಿಗೆ ತೊಂದರೆ

|
Google Oneindia Kannada News

ಬೆಂಗಳೂರು, ಮೇ. 10 : ಜನ ಸಾಮಾನ್ಯರ ಮೇಲೆ ಹಲ್ಲೆ ಮಾಡುವುದನ್ನು ಯಾವ ಕಾನೂನಿನಲ್ಲಿ ಹೇಳಿಲ್ಲ. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಹೆಸರಿನಲ್ಲಿ ಮುಗ್ಧ ಜನರ ಮೇಲೆ ಪೊಲೀಸರು ಲಾಠಿ ಬೀಸಿ ಹಲ್ಲೆ ಮಾಡುತ್ತಿರುವುದು ಕಾನೂನು ಉಲ್ಲಂಘನೆ. ಜನರಿಗೆ ಕೆಟ್ಟ ಮಾತಿನಿಂದ ಬಯ್ಯುವುದು, ಲಾಠಿ ಬೀಸಿ ಹಲ್ಲೆ ಮಾಡುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಲಾಕ್ ಡೌನ್ ನಿಯಮ ಉಲ್ಲಂಘನೆ ಹೆಸರಿನಲ್ಲಿ ಜನರ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡುತ್ತಿರುವುದು, ಹಲ್ಲೆ ಮಾಡುವ ದೃಶ್ಯಗಳನ್ನು ಪ್ರಸಾರ ಮಾಡಿ ಜನರಲ್ಲಿ ಭೀತಿ ಮೂಡಿಸುತ್ತಿರುವುದು ರಾಜ್ಯ ಮಾನವ ಆಯೋಗದ ಗಮನಕ್ಕೆ ಬಂದಿದೆ. ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯರು, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ರೂಪ್ ಕುಮಾರ್ ದತ್ತಾ ಅವರು ಎಚ್ಚರಿಕೆ ನೀಡಿದ್ದಾರೆ.

Recommended Video

Kamal Pant : ಇನ್ಮುಂದೆ ಯಾರಿಗೂ ಹೋಡಿಯೋ ಹಾಗಿಲ್ಲ! | Oneindia Kannada

ಪೊಲೀಸರ ಅತಿ ದರ್ಪ

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅವಾಂತರ ಸೃಷ್ಟಿ ಮಾಡಿದೆ ನಿಜ. ರಾಜಧಾನಿ ಬೆಂಗಳೂರಿನಲ್ಲಿ ಶೇ 70 ರಷ್ಟು ಮಂದಿ ದುಡಿದು ಬದುಕುವ ಜನ. ಕೊರೊನಾ ಎರಡನೇ ಅಲೆ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಲಾಕ್ ಡೌನ್ ನಿಯಮ ಜಾರಿ ಮಾಡಿದೆ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಲಾಕ್ ಡೌನ್ ನಿಯಮ ಉಲ್ಲಂಘನೆ ಹೆಸರಿನಲ್ಲಿ ಸಿಕ್ಕ ಸಿಕ್ಕಲ್ಲಿ ಲಾಠಿ ಬೀಸುತ್ತಿದ್ದಾರೆ. ಮಾತ್ರವಲ್ಲ, ಹಲ್ಲೆ ಮಾಡಿ ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿದ್ದಾರೆ. ಈ ಕುರಿತ ದೃಶ್ಯಗಳನ್ನು ಮಾಧ್ಯಮಗಳು ದಿನ ನಿತ್ಯ ಪ್ರಸಾರ ಮಾಡುತ್ತಿವೆ. ಹಲ್ಲೆ ಮಾಡುವುದೇ ಬಹುದೊಡ್ಡ ಕೆಲಸ ಎಂಬಂತೆ ಪೊಲೀಸರು ವರ್ತಿಸುತ್ತಿದ್ದಾರೆ. ನಿಯಮ ಉಲ್ಲಂಘನೆ ನೆಪದಲ್ಲಿ ಈಗಾಗಲೇ ಜನ ಸಾಮಾನ್ಯರ ಸಾವಿರಾರು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪೊಲೀಸರು ಹಲ್ಲೆ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ.

ಭಾರತದಲ್ಲಿ ಕೊರೊನಾ ಸೋಂಕಿತರು ಮತ್ತು ಲಸಿಕೆ ಪಡೆದವರ ಲೆಕ್ಕ ಭಾರತದಲ್ಲಿ ಕೊರೊನಾ ಸೋಂಕಿತರು ಮತ್ತು ಲಸಿಕೆ ಪಡೆದವರ ಲೆಕ್ಕ

ಹಲ್ಲೆ ಮಾಡುವುದೇ ಪೊಲೀಸರ ಕರ್ತವ್ಯ

ಹಲ್ಲೆ ಮಾಡುವುದೇ ಪೊಲೀಸರ ಕರ್ತವ್ಯ

ಯಾವುದೇ ಕ್ರಿಮಿನಲ್ ಅಪರಾಧ ಎಸಗಿದವರ ಮೇಲೆಯೇ ಪೊಲೀಸರು ಕೈ ಎತ್ತುವಂತಿಲ್ಲ. ಸಾರ್ವಜನಿಕವಾಗಿ ಬೇಡಿ ಹಾಕಿಕೊಂಡು ಕರೆದೊಯ್ಯುವಂತಿಲ್ಲ. ಸಂವಿಧಾನ ಬದ್ಧವಾಗಿ ಒಬ್ಬ ಸಾಮಾನ್ಯ ಪ್ರಜೆಗೆ ಸಿಕ್ಕಿರುವ ಹಕ್ಕುಗಳಿಗೆ ಧಕ್ಕೆಯಾಗಲು ಯಾವ ಕಾನೂನಿನಲ್ಲಿ ಅವಕಾಶ ನೀಡಿಲ್ಲ. ಕೊರೊನಾ, ಲಾಕ್ ಡೌನ್ ನಿಯಮ ಪಾಲನೆ ಹೆಸರಿನಲ್ಲಿ ಜನ ಸಾಮಾನ್ಯರಿಗೆ ಪೊಲೀಸರು ಕೊಡಬಾರದ ಹಿಂಸೆ ಕೊಡುತ್ತಿದ್ದಾರೆ. ಒಂದಡೆ ಸಿಕ್ಕ ಸಿಕ್ಕಲ್ಲಿ ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ. ಇನ್ನೂ ಕೆಲವಡೆ ವಾಹನ ಜಪ್ತಿ ಹೆಸರಿನಲ್ಲಿ ಹಣ ಪೀಕಿ ಕಳಿಸುತ್ತಿದ್ದಾರೆ. ಇದೊಂದು ರೀತಿಯ ಹಿಂಸೆಯಾದರೆ ಮತ್ತೊಂದು ಕಡೆ ಪೊಲೀಸರ ಲಾಠಿ ದರ್ಪ. ಸಿಕ್ಕ ಸಿಕ್ಕವರ ಮೇಲೆ ಪೊಲೀಸರು ಹಲ್ಲೆ ಮಾಡುತ್ತಿದ್ದಾರೆ. ಬೀದಿಗೆ ಬರುವಂತೆಯೇ ಇಲ್ಲ ಎಂದು ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿದ್ದಾರೆ. ವಿನಾಕಾರಣ ಅಂಗಡಿ ಮಾಲೀಕರ ಮೇಲೆ ಹಲ್ಲೆ ಮಾಡಿದ ಯುವಕ ವಾಪಸು ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಪೊಲೀಸರ ಅತಿ ದರ್ಪ

ಪೊಲೀಸರ ಅತಿ ದರ್ಪ

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅವಾಂತರ ಸೃಷ್ಟಿ ಮಾಡಿದೆ ನಿಜ. ರಾಜಧಾನಿ ಬೆಂಗಳೂರಿನಲ್ಲಿ ಶೇ 70 ರಷ್ಟು ಮಂದಿ ದುಡಿದು ಬದುಕುವ ಜನ. ಕೊರೊನಾ ಎರಡನೇ ಅಲೆ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಲಾಕ್ ಡೌನ್ ನಿಯಮ ಜಾರಿ ಮಾಡಿದೆ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಲಾಕ್ ಡೌನ್ ನಿಯಮ ಉಲ್ಲಂಘನೆ ಹೆಸರಿನಲ್ಲಿ ಸಿಕ್ಕ ಸಿಕ್ಕಲ್ಲಿ ಲಾಠಿ ಬೀಸುತ್ತಿದ್ದಾರೆ. ಮಾತ್ರವಲ್ಲ, ಹಲ್ಲೆ ಮಾಡಿ ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿದ್ದಾರೆ. ಈ ಕುರಿತ ದೃಶ್ಯಗಳನ್ನು ಮಾಧ್ಯಮಗಳು ದಿನ ನಿತ್ಯ ಪ್ರಸಾರ ಮಾಡುತ್ತಿವೆ. ಹಲ್ಲೆ ಮಾಡುವುದೇ ಬಹುದೊಡ್ಡ ಕೆಲಸ ಎಂಬಂತೆ ಪೊಲೀಸರು ವರ್ತಿಸುತ್ತಿದ್ದಾರೆ. ನಿಯಮ ಉಲ್ಲಂಘನೆ ನೆಪದಲ್ಲಿ ಈಗಾಗಲೇ ಜನ ಸಾಮಾನ್ಯರ ಸಾವಿರಾರು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪೊಲೀಸರು ಹಲ್ಲೆ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ.

ಹಲ್ಲೆ ಮಾಡುವುದೇ ಪೊಲೀಸರ ಕರ್ತವ್ಯ: ಯಾವುದೇ ಕ್ರಿಮಿನಲ್ ಅಪರಾಧ ಎಸಗಿದವರ ಮೇಲೆಯೇ ಪೊಲೀಸರು ಕೈ ಎತ್ತುವಂತಿಲ್ಲ. ಸಾರ್ವಜನಿಕವಾಗಿ ಬೇಡಿ ಹಾಕಿಕೊಂಡು ಕರೆದೊಯ್ಯುವಂತಿಲ್ಲ. ಸಂವಿಧಾನ ಬದ್ಧವಾಗಿ ಒಬ್ಬ ಸಾಮಾನ್ಯ ಪ್ರಜೆಗೆ ಸಿಕ್ಕಿರುವ ಹಕ್ಕುಗಳಿಗೆ ಧಕ್ಕೆಯಾಗಲು ಯಾವ ಕಾನೂನಿನಲ್ಲಿ ಅವಕಾಶ ನೀಡಿಲ್ಲ. ಕೊರೊನಾ, ಲಾಕ್ ಡೌನ್ ನಿಯಮ ಪಾಲನೆ ಹೆಸರಿನಲ್ಲಿ ಜನ ಸಾಮಾನ್ಯರಿಗೆ ಪೊಲೀಸರು ಕೊಡಬಾರದ ಹಿಂಸೆ ಕೊಡುತ್ತಿದ್ದಾರೆ. ಒಂದಡೆ ಸಿಕ್ಕ ಸಿಕ್ಕಲ್ಲಿ ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ. ಇನ್ನೂ ಕೆಲವಡೆ ವಾಹನ ಜಪ್ತಿ ಹೆಸರಿನಲ್ಲಿ ಹಣ ಪೀಕಿ ಕಳಿಸುತ್ತಿದ್ದಾರೆ. ಇದೊಂದು ರೀತಿಯ ಹಿಂಸೆಯಾದರೆ ಮತ್ತೊಂದು ಕಡೆ ಪೊಲೀಸರ ಲಾಠಿ ದರ್ಪ. ಸಿಕ್ಕ ಸಿಕ್ಕವರ ಮೇಲೆ ಪೊಲೀಸರು ಹಲ್ಲೆ ಮಾಡುತ್ತಿದ್ದಾರೆ. ಬೀದಿಗೆ ಬರುವಂತೆಯೇ ಇಲ್ಲ ಎಂದು ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿದ್ದಾರೆ. ವಿನಾಕಾರಣ ಅಂಗಡಿ ಮಾಲೀಕರ ಮೇಲೆ ಹಲ್ಲೆ ಮಾಡಿದ ಯುವಕ ವಾಪಸು ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಸುಮೋಟೋ ಕೇಸು ಬುಕ್

ಸುಮೋಟೋ ಕೇಸು ಬುಕ್

ಜನ ಸಾಮಾನ್ಯರ ಮೇಲೆ ಹಲ್ಲೆ ಮಾಡುವುದಕ್ಕೆ ಯಾರೂ ಅಧಿಕಾರ ಕೊಟ್ಟಿಲ್ಲ. ಜನರು ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದರೆ ಬುದ್ಧಿವಾದ ಹೇಳಬೇಕು. ವಾಹನದಲ್ಲಿ ಓಡುವಾಗ ಅವರ ಮೇಲೆ ಲಾಠಿ ಬೀಸುವುದು. ಅದನ್ನು ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಗಾಯ ಮಾಡಿಕೊಂಡ ದೃಶ್ಯಗಳನ್ನು ನಾನೂ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇನೆ. ಜನ ಸಾಮಾನ್ಯರ ಮೇಲೆ ಹಲ್ಲೆ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆ. ಕೆಟ್ಟ ಪದಗಳಿಂದ ಕೂಡ ಪೊಲೀಸರು ನಿಂದನೆ ಮಾಡುವಂತಿಲ್ಲ. ಈ ಕುರಿತು ಸಾಕಷ್ಟು ದೂರುಗಳು ಬರುತ್ತಿವೆ. ರಾಜ್ಯದಲ್ಲಿ ಜನರ ಮೇಲೆ ಪೊಲೀಸರು ಹಲ್ಲೆ ಮಾಡುವುದನ್ನೇ ಕರ್ತವ್ಯ ಎಂದು ತಿಳಿದುಕೊಂಡು ಹಲ್ಲೆ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ರಾಜ್ಯ ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ನಿವೃತ್ತ ಡಿಜಿಪಿ, ಕರ್ನಾಟಕ ರಾಜ್ಯ ಮಾನವ ಹಕ್ಕು ಅಯೋಗದ ಸದಸ್ಯರಾದ ರೂಪ್ ಕುಮಾರ್ ದುತ್ತಾ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಕೋಲಾರ

ಕೋಲಾರ

ಕೋಲಾರ ನಗರದ ಅಮ್ಮವಾರಪೇಟೆ ವೃತ್ತದ ಬಳಿ ಮಂಗಳಮುಖಿ ಮೇಲೆ ಪೊಲೀಸರಿಂದ ಲಾಠಿ ಬಿಸಿದ್ದಾರೆ. ಮೆಡಿಕಲ್ ಅಂಗಡಿಗೆ ಹೋಗ್ಬೇಕು ಅಂತ ನೆಪ ಹೇಳಿದ ಮಂಗಳಮುಖಿ ಮೇಲೆ ಗಲ್ ಪೇಟೆ ಪೊಲೀಸ್ PSI ವೇದಾವತಿಯಿಂದ ಲಾಠಿ ರುಚಿ ಸಿಕ್ಕಿದೆ. ಮಂಗಳಮುಖಿ ಬಲಗೈನಲ್ಲಿ ರಕ್ತ ಬರುವಂತೆ ಲಾಠಿ ಏಟು ಬಿದ್ದಿದೆ.
++
ರಾಣೇಬೆನ್ನೂರು
ರಾಜ್ಯ ಸರ್ಕಾರದ ಟಫ್ ರೂಲ್ಸ್ ಇದ್ದರೂ ಹಾವೇರಿ ಜಿಲ್ಲೆ ರಾಣೇಬೆನ್ನೂರ ತಾಲ್ಲೂಕಿನ ಗುತ್ತಲದ ಎಪಿಎಂಸಿ ಆವರಣದಲ್ಲಿ ನೂರಾರು ಜನರು ಸೇರಿ ಸಂತೆ ಮಾಡುತ್ತಿದ್ದಾಗ ಸ್ಥಳಕ್ಕೆ ಎಂಟ್ರಿ ಕೊಟ್ಟ ಪೊಲೀಸರು ಪೈಪಿನಿಂದ ಹೊಡೆದಿದ್ದಾರೆ. ಏಜೆಂಟನೊಬ್ಬ ಚಂದಾ ಹಣದ ಆಸೆಗಾಗಿ ಸಂತೆ ಮಾಡಲು ಹೇಳಿದ್ದಾನೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ ನಿಯಮವನ್ನು ಉಲ್ಲಂಘಿಸಿದ ಬೈಕ್ ಸವಾರರನ್ನು ಮೆರವಣಿಗೆ ಮಾಡುವ ಮೂಲಕ ರಾಣೇಬೆನ್ನೂರು ಪೊಲೀಸರು ಎಚ್ಚರಿಕೆ ನೀಡಿದರು.

++
ಹಿರಿಯೂರು, ದಾವಣಗೆರೆ ನಗರ ಪೋಲಿಸರು ಲಾಕ್ ಡೌನ್ ನಿಯಮ ಉಲ್ಲಂಘಿಸಿದವರ ವಾಹನಗಳನ್ನು ಜಪ್ತಿ ಮಾಡಿ ಠಾಣೆಯ ಮುಂದೆ ನಿಲ್ಲಿಸಿದ್ದಾರೆ.

ಇಲ್ಲಿಗೆ ಸಂಪರ್ಕಿಸಿ

ಇಲ್ಲಿಗೆ ಸಂಪರ್ಕಿಸಿ

ತುರ್ತು ಕೆಲಸ, ವೈದ್ಯಕೀಯ ಸೇವೆ ನೀಡುವ ಸಂಬಂಧ ಹೋಗುವಾಗಲು ಪೊಲೀಸರು ತಡೆದು ಹಲ್ಲೆ ಮಾಡಿದರೆ ಜನ ಸಾಮಾನ್ಯರು ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಬಹುದು. ಹಲ್ಲೆ ಮಾಡುವ ದೃಶ್ಯಗಳು ಇದ್ದಲ್ಲಿ ಅವುಗಳ ಸಮೇತ ರಾಜ್ಯ ಮಾನವ ಹಕ್ಕು ಅಯೊಗಕ್ಕೆ ದೂರು ಸಲ್ಲಿಸಬಹುದು. ದೂರು ನೀಡಿದ ಕೂಡಲೇ ತಪ್ಪಿಸ್ಥರ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು.ಹೆಚ್ಚಿನ ವಿವರಗಳಿಗಾಗಿ : 080-22392200 ಸಂಪರ್ಕಿಸಿ. E-Mail: [email protected] ಅಥವಾ Helpline Toll free NO: 180042523333 ಸಂಪರ್ಕಿಸಿ ದೂರು ಸಲ್ಲಿಸಬಹುದು.

English summary
Sumo to case will Registered against police says state human Rights commission member, Ex DG of Karnataka R.k Datta warned to police
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X